ಕಿರುತೆರೆಯಲ್ಲಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿರುವ ನಟಿಯರು ಇವರೇ ನೋಡಿ
ಹೆಣ್ಮಕ್ಕಳ ಸೌಂದರ್ಯವನ್ನು ಹೆಚ್ಚಿಸುವ ಮೇಕಪ್ ಕಂಡರೆ ಇಷ್ಟವಿಲ್ಲದವರು ಯಾರು ಹೇಳಿ? ಮೇಕಪ್ ಮಾಡದೇ ಮನೆಯಿಂದ ಹೊರಗೆ ಕಾಲಿಡುವುದು ಬಿಡಿ, ಹೊಸ್ತಿಲು ದಾಟಿ ಹೊರಗೆ ಹೋದರೆ ಅದು ಬಹುದೊಡ್ಡ ವಿಚಾರ. ಅಂದ ಹಾಗೇ ಇತ್ತೀಚಿನ ದಿನಗಳಲ್ಲಿ ಮೇಕಪ್ ಮಾಡುವುದಕ್ಕೂ ಒಂದು ರೀತಿ ನೀತಿಯಿದೆ. ಅದಕ್ಕಾಗಿ ಒಂದು ಕೋರ್ಸ್ ಕೂಡಾ ಇದ್ದು ಆ ಮೂಲಕ ಮೇಕಪ್ ಮಾಡುವುದನ್ನು ಕಲಿಸಲಾಗುತ್ತದೆ.
ಕನ್ನಡ ಕಿರುತೆರೆಯಲ್ಲಿ ನಾಯಕಿಯಾಗಿ ನಟಿಸುತ್ತಿರುವ ಈ ನಟಿ ಮಣಿಯರು ನಟನೆಯ ಹೊರತಾಗಿ ಮೇಕಪ್ ಆರ್ಟಿಸ್ ಆಗಿಯೂ ಇದೀಗ ಕಾಣಿಸಿಕೊಳ್ಳುತ್ತಿದ್ದಾರೆ. ಅದಕ್ಕಾಗಿ ಅವರು ಪ್ರತ್ಯೇಕವಾಗಿರುವ ಕೋರ್ಸ್ ಅನ್ನು ಕೂಡಾ ಮಾಡಿದ್ದು ನಟನೆಯ ಜೊತೆ ಜೊತೆಗೆ ಮೇಕಪ್ ಆರ್ಟಿಸ್ಟ್ ಆಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ.

ಚೈತ್ರ ಹಳ್ಳಿಕೇರಿ
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಅಂತರಪಟ' ಧಾರಾವಾಹಿಯಲ್ಲಿ ಚಾಂದಿನಿ ಪಾತ್ರದಲ್ಲಿ ನಟಿ ಚೈತ್ರಾ ಹಳ್ಳಿಕೇರಿ ನಟಿಸುತ್ತಿದ್ದಾರೆ. ಈ ನಟಿ ಬಿಗ್ ಬಾಸ್ ಓಟಿಟಿಯ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು. ಸಿನಿಮಾ ರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟು ನಟನೆಯ ಮೂಲಕ ಗುರುತಿಸಿಕೊಂಡಿದ್ದ ಈ ನಟಿ ಇದೀಗ ಮೇಕಪ್ ಆರ್ಟಿಸ್ಟ್ ಕೂಡ ಹೌದು.
ಸಮೃದ್ಧಿ ರಾಮ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮನೆದೇವ್ರು' ಧಾರಾವಾಹಿಯಲ್ಲಿ ನಾಯಕಿ ಜಾನಕಿಯ ಚಿಕ್ಕಪ್ಪನ ಮಗಳು ಪ್ರೀತಿ ಪಾತ್ರದಲ್ಲಿ ಸಮೃದ್ಧಿ ರಾಮ್ ನಟಿಸಿದ್ದರು. ಈ ಸೀರಿಯಲ್ ಬಳಿಕ ನಟನೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ. ಇದೀಗ ನಟನೆಯಿಂದ ದೂರವೇ ಇರುವ ಆಕೆ ಮೇಕಪ್ ಆರ್ಟಿಸ್ಟ್ ಆಗಿ ಬದಲಾಗುವ ಮೂಲಕ ಬಣ್ಣದ ಲೋಕದ ನಂಟು ಉಳಿಸಿಕೊಂಡಿದ್ದಾರೆ.
ಸುಷ್ಮಾ ನಾಣಯ್ಯ
ನಟಿ ಸುಷ್ಮಾ ನಾಣಯ್ಯ 'ಭಾಗ್ಯಲಕ್ಷ್ಮಿ' ಧಾರಾವಾಹಿಯಲ್ಲಿ ವಯಸ್ಸಿಗೂ ಮೀರಿದ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಕಲರ್ಸ್ ಕನ್ನಡದ ಈ ಧಾರಾವಾಹಿಯಲ್ಲಿ ನಾಯಕ ವೈಷ್ಣವ್ ಅಮ್ಮ ಕಾವೇರಿಯಾಗಿ ಪಾತ್ರದಲ್ಲಿ ನಟಿಸುವ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆಯುತ್ತಿದ್ದಾರೆ. 'ಅಶ್ವಿನಿ ನಕ್ಷತ್ರ' ಧಾರಾವಾಹಿಯ ನಂತರ ಬರೋಬ್ಬರಿ ಆರು ವರ್ಷಗಳ ಕಾಲ ಕಿರುತೆರೆಯಿಂದ ಬ್ರೇಕ್ ಪಡೆದುಕೊಂಡಿರುವ ಈಕೆ ಕಾವೇರಿಯಾಗಿ ಕಿರುತೆರೆಗೆ ಮರಳಿದ್ದರು. ನಟನೆಯ ಮೂಲಕ ಮತ್ತೆ ವೀಕ್ಷಕರ ಮನ ಸೆಳೆಯುತ್ತಿರುವ ಸುಷ್ಮಾ ನಾಣಯ್ಯ ಕೂಡಾ ಇದೀಗ ಪ್ರೋಫೆಶನಲ್ ಮೇಕಪ್ ಆರ್ಟಿಸ್ಟ್!

ಶ್ರುತಿ ರಮೇಶ್
'ಪಾಪಾ ಪಾಂಡು' ಧಾರಾವಾಹಿಯ ಮೂಲಕ ಕಿರುತೆರೆಯಲ್ಲಿ ಹೊಸ ಹವಾ ಸೃಷ್ಟಿ ಮಾಡಿದ್ದ ಶ್ರುತಿ ರಮೇಶ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಲಕ್ಷಣ' ಧಾರಾವಾಹಿಯಲ್ಲಿ ಮಿಲಿ ಎನ್ನುವ ಪಾತ್ರದಿಂದ ಕಿರುತೆರೆ ವೀಕ್ಷಕರ ಮನ ಸೆಳೆದಿದ್ದರು. ಇದೀಗ 'ಕಾವೇರಿ ಕನ್ನಡ ಮೀಡಿಯಂ'ನಲ್ಲಿ ನಟಿಸುತ್ತಿರುವ ಶ್ರುತಿ ರಮೇಶ್ ನಟನೆಯ ಹೊರತಾಗಿ ಮೇಕಪ್ ಆರ್ಟಿಸ್ಟ್ ಆಗಿ ಗುರುತಿಸಿಕೊಂಡಿದ್ದಾರೆ.
ಲತಾ ಗಿರೀಶ್
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದ ಲತಾ ಗಿರೀಶ್ ನಟನಾ ಪಯಣ ಶುರುವಾಗಿದ್ದು 'ಮನೆದೇವ್ರು' ಧಾರಾವಾಹಿಯಿಂದ. ತದ ನಂತರ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡಿದ್ದ ಲತಾ ಗಿರೀಶ್ ಕೂಡಾ ಮೇಕಪ್ ಕೋರ್ಸ್ ಮಾಡಿದ್ದಾರೆ. 'ನಮ್ಮನೆ ಯುವರಾಣಿ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿರದ ಈಕೆಯು ಕೂಡ ಮೇಕಪ್ ಆರ್ಟಿಸ್ಟ್.


Click it and Unblock the Notifications











