ಸರಿಗಮಪ ಶೋದಲ್ಲಿ ಹಂಸಲೇಖ ಅನುಪಸ್ಥಿತಿ: ರಾಘವೇಂದ್ರ ಹುಣಸೂರು ಹೇಳಿದ್ದೇನು?

ಜನರು ಸಿನಿಮಾವನ್ನು ಹೇಗೆ ಇಷ್ಟಪಡುತ್ತಾರೋ ಹಾಗೇ ಕಿರುತೆರೆಯ ಸೀರಿಯಲ್‌ಗಳು ಮತ್ತು ವೀಕ್‌ಎಂಡ್‌ನಲ್ಲಿ ಪ್ರಸಾರ ಆಗುವ ಒಂದಷ್ಟು ರಿಯಾಲಿಟಿ ಶೋಗಳನ್ನು ಅಷ್ಟೇ ಇಷ್ಟ ಪಡುತ್ತಾರೆ. ವಾರಾಂತ್ಯ ಬಂದ್ರೆ ಸಾಕು ಸಾಲು ಸಾಲು ರಿಯಾಲಿಟಿ ಶೋಗಳು ವೀಕ್ಷಕರನ್ನು ರಂಜಿಸುತ್ತೆ. ವೀಕ್ಷಕರು ಕೂಡ ವಿಭಿನ್ನ ಬಗೆಯ ಶೋಗಳು, ಹಾಡು, ನೃತ್ಯಕ್ಕೆ ಸಂಬಂಧ ಪಟ್ಟ ರಿಯಾಲಿಟಿ ಶೋಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾರೆ. ಹೀಗೆ ಸಾಕಷ್ಟು ಜನಪ್ರೀಯತೆ ಪಡೆದುಕೊಂಡಿರುವ ಕಿರುತೆರೆ ರಿಯಾಲಿಟಿ ಶೋ ನಲ್ಲಿ ಸರಿಗಮಪ ಕಾರ್ಯಕ್ರಮ ಕೂಡ ಒಂದು.

ಸರಿಗಮಪ ರಿಯಾಲಿಟಿ ಶೋವನ್ನು ಸಾಕಷ್ಟು ಮಂದಿ ಇಷ್ಟ ಪಟ್ಟಿದ್ದಾರೆ. ವೀಕ್‌ಎಂಡ್ ಆಯ್ತು ಅಂದ್ರೆ ಸಾಕು ಸರಿಗಮಪ ರಿಯಾಲಿಟಿ ಶೋ ನೋಡಲು ಟಿವಿ ಮುಂದೆ ಹಾಜರಾಗುತ್ತಾರೆ. ಈಗಾಗಲೇ ಸಾಕಷ್ಟು ಸೀಸನ್‌ಗಳನ್ನು ಯಶಸ್ವಿಯಾಗಿ ಮಾಡಿ ಜನಪ್ರಿಯತೆ ಪಡೆದಿರುವ ಈ ರಿಯಾಲಿಟಿ ಶೋ ಕೆಲ ದಿನಗಳಿಂದ ಸುದ್ದಿಯಲ್ಲಿದೆ ಅದು ಕೂಡ ಹಂಸಲೇಖ ಅವರ ವಿಚಾರವಾಗಿ. ಸಂಗೀತ ನಿರ್ದೇಶಕ ನಾದಬ್ರಹ್ಮ ಹಂಸಲೇಖ ಜಾತ್ಯಾತೀತತೆ ಮತ್ತು ಅಸ್ಪೃಶ್ಯತೆ ಬಗ್ಗೆ ಇತ್ತೀಚೆಗೆ ಮಾತನಾಡಿದ್ದರು.

ದಲಿತರ ವಿಚಾರವಾಗಿಯೂ ಹಂಸಲೇಖ ಮಾತನಾಡಿದ್ದರು. ಹೀಗೆ ಮಾತನಾಡುವ ಭರದಲ್ಲಿ ಪೇಜಾವರ ಶ್ರೀಗಳ ಬಗ್ಗೆಯೂ ಕೆಲವು ಪ್ರಶ್ನೆಗಳನ್ನು ಮಾಡಿದ್ದರು. ಪ್ರಶ್ನೆ ಮಾಡುವ ಸಂದರ್ಭದಲ್ಲಿ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದು, ಪೇಜಾವರ ಶ್ರೀಗಳು ದಲಿತರ ಮನೆಗೆ ಹೋಗುತ್ತಾರೆ, ಆದರೆ ಅವರ ಮನೆಯಲ್ಲಿ ಮಾಡುವ ಕೋಳಿಸಾರು, ಕುರಿ ರಕ್ತ ಕುಡಿಯಲು ಸಾಧ್ಯವೇ, ಲಿವರ್ ತಿನ್ನುತ್ತಾರ ಎಂದು ಪ್ರಶ್ನಿಸಿದ್ದರು. ಇದು ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ಇದಕ್ಕೆ ಹಂಸಲೇಖ ಅವರು ಕ್ಷಮೆಯನ್ನು ಕೂಡ ಕೇಳಿದ್ದರು. ಈ ವಿಚಾರ ಸುದ್ದಿಯಲ್ಲಿ ಇರಬೇಕಾದರೆ ಹಂಸಲೇಖ ಅವರ ಆರೋಗ್ಯ ಕೂಡ ಹದಗೆಟ್ಟಿತ್ತು. ಹೀಗಾಗಿ ಈ ವಾರದ ಸರಿಗಮಪ ರಿಯಾಲಿಟಿ ಶೋನಲ್ಲಿ ಹಂಸಲೇಖ ಅವರ ಜಾಗ ಖಾಲಿಯಾಗಿತ್ತು.

channel head Raghavendra Hunsur give clarification about Hamsalekha absent in sa re ga ma pa show

ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಭಾರಿ ಸಂಶಯ ಕೂಡ ವ್ಯಕ್ತವಾಗಿತ್ತು. ಅಲ್ಲದೇ ಸರಿಗಮಪ ರಿಯಾಲಿಟಿ ಶೋನಲ್ಲಿ ಮಹಾಗುರುಗಳ ಸ್ಥಾನವನ್ನು ಪಡೆದಿರುವ ಹಂಸಲೇಖ ಅವರು ಇನ್ನು ಮುಂದೆ ಈ ಶೋ ನಲ್ಲಿ ಕಾಣಿಸಿಕೊಳ್ಳೊದಿಲ್ಲ, ಸರಿಗಮಪ ರಿಯಾಲಿಟಿ ಶೋ ಹಂಸಲೇಖ ಅವರನ್ನು ದೂರವಿಟ್ಟಿದೆ ಎಂಬೆಲ್ಲ ಮಾತುಗಳು ಕೇಳಿ ಬರುತ್ತಿದ್ದವು. ಇದಕ್ಕೆ ಈಗ ಸ್ಪಷ್ಟನೆ ಸಿಕ್ಕಿದ್ದು, ಸ್ವತಃ ವಾಹಿನಿ ಮುಖ್ಯಸ್ಥ ರಾಘವೇಂದ್ರ ಹುಣಸೂರು ಅವರು ಉತ್ತರ ನೀಡಿದ್ದಾರೆ. ಹಂಸಲೇಖ ಅವರು ಯಾಕೆ ಕಾರ್ಯಕ್ರಮದಿಂದ ಬ್ರೇಕ್ ತೆಗೆದುಕೊಳ್ಳುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ನೀಡಿದ್ದಾರೆ.ಹಾಗೇ ಹಂಸಲೇಖ ಅವರ ಬಗ್ಗೆ ಹರಿದಾಡುತ್ತಿದ್ದ ಊಹಾಪೋಹ ಗಳಿಗೆ ತೆರೆ ಎಳೆದಿದ್ದಾರೆ.

channel head Raghavendra Hunsur give clarification about Hamsalekha absent in sa re ga ma pa show

ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ರಾಘವೇಂದ್ರ ಹುಣಸೂರು ಹಂಸಲೇಖ ಅವರು ಸರಿಗಮಪ ಶೊ ನಿಂದ ಹೊರಹೋಗುವುದಿಲ್ಲ ಎಂಬ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಬರೆದುಕೊಂಡಿರುವ ಅವರು "ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದ್ದಾರೆ. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ." ಎಂದು ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ ಹಂಸಲೇಖ ಅವರು ರಾಗವೇಂದ್ರ ಹುಣಸೂರು ಅವರಿಗೆ ಕಳುಹಿಸಿರುವ ಸಂದೇಶವನ್ನು ಅವರು ಹಂಚಿಕೊಂಡಿದ್ದಾರೆ. ಗುರುಗಳಿಂದ ಬಂದ ಸಂದೇಶ ಎಂದು ಬರೆದುಕೊಂಡು ಅಭಿಮಾನಿಗಳೊಂದಿಗೆ ಅದನ್ನು ಶೇರ್ ಮಾಡಿಕೊಂಡಿದ್ದಾರೆ. ಹಂಸಲೇಖ ಅವರು ಕಳುಹಿಸಿದ ಸಂದೇಶದಲ್ಲಿ "ಡಿಯರ್ ರಘು ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಳೆಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ" ಎಂದು ಹೇಳಿದ್ದಾರೆ.

More from Filmibeat

English summary
Zee Kannada clarifies about Hamsalekha absence in sa re ga ma pa Kannada reality show.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X