ಛಾಯಾ ಸಿಂಗ್ ಕಿರುತೆರೆ ಪಯಣಕ್ಕೆ ಮುನ್ನುಡಿ ಬರೆದಿದ್ದು ಯಾವ ಧಾರಾವಾಹಿ ಗೊತ್ತೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ 'ಅಮೃತಧಾರೆ' ಧಾರಾವಾಹಿಯೂ ಒಂದು. 'ಅಮೃತಧಾರೆ' ಧಾರಾವಾಹಿಯಲ್ಲಿ ನಾಯಕಿ ಭೂಮಿಕಾ ಳಾಗಿ ಅಭಿನಯಿಸುತ್ತಿರುವ ಛಾಯಾ ಸಿಂಗ್ ಅಭಿನಯಕ್ಕೆ ಮನಸೋಲದವರಿಲ್ಲ. ತಮ್ಮ ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದಿರುವ ಛಾಯಾ ಸಿಂಗ್ ನಟನಾ ಪಯಣ ಶುರುವಾಗಿದ್ದು ಸ್ಯಾಂಡಲ್‌ವುಡ್‌ನಿಂದ.

'ಮುನ್ನುಡಿ' ಸಿನಿಮಾ ಮೂಲಕ ನಟನೆಯ ನಂಟು ಬೆಳೆಸಿಕೊಂಡ ಛಾಯಾ ಸಿಂಗ್ 'ಹಸೀನಾ' ಸಿನಿಮಾದಲ್ಲಿಯೂ ಬಣ್ಣ ಹಚ್ಚಿದರು. ಮುಂದೆ 'ಚಿಟ್ಟೆ', 'ತುಂಟಾಟ', 'ಬಲಗಾಲಿಟ್ಟು ಒಳಗೆ ಬಾ', 'ಪ್ರೀತಿಸಲೇಬೇಕು', 'ಆಕಾಶಗಂಗೆ', 'ಮಫ್ತಿ', 'ಖಾಕಿ' ಹೀಗೆ ಅನೇಕ ಕನ್ನಡ ಸಿನಿಮಾದ ಜೊತೆಗೆ ಈ ವರ್ಷ ತೆರೆ ಕಾಣಲಿರುವ 'ಭೈರತಿ ರಣಗಲ್' ಸಿನಿಮಾಗಳಲ್ಲಿ ಈಕೆ ನಟಿಸಿದ್ದಾರೆ.

Chaya Singh who started acting through movies is now busy in serials

ತಮಿಳಿನ 'ತಿರುಡ ತಿರುಡಿ' ಸಿನಿಮಾದಲ್ಲಿ ನಾಯಕಿ ವಿಜಯಲಕ್ಷ್ಮಿಯಾಗಿ ಛಾಯಾ ಸಿಂಗ್ ಅಭಿನಯಿಸಿದ್ದು, ಆ ಸಿನಿಮಾದ "ಮನ್ಮಥ ರಾಸ.." ಹಾಡು ಆಗಿನ ಕಾಲದ ಎವರ್ ಗ್ರೀನ್ ಹಾಡುಗಳಲ್ಲಿ ಒಂದಾಗಿತ್ತು. ಮುಂದೆ 'ಕವಿತೈ', 'ಅಮ್ಮ ಅಪ್ಪ ಚೆಲ್ಲಂ', 'ಜಯ ಸೂರ್ಯ', 'ತಿರುಪ್ಪಚ್ಚಿ' ಜೊತೆಗೆ ಕಳೆದ ವರ್ಷ ತೆರೆ ಕಂಡ 'ತಮಿಳರಸನ್' ಸಿನಿಮಾಗಳಲ್ಲಿ ಛಾಯಾ ಸಿಂಗ್ ಅಭಿನಯಿಸಿದ್ದಾರೆ. ಕನ್ನಡ, ತಮಿಳು ಮಾತ್ರವಲ್ಲದೇ ಮಲಯಾಳಂ, ತೆಲುಗು, ಬೆಂಗಾಲ ಹಾಗೂ ಭೋಜ್ ಪುರಿ ಸಿನಿಮಾಗಳಲ್ಲಿ ನಟಿಸಿರುವ ಈಕೆಗೆ ಕಿರುತೆರೆ ಹೊಸದೇನಲ್ಲ.

ಅಸಲಿಗೆ ಛಾಯಾ ಸಿಂಗ್ ಅವರ ಕಿರುತೆರೆ ಪಯಣ ಕೂಡಾ ಶುರುವಾಗಿದ್ದು ಕೂಡಾ ಜೀ ಕನ್ನಡ ವಾಹಿನಿಯಿಂದಲೇ. ಇದು ಆಶ್ಚರ್ಯದ ಸಂಗತಿ ಎಂದು ಅನಿಸಿದರೂ ಸತ್ಯ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಸರೋಜಿನಿ' ಧಾರಾವಾಹಿಯಲ್ಲಿ ನಾಯಕಿ ಸರೋಜಿನಿ ಆಗಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕಾಲಿಟ್ಟಿದ್ದರು ಛಾಯಾ ಸಿಂಗ್. ಮುಂದೆ 'ಪ್ರೇಮ ಕಥೆಗಳು' ಧಾರಾವಾಹಿಯಲ್ಲಿ ಅಭಿನಯಿಸಿದ ಈಕೆ ನಂತರ ಹಾರಿದ್ದು ಪರಭಾಷೆಯ ಕಿರುತೆರೆಗೆ.

ತಮಿಳಿನ 'ನಾಗಮ್ಮ', 'ರನ್', 'ನಮ್ಮ ಮಧುರೈ ಸಿಸ್ಟರ್ಸ್', ತೆಲುಗಿನ 'ಕಾಂಚನಾ ಗಂಗಾ' ಧಾರಾವಾಹಿಗಳಲ್ಲಿ ನಟಿಸಿರುವ ಈಕೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ನಂದಿನಿ' ಧಾರಾವಾಹಿಯಲ್ಲಿ ನಂದಿನಿ ಮತ್ತು ಜನನಿಯಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು.

ತೆಲುಗಿನ ಜೆಮಿನಿ ಟಿವಿಯಲ್ಲಿ ಪ್ರಸಾರವಾಗುತ್ತಿರುವ 'ಆನು ಆನೇ ನೇನು' ಧಾರಾವಾಹಿಯಲ್ಲಿ ಅಕ್ಷರ ಆಗಿ ನಟಿಸುತ್ತಿರುವ ಈಕೆ ನೆಗೆಟಿವ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಕೆರಿಯರ್ ನ ಉದ್ದಕ್ಕೂ ರೊಮ್ಯಾಂಟಿಕ್ ಹುಡುಗಿಯಾಗಿ, ಮುಗ್ಧ ಹುಡುಗಿಯಾಗಿ ಮಿಂಚಿದ್ದ ಛಾಯಾ ಸಿಂಗ್ ಅವರ ಖಡಕ್ ಲುಕ್ ಅನ್ನು ಕೂಡಾ ಕಿರುತೆರೆ ವೀಕ್ಷಕರು ಮೆಚ್ಚಿಕೊಂಡಿದ್ದರು.

ಸದ್ಯ 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ ಆಗಿ ನಟಿಸಿ, ವೀಕ್ಷಕರನ್ನು ರಂಜಿಸುತ್ತಿರುವ ಈಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಹಾಲು ಜೇನು ನಾನು ನೀನು' ಕಾರ್ಯಕ್ರಮದ ನಿರೂಪಕಿಯಾಗಿಯೂ ಕಮಾಲ್ ಮಾಡಿರುವ ಬೆಡಗಿ. ಇನ್ನು ಬರೋಬ್ಬರಿ ಹನ್ನೆರಡು ವರ್ಷದ ಹಿಂದೆ ಪ್ರಸಾರವಾದ 'ಕುಣಿಯೋಣು ಬಾರ'ದ ತೀರ್ಪುಗಾರ್ತಿಯಾಗಿ ಗುರುತಿಸಿಕೊಂಡಿದ್ದರು.

More from Filmibeat

English summary
Chaya Singh who started acting through movies is now busy in serials:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X