ಬಿಗ್ ಬಾಸ್ ಆಫರ್ ರಿಜೆಕ್ಟ್ ಮಾಡಿದ ಖ್ಯಾತ ನಟಿ ; ಕಾರಣವೇನು..?

''ಬಿಗ್ ಬಾಸ್'' ಹಲವರ ಕನಸು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ನಮ್ಮ ಜನ್ಮ ಪಾವನ ಎಂದುಕೊಂಡವರು ಹಲವಾರು ಜನ ಇದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದೇ ನಾನಾ ತರಹದ ಸರ್ಕಸನ್ನು ಕೂಡ ಮಾಡುತ್ತಾರೆ.

''ಬಿಗ್ ಬಾಸ್'' ಮನೆಗೆ ಹೋಗಿ ಬಂದ ನಂತರ ಅವರ ಬದುಕಿನಲ್ಲಾಗುವ ಬದಲಾವಣೆಗಳೇನು ಎನ್ನುವುದು ಅವರಿಗೆ ಗೊತ್ತಾದರು ಆ ಭಾಷೆ ಈ ಭಾಷೆ ಎನ್ನದೇ ಎಲ್ಲಾ ಭಾಷೆಯಲ್ಲಿ ಕೂಡ ಪ್ರತಿ ವರ್ಷ ''ಬಿಗ್ ಬಾಸ್'' ಜಾತ್ರೆಯಲ್ಲಿ ಭಾಗವಹಿಸುವ ಉತ್ಸಾಹ ಕಂಡು ಬಂದೇ ಬರುತ್ತೆ. ಇದಕ್ಕೆ ಪೂರಕವಾಗಿ ಅವರು ಹೋಗ್ತಾರಂತೆ.. ಇವರು ಹೋಗ್ತಾರಂತೆ.. ಎಂದು ಹಲವರ ಹೆಸರುಗಳನ್ನು ಪ್ರತಿ ವರ್ಷ ತೇಲಿ ಬಿಡಲಾಗುತ್ತೆ.

charu-asopa-rejects-bigg-boss-20-why-she-turned-down-the-offer

ಹೀಗೆ ಕೇಳಿ ಬರುತ್ತಿರುವ ಹೆಸರುಗಳಲ್ಲಿ ಯಾರು ನಿಜಕ್ಕೂ ''ಬಿಗ್ ಬಾಸ್'' ಮನೆಗೆ ಹೋಗುತ್ತಾರೆ ಎನ್ನುವುದಕ್ಕೆ ಉತ್ತರ ಕಾರ್ಯಕ್ರಮ ಶುರುವಾದ ದಿನದಂದೇ ಅಧಿಕೃತವಾಗಿ ಸಿಗಲಿದೆಯಾದರೂ ಸದ್ಯ ತಮ್ಮ ಬಗ್ಗೆ ಹಬ್ಬಿರುವ ಸುದ್ದಿಗಳ ಕುರಿತು ಕೆಲವರು ಪ್ರತಿಕ್ರಿಯೆಯನ್ನು ನೀಡುತ್ತಿದ್ದಾರೆ. ''ಬಿಗ್ ಬಾಸ್‌''ದಿಂದ ಆಫರ್ ಬಂದಿದೆಯಾ ? ಬಂದಿದ್ದರೆ ಹೋಗ್ತಿದ್ದಾರಾ ? ಇಲ್ಲವಾ ? ಎನ್ನುವುದನ್ನು ಕೂಡ ಹೇಳುತ್ತಿದ್ದಾರೆ. ಉದಾಹರಣೆಗೆ ಚಾರು ಅಸೋಪಾ.

ಹೌದು, ಚಾರು ಅಸೋಪಾ. ಹಿಂದಿಯ ಪ್ರಸಿದ್ಧ ಕಿರುತೆರೆ ನಾಯಕಿ. ''ಬಲ್‌ವೀರ್''.. ''ಟಶನ್ ಎ ಇಷ್ಕ್'' ಮತ್ತು ''ಮೇರೆ ಅಂಗನೇ ಮೇ'' ಇವರ ಜನಪ್ರಿಯ ಧಾರಾವಾಹಿಗಳು. 2009ರಿಂದ ಇಲ್ಲಿಯವರೆಗೆ ಹಲವಾರು ಧಾರಾವಾಹಿಗಳಲ್ಲಿ ಕಾಣಿಸಿಕೊಂಡಿರುವ ಚಾರು ಅಸೋಪಾ ಭುವನ ಸುಂದರಿ ಸುಶ್ಮಿತಾ ಸೇನ್ ಅವರ ಮಾಜಿ ಅತ್ತಿಗೆ ಕೂಡ ಹೌದು.

ಸುಶ್ಮಿತಾ ಸೇನ್ ಅವರ ಸಹೋದರ ರಾಜೀವ್ ಸೇನ್ ಅವರನ್ನು ಚಾರು 2019ರಲ್ಲಿ ಮದುವೆಯಾಗಿದ್ದರು. ಇಬ್ಬರಿಗೆ ಜಿಯಾನಾ ಎಂಬ ಮಗಳಿದ್ದಾಳೆ. 2023ರಲ್ಲಿ ರಾಜೀವ್ ಅವರಿಂದ ದೂರವಾದ ಚಾರು ಆ ನಂತರ ತಮ್ಮ ಮಗಳನ್ನು ತಾವೇ ನೋಡಿಕೊಳ್ಳುತ್ತಿದ್ಧಾರೆ.

ಸದ್ಯ ಚಾರು ಇದೀಗ ಮುಂಬೈಗೆ ಗುಡ್ ಬೈ ಹೇಳಿ ತಮ್ಮ ಊರು ಸೇರಿಕೊಂಡಿದ್ದಾರೆ. ಹೊಟ್ಟೆ ಪಾಡಿಗಾಗಿ ಆಕ್ಟಿಂಗ್ ಮಾಡುವುದನ್ನು ಬಿಟ್ಟು ಆನ್‌ಲೈನ್‌ನಲ್ಲಿ ಬಟ್ಟೆ ವ್ಯಾಪಾರ ಮಾಡುತ್ತಿದ್ದಾರೆ. ಇಂಥಾ ಚಾರು ಅಸೋಪಾ ಸದ್ಯ ತಮಗೆ ''ಬಿಗ್ ಬಾಸ್''ದಿಂದ ಕರೆ ಬಂದಿತ್ತು, ಆದರೆ ನಾನು ಹೋಗಲ್ಲ ಎಂದು ಖಂಡ ತುಂಡವಾಗಿ ಹೇಳಿದೆ ಎಂದಿದ್ದಾರೆ.

charu-asopa-rejects-bigg-boss-20-why-she-turned-down-the-offer

ಈ ಕುರಿತು ತಮ್ಮ ಬ್ಲಾಗ್‌ನಲ್ಲಿ ಮಾತನಾಡಿರುವ ಚಾರು ಅಸೋಪಾ, ಕೇವಲ ಎರಡು ದಿನಗಳ ಹಿಂದೆ ಅಷ್ಟೇ ನನಗೆ ''ಬಿಗ್ ಬಾಸ್''ದಿಂದ ಆಫರ್ ಬಂದಿತ್ತು ಎಂದಿದ್ದಾರೆ. ನಿಜ ಹೇಳಬೇಕು ಅಂದರೆ ತುಂಬಾನೇ ದೊಡ್ಡ ಅವಕಾಶ ಇದು, ಅದರಲ್ಲಿ ಯಾವ ಅನುಮಾನ ಇಲ್ಲ ಎಂದು ಹೇಳಿರುವ ಚಾರು ಅಸೋಪಾ ನನ್ನ ಬದುಕಿನ ಆದ್ಯತೆಗಳು ಈಗ ಬದಲಾಗಿವೆ. ನನ್ನ ಮಗಳೇ ನನ್ನ ಪ್ರಪಂಚ. ಅವಳ ಭವಿಷ್ಯ ನನಗೆ ಮುಖ್ಯ. ಅವಳನ್ನು ಬಿಟ್ಟು ನಾನು ಆ ಮನೆಯಲ್ಲಿ ಇರಲಾರೆ. ಹೀಗಾಗಿ ನಾನು ''ಬಿಗ್ ಬಾಸ್''ನಲ್ಲಿ ಭಾಗವಹಿಸದಿರಲು ನಿರ್ಧಾರ ಮಾಡಿದೆ ಎಂದು ಹೇಳಿದ್ಧಾರೆ.

ಆಗಲೇ ಹೇಳಿದಂತೆ ''ಬಿಗ್ ಬಾಸ್'' ಕರೆ ಬಂದರೆ ಸಾಕು ಎಂದು ಹಲವರು ಕಾಯುತ್ತಿರುತ್ತಾರೆ. ಹೀಗಿರುವಾಗ ಬಂದಿರುವ ಸುವರ್ಣ ಅವಕಾಶವನ್ನು ಚಾರು ಅಸೋಪಾ ಎಡಗಾಲಿನಲ್ಲಿ ಒದ್ದಿದ್ಧಾರೆ. ಮಗಳ ಲಾಲನೆ ಪಾಲನೆಯೇ ನನ್ನ ಆದ್ಯತೆ ಎಂದಿದ್ದಾರೆ. ಈ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಲವರ ಮನ ಕೂಡ ಗೆದ್ದಿರುವ ಚಾರು ಅಸೋಪಾ ಮಗಳು ಶಾಲೆಗೆ ಹೋದಾಗ ಇಲ್ಲವಾದಲ್ಲಿ ಮಲಗಿದ್ದಾಗ ತಮ್ಮ ಯೂಟ್ಯೂಬ್‌ಗೆ ಕಂಟೆಂಟ್ ಕ್ರಿಯೇಟ್ ಮಾಡುತ್ತಿದ್ದಾರೆ. ಖುಷಿ ಖುಷಿಯಾಗಿ ತಮ್ಮ ತಾಯ್ತನದ ಬದುಕನ್ನು ಕಳೆಯುತ್ತಿದ್ದಾರೆ.

English summary
Charu Asopa has turned down the offer for Bigg Boss 20! Read on to discover why the popular TV actress said no to Salman Khan's hit reality series.
Read more about: biggboss bigg boss ಟಿವಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X