For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರಿನಲ್ಲಿ ತೆಲುಗಿಗಳೇ ಜಾಸ್ತಿನಾ? ವಿವಾದದ ಬಳಿಕ ಕ್ಷಮೆಯಾಚಿಸಿದ ನಟ ಚಂದು ಮತ್ತು ಆಶಿಕಾ

  |

  'ಬೆಂಗಳೂರಿನಲ್ಲಿ ಶೇ. 70-80ರಷ್ಟು ತೆಲುಗಿನವರಿದ್ದಾರೆ' ಎಂದು ಹೇಳಿದ ನಟಿ ಆಶಿಕಾ ಮತ್ತು ನಟ ಚಂದು ಗೌಡ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ತೆಲುಗು ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿ ಚಂದು ಮತ್ತು ಆಶಿಕಾ ವಿವಾದ ಮಾಡಿಕೊಂಡಿದ್ದಾರೆ.

  ಕನ್ನಡ ಕಿರುತೆರೆಯ ಖ್ಯಾತ ನಟ ಚಂದು ಗೌಡ ಮತ್ತು ಆಶಿಕಾ ಸದ್ಯ ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದಾರೆ. ತೆಲುಗಿನ 'ತ್ರಿನಯನಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ತೆಲುಗು ಕಿರುತೆರೆಯಲ್ಲಿ ಪ್ರಸಿದ್ಧಿಗಳಿಸಿದ್ದಾರೆ. ಈ ಧಾರಾವಾಹಿ ಸಂಬಂಧ ತೆಲುಗು ಯೂಟ್ಯೂಬ್ ಚಾನಲ್ ಗೆ ನೀಡಿದ ಸಂದರ್ಶನದಲ್ಲಿ ಚಂದು ಗೌಡ ಮತ್ತು ಆಶಿಕಾ ಮಾತು ಈಗ ವಿವಾದಕ್ಕೆ ಕಾರಣವಾಗಿದೆ. ಬಳಿಕ ತಪ್ಪಾಯಿತು ಎಂದು ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. ಮುಂದೆ ಓದಿ...

  ಬೆಂಗಳೂರಿನಲ್ಲಿ ತೆಲುಗಿಗಳು ಜಾಸ್ತಿನಾ?

  ಬೆಂಗಳೂರಿನಲ್ಲಿ ತೆಲುಗಿಗಳು ಜಾಸ್ತಿನಾ?

  ಬೆಂಗಳೂರಿನಲ್ಲಿ 70-80 ರಷ್ಟು ತೆಲುಗಿನವರು ಇದ್ದಾರೆ, ಧಾರಾವಾಹಿ ನೋಡುತ್ತಾರೆ ಎಂದು ಹೇಳಿದ್ದಾರೆ. ಈ ಮಾತು ಈಗ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ತೆಲುಗಿಗಳನ್ನು ಓಲೈಸಲು ಹೋಗಿ ಕನ್ನಡವನ್ನು ಕಡೆಗಣಿಸಿದ್ದೀರಾ ಎಂದು ನೆಟ್ಟಿಗರು ಎಂದು ಕಿಡಿ ಕಾರುತ್ತಿದ್ದಾರೆ. ಬೇರೆ ಭಾಷೆಯಲ್ಲಿ ಖ್ಯಾತಿಗಳಿಸುತ್ತಿದ್ದಂತೆ ಕನ್ನಡ ಮರೆತೋಯ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

  ವಿಡಿಯೋ ಮೂಲಕ ಸ್ಪಷ್ಟನೆ

  ವಿಡಿಯೋ ಮೂಲಕ ಸ್ಪಷ್ಟನೆ

  ವಿವಾದ ದೊಡ್ಡದಾಗುತ್ತಿದ್ದಂತೆ ಇದೀಗ ಚಂದು ಗೌಡ ಮತ್ತು ನಟಿ ಆಶಿಕಾ ಪಡುಕೋಣೆ ವಿಡಿಯೋ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಬಹಿರಂಗವಾಗಿ ಕ್ಷಮೆಯಾಚಿಸಿರುವ ಚಂದು ಗೌಡ ಮತ್ತು ಆಶಿಕಾ ಮಾತನಾಡುವ ಭರದಲ್ಲಿ ತಪ್ಪಾಗಿ ಹೇಳಿದ್ದೇವೆ ಎಂದಿದ್ದಾರೆ.

  ಕ್ಷಮೆಯಾಚಿಸಿದ ಚಂದು-ಆಶಿಕಾ

  ಕ್ಷಮೆಯಾಚಿಸಿದ ಚಂದು-ಆಶಿಕಾ

  ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಚಂದು ಗೌಡ ಮತ್ತು ಆಶಿಕಾ, '70-80ರಷ್ಟು ವೀಕ್ಷಕರು ತಮ್ಮ ತೆಲುಗು ಧಾರಾವಾಹಿ ನೋಡುತ್ತಾರೆ ಅಂತ ಹೇಳುವುದನ್ನು ಮಿಸ್ ಆಗಿ ಬೆಂಗಳೂರಿನಲ್ಲಿ 70-80 ರಷ್ಟು ತೆಲುಗಿನವರು ಇದ್ದಾರೆ ಅಂತ ಆಗಿದೆ. ಹೀಗೆ ಹೇಳಿರುವುದು ತಪ್ಪು. ಈಗಿನ್ನು ತೆಲೆಗು ಕಲಿಯುತ್ತಿದ್ದೀನಿ. ಕನ್ನಡಿಗರು ದಯವಿಟ್ಟು ಕ್ಷಮಿಸಬೇಕು ಎಂದು ಕೇಳುತ್ತೇನೆ' ಎಂದಿದ್ದಾರೆ.

  ನಮ್ಮಂತ ಚಿಕ್ಕ ಕಲಾವಿದರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ?

  ನಮ್ಮಂತ ಚಿಕ್ಕ ಕಲಾವಿದರನ್ನು ಯಾಕೆ ಟಾರ್ಗೆಟ್ ಮಾಡ್ತೀರಾ?

  'ಯಾವತ್ತು ಕನ್ನಡ ಬಿಟ್ಟುಕೊಡಲ್ಲ. ನಾನು ಕನ್ನಡದವಳೆ, ಹುಟ್ಟಿಬೆಳೆದಿದ್ದು ಬೆಂಗಳೂರಿನಲ್ಲಿ, ಕನ್ನಡ ಮೇಲಿರುವ ಪ್ರೇಮ ಕಮ್ಮಿ ಆಗಿಲ್ಲ. ತೆಲುಗಿನಲ್ಲಿ ಧಾರಾವಾಹಿ ಮಾಡುತ್ತಿದ್ದರು ಕನ್ನಡದಲ್ಲೇ ಮಾತನಾಡುತ್ತೇವೆ. ನಮ್ಮಂತ ಚಿಕ್ಕ ಕಲಾವಿದರನ್ನು ಹಿಡಿದುಕೊಂಡು ಯಾಕೆ ಹೀಗೆ ಮಾಡುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಕೆಲಸ ಇಲ್ಲದ ಸಮಯದಲ್ಲಿ ಕೆಲಸ ಕೊಟ್ಟಿದ್ದಾರೆ ಅಷ್ಟೆ' ಎಂದು ಹೇಳಿದ್ದಾರೆ.

  ಸೃಜನ್ ಲೋಕೇಶ್ ಮದುವೆ ಆಗದೆ ಇರೋದಕ್ಕೆ ಬೀದಿಗೆ ಬಂದೆ!! | Vijayalakshmi | Filmibeat Kannada

  ಹೆಣ್ಣುಮಗಳ ಬಗ್ಗೆ ಕೆಟ್ಟದಾಗಿ ಕಾಮೆಂಟ್ ಮಾಡಬೇಡಿ- ಚಂದು

  'ಕೆಟ್ಟದಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಪರವಾಗಿಲ್ಲ ನನಗೆ ಓಕೆ. ಆದರೆ ಹೆಣ್ಣುಮಗಳ ಬಗ್ಗೆ ಕೆಟ್ಟಾಗಿ ಮಾತನಾಡಬೇಡಿ' ಎಂದಿದ್ದಾರೆ. ಇತ್ತೀಚಿಗೆ ಚಂದು ಗೌಡ ಕನ್ನಡದಲ್ಲಿ ಚಾಟ್ ಶೋ ನಡೆಸಿಕೊಡುತ್ತಿದ್ದರು. ಲಕ್ಷ್ಮೀ ಬಾರಮ್ಮ ಧಾರಾವಾಹಿ ಮೂಲಕ ಕನ್ನಡಿಗರ ಮನೆಮಾತಾಗಿರುವ ಚಂದು ಕೆಲವು ಸಿನಿಮಾಗಳಲ್ಲೂ ನಟಿಸಿದ್ದಾರೆ.

  English summary
  Actor Chandu B gowda And Ashika Padukone clarification about Kannada-Telugu controversy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X