ತೂತು ಎನ್ನಬೇಡಿ ರಂಧ್ರ ಎನ್ನಿ ಎಂದ ಚಂದ್ರಿಕಾ
ಅರುಣ್ ಸಾಗರ್ ಅವರು ರಂಧ್ರಗಳನ್ನು ಮುಚ್ಚುವ ಪ್ರಯತ್ನ ಮಾಡುತ್ತಾ ಟ್ಯಾಂಕಿನ ತೂತು ಮುಚ್ಚುವ ಆಟ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಿಕಾ ಅವರು, ಅಯ್ಯೋ ತೂತು ಎನ್ನಬೇಡಿ ರಂಧ್ರ ಎಂದು ಕರೆಯಿರಿ ಎಂದು ಸಲಹೆ ನೀಡಿದರು. ಅದರಂತೆ ಅವರು ಮುಂದೆ ರಂಧ್ರ ಪದವನ್ನೇ ಬಳಸಿದರು.
ಈ ರಂಧ್ರಗಳನ್ನು ಮುಚ್ಚುವ ಆಟದಲ್ಲಿ ನರೇಂದ್ರ ಬಾಬು ಶರ್ಮಾ ಅವರಂತೂ ಅಲ್ಲೇ ತಲೆದಿಂಬು ಹಾಸಿಕೊಂಡು ಮಲಗಿಬಿಟ್ಟಿದ್ದರು. ಕಡೆಗೆ ಈ ಟಾಸ್ಕ್ ನಿಂದ ರೋಸಿಹೋಗಿ ಟಾಸ್ಕ್ ಮನೆ ಮುಂಡಾಮೋಚ್ತು ಎಂದು ಹಿಡಿಶಾಪವನ್ನೂ ಹಾಕಿದರು. ಕೇವಲ ಬೆರಳನ್ನಷ್ಟೆ ಬಳಸಬೇಕಂತಾ ಇನ್ನೇನಾದರೂ ಬಳಸಬೇಕೆ ಎಂದು ಡಬಲ್ ಮೀನಿಂಗ್ ನಲ್ಲೂ ಅನುಶ್ರೀ ಬಳಿ ಹೇಳಿದರು.

ಬಳಿಕ ಅವರಿಗೆ ಸೊಂಟ ನೋವು, ಮೈಕೈ ನೋವು ಬಂದು ನನ್ ಕೈಯಲ್ಲಿ ಆಗಲ್ಲಪ್ಪ ಎಂದು ಕೈಎತ್ತಿದರು. ಅಗ್ರಿಮೆಂಟ್ ಗೆ ಸೈನ್ ಹಾಕಿದ್ದೀನಿ. ಇಲ್ದಿದ್ರೆ ಇಷ್ಟೊತ್ತಿಗೆ ಇಲ್ಲಿಂದ ಓಡಿಹೋಗುತ್ತಿದೆ ಎಂಬ ರಹಸ್ಯವನ್ನೂ ಅವರು ಸಿಟ್ಟಿನಲ್ಲಿ ಹೊರಹಾಕಿದರು. ಬಳಿಕ ಬಿಗ್ ಬಾಸ್ ಗೂ ಒಂದಷ್ಟು ಮಂಗಳಾರತಿ ಮಾಡಿದರು.
ಹದಿನೈದು ದಿನ ಆದ ಮೇಲೆ ಕಳುಸ್ತೀನಿ ಎಂದ್ರು. ಈ ನನ್ ಮಕ್ಳು ಮೂರು ತಿಂಗಳಾದ್ರು ನನ್ನನ್ನು ಬಿಡ್ತಿಲ್ಲ. ಇನ್ನು ಆ ಕೋತಿ ನನ್ ಮಕ್ಳು ನನಗೆ ಓಟ್ ಹಾಕಿ ಇಲ್ಲೇ ಸಾಯುವಂತೆ ಮಾಡುತ್ತಿದ್ದಾರೆ. ಅರ್ಧ ಕೋಟಿಯನ್ನು ಎಲ್ಲರಿಗೂ ಹಂಚಿ ಬಿಡ್ರಪ್ಪಾ. ಈ ಆಟನೂ ಸಾಕು, ನನಗೇನು ಬೇಡ. ನನ್ನ ಪಾಲನ್ನೂ ಯಾರಿಗಾದರೂ ಕೊಟ್ಟುಬಿಡಿ ಎಂದರು.


Click it and Unblock the Notifications











