ಕಿರುತೆರೆಗೂ ಕಾಲಿಟ್ಟಿದೆ ಡಬಲ್ ರೋಲ್ ಟ್ರೆಂಡ್; ದ್ವಿಪಾತ್ರದಲ್ಲಿ ಮೋಡಿ ಮಾಡಿದವರು ಇವರೇ ನೋಡಿ

By ಅನಿತಾ ಬನಾರಿ

ದ್ವಿಪಾತ್ರ ವರನಟ ರಾಜ್ ಕುಮಾರ್, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಸಾಹಸ ಸಿಂಹ ವಿಷ್ಣುವರ್ಧನ್, ಕ್ರೇಜಿ ಸ್ಟಾರ್ ರವಿಚಂದ್ರನ್ ಕನ್ನಡದ ಈ ಮೇರು ನಟರೆಲ್ಲಾ ತೆರೆಯ ಮೇಲೆ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಆ ಮೂಲಕ ಸಿನಿ ಪ್ರಿಯರನ್ನು ರಂಜಿಸಿದ್ದರು. ಇದೀಗ ಯಾಕೆ ಈ ವಿಷಯ ಎಂದರೆ, ಈ ದ್ವಿಪಾತ್ರದ ಟ್ರೆಂಡ್ ಕಿರುತೆರೆಗೂ ಕಾಲಿಟ್ಟಿದೆ. ಕಿರುತೆರೆಯಲ್ಲಿಯೂ ಕೂಡಾ ದ್ವಿಪಾತ್ರದ ಮೂಲಕ ನಟ ನಟಿಯರು ಮಿಂಚುತ್ತಿದ್ದಾರೆ.

ಮಂಜುಭಾಷಿಣಿ

'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಲ್ಲಿ ನಾಯಕ ಕಂಠಿಯ ಅಮ್ಮ ಬಡ್ಡಿ ಬಂಗಾರಮ್ಮನಾಗಿ ನಟಿಸುತ್ತಿದ್ದಾರೆ ನಟಿ ಮಂಜುಭಾಷಿಣಿ. ಇದೀಗ ಸಿಂಗಾರಮ್ಮ ಎನ್ನುವ ಆಕೆಯ ತಂಗಿಯ ಆಗಮನವಾಗಿದೆ. ಏಕಕಾಲಕ್ಕೆ ಎರಡು ವಿಭಿನ್ನ ರೀತಿಯ ಪಾತ್ರಗಳಿಗೆ ಜೀವ ತುಂಬುವಲ್ಲಿ ಯಶಸ್ವಿಯಾಗಿದ್ದಾರೆ ಮಂಜುಭಾಷಿಣಿ.

Check out these Kannada artists who have charmed on television through dual roles

ರಿತ್ವಿಕ್ ಕೃಪಾಕರ್

'ರಾಮಾಚಾರಿ' ಧಾರಾವಾಹಿಯಲ್ಲಿ ನಾಯಕ ರಾಮಾಚಾರಿಯಾಗಿ ಅಭಿನಯಿಸಿದ್ದ ರಿತ್ವಿಕ್ ಕೃಪಾಕರ್ ಮೊದಲ ಧಾರಾವಾಹಿಯಲ್ಲಿಯೇ ವೀಕ್ಷಕರ ಮನ ಸೆಳೆದಿದ್ದಾರೆ. ರಾಮಾಚಾರಿ ಧಾರಾವಾಹಿಯಲ್ಲಿ ಕತೆಗೆ ಟ್ವಿಸ್ಟ್ ನೀಡಲು ರಾಮಾಚಾರಿಯ ಅವಳಿ ಸಹೋದರ ಕಿಟ್ಟಿ ಆಲಿಯಾಸ್ ಕೃಷ್ಣನ ಆಗಮನವಾಗಿದೆ. ಆ ಮೂಲಕ ದ್ವಿಪಾತ್ರದಲ್ಲಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿದ್ದಾರೆ ರಿತ್ವಿಕ್ ಕೃಪಾಕರ್‌.

ಪದ್ಮಜಾ ರಾವ್

'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ಭಾಗ್ಯಳ ಅತ್ತೆ ಕುಸುಮಾ ಆಗಿ ನಟಿಸುತ್ತಿರುವ ಪದ್ಮಜಾ ರಾವ್ ನಟನೆಯ ಮೂಲಕ ಕಿರುತೆರೆಯಲ್ಲಿ ಗುರುತಿಸಿಕೊಂಡವರು. ಈ ನಟಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಎಂದರೆ ನಂಬಲು ಸಾಧ್ಯವೇ? ಹೌದು, ಅರಮನೆಗಿಳಿ ಧಾರಾವಾಹಿಯಲ್ಲಿ ಕಾಮಾಕ್ಷಿ, ಮೀನಾಕ್ಷಿ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು ಪದ್ಮಜಾ ರಾವ್‌.

ಅನುಪಮಾ ಗೌಡ

ಮೊದಲ ಬಾರಿಗೆ ಕಿರುತೆರೆಯಲ್ಲಿ ದ್ವಿಪಾತ್ರದಲ್ಲಿ ಕಾಣಿಸಿಕೊಂಡವರು ಈಕೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಅಕ್ಕ" ಧಾರಾವಾಹಿಯಲ್ಲಿ ದೇವಿಕಾ ಮತ್ತು ಭೂಮಿಕಾ ಎನ್ನುವ ದ್ವಿಪಾತ್ರದಲ್ಲಿ ಅನುಪಮಾ ಕಾಣಿಸಿಕೊಂಡಿದ್ದರು. ಏಕಕಾಲಕ್ಕೆ ಪಾಸಿಟಿವ್ ಮತ್ತು ನೆಗೆಟಿವ್ ರೋಲ್​​​ಗಳಿಗೆ ಜೀವ ತುಂಬಿದ್ದರು ಅನುಪಮಾ ಗೌಡ. ಮಾತ್ರವಲ್ಲದೇ ಆ ಧಾತಾವಾಹಿಯ ಮೂಲಕ ಅನುಪಮಾ ಗೌಡ ಕಿರುತೆರೆಯಲ್ಲಿ ಮನೆ ಮಾತಾಗಿದ್ದರು.

Check out these Kannada artists who have charmed on television through dual roles

ಕಾವ್ಯ ಗೌಡ

'ರಾಧಾ ರಮಣ' ಧಾರಾವಾಹಿಯಲ್ಲಿ ಆರಾಧನಾ ಆಗಿ ನಟಿಸಿದ್ದ ಕಾವ್ಯ ಗೌಡ ಕೂಡಾ ದ್ವಿಪಾತ್ರದಲ್ಲಿ ಅಭಿನಯಿಸಿದ್ದರು. ಹೌದು, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಗಾಂಧಾರಿ" ಧಾರಾವಾಹಿಯಲ್ಲಿ ದೀಪ್ತಿ ಮತ್ತು ದೃಷ್ಟಿ ಎನ್ನುವ ದ್ವಿಪಾತ್ರದಲ್ಲಿ ಈಕೆ ಕಾಣಿಸಿಕೊಂಡಿದ್ದರು.

ತೇಜಸ್ ಗೌಡ

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಪೈಕಿ 'ಆರತಿಗೊಬ್ಬ ಕೀರ್ತಿಗೊಬ್ಬ' ಧಾರಾವಾಹಿಯೂ ಕೂಡಾ ಒಂದು. ಇದರಲ್ಲಿ ಅಜಯ್ ಮತ್ತು ವಿಜಯ್ ಎನ್ನುವ ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಹ್ಯಾಂಡ್ ಸಮ್ ಹುಡುಗನ ಹೆಸರು ತೇಜಸ್ ಗೌಡ. ಮೊದಲ ಧಾರಾವಾಹಿಯಲ್ಲಿಯೇ ದ್ವಿಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ತೇಜಸ್ ಗೌಡ.

ಸಮೀಕ್ಷಾ

'ಲವ್ ಲಿ', 'ರಾನಿ', 'ರಾಶಿ' ಸಿನಿಮಾಗಳ ಮೂಲಕ ಸ್ಯಾಂಡಲ್ ವುಡ್‌ನಲ್ಲಿ ಮೋಡಿ ಮಾಡುತ್ತಿರುವ ಸಮೀಕ್ಷಾ ಅವರ ನಟನಾ ಪಯಣ ಶುರುವಾಗಿದ್ದು ಕಿರುತೆರೆಯ ಮೂಲಕ. 'ಮೂರುಗಂಟು' ಧಾರಾವಾಹಿಯಲ್ಲಿ ಶ್ರಾವಣಿ ಮತ್ತು ಪಾವನಿಯಾಗಿ ಸಮೀಕ್ಷಾ ಎನ್ನುವ ದ್ವಿಪಾತ್ರಕ್ಕೆ ಜೀವ ತುಂಬಿದ್ದರು ನಟಿ ಸಮೀಕ್ಷಾ.

More from Filmibeat

English summary
Check out these artists who have charmed on television through dual roles:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X