2023-Marriages: ಕಿರುತೆರೆಯಲ್ಲಿ ವಿವಾಹ ಪರ್ವ.. ಈ ವರ್ಷ ವೈವಾಹಿಕ ಜೀವನಕ್ಕೆ ಕಾಲಿಟ್ಟ ಕಿರುತೆರೆ ತಾರೆಯರು ಇವರೇ
ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಮಜಾಭಾರತ'ದ ಮೂಲಕ ಕಿರುತೆರೆಗೆ ಪರಿಚಿತರಾದ ಜಗಪ್ಪ ಹಾಗೂ ಸುಶ್ಮಿತಾ ದಾಂಪತ್ಯ ಜೀವನಕ್ಕೆ ಕಾಲಿರಿಸಿರುವುದು ಕಿರುತೆರೆ ವೀಕ್ಷಕರಿಗೆ ತಿಳಿದೇ ಇದೆ. ಸದ್ಯ ಸುಶ್ಮಿತಾ ಅವರು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದರೆ, ನಟ ಜಗಪ್ಪ ಅವರು 'ಭರ್ಜರಿ ಬ್ಯಾಚುಲರ್ಸ್' ರಿಯಾಲಿಟಿ ಶೋವಿನಲ್ಲಿ ಭಾಗವಹಿಸಿದ್ದರು. ಮಾತ್ರವಲ್ಲ ಜಗಪ್ಪ 'ಭರ್ಜರಿ ಬ್ಯಾಚುಲರ್ಸ್'ನಲ್ಲಿ ಸುಶ್ಮಿತಾಗೆ ಪ್ರಪೋಸ್ ಮಾಡಿದ್ದಲ್ಲದೇ ಅದೇ ವೇದಿಕೆಯಲ್ಲಿ ಎಂಗೇಜ್‌ಮೆಂಟ್ ಕೂಡಾ ಮಾಡಿಕೊಂಡಿದ್ದರು.
ಕನ್ನಡದ ಜೊತೆಗೆ ಪರಭಾಷೆಯ ಕಿರುತೆರೆಯಲ್ಲಿಯೂ ಮೋಡಿ ಮಾಡುತ್ತಿರುವ ಕಿರುತೆರೆ ನಟಿ ಪ್ರೇರಣಾ ಕಂಬಂ ಕೂಡಾ ಇತ್ತೀಚೆಗಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ತಮ್ಮ ಬಹುಕಾಲದ ಗೆಳೆಯನೊಂದಿಗೆ ಆಕೆ ಸಪ್ತಪದಿ ತುಳಿದಿದ್ದರು.

ಕಿರುತೆರೆಯಿಂದ ಹಿರಿತೆರಿಗೆ ಕಾಲಿಟ್ಟ ನಟಿ ಅದಿತಿ ಪ್ರಭುದೇವ ಅವರು ಬಿಸಿನೆಸ್ ಮ್ಯಾನ್ ಯಶಸ್ ಪಾಟೀಲ್‌ರನ್ನು ವಿವಾಹವಾಗಿದ್ದು ಇದೇ ವರ್ಷ. ಸದ್ಯಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಆ್ಯಕ್ಟಿವ್ ಇರುವ ನಟಿ ಪ್ರಭುದೇವ ಅವರು ತಮ್ಮ ವೈವಾಹಿಕ ಜೀವನದ ಬಗ್ಗೆ ಹಾಗೂ ಇತರ ದೈನಂದಿನ ವಿಚಾರಗಳ ಬಗ್ಗೆ ವಿಡಿಯೋಗಳನ್ನು ಹಾಕುತ್ತಿರುತ್ತಾರೆ. ಈ ಜೋಡಿಗೂ ಬಹಳಷ್ಟು ಅಭಿಮಾನಿಗಳ ಬಳಗವೇ ಇದೆ.
'ಕಾವೇರಿ ಕನ್ನಡ ಮೀಡಿಯಂ' ಧಾರಾವಾಹಿಯಲ್ಲಿ ನಾಯಕಿ ಕಾವೇರಿಯಾಗಿ ಅಭಿನಯಿಸುತ್ತಿರುವ ಪ್ರಿಯಾ ಜೆ ಆಚಾರ್ ಕೂಡಾ ಸದ್ಯ ಅಷ್ಟೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಅವರು ವರಿಸಿದ್ದು ಕಿರುತೆರೆ ನಟನನ್ನು. ಕಿರುತೆರೆ ಜೊತೆಗೆ ಹಿರಿತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಸಿದ್ಧು ಮೂಲಿಮನಿ ಅವರೇ ಪ್ರಿಯಾ ಜೆ ಆಚಾರ್ ಅವರ ಪತಿ.
'ಸತ್ಯ' ಧಾರಾವಾಹಿಯಲ್ಲಿ ನಾಯಕ ಕಾರ್ತಿಕ್ ಆಲಿಯಾಸ್ ಅಮೂಲ್ ಬೇಬಿಯಾಗಿ ನಟಿಸುತ್ತಿರುವ ಸಾಗರ್ ಬಿಳೀಗೌಡ ಅವರು ತಮ್ಮ ಪ್ರೇಯಸಿ, ನಟಿ, ಮಾಡೆಲ್ ಆಗಿರುವಂತಹ ಸಿರಿ ರಾಜು ಅವರನ್ನು ಇದೇ ಜೂನಿನಲ್ಲಿ ಮದುವೆಯಾಗಿದ್ದಾರೆ.

'ಶ್ರೀರಸ್ತು ಶುಭಮಸ್ತು' ಧಾರಾವಾಹಿಯಲ್ಲಿ ಸಂಧ್ಯಾ ಆಗಿ ಅಭಿನಯಿಸುತ್ತಿರುವ ದೀಪಾ ಕಟ್ಟೆ ಅವರು ಇದೇ ವರ್ಷ ಮಾರ್ಚ್‌ನಲ್ಲಿ ಮದುವೆಯಾಗಿದ್ದಾರೆ. ಆಕೆಯ ವೈವಾಹಿಕ ಜೀವನಕ್ಕೂ ಪ್ರೇಕ್ಷಕರು ಅಭಿಮಾನಿಗಳು, ಖುಷಿಯಿಂದ ಆಶೀರ್ವದಿಸಿದ್ದರು.


Click it and Unblock the Notifications











