ಬಿಗ್ ಬಾಸ್ ಕನ್ನಡ 8ನೇ ಆವೃತ್ತಿ ಬಗ್ಗೆ ಅಪ್‌ಡೇಟ್ ಹೊರಬಿದ್ದಿದೆ!
ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿ ಈ ವರ್ಷ ನಡೆಯುವುದು ಬಹುತೇಕ ಎಂದು ವರದಿಯಾಗಿತ್ತು. ಕೊರೊನಾ ವೈರಸ್ ಹಿನ್ನೆಲೆ ಬಿಗ್ ಬಾಸ್ ಆಯೋಜಿಸುವುದು ಸವಾಲಿನ ಕೆಲಸ ಎಂಬ ಕಾರಣಕ್ಕೆ ತಾತ್ಕಲಿಕವಾಗಿ ಶೋ ಗೆ ಬ್ರೇಕ್ ಹಾಕಿದ್ದರು.
ಆದರೆ, ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಬಿಗ್ ಬಾಸ್ ಹೊಸ ಆವೃತ್ತಿಗಳು ಆರಂಭವಾಗಿ ಯಶಸ್ವಿಯಾಗಿ ಮುಂದುವರಿಯುತ್ತಿದೆ. ಈ ನಿಟ್ಟಿನಲ್ಲಿ ಕನ್ನಡದ ಬಿಗ್ ಬಾಸ್ ಏಕೆ ಆರಂಭವಾಗಬಾರದು ಎಂಬ ಅಭಿಪ್ರಾಯ ವೀಕ್ಷಕರ ವಲಯದಲ್ಲೂ ಕೇಳಿ ಬಂದಿದೆ. ಇಂತಹ ಕುತೂಹಲದ ನಡುವೆ ಬಿಗ್ ಬಾಸ್ 8ನೇ ಆವೃತ್ತಿ ಬಗ್ಗೆ ಅಪ್‌ಡೇಟ್ ಸಿಕ್ಕಿದೆ. ಮುಂದೆ ಓದಿ...

ಬಿಗ್ ಬಾಸ್ 8 ನಡೆಯುತ್ತೆ
ಎಲ್ಲ ಅಂದುಕೊಂಡಂತೆ ಆಗಿದ್ದರೆ ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಿನಲ್ಲಿ ಬಿಗ್ ಬಾಸ್ ಕನ್ನಡ ಆರಂಭವಾಗಬೇಕಿತ್ತು. ಆದ್ರೆ, 2020ರಲ್ಲಿ ಈ ಕಾರ್ಯಕ್ರಮ ಆಯೋಜಿಸುವುದು ಕಷ್ಟ ಎಂಬ ನಿರ್ಧಾರಕ್ಕೆ ಬಂದಿದ್ದ ಆಯೋಜಕರು ತಾತ್ಕಲಿಕವಾಗಿ ನಿಲ್ಲಿಸಿದ್ದರು. ಇದೀಗ, ಬಿಗ್ ಬಾಸ್ ಶೋ ಆರಂಭಿಸುವ ಬಗ್ಗೆ ತಯಾರಿ ನಡೆಸಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ವರ್ಷವೇ ನಡೆಯುತ್ತಾ?
ಈ ಹಿಂದೆ ಬಿಗ್ ಬಾಸ್ ಆಯೋಜಕರ ತಂಡವನ್ನು ಸಂಪರ್ಕಿಸಿದ ಸಂದರ್ಭದಲ್ಲಿ ''ಸೀಸನ್ 8 ನಡೆಯುತ್ತೆ, ಆದರೆ, ಇದೇ ವರ್ಷ ನಡೆಯುತ್ತಾ ಎಂದು ಹೇಳಲು ಸಾಧ್ಯವಿಲ್ಲ. 2020ರಲ್ಲಿ ಕಾರ್ಯಕ್ರಮ ಬಹುತೇಕ ಅನುಮಾನ'' ಎಂದಿದ್ದರು. 8ನೇ ಆವೃತ್ತಿ ರದ್ದು ಮಾಡಲ್ಲ, ಆದರೆ, ಈ ವರ್ಷಾಂತ್ಯದಲ್ಲಿ ಕಷ್ಟ ಎಂದು ಸ್ಪಷ್ಟವಾಗಿ ಹೇಳಿದ್ದರು. ಈಗ, ಬಿಗ್ ಬಾಸ್ ಗೆ ತಯಾರಿ ಆರಂಭವಾಗಿದೆ. ಈ ವರ್ಷಾಂತ್ಯದಲ್ಲಿ ಸಾಧ್ಯನಾ ಎಂಬ ಚರ್ಚೆ ನಡೆಯುತ್ತಿದೆ.

2021ರಲ್ಲಿ ಎರಡು ಸಲ ಬಿಗ್ ಬಾಸ್?
ಇಂತಹದೊಂದು ಚರ್ಚೆಯೂ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಡಿಸೆಂಬರ್ ಒಳಗೆ 8ನೇ ಆವೃತ್ತಿ ಆರಂಭವಾದರೆ ಓಕೆ. ಒಂದು ವೇಳೆ ಜನವರಿ ಅಥವಾ ಫೆಬ್ರವರಿಯಲ್ಲಿ ಶೋ ಪ್ರಾರಂಭಿಸಿದರೆ, 9ನೇ ಆವೃತ್ತಿ ಮತ್ತೆ ಅದೇ ವರ್ಷದ ಅಂತ್ಯದಲ್ಲಿ ನಡೆಯಬೇಕಾಗುತ್ತದೆ. ಸೋ, ಮುಂದಿನ ವರ್ಷ ಬಿಗ್ ಬಾಸ್ ಕನ್ನಡದಲ್ಲಿ ಡಬಲ್ ಧಮಾಕ ಸಿಗಬಹುದಾ? ಎಂಬ ಪ್ರಶ್ನೆಯೂ ಮೂಡಿದೆ.

ಹುಡುಕಾಟ ಶುರು
ಬಿಗ್ ಬಾಸ್ ಕನ್ನಡದ 8ನೇ ಆವೃತ್ತಿಯಲ್ಲಿ ಯಾರೆಲ್ಲ ಸ್ಪರ್ಧಿಗಳಾಗಿ ಬರಬಹುದು ಎಂಬ ಕುತೂಹಲ ಮೊದಲಿನಿಂದಲೂ ಇದೆ. ಈಗ ಸ್ಪರ್ಧಿಗಳ ಹುಡುಕಾಟವೂ ಆರಂಭವಾಗಿದೆ. ಫ್ಯಾಂಟಮ್ ಚಿತ್ರೀಕರಣ ಮುಗಿಸಿ ಸುದೀಪ್ ಸಹ ಬಿಡುವು ಮಾಡಿಕೊಳ್ಳಬಹುದು. ಎಲ್ಲ ಲೆಕ್ಕಾಚಾರವನ್ನು ಹಾಕಿ ಆಯೋಜಕರು ಆದಷ್ಟೂ ಬೇಗ ಬಿಗ್ ಬಾಸ್ ಗೆ ಚಾಲನೆ ನೀಡಲಿದ್ದಾರೆ.


Click it and Unblock the Notifications











