ಬಿಗ್ ಬಾಸ್ ನಲ್ಲಿ ಚಂದ್ರಿಕಾ ಬಿಚ್ಚಿಟ್ಟ ಒಂದೇ ಒಂದು ಸತ್ಯ
ಮೊದಲು ನೋಡಿದಾಗ ಒಂದು ಕ್ಷಣ ಅಚ್ಚರಿಯಾಯಿತು. ಯಾಕೆ ಬಂದಿದ್ದಾರೆ ಎಂದು ಯೋಚಿಸಿದೆ. ಒಂದು ದಿನ ಇರುತ್ತಾರಾ, ಒಂದು ವಾರ ಇರುತ್ತಾರಾ ಎಂಬುದು ಅರ್ಥವಾಗಲಿಲ್ಲ. ಬಳಿಕ ಮನದಟ್ಟಾಯಿತು ಅವರು ಮತ್ತೆ ಸ್ಪರ್ಧಿಸಲು ಬಂದಿದ್ದಾರೆ ಎಂಬುದು ಎಂದರು ವಿಜಯ್ ರಾಘವೇಂದ್ರ.
ಚಂದ್ರಿಕಾ ಮರಳಿ ಮನೆಗೆ ಬಂದದ್ದು ನನಗೆ ಇಷ್ಟವಾಗಲಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡರು ನಿಕಿತಾ. ಇದೊಂದು ಆಟ, ಆಗಿದ್ದು ಆಗಲಿ ಅದನ್ನು ಫೇಸ್ ಮಾಡೋಣ ಎಂದು ಎಲ್ಲರೊಂದಿಗೆ ಹೇಳಿದೆ ಎಂಬುದು ಅವರ ಮಾತಿನ ವಿವರಣೆ.

ಈ ಬಾರಿಯ ಇನ್ನೊಂದು ಆಕರ್ಷಣೆ ಎಂದರೆ ಹಾನೆಸ್ಟಿ ಟಾಸ್ಕ್. ಒಳ್ಳೆಯದೇ ನಡೆಯುತ್ತದೆ ಎಂದು ನಾಲ್ಕು ಜನರ ಹೆಸರು ಬರೆದ ಸತ್ಯದ ಚಕ್ರ ತಿರುಗಿಸಿದರು.
ಯಾರ ಹೆಸರಿನ ಬಳಿ ಚಕ್ರಮ ಮುಳ್ಳು ನಿಲ್ಲುತ್ತದೇ ಅವರು ಒಂದು ಸತ್ಯವನ್ನು ಹೇಳಬೇಕು. ಮುಚ್ಚಿಟ್ಟ ಸತ್ಯ ಬಿಚ್ಚಿಡಬೇಕು ಎಂದು ಹೇಳಿ ಚಕ್ರ ತಿರುಗಿಸಿದ ಸುದೀಪ್. ಅದು ಮೊದಲು ನಿಂತಿದ್ದು ಚಂದ್ರಿಕಾ ಹೆಸರಿನ ಬಳಿ.
ನನಗೂ ನಿಕಿತಾಗೂ ಒಂದು ಫ್ರಿಕ್ಷನ್ ಇತ್ತು. ಸಂಜನಾ ಜೊತೆ ಸೇರಿ ಕೆಟ್ಟುಹೋಗುತ್ತಿದ್ದಾಳೆ. ಇವಳನ್ನು ತಿದ್ದಬೇಕು ಎಂದುಕೊಂಡೆ. ಆದರೆ ನಾಲ್ಕು ವಾರಕ್ಕೆ ನನ್ನ ಮನೋಭಾವ ಬದಲಾಯಿತು ಎಂದರು. ಇದೇ ಅವರು ಬಿಚ್ಚಿಟ್ಟ ಸತ್ಯ.


Click it and Unblock the Notifications











