ಹೆಣ್ಣು ಮಗುವಿಗೆ ಜನ್ಮ ನೀಡಿ ತಾಯ್ತನ ಎಂಜಾಯ್ ಮಾಡ್ತಿರೋ ಕಿರುತೆರೆ ನಟಿಯರು ಇವರೇ ನೋಡಿ
ಹೌದು! ಹಲವಾರು ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಹಲವು ನಟಿಯರು ಇದೀಗ ಮದುವೆಯಾಗಿ ತಮ್ಮ ತಮ್ಮ ವೈವಾಹಿಕ ಜೀವನವನ್ನು ಸಂತೋಷದಿಂದ ಕಳೆಯುತ್ತಿದ್ದಾರೆ. ಹಲವಾರು ನಟಿಯರು ತಾಯಿಯೂ ಆಗಿದ್ದಾರೆ. ಅದರಲ್ಲೂ ಇತ್ತೀಚೆಗೆ ತಾಯಿಯಾಗಿರುವ ಕಾಮಿಡಿ ಕಿಲಾಡಿ ಖ್ಯಾತಿಯ ನಟಿ ಕಾಮಿಡಿಯನ್ ನಯನ ಅವರು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇದನ್ನು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅವರು 'ಮುದ್ದು ಲಕ್ಷ್ಮೀ ' ಎಂದು ಬರೆದುಕೊಂಡಿದ್ದಾರೆ.
ಅಂದ ಹಾಗೇ ನಯನಾ ಅವರು ತಮ್ಮ ಹೆರಿಗೆಯ ತನಕ ನಟಿಸುತ್ತಿದ್ದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ಉಧೋ ಉಧೋ ಶ್ರೀ ರೇಣುಕಾ ಯಲ್ಲವ್ವ' ಧಾರಾವಾಹಿಯಲ್ಲಿ ರೇಣುಕಾ ಅಮ್ಮ ದ್ಯಾವಮ್ಮ ಆಗಿ ಅಭಿನಯಿಸಿದ್ದರು. ಮುಂದೆ ಅವರು ಧಾರಾವಾಹಿಯಿಂದ ಹೊರಬರುವ ಸಮಯ ಬಂದಾಗ ಆಕೆ ಸಾಯುವ ಮೂಲಕ ಆಕೆಯ ಪಾತ್ರವನ್ನು ಕೊನೆಗಣಿಸಿದ್ದರು.

ಹಾಗೆಯೇ ನಟಿ ಅಮೃತ ರಾಮಮೂರ್ತಿ ಇತ್ತೀಚೆಗಷ್ಟೇ ತಮ್ಮ ಮಗಳ ಹುಟ್ಟು ಹಬ್ಬವನ್ನು ಅದ್ಧೂರಿಯಾಗಿ ಸಂಭ್ರಮಿಸಿದ್ದಾರೆ. ಅವರ ಪತಿ ಕೂಡ ಕಿರುತೆರೆಯವರೇ ಆಗಿದ್ದು ಈ ದಂಪತಿ ಒಟ್ಟಿಗೆ 'ಮಿಸ್ಟರ್ ಅಂಡ್ ಮಿಸ್ಸೆಸ್ ರಂಗೇಗೌಡ' ಎಂಬ ಧಾರಾವಾಹಿಯನ್ನೂ ಮಾಡಿದ್ದರು. ತಮ್ಮ ಯೌಟ್ಯೂಬ್ ಚಾನೆಲ್‌ನಲ್ಲಿ ಮಗಳ ಬಗ್ಗೆ ಆಗಾಗ ಖುಷಿಯ ಕ್ಷಣಗಳ ವಿಡಿಯೋ ತುಣುಕುಗಳನ್ನು ಶೇರ್ ಮಾಡುತ್ತಿರುತ್ತಾರೆ.
ಇನ್ನು ಅಮೃತಾ ರಾಮಮೂರ್ತಿ ಹಾಗೂ ರಘು ಗೌಡ ದಂಪತಿ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಅಭಿಮಾನಿಯಾಗಿದ್ದು ಅದೇ ಕಾರಣದಿಂದ ತಮ್ಮ ಮಗಳಿಗೆ ಧೃತಿ ಎಂದು ನಾಮಕರಣ ಮಾಡಿದ್ದರು. ಅಂದ ಹಾಗೇ ಧೃತಿ ಪುನೀತ್ ರಾಜ್ ಕುಮಾರ್ ಮಗಳ ಹೆಸರು.
'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ ಅವರು ಕೂಡ ಇದೀಗ ಹೆಣ್ಣು ಮಗುವಿಗೆ ತಾಯಿಯಾಗಿದ್ದಾರೆ. ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ನಾಯಕ ತಾಂಡವ್ ಪ್ರೇಯಸಿ ಶ್ರೇಷ್ಠಾ ಆಗಿ ಅಭಿನಯಿಸಿದ್ದ ಗೌತಮಿ ಅವರು ಗರ್ಭಿಣಿಯಾಗಿದ್ದ ಕಾರಣ ನಟನೆಗೆ ಬಿದಾಗ ಹೇಳಿದರು. ಇತ್ತೀಚೆಗಷ್ಟೇ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಈಕೆ ತಮ್ಮ ಅನುಭವ ಹಾಗೂ ಸಂಭ್ರಮವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಮಾತ್ರವಲ್ಲದೇ ಕನಸೆಲ್ಲ ನನಸಾದ ಕ್ಷಣ ಎಂದು ಬರೆದುಕೊಂಡಿದ್ದಾರೆ.

ಕಿರುತೆರೆ ನಟಿ, ನೃತ್ಯಗಾರ್ತಿ ಮಾನಸ ಜೋಶಿ ಅವರು ಕೂಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು ಮುದ್ದು ಮಗಳಿಗೆ ಇದೀಗ ಒಂದು ವರ್ಷ ತುಂಬಿದೆ. ನೃತ್ಯದ ಜೊತೆಗೆ ಕಿರುತೆರೆ, ಹಿರಿತೆರೆಗಳಲ್ಲಿ ಗುರುತಿಸಿಕೊಂಡಿದ್ದ ಮಾನಸ ಜೋಶಿ ಮಗಳ ಪಾಲನೆ ಪೋಷಣೆಗಾಗಿ ಡ್ಯಾನ್ಸ್ ಹಾಗೂ ಕೆರಿಯರ್ ನಿಂದ ಬ್ರೇಕ್ ತೆಗೆದುಕೊಂಡಿದ್ದರು. ಇದೀಗ ನೃತ್ಯದತ್ತ ಮುಖ ಮಾಡಿರುವ ಈಕೆ ತಾಯ್ತನ ಹಾಗೂ ಕೆರಿಯರ್ ಅನ್ನು ಜೊತೆಜೊತೆಗೆ ನಿಭಾಯಿಸುತ್ತಿದ್ದಾರೆ.
'ಜೊತೆಜೊತೆಯಲಿ' ಧಾರಾವಾಹಿ ಮೂಲಕ ಮನೆ ಮಾತಾಗಿದ್ದ ನಟಿ ಆಶಿತಾ ಚಂದ್ರಪ್ಪ ಕೂಡ ಇತ್ತೀಚೆಗೆ ತಾಯಿಯಾಗಿದ್ದಾರೆ. ಹೆಣ್ಣು ಮಗುವಿಗೆ ಜನ್ಮ ನೀಡಿರುವ ಆಕೆ ಆಗಾಗ ತಮ್ಮ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ. ಈ ಮೂಲಕ ತಮ್ಮ ಫಾಲ್ಲೋವರ್ಸ್ ಹಾಗೂ ಅಭಿಮಾನಿಗಳಲ್ಲಿ ಹಲವಾರು ವಿಚಾರಗಳ ಬಗ್ಗೆ ಅರಿವು ಮೂಡಿಸುತ್ತಿರುತ್ತಾರೆ.


Click it and Unblock the Notifications











