ಅಮೃತಧಾರೆ ಭೂಮಿಕಾ ಮನೆಯಲ್ಲಿ ಕಳ್ಳತನ ; 66 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡ ಪೊಲೀಸರು..!

ಚಿಟ್ಟೆ.. ತುಂಟಾಟ.. ಬಲಗಾಲಿಟ್ಟು ಒಳಗೆ ಬಾ.. ಸಖ ಸಖಿ.. ಆಕಾಶಗಂಗೆ.. ಮುಂತಾದ ಕಮರ್ಷಿಯಲ್ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದವರು ಛಾಯಾ ಸಿಂಗ್.ಒಂದರ ಹಿಂದೊಂದು ಅವಕಾಶ ದಕ್ಕುತ್ತಿದ್ದ ಕಾಲದಲ್ಲೇ 'ಮನ್ಮಥ ರಾಸಾ ಮನ್ಮಥ ರಾಸಾ ಎಂದು ಧನುಷ್ ಜೊತೆ ಕುಣಿ ಕುಣಿದಾಡಿದ್ದ ಛಾಯಾ ಸಿಂಗ್ ಆ ನಂತರ ಕಾಲಿವುಡ್‌ನಲ್ಲಿಯೇ ಠಿಕಾಣಿ ಹೂಡಿದ್ದರು.

ಆದರೆ ಈಗ ಛಾಯಾ ಸಿಂಗ್ ಕನ್ನಡಕ್ಕೆ ಕಿರುತೆರೆಯ ಮೂಲಕ ಮರಳಿದ್ದಾರೆ. ಅಮೃತಧಾರೆ ಧಾರಾವಾಹಿಯ ಮೂಲಕ ಮನೆ ಮನಗಳಿಗೆ ತಲುಪಿದ್ದಾರೆ. ಚೆನ್ನೈ ಬದಲು ಬೆಂಗಳೂರಿನಲ್ಲಿಯೇ ವಾಸವಾಗಿದ್ದಾರೆ. ಇಂಥಹ ಛಾಯಾ ಸಿಂಗ್ ಅವರ ತಾಯಿಯ ಮನೆಯಲ್ಲಿ ಕಳ್ಳತನವಾಗಿದೆ. ದುರಂತ ಅಂದರೆ ಕಳ್ಳತನ ಮಾಡಿದ್ದು ನಂಬಿಕೆಯನ್ನ ಗಳಿಸಿದ್ದ ಮನೆ ಕೆಲಸದಾಕೆಯೇ.

chaya-singhs-domestic-staff-held-for-jewellery-theft

ಹೌದು, ಕಳೆದ ಕೆಲವು ದಿನಗಳ ಹಿಂದೆ ನಟಿ ಛಾಯಾ ಸಿಂಗ್ ತಾಯಿ ತಾಯಿ‌ ಚಮನಲತಾ ಮನೆಯಲ್ಲಿ ಕಳ್ಳತನವಾಗಿತ್ತು. ಆದರೆ, ಕಳ್ಳ ಯಾರು ಅನ್ನುವುದು ಆ ಕ್ಷಣಕ್ಕೆ ಗೊತ್ತಿರಲಿಲ್ಲ. ಆದರೆ ಈಗ ದೂರಿನ ಆಧಾರದ ಮೇಲೆ ಕಳ್ಳತನದ ಜಾಡು ಹಿಡಿದ ಪೊಲೀಸರು ಈಗ ಮನೆ ಕೆಲಸಕ್ಕಿದ್ದ ಉ‍ಷಾ ಅವರನ್ನ ಬಂಧಿಸಿದ್ದಾರೆ. ಚಮನಲತಾ ಮನೆಯಿಂದ ಕದ್ದಿದ್ದ ಎಲ್ಲ ಆಭರಣಗಳನ್ನು ವಶಪಡಿಸಿಕೊಂಡು ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಛಾಯಾ ಸಿಂಗ್ ಅವರಿಗೆ ಮರಳಿ ನೀಡಿದ್ದಾರೆ.

ಅಂದ್ಹಾಗೇ ಮನೆಯವರ ಕಣ್ತಪ್ಪಿಸಿ ಚಿನ್ನಾಭರಣಗಳನ್ನು ಉಷಾ ದೋಚ್ತಿದ್ದರು. ಅದೃಷ್ಟವಶಾತ್.. ಇತ್ತೀಚೆಗೆ ಚಮನಲತಾ ಚಿನ್ನಾಭರಣಗಳನ್ನು ಪರಿಶೀಲಿಸಿದ್ದರು. ಕೆಲವು ಆಭರಣ ಕಾಣೆಯಾಗಿದ್ದು.. ಕಳ್ಳತನವಾಗಿದ್ದು.. ಇವರ ಗಮನಕ್ಕೆ ಬಂದಿದ್ದು ಆಗಲೇ .

chaya-singhs-domestic-staff-held-for-jewellery-theft

ಆ ನಂತರ ತಡಮಾಡದ ಅವರು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ಇನ್ನೂ ತನಿಖೆ ಸಮಯದಲ್ಲಿ ಮನೆಯವರೆಲ್ಲ ಆಭರಣದ ವಿಚಾರಕ್ಕೆ ಚಿಂತಾಕ್ರಾಂತವಾಗಿದ್ದರೆ, ಉಷಾ ಮುಖದಲ್ಲಿ ಬೇರೆಯ ಚಿಂತೆ ಕಾಣ್ತಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪೊಲೀಸರು ಅವರನ್ನ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ತಾನೇ ಆಭರಣಗಳನ್ನು ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಜೊತೆಗೆ, 66 ಗ್ರಾಂ ಗೋಲ್ಡ್ ಸೇರಿ 150 ಗ್ರಾಂ ಬೆಳ್ಳಿ ಆಭರಣ ಆಭರಣಗಳನ್ನು ಯಾರಿಗೂ ಮಾರಾಟ ಮಾಡದೇ ತನ್ನ ಬಳಿಯೇ ಇಟ್ಟುಕೊಂಡಿರುವುದಾಗಿ ಹೇಳಿದ್ದಾರೆ.

More from Filmibeat

English summary
Popular Kannada Television Actress Chaya Singh's Domestic Staff Held For Jewellery theft
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X