twitter
    For Quick Alerts
    ALLOW NOTIFICATIONS  
    For Daily Alerts

    ಚಂದ್ರಿಕಾಗೆ ಪಾತ್ರೆ ತೊಳೆಯುವ ಕೆಲಸ ಹಚ್ಚಿದ ಬಿಗ್ ಬಾಸ್

    By Rajendra
    |
    <ul id="pagination-digg"><li class="previous"><a href="/tv/sudeep-clears-doubt-on-bigg-boss-074732.html">« Previous</a>

    ನಿಕಿತಾ ಅವರೇ ಬಿಗ್ ಬಾಸ್ ಮನೆಗೆ ಬಂದು 72 ದಿನ ಆಗುತ್ತಿದೆ. ಕನ್ನಡ ಕಲಿಯುವುದು ಅಷ್ಟು ಕಷ್ಟವೇ. ಅರುಣ್ ಸಾಗರ್ ಅವರು ನಿಮಗೆ ಕಲಿಸಬೇಕು ಎಂದಿದ್ದಾರೆ. ಆದರೆ ನೀವು ಕಲಿಯಲು ಸಿದ್ಧವಿಲ್ಲ. ನೀವು ಮನಸ್ಸು ಮಾಡಿದ್ದರೆ ಇಷ್ಟೊತ್ತಿಗೆ ಕಲಿಯಬಹುದಾಗಿತ್ತು ಎಂದು ಹೇಳಿದರು.

    ಅರುಣ್ ಸಾಗರ್ ನಿಮ್ಮನ್ನು ಫೈನ್ ಟ್ಯೂನ್ ಮಾಡುತ್ತಿದ್ದಾರೆ. ನೀವು ಕಲೀತಾ ಇದ್ದೀರಾ. ನಿಮಗೆ ಆಸಕ್ತಿ ಇದೆ. ಆದರೆ ಎಲ್ಲೋ ಒಂದು ಕಡೆ ಸಾಕು ಅನ್ನಿಸುತ್ತಿದೆ. ಅವರು ಆಸಕ್ತಿಯಿಂದ ಹೇಳಿಕೊಡಕ್ಕೆ ಬರುತ್ತಿದಾರೆ. ಹೀ ಈಸ್ ರೆಡಿ ಟೂ ಟೀಚ್, ಬಟ್ ಯೂ ಆರ್ ಬಾಟ್ ರೆಡಿ ಟು ಲರ್ನ್ ಎಂದರು. ಬಹುಶಃ ಇದೇ ಅವರ ಕೋಪಕ್ಕೆ ಕಾರಣವಾಗಿರಬಹುದು ಎಂದು ಅಭಿಪ್ರಾಯಪಟ್ಟರು.

    Bigg Boss highlights
    ನಿಕಿತಾ ಕನ್ನಡ ಕಲಿತು ಮುಂದೆ ಸ್ವತಃ ಅವರೇ ಡಬ್ಬಿಂಗ್ ಹೇಳುವಂತಾದರೆ ನನಗೇನು ನಯಾ ಪೈಸೆ ಲಾಭ ಆಗಲ್ಲ. ಲಾಭ ಆಗೋದಿದ್ರೆ ಅದು ನಿಕಿತಾ ಅವರಿಗೆ ಎಂದರು ಅರುಣ್. ಬಿಗ್ ಬಾಸ್ ಕಾರ್ಯಕ್ರಮದಿಂದ ನಿಕಿತಾ ತಮ್ಮ ಹೆಸರನ್ನು ಕನ್ನಡದಲ್ಲಿ ಬರೆಯುವಷ್ಟು ಸಾಧನೆ ಮಾಡಿದ್ದಾರೆ.

    ಅನುಶ್ರೀ ಅವರು ಮನೆಯಿಂದ ಹೊರಹೋಗುತ್ತಿರುವ ಬಗ್ಗೆ ಸುದೀಪ್ ಹೇಳುತ್ತಾ, ಬಿಗ್ ಬಾಸ್ ಹೌಸ್ ಈಸ್ ಮಿಸ್ ಯೂ ಎಂದು ಹೇಳಿದರು. ಈ ವಾರ 'ಟೋನಿ' ಚಿತ್ರತಂಡ 'ಬಿಗ್ ಬಾಸ್' ಮನೆಗೆ ಬರುತ್ತಿದೆ.

    ಮನೆಯಿಂದ ಹೊರನಡೆದ ಅನುಶ್ರೀ ಅವರಿಗೆ ಬಿಗ್ ಬಾಸ್ ವಿಶೇಷ ಅಧಿಕಾರ ಕೊಟ್ಟರು. ಅದರ ಪ್ರಕಾರ ಮನೆಯ ಎಲ್ಲ ಕೆಲಸಗಳನ್ನು ಮಾಡಲು ನೀವು ಒಬ್ಬರ ಹೆಸರನ್ನು ಸೂಚಿಸಬೇಕಾಗಿದೆ ಎಂದು ಹೇಳಿದ್ದಕ್ಕೆ ಚಂದ್ರಿಕಾ ಹೆಸರನ್ನು ಸೂಚಿಸಿದರು.

    ಬಿಗ್ ಬಾಸ್ ಮುಂದಿನ ಆದೇಶದವರೆಗೆ ಚಂದ್ರಿಕಾ ಅವರು ಮನೆಯಲ್ಲಿ ಅಡುಗೆ ಮಾಡುವುದು, ಗುಡಿಸುವುದು, ಒರೆಸುವುದು, ಗಾರ್ಡನ್ ಏರಿಯಾ, ಶೌಚಾಯಲ ಶುಚಿ ಮಾಡುವುದು, ಪಾತ್ರೆ ತೊಳೆಯುವುದು ಎಲ್ಲಾ ಕೆಲಸಗಳನ್ನು ಮಾಡಬೇಕು ಎಂದು ಆದೇಶಿಸಿದರು.

    <ul id="pagination-digg"><li class="previous"><a href="/tv/sudeep-clears-doubt-on-bigg-boss-074732.html">« Previous</a>

    English summary
    Anushree, a popular VJ evicted from the Bigg Boss house. She has spent in the house more than 70 days. Finally she got out from the show. Etv Kannada reality show Bigg Boss week end programme 'Vaarada Kathe Kichchana Jothe' highlights.
    Saturday, June 8, 2013, 15:02
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X