»   » ಬಿಗ್ ಬಾಸ್ ಫೈನಲ್ ಮಿಸ್ ಮಾಡಿಕೊಂಡ ಚಂದ್ರಿಕಾ

ಬಿಗ್ ಬಾಸ್ ಫೈನಲ್ ಮಿಸ್ ಮಾಡಿಕೊಂಡ ಚಂದ್ರಿಕಾ

Posted By:
Subscribe to Filmibeat Kannada
<ul id="pagination-digg"><li class="next"><a href="/tv/chandrika-honest-truth-bigg-boss-075124.html">Next »</a></li></ul>

ಈ ಮನೆಯಲ್ಲಿ ಕೆಚ್ಚಿದೆ, ಹುಚ್ಚಿದೆ ಮನಸ್ಸಲ್ಲೇ ಮಡಗಿರುವ ಮಚ್ಚಿದೆ, ಕಾಳ್ಗಿಚ್ಚಿದೆ. ಇದ್ದದ್ದನ್ನು ಇದ್ದಂಗೆ ತೋರಿಸುವ ಒನ್ ಅಂಡ್ ಓನ್ಲಿ ರಿಯಾಲಿಟಿ ಶೋ ಬಿಗ್ ಬಾಸ್ ಎಂದು ಕಿಚ್ಚ ಸುದೀಪ್ ಪ್ರತಿವಾರ ನಡೆಸಿಕೊಡುತ್ತಿರುವ 'ವಾರದ ಕಥೆ ಕಿಚ್ಚನ ಜೊತೆ'ಯ ಈ ವಾರದ ಹೈಲೈಟ್ಸ್ ಹೀಗಿವೆ.

ಈ ಬಾರಿ ನಾಲ್ಕು ಮಂದಿ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿದ್ದರು. ಅವರಲ್ಲಿ ಚಂದ್ರಿಕಾ, ನಿಕಿತಾ, ವಿಜಯ್ ರಾಘವೇಂದ್ರ ಹಾಗೂ ನರೇಂದ್ರ ಬಾಬು ಶರ್ಮಾ. ಮನೆಯಿಂದ ಯಾರು ಈ ಬಾರಿ ಹೊರಗೆ ಹೋಗುತ್ತಾರೆ, ಇನ್ಯಾರು ಫೈನಲ್ ತಲುಪುತ್ತಾರೆ ಎಂಬ ಬಗ್ಗೆ ಇದ್ದ ಕುತೂಹಲಕ್ಕೆ ತೆರೆಬಿದ್ದಿದೆ.

Sudeep

ಈ ವಾರವೂ ನಟಿ ಚಂದ್ರಿಕಾ ಅವರು ಮನೆಯಿಂದ ಹೊರ ಬಿದ್ದಿದ್ದಾರೆ. ಅರುಣ್ ಸಾಗರ್, ವಿಜಯ್ ರಾಘವೇಂದ್ರ, ನರೇಂದ್ರ ಬಾಬು ಶರ್ಮಾ ಹಾಗೂ ನಿಕಿತಾ ಫೈನಲ್ ತಲುಪಿದ್ದಾರೆ. ಈ ನಾಲ್ಕು ಮಂದಿಯಲ್ಲಿ ಯಾರು ನಂಬರ್ ಒನ್ ಸ್ಥಾನದಲ್ಲಿ ನಿಲ್ಲುತ್ತಾರೆ ಎಂಬುದು ಇನ್ನೊಂದೇ ವಾರದಲ್ಲಿ ಗೊತ್ತಾಗಲಿದೆ.

ಕನ್ನಡದ ಹೊಚ್ಚ ಹೊಸ ರಿಯಾಲಿಟಿ ಶೋ ಬಿಗ್ ಬಾಸ್ ಆರಂಭವಾಗಿ ಇದೇ ಭಾನುವಾರಕ್ಕೆ (ಜೂನ್ 23) ಮೂರು ತಿಂಗಳು ತುಂಬುತ್ತಿದೆ. ಈ ತೊಂಬತ್ತು ದಿನಗಳಲ್ಲಿ ಸಾಕಷ್ಟು ವಾದ ವಿವಾದ, ಚರ್ಚೆಗೆ ಈ ಶೋ ಒಳಗಾಗಿದೆ. ಈ ವಾರ ಸುದೀಪ್ ನೇರವಾಗಿ ಕೆಲವೊಂದು ಪ್ರಶ್ನೆಗಳನ್ನು ಕೇಳಿದರು.

ಚಂದ್ರಿಕಾ ಅವರ ಪುನರಾಗಮನದ ಬಗ್ಗೆ ಎಲ್ಲರ ಅಭಿಪ್ರಾಯ ಕೇಳಿದರು. ಬ್ರಹ್ಮಾಂಡ ಶರ್ಮಾ ಮಾತನಾಡುತ್ತಾ, ಅವರು ಹಾಕಿದ್ದ ಬ್ಲೂ ಕಲರ್ ಡ್ರೆಸ್ ಕಣ್ಣಿಗೆ ರಾಚುತ್ತಿತ್ತು. ಮೇಕಪ್ ಮುಖಕ್ಕೆ ಹೊಡೆದಂತಿತ್ತು. ಮೇಕಪ್ ಚೆನ್ನಾಗಿರಲಿಲ್ಲ. ಇಷ್ಟು ದಿನ ಪ್ರಶಾಂತವಾಗಿದ್ದ ಮನೆಯಲ್ಲಿ ಇನ್ನೇನು ಕಾದಿದೆಯೋ ಎಂಬ ಅಳುಕು ಒಂದು ಕಡೆ ಕಾಡುತ್ತಿತ್ತು ಎಂದರು ಶರ್ಮಾ.

<ul id="pagination-digg"><li class="next"><a href="/tv/chandrika-honest-truth-bigg-boss-075124.html">Next »</a></li></ul>
English summary
Kannada films old antique piece Chandrika second time evicted from Etv Kannada's reality show Bigg Boss. She missed Bigg Boss grand finale. Vijay Raghavendra, Narendra Babu Sharma, Arun Sagar and Nikita enters final. Here is the 'Vaarada Kathe Kichchana Jothe' highlights.
Please Wait while comments are loading...