twitter
    For Quick Alerts
    ALLOW NOTIFICATIONS  
    For Daily Alerts

    ಭಾರ್ಗಿ ಕುತಂತ್ರ: ಮಗಳು ಜಾನಕಿ ಅಧಿಕಾರದಿಂದ ಸಸ್ಪೆಂಡ್?

    |

    Recommended Video

    Magalu Janaki: ಡಿ ವೈ ಎಸ್ ಪಿಯಾಗಿ ಅಧಿಕಾರಿ ಸ್ವೀಕರಿಸುವ ಮೊದಲು ತಂದೆಯನ್ನ ಭೇಟಿ ಮಾಡಿದ ಜಾನಕಿ

    'ಮಗಳು ಜಾನಕಿ' ಧಾರಾವಾಹಿಯ ಹೊಸ ಅಧ್ಯಾಯ ಪ್ರಾರಂಭವಾದ ಮೇಲೆ ಮತ್ತಷ್ಟು ರೋಚಕ ಸಂಗತಿಗಳು ನಡೆಯುತ್ತಿವೆ. ಪೊಲೀಸ್ ಆಗಿ ಅಧಿಕಾರ ಸ್ವೀಕರಿಸಿರುವ ಮಗಳು ಜಾನಕಿ ನ್ಯಾಯ, ಕಾನೂನಿನ ಪರವಾಗಿ ದಿಟ್ಟ ಹೆಜ್ಜೆ ಇಟ್ಟು ಮುನ್ನುಗ್ಗುತ್ತಿದ್ದಾರೆ.

    ಆದ್ರೆ ಜಾನಕಿಯ ನ್ಯಾಯದ ದಾರಿಗೆ ಅಡ್ಡ ಬಂದು ಪ್ರತೀ ಹೆಜ್ಜೆಗೂ ಮುಳ್ಳಾಗಿ ಕಾಡುತ್ತಿದ್ದಾರೆ ಅಪ್ಪ ಚಂದು ಭಾರ್ಗಿ. ಮಗಳ ವಿರುದ್ಧವೆ ತಿರುಗಿ ಬಿದ್ದಿರುವ ಭಾರ್ಗಿ ಈಗ ಜಾನಕಿಯನ್ನು ಅಧಿಕಾರದಿಂದ ಸಸ್ಪೆಂಡ್ ಮಾಡಿಸುವುದಾಗಿ ದಮ್ಕಿ ಹಾಕಿದ್ದಾರೆ.

    ಪೊಲೀಸ್ ಅಧಿಕಾರಿಯಾದ ಜಾನಕಿ: ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಮಗಳುಪೊಲೀಸ್ ಅಧಿಕಾರಿಯಾದ ಜಾನಕಿ: ಅಪ್ಪ ಭಾರ್ಗಿ ವಿರುದ್ಧ ತಿರುಗಿ ನಿಲ್ಲುತ್ತಾಳಾ ಮಗಳು

    ಅಧಿಕಾರ ಸ್ವೀಕರಿಸಿ ಒಂದು ತಿಂಗಳೊಳಗೆ ಸಸ್ಪೆಂಡ್ ಆದ್ರೆ ಜಾನಕಿ ವೃತ್ತಿ ಜೀವನಕ್ಕೆ ಕೆಟ್ಟ ಹೆಸರುತ್ತೆ ಎನ್ನುವ ಬೇಸರ ಆನಂದ್ ಬೇಳಗೂರಗೆ. ಜಾನಕಿಯನ್ನು ಸಸ್ಪೆಂಡ್ ಮಾಡಬೇಕಾದ್ರೆ ಜಾನಕಿ ವಿರುದ್ಧ ರಿಪೋರ್ಟ್ ಬೆರದು ಗೃಹ ಮಂತ್ರಿ ಭಾರ್ಗಿಗೆ ಸಲ್ಲಿಸಬೇಕು. ಈ ಬೆಳವಣಿಗೆ ನೋಡಿದ್ರೆ ಜಾನಕಿ ಅಧಿಕಾರದಿಂದ ಸಸ್ಪೆಂಡ್ ಆಗುತ್ತಾರೆ ಎನಿಸುತ್ತೆ.ಮುಂದೆ ಓದಿ..

    ಅಪ್ಪ ಗೃಹಮಂತ್ರಿ ಬಳಿ ಕ್ಷಮೆ ಕೇಳ್ತಾರಾ ಜಾನಕಿ?

    ಅಪ್ಪ ಗೃಹಮಂತ್ರಿ ಬಳಿ ಕ್ಷಮೆ ಕೇಳ್ತಾರಾ ಜಾನಕಿ?

    ಡಿ ವೈ ಎಸ್ ಪಿ ಆಗಿರುವ ಜಾನಕಿ ಅಪ್ಪ ಚಂದು ಭಾರ್ಗಿ ಬಳಿ ಕ್ಷಮೆ ಕೇಳುತ್ತಾರಾ ಅಥವಾ ಅಧಿರಾಕದಿಂದ ಸಸ್ಪೆಂಡ್ ಆಗ್ತಾರಾ ಎನ್ನುವ ಕುತೂಹಲ ಪ್ರೇಕ್ಷಕರಲ್ಲಿ ಮನೆ ಮಾಡಿದೆ. ಆನಂದ್ ಬೆಳಗೂರು ಹೇಳುವ ಹಾಗೆ ಅಪ್ಪ ಗೃಹಮಂತ್ರಿ ಬಳಿ ಹೋಗಿ ಕ್ಷಮೆ ಕೇಳಿದ್ರೆ ಜಾನಕಿ ಅಧಿಕಾರದಲ್ಲಿ ಮುಂದುವರೆಯಬಹುದು. ಆದ್ರೆ ನ್ಯಾಯ, ಕಾನೂನು ಪರವಾಗಿ ನಡೆಯುವ ಜಾನಕಿ ಕುತಂತ್ರಿ ಅಪ್ಪನ ಮಾತನ್ನು ದಿಕ್ಕರಿಸಿ ತನ್ನ ದಾರಿಯಲ್ಲೆ ನಡೆದ್ರೆ ಜಾನಕಿ ಪೊಲೀಸ್ ಹುದ್ದೆಗೆ ಕುತ್ತುಬರುವುದು ಪಕ್ಕಾ.

    ಕ್ಷಮೆ ಕೇಳಿದ್ರೆ ಜಾನಕಿ ಮೇಲೆ ಹೆಚ್ಚಾಗುತ್ತೆ ಒತ್ತಡ

    ಕ್ಷಮೆ ಕೇಳಿದ್ರೆ ಜಾನಕಿ ಮೇಲೆ ಹೆಚ್ಚಾಗುತ್ತೆ ಒತ್ತಡ

    ಒಂದು ವೇಳೆ ಜಾನಕಿ, ಭಾರ್ಗಿ ಬಳಿ ಹೋಗಿ ಕ್ಷಮೆ ಕೇಳಿದ್ರೆ ಶಂಕರ್ ದೇವಘಟ್ಟ ಅವರನ್ನು ಅರೆಸ್ಟ್ ಮಾಡುವಂತೆ ಒತ್ತಡ ಹೆಚ್ಚಾಗುತ್ತೆ. ಆದ್ರೆ ದೇವರಂತಹ ಮನುಷ್ಯ ಶಂಕರ್ ದೇವಘಟ್ಟ ಅವರನ್ನು ಅರೆಸ್ಟ್ ಮಾಡಲು ಜಾನಕಿ ಕೈಯಲ್ಲಿ ಸಾಧ್ಯವಾಗುತ್ತಿಲ್ಲ. ಯಾಕೆಂದ್ರೆ ಮನೆಯಿಂದ ಹೊರಬಂದ ಜಾನಕಿಗೆ ಸಹಾಯ ಮಾಡಿದ್ದು ಅದೆ ಶಂಕರ್ ದೇವಘಟ್ಟ.

    ಕೊನೆಗೂ ಪೊಲೀಸ್ ಆಗೆ ಬಿಟ್ಟಳು ಮಗಳು ಜಾನಕಿ: ಬರಲಿದೆ ಹೊಸ ಅಧ್ಯಾಯಕೊನೆಗೂ ಪೊಲೀಸ್ ಆಗೆ ಬಿಟ್ಟಳು ಮಗಳು ಜಾನಕಿ: ಬರಲಿದೆ ಹೊಸ ಅಧ್ಯಾಯ

    ಸಿ ಎಸ್ ಪಿ ಸಲಹೆ ಪಡೆಯ ಬಹುದು ಜಾನಕಿ

    ಸಿ ಎಸ್ ಪಿ ಸಲಹೆ ಪಡೆಯ ಬಹುದು ಜಾನಕಿ

    ಡಿ ವೈ ಎಪ್ ಪಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಜಾನಕಿ, ಸಿ ಎಸ್ ಪಿಯನ್ನು ಭೇಟಿಯಾಗಿಲ್ಲ. ಹಾಗಾಗಿ ಈ ಸಂಕಷ್ಟದ ಸನ್ನಿವೇಶವನ್ನು ಎದುರಿಸುವ ಬಗ್ಗೆ ಸಿ ಎಸ್ ಪಿ ಸಲಹೆ ಪಡೆಯುವ ಸಾಧ್ಯತೆ ಇದೆ. ಈಗಾಗಲೆ ಚಂದು ಭಾರ್ಗಿ ಮಗಳ ಅಹಂಕಾರಕ್ಕೆ ಸಿ ಎಪ್ ಪಿ ಕಾರಣ ಎಂದು ಕೆಂಡ ಕಾರುತ್ತಿದ್ದಾರೆ. ಒಂದು ವೇಳೆ ಈ ವಿಚಾರದಲ್ಲಿ ಸಿ ಎಸ್ ಪಿ ಸಲಹೆ ಪಡೆದು ಸಿ ಎಸ್ ಪಿ ಹೇಳಿದ ಪ್ರಕಾರ ನಡೆದರೆ ಭಾರ್ಗಿಗೆ ಮಗಳ ಮೇಲಿನ ಕೋಪ ಮತ್ತಷ್ಟು ಹೆಚ್ಚಾಗುವುದ್ರಲ್ಲಿ ಅನುಮಾನವೆ ಇಲ್ಲ.

    ಮಗುಳು ಸಸ್ಪೆಂಡ್ ಆಗದಂತೆ ತಡೆಯಬಹುದು ರಶ್ಮಿ

    ಮಗುಳು ಸಸ್ಪೆಂಡ್ ಆಗದಂತೆ ತಡೆಯಬಹುದು ರಶ್ಮಿ

    ಪೊಲೀಸ್ ಆಗಿರುವ ಮಗಳನ್ನು ನೋಡಲು ತಾಯಿ ರಶ್ಮಿ ಭಾರ್ಗಿ ಅವರಿಗೆ ಎಲ್ಲಿಲ್ಲದ ಸಂತಸ. ಯಾವಾಗಲು ಮಗಳ ಪರ ವಹಿಸಿ ಮಾತನಾಡುವ ರಶ್ಮಿ ಈ ವಿಚಾರದಲ್ಲು ಮಧ್ಯ ಪ್ರವೇಶಿಸಿ ಭಾರ್ಗಿ ಮನಸ್ಸನ್ನು ಬದಲಾಯಿಸುತ್ತಾರಾ ರಶ್ಮಿ. ಮಗಳು ಸಸ್ಪೆಂಡ್ ಆಗುತ್ತಿದ್ದಾಳೆ ಎನ್ನುವ ವಿಚಾರ ಕೇಳಿಯೆ ಶಾಕ್ ಆಗಿರುವ ರಶ್ಮಿ, ಭಾರ್ಗಿಯಿಂದ ಮಗಳನ್ನು ಕಾಪಾಡ ಬಹುದು.

    ಜಾನಕಿ ವಿರುದ್ಧ ರಿಪೋರ್ಟ್ ಬರೆಯುತ್ತಾರಾ ಆನಂದ್?

    ಜಾನಕಿ ವಿರುದ್ಧ ರಿಪೋರ್ಟ್ ಬರೆಯುತ್ತಾರಾ ಆನಂದ್?

    ಸಸ್ಪೆಂಡ್ ಆದರು ಪರವಾಗಿಲ್ಲ, ನ್ಯಾಯದ ವಿರುದ್ಧ, ಕಾನೂನಿನ ವಿರುದ್ಧ ಹೋಗಲ್ಲ, ಯಾವುದೆ ಕಾರಣಕ್ಕು ಅಪ್ಪನ ಬಳಿ ಹೋಗಿ ಕ್ಷಮೆ ಕೇಳುವ ಮಾತೆ ಇಲ್ಲ ಎಂದು ಹೇಳಿರುವ ಜಾನಕಿ ವಿರುದ್ಧ ಆನಂದ್ ರಿಪೋರ್ಟ್ ಬರೆಯುವ ಸನ್ನಿವೇಶ ಎದುರಾಗಿದೆ. ತುಂಬಾ ಬೇಕಾದವರ ವಿರುದ್ಧವಾಗಿ ಕಂಪ್ಲೇಂಟ್ ಬರೆದು ಕೊಡುವ ಸಂಕಟದಲ್ಲಿ ಸಿಲುಕಿದ್ದಾರೆ ಆನಂದ್. ಜಾನಕಿ ವಿರುದ್ಧ ರಿಪೋರ್ಟ್ ಬರೆದು ಕೊಡ್ತಾರಾ ಎನ್ನುವ ಕುತೂಹಲಕ್ಕೆ ಇಂದಿನ ಸಂಚಿಕೆಯಲ್ಲಿ ತೆರೆಬೀಳಲಿದೆ.

    English summary
    Kannada famous serial Magalu Janaki Chandu Bharti decide to Suspending from DYSP post of Janaki. Janaki don't fear the threats of her father.
    Tuesday, May 14, 2019, 14:35
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X