ಸೀರೆ ಬದಲಾಯಿಸಲು ಹೋಗಿ ಜಾರಿಬಿದ್ದ ಚಂದ್ರಿಕಾ
ಅನುಶ್ರೀ ಅವರು ಕನ್ನಡ ಅಂಕಿಗಳನ್ನು ಬರೆಯುವುದನ್ನು ಕಲಿಸಿದರು. ಟಾಸ್ಕ್ ವಿಚಿತ್ರವಾಗಿತ್ತಾದರೂ ಎಲ್ಲರೂ ತುಂಟ ವಿದ್ಯಾರ್ಥಿಗಳಂತೆ ನಟಿಸಿ ಆದಷ್ಟು ಎಲ್ಲರ ಗಮನಸೆಳೆಯಲು ಪ್ರಯತ್ನಿಸಿದರು. ಅಷ್ಟರಲ್ಲಿ ಬಿಗ್ ಬಾಸ್ ಮನೆಯಿರುವ ಪುಣೆಯ ಲೋನಾವಾಲಾದಲ್ಲಿ ಧೋ ಎಂದು ಮಳೆ ಸುರಿದು ಆಟಪಾಠವೆಲ್ಲಾ ಅಸ್ತವ್ಯಸ್ತವಾಯಿತು.
ಅರುಣ್ ನಾಟಕದ ಪಾಠ ಹೇಳಿಕೊಡುತ್ತಾ ಮಂಗನ ತರಹ ಯಾರು ಆಕ್ಟ್ ಮಾಡ್ತೀರಾ ಎಂದರು. ಇದಕ್ಕೆ ಮೊದಲು ಕೈ ಎತ್ತಿದ್ದೇ ಅನುಶ್ರೀ. ಕೋತಿ ತರಹ ಆಡಿ ಎಲ್ಲರನ್ನೂ ರಂಜಿಸುವ ಪ್ರಯತ್ನ ಮಾಡಿದರು. ಒಟ್ಟಿನಲ್ಲಿ ಎಲ್ಲರೂ ತಮ್ಮ ಶಾಲಾ ದಿನಗಳನ್ನು ನೆನಪಿಸಿದರು.

ಬಳಿಕ ಬಂದರು ಇಂಗ್ಲಿಷ್ ಟೀಚರ್ ಚಂದ್ರಿಕಾ. ತಮ್ಮ ತುಂಟಾಟಗಳ ಮೂಲಕ ಅರುಣ್ ಅವರನ್ನು ತುಂಬಾ ಗೋಳು ಹೊಯ್ದುಕೊಂಡ. ಚಂದ್ರಿಕಾ ಮೇಡಂ ಸುಮ್ಮನಿರುತ್ತಾರಾ. ಅರುಣ್ ಅವರನ್ನು ಬೆಂಚ್ ಮೇಲೆ ನಿಲ್ಲಿಸಿದರು. ಆದರೂ ಅರುಣ್ ತುಂಟಾಟಗಳು ಮುಂದುವರಿದೇ ಇದ್ದವು.
ಪಾಠ ಎಲ್ಲವೂ ಮುಗಿದ ಮೇಲೆ ಎಲ್ಲರೂ ಮನೆಗೆ ಬಂದಿದ್ದರು. ಆಗ ಒಂದು ಸಣ್ಣ ಅಚಾತುರ್ಯ ನಡೆಯಿತು. ಅದೇನೆಂದರೆ ಸೀರೆ ಬದಲಾಯಿಸಿಕೊಳ್ಳಲು ಹೊರಟ ಚಂದ್ರಿಕಾ ಮೇಡಂ ಜಾರಿ ಧೊಪ್ಪನೆ ಬಿದ್ದರು. ಕೂಡಲೆ ಅರುಣ್ ಅವರನ್ನು ಎತ್ತಲು ಹೋದ. ಟೀಚರ್ ಎಲ್ಲಿ ಏಟಾಯಿತು ಎಂದು ಕೇಳಿದ. ಎಲ್ಲರೂ ಎದ್ದುಬಿದ್ದು ನಕ್ಕರಷ್ಟೇ.
ಬೆಳಗ್ಗೆ ಆರಂಭವಾದ ಕನ್ನಡ ಪಾಠಶಾಲೆ ರಾತ್ರಿ ತನಕವೂ ಮುಂದುವರೆದು ಒಂಥರಾ ವಯಸ್ಕರ ಶಾಲೆಯಾಗಿ ಮಾರ್ಪಟ್ಟಿತ್ತು. ಕೆಲವರು ತುಂಟ ವಿದ್ಯಾರ್ಥಿಗಳಾದರೆ, ಕೆಲವರು ಜಾಣರೂ ಇದ್ದರೂ. ಮುಂದಿನ ಸಂಚಿಕೆಯಲ್ಲಿ ಬ್ರಹ್ಮಾಂಡ ಶರ್ಮಾ ಅವರಿಗೆ ಪೀಟಿ ಮಾಸ್ಟರ್ ಪಾತ್ರ.


Click it and Unblock the Notifications











