twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ಕನ್ನಡ 8ನೇ ಆವೃತ್ತಿಯ ವಿಶೇಷತೆಗಳೇನು?

    |

    ಫೆಬ್ರವರಿ 28 ರಂದು ಬಿಗ್ ಬಾಸ್ ಕನ್ನಡ ಏಂಟನೇ ಆವೃತ್ತಿ ಭರ್ಜರಿ ಆರಂಭ ಪಡೆದುಕೊಳ್ಳುತ್ತಿದೆ. ಸಂಜೆ 6 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಕನ್ನಡ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಈ ಹಿನ್ನೆಲೆ ಬಿಗ್ ಬಾಸ್ ನಿರ್ದೇಶಕ ಪರಮೇಶ್ವರ್ ಗುಂಡ್ಕಲ್ ಮತ್ತು ನಿರೂಪಕ ಕಿಚ್ಚ ಸುದೀಪ್ ಸುದ್ದಿಗೋಷ್ಠಿ ನಡೆಸಿ ಒಂದಿಷ್ಟು ಆಸಕ್ತಿದಾಯಕ ಮಾಹಿತಿಗಳನ್ನು ಹಂಚಿಕೊಂಡರು.

    ಈ ಆವೃತ್ತಿಯಲ್ಲಿ ಎಷ್ಟು ಜನ ಸ್ಪರ್ಧಿಗಳು ಬಿಗ್ ಬಾಸ್ ಮನೆಗೆ ಹೋಗ್ತಾರೆ? ಕೊರೊನಾ ವೈರಸ್ ಭೀತಿ ಹಿನ್ನೆಲೆ ಯಾವ ರೀತಿ ಮುಂಜಾಗ್ರತೆ ಕ್ರಮ ತೆಗೆದುಕೊಳ್ಳಲಾಗಿದೆ. ಎಂಬ ವಿಚಾರಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಹಾಗಾದ್ರೆ, ಬಿಗ್ ಬಾಸ್ ಈ ಆವೃತ್ತಿಯ ವಿಶೇಷತೆಗಳೇನು? ಮುಂದೆ ಓದಿ...

    17 ಜನ ಸ್ಪರ್ಧಿಗಳು ಕ್ವಾರಂಟೈನ್

    17 ಜನ ಸ್ಪರ್ಧಿಗಳು ಕ್ವಾರಂಟೈನ್

    ಬಿಗ್ ಬಾಸ್ 8ರಲ್ಲಿ 17 ಜನ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲು ನಿರ್ಧರಿಸಿದ್ದು, ಎಲ್ಲರನ್ನು ಖಾಸಗಿ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಎರಡು ಬಾರಿ ಕೊರೊನಾ ಪರೀಕ್ಷೆ ಮಾಡಲಾಗಿದೆ. ಎಲ್ಲರಿಗೂ ನೆಗಿಟಿವ್ ಬಂದಿದೆ. ಮನೆಗೆ ಕಳುಹಿಸುವ ಮುನ್ನ ಮೂರನೇ ಸಲ ಕೊವಿಡ್ ಪರೀಕ್ಷೆ ಮಾಡಲಾಗುತ್ತದೆ. ಆಗ ಯಾರಿಗಾದರೂ ಪಾಸಿಟಿವ್ ಬಂದರೆ ಅವರನ್ನು ಕಳುಹಿಸಲು ಸಾಧ್ಯವಿಲ್ಲ. ಸದ್ಯಕ್ಕೆ 17 ಮಂದಿ ಸಿದ್ಧರಾಗಿದ್ದಾರೆ. ಕೊನೆ ಘಳಿಗೆಯಲ್ಲಿ ಏನಾದರೂ ವ್ಯತ್ಯಾಸವಾದರೂ ಅಚ್ಚರಿ ಇಲ್ಲ ಎಂದು ಪರಮೇಶ್ವರ್ ಗುಂಡ್ಕಲ್ ತಿಳಿಸಿದ್ದಾರೆ.

    ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?ಬಿಗ್ ಸುದ್ದಿ: ಬಿಗ್ ಬಾಸ್ ಮನೆಗೆ ಮೊಟ್ಟ ಮೊದಲ ಸಲ ರಾಜಕಾರಣಿ ಎಂಟ್ರಿ?

    ಅತಿಥಿಗಳಿಗೂ ಕ್ವಾರಂಟೈನ್ ಕಡ್ಡಾಯ

    ಅತಿಥಿಗಳಿಗೂ ಕ್ವಾರಂಟೈನ್ ಕಡ್ಡಾಯ

    ಬಿಗ್ ಬಾಸ್ ಮನೆಗೆ ಪ್ರವೇಶ ಮಾಡುವ ಸ್ಪರ್ಧಿಗಳು, ತಾಂತ್ರಿಕ ವರ್ಗ, ಪ್ರೊಡಕ್ಷನ್ ತಂಡ ಸೇರಿದಂತೆ ಎಲ್ಲರನ್ನು ಕ್ವಾರಂಟೈನ್ ಮಾಡಲಾಗಿದೆ. ಕೆಲವು ದಿನ ಹೋಮ್ ಕ್ವಾರಂಟೈನ್ ನಂತರ ಹೋಟೆಲ್‌ನಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಒಂದು ವೇಳೆ ಅತಿಥಿಗಳು ಯಾರಾದರೂ ಅಥವಾ ವೈಲ್ಡ್ ಕಾರ್ಡ್ ಸ್ಪರ್ಧಿ ಮನೆಗೆ ಹೋಗಬೇಕಾದರೂ ಕ್ವಾರಂಟೈನ್ ಅವಧಿ ಮುಗಿಸಿ ಕಳುಹಿಸಲಾಗುವುದು.

    9.30ಕ್ಕೆ ಪ್ರಸಾರ-24 ಗಂಟೆ ನೋಡುವ ಅವಕಾಶ

    9.30ಕ್ಕೆ ಪ್ರಸಾರ-24 ಗಂಟೆ ನೋಡುವ ಅವಕಾಶ

    ಪ್ರತಿದಿನ ರಾತ್ರಿ 9.30ಕ್ಕೆ ಬಿಗ್ ಬಾಸ್ ಕನ್ನಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಇನ್ನು ಪ್ರತಿ ವರ್ಷದಂತೆ ವೂಟ್‌ನಲ್ಲಿ ಅನ್‌ಕಟ್ ದೃಶ್ಯಗಳು ಟೆಲಿಕಾಸ್ಟ್ ಆಗಲಿದೆ. ಈ ಬಾರಿಯ ವಿಶೇಷ ಅಂದ್ರೆ ದಿನದ 24 ಗಂಟೆಯೂ ವೂಟ್‌ನಲ್ಲಿ ಕಾರ್ಯಕ್ರಮ ಪ್ರಸಾರ ಮಾಡುವ ಯೋಜನೆ ನಡೆದಿದೆ. ವಾರದ ಐದು ದಿನ 24 ಗಂಟೆಯೂ ಬಿಗ್ ಬಾಸ್ ಪ್ರಸಾರ ಮಾಡಬಹುದು. ಅದಕ್ಕಾಗಿ ಪ್ರತ್ಯೇಕ ಪಿಸಿಆರ್ ವ್ಯವಸ್ಥೆ ಸಹ ಮಾಡಲಾಗಿದೆ ಎಂದು ಗುಂಡ್ಕಲ್ ಮಾಹಿತಿ ನೀಡಿದರು.

    'ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು': ಸುದೀಪ್ ಹೀಗೆ ಹೇಳಿದ್ಯಾಕೆ?'ಹುಚ್ಚ ವೆಂಕಟ್ ಗೆಲ್ಲುವ ಸಾಧ್ಯತೆ ಇತ್ತು': ಸುದೀಪ್ ಹೀಗೆ ಹೇಳಿದ್ಯಾಕೆ?

    ರಾಜಕಾರಣಿ ಇರ್ತಾರೆ

    ರಾಜಕಾರಣಿ ಇರ್ತಾರೆ

    ಪ್ರತಿ ಸೀಸನ್‌ನಂತೆ ಈ ಆವೃತ್ತಿಯಲ್ಲೂ ಎಲ್ಲ ಕ್ಷೇತ್ರ ಸೆಲೆಬ್ರಿಟಿಗಳು ಇರ್ತಾರೆ. ಸಿನಿಮಾ, ಧಾರಾವಾಹಿ, ಸೋಶಿಯಲ್ ಮೀಡಿಯಾ, ಕ್ರೀಡೆ ಹಾಗೂ ಈ ಸಲ ರಾಜಕೀಯ ಕ್ಷೇತ್ರದಿಂದ ಒಬ್ಬ ರಾಜಕಾರಣಿ ಸಹ ಬಿಗ್ ಬಾಸ್ ಪ್ರವೇಶ ಮಾಡಲಿದ್ದಾರೆ. ಇದು ಈ ಆವೃತ್ತಿ ಬಹಳ ವಿಶೇಷವಾಗಬಹುದು.

    ಸೀಸನ್ 9 ಇದೇ ವರ್ಷ?

    ಸೀಸನ್ 9 ಇದೇ ವರ್ಷ?

    ಕೊರೊನಾದಿಂದ ಕಳೆದ ವರ್ಷದಲ್ಲಿ ಬಿಗ್ ಬಾಸ್ ನಡೆಸಲು ಸಾಧ್ಯವಾಗಿಲ್ಲ. 2021ರ ಆರಂಭದಲ್ಲಿ ಸೀಸನ್ 8 ನಡೆಯುತ್ತಿದೆ. ಎಲ್ಲ ಅಂದುಕೊಂಡಂತೆ ಆದರೆ ಇದೇ ವರ್ಷ ಅಕ್ಟೋಬರ್ ಅಥವಾ ನವೆಂಬರ್‌ನಲ್ಲಿ ಒಂಭತ್ತನೇ ಆವೃತ್ತಿ ಸಹ ಪ್ರಾರಂಭವಾಗಲಿದೆ ಎಂದು ಸುದೀಪ್ ಹೇಳಿದರು.

    English summary
    Bigg Boss kannada season 8 set to start from february 28th evening 6pm. Here is the special elements of this season.
    Friday, February 26, 2021, 11:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X