ನಿಶ್ಚಿತಾರ್ಥಕ್ಕೆ ಹರಿದ ಕೋಟು ಧರಿಸಿ ಭಾರ್ಗಿಯಿಂದ ಅವಮಾನ ಮಾಡಿಸಿಕೊಂಡ ನಿರಂಜನ್

ಮಗಳು ಜಾನಕಿ ಮತ್ತು ಅಳಿಯ ನಿರಂಜನ್ ಚಂದು ಭಾರ್ಗಿಯಿಂದ ಅವಮಾನ ಎದುರಿಸುತ್ತಲೆ ಚಂಚಲ ನಿಶ್ಚಿತಾರ್ಥದಲ್ಲಿ ಭಗಿಯಾಗಿದ್ದಾರೆ. ತಂಗಿಗೋಸ್ಕರ ಅಕ್ಕ ಜಾನಕಿ, ಭಾರ್ಗಿ ಏನೇ ಹೇಳಿದ್ರು ಎಲ್ಲವನ್ನು ಸಹಿಸಿಕಳ್ಳುತ್ತ ಭಾರ್ಗಿ ವಿರುದ್ಧ ಒಂದು ಮಾತನ್ನು ಆಡದೆ ಸೈಲೆಂಟ್ ಆಗಿದ್ದಾರೆ.

ಮನೆಗೆ ಬಂದ ಮಗಳು ಅಳಿಯನನ್ನು ಗೆಸ್ಟ್ ಹೌಸ್ ನಲ್ಲಿ ಇರುವಂತೆ ಹೇಳಿ ಅವಮಾನ ಮಾಡಿದ ಭಾರ್ಗಿ, ನಿರಂಜನ್ ಸಂಪಾದನೆಯ ವಿಚಾರವಾಗಿ ಚುಚ್ಚಿ ಚುಚ್ಚಿ ಮಾತನಾಡುತ್ತಿದ್ದಾರೆ. ಏನು ಸಂಪಾದನೆ ಇಲ್ಲ ಎಂದರೆ ಮರ್ಯಾದೆ ಹೋಗುತ್ತೆ ತಿಂಗಳಿಗೆ 25 ಲಕ್ಷವಾದ್ರು ಸಂಪಾದನೆ ಮಾಡುತ್ತೇನೆ ಎಂದು ಸಂಬಂದಿಕರ ಬಳಿ ಹೇಳುವಂತೆ ಭಾರ್ಗಿ, ನಿರಂಜನ್ ಗೆ ಹೇಳಿದ್ದಾರೆ.

ಭಾರ್ಗಿ ಮಾತಿನಿಂದ ಜಾನಕಿಯ ಕೋಪ ಹೆಚ್ಚಾಗುತ್ತಿದ್ದರು ತಂಗಿಗಾಗಿ, ಅಮ್ಮನಿಗಾಗಿ ಎಲ್ಲವನ್ನು ಸಹಿಸಿಕೊಂಡು ಭಾರ್ಗಿ ಮನೆಯಲ್ಲಿ ಇದ್ದಾರೆ. ಫಾರ್ಮ್ ಹೌಸ್ ಬಗ್ಗೆ ಹೇಳುತ್ತಾ ಭಾರ್ಗಿ ಬಳಿ ಇರುವ ಆಸ್ತಿಯ ವಿವರವನ್ನು ನಿರಂಜನ್ ಮುಂದೆ ಹೇಳಿ ಅವಮಾನಿಸಿದ್ದಾರೆ. ಅಲ್ಲದೆ ನಿರಂಜನ್ ರಾಜಕೀಯ ಎಂಟ್ರಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ.

ಚಂಚಲ ನಿಶ್ಚಿತಾರ್ಥಕ್ಕೆ ತಯಾರಿ

ಚಂಚಲ ನಿಶ್ಚಿತಾರ್ಥಕ್ಕೆ ತಯಾರಿ

ಚಂಚಲ ನಿಶ್ಚಿತಾರ್ಥಕ್ಕೆ ಭರ್ಜರಿ ತಯಾರಿ ನಡೆಯುತ್ತಿದೆ. ನಿಶ್ಚಿತಾರ್ಥ ನಡೆಯುವ ಸ್ಥಳಕ್ಕೆ ಈಗಾಗಲೆ ಇಡೀ ಕುಟುಂಬ ಆಗಮಿಸಿದೆ. ಭಾರ್ಗಿ ಅವರ ಫಾರ್ಮ್ ಹೌಸ್ ನಲ್ಲಿ ಚಂಚಲ ಎಂಗೇಜ್ ಮೆಂಟ್ ನಡೆಯುತ್ತಿದೆ. ಸಂಭ್ರಮದಲ್ಲಿಯು ಭಾರ್ಗಿ ನಿರಂಜನ್ ಅನ್ನು ಅವಮಾನ ಮಾಡುವುದನ್ನು ನಿಲ್ಲಿಸಿಲ್ಲ. ಇಡೀ ನಿಶ್ಚಿತಾರ್ಥ ಟಿವಿಯಲ್ಲಿ ಲೈವ್ ಕವರೇಜ್ ಮಾಡಲಾಗುತ್ತಿದೆ.

ನಿರಂಜನ್ ರಾಜಕೀಯದ ಬಗ್ಗೆ ಭಾರ್ಗಿ ವ್ಯಂಗ್ಯ

ನಿರಂಜನ್ ರಾಜಕೀಯದ ಬಗ್ಗೆ ಭಾರ್ಗಿ ವ್ಯಂಗ್ಯ

ಈ ಹಿಂದೆ ನಿರಂಜನ್ ಅವರು ಭಾರ್ಗಿ ವಿರುದ್ಧ ರಾಜಕೀಯಕ್ಕೆ ಬರುವುದಾಗಿ ಸವಾಲು ಹಾಕಿದ್ದರು. ರಾಜಕೀಯಕ್ಕೆ ಬಂದು ಭಾರ್ಗಿ ಅವರ ವಿರುದ್ಧವೆ ನಿಂತು ಗೆದ್ದು, ಭಾರ್ಗಿಗಿಂತ ಎತ್ತರಕ್ಕೆ ಬೆಳೆಯುವುದಾಗಿ ಚಾಲೆಂಜ್ ಹಾಕಿದ್ದರು. ಈಗ ಆ ಬಗ್ಗೆ ಕೇಳುತ್ತ ನಿರಂಜನ್ ಕಾಲೆಳೆಯುತ್ತಿದ್ದಾರೆ ಭಾರ್ಗಿ. ಆದ್ರೆ ಜಾನಕಿಗೆ ಇದನ್ನು ಸಹಿಸಿಕೊಳ್ಳು ಸಾಧ್ಯವಾಗುತ್ತಿಲ್ಲ. ಹಂಗಿಸಿ ಮಾತನಾಡ ಬೇಡಿ ಎಂದು ಅಪ್ಪನ ಬಲಿ ಕೇಳಿಕೊಂಡರು ಸುಮ್ಮನಾಗದ ಭಾರ್ಗಿ ನಿರಂಜನ್ ಅನ್ನು ಅವಮಾನ ಮಾಡುತ್ತಲೆ ಇದ್ದಾರೆ.

ಗೊತ್ತಾಗುತ್ತಾ ನಿರಂಜನ್-ಜಾನಕಿ ವಿಚಾರ

ಗೊತ್ತಾಗುತ್ತಾ ನಿರಂಜನ್-ಜಾನಕಿ ವಿಚಾರ

ನಿರಂಜನ್ ಮತ್ತು ಜಾನಕಿ ಇಬ್ಬರು ಭಾರ್ಗಿ ಮನೆಯಲ್ಲಿ ಇರುವ ವಿಚಾರ ಮನೆಯವರಿಗೆ ಗೊತ್ತಾಗುತ್ತಾ ಎನ್ನುವ ಅನುಮಾನ ಪ್ರೇಕ್ಷಕರಲ್ಲಿದೆ. ಯಾಕಂದ್ರೆ ಚಂಚಲ ನಿಶ್ಚಿತಾರ್ಥ ಸಮಾರಂಭ ಟಿವಿಯಲ್ಲಿ ಲೈವ್ ಬರುತ್ತಿದೆ. ಆಗಲೆ ಭಾರ್ಗಿ ಮನೆಯಲ್ಲಿ ನಿರಂಜನ್ ಇದ್ದಿದ್ದನ್ನು ಸಂಜನಾ ಮಗಳು ನೋಡಿ ನೋಡಿ ಮನೆಯವರಿಗೆ ತೋರಿಸಿದ್ದಾರೆ. ಆದ್ರೆ ನಿರಂಜನ್ ತಾಯಿ ಮತ್ತು ಅಕ್ಕನಿಗೆ ನಿರಂಜನ್ ಮತ್ತು ಜಾನಕಿ ಕಾಣಿಸಿಲ್ಲ. ಆದ್ರೆ ನಿಶ್ಚಿತಾರ್ಥ ಮುಗಿಯೊದ್ರೊಳಗೆ ಗೊತ್ತಾಗುತ್ತಾ ಎನ್ನುವುದು ಕಾದು ನೋಡಬೇಕು.

ಜಾನಕಿಗೆ ಒಡವೆ ಗಿಫ್ಟ್ ಕೊಟ್ಟ ರಶ್ಮಿ

ಜಾನಕಿಗೆ ಒಡವೆ ಗಿಫ್ಟ್ ಕೊಟ್ಟ ರಶ್ಮಿ

ಜಾನಕಿಗೆ ರಶ್ಮಿ ಮತ್ತು ಚಂಚಲ ಇಬ್ಬರು ಒಡವೆಯನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ. ಆದ್ರೆ ಜಾನಕಿ ಒಡವೆ ಬೇಡ ಎಂದು ಅಮ್ಮನ ಬಳಿ ಹೇಳಿದ್ದಾರೆ. ಒಡವೆ ಹಾಕಿಕೊಳ್ಳದಿದ್ದರೆ ಅವಮಾನ ಆಗುತ್ತಾ ಎಂದು ರಶ್ಮಿ ಅವರನ್ನು ಕೇಳಿದ್ಕಕೆ ರಶ್ಮಿ ಬೇಸರ ಮಾಡಿಕೊಂಡಿದ್ದಾರೆ. ಆದ್ರೆ ಬಾಲ್ಯದ ನೆನಪನ್ನು ಕೆದಕಿ ಮತ್ತೆ ಜಾನಕಿಯನ್ನು ಭಾವನಾತ್ಮಕತೆಕೆ ತಳ್ಳಿ, ಅಮ್ಮನ ನಂತರ ರಶ್ಮಿಯವರ ಕಣ್ಣೀರಿಗೆ ಕರಗಿ ಜಾನಕಿ ಒಡವೆ ಹಾಕಿಕೊಳ್ಳಲು ಒಪ್ಪಿಕೊಂಡಿದ್ದಾರೆ.

ನಿರಂಜನ್ ಬಟ್ಟೆಯ ಬಗ್ಗೆ ಭಾರ್ಗಿ ಅವಮಾನ

ನಿರಂಜನ್ ಬಟ್ಟೆಯ ಬಗ್ಗೆ ಭಾರ್ಗಿ ಅವಮಾನ

ನಿರಂಜನ್ ಧರಿಸಿದ್ದ ಬಟ್ಟೆ ಭಾರ್ಗಿ ಅವಮಾನ ಮಾಡಿದ್ದಾರೆ. ಹಳೆಯ ಕೋಟು, ಕಿತ್ತೋಗಿರುವ ಗುಂಡಿ ಹಾಕಿಕೊಂಡರೆ ಅವಮಾನ ಆಗುತ್ತೆ. 300ಜನಕ್ಕು ಹೆಚ್ಚು ವಿಐಪಿಗಳು ಬರ್ತಾರೆ. ಇದರಿಂದ ಮರ್ಯಾದೆ ಹೋಗುತ್ತೆ. ಹಾಗಾಗಿ ಹೊಸ ಡಿಸೈನರ್ ಬಟ್ಟೆ ಕೊಡಿಸಲು ಮುಂದಾಗಿದ್ರು ಭಾರ್ಗಿ. ಆದ್ರೆ ನಿರಂಜನ್ ಮಾತ್ರ ಭಾರ್ಗಿ ಕೊಡಿಸುವ ಬಟ್ಟೆ ಬೇಡ ಎಂದು ಹೇಳಿ ಕಿತ್ತೋದ ಗುಂಡಿಯನ್ನು ಸರಿಮಾಡಿಸಿಕೊಂಡು ಹಾಕಿಕೊಳ್ಳುತ್ತೇನೆ ಎಂದು ಹೇಳಿ ಹೊರಟು ಹೋದರು.

More from Filmibeat

English summary
transport minister visits Chandu's farmhouse to convey his best wishes for his daughter's engagement. when the minister spots a popped button on Niranjan's blazer and highlights it.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X