ಕಿರುತೆರೆಯಲ್ಲಿ ಸದ್ದು ಮಾಡಿದ ಕನ್ನಡದ ಈ ರಿಯಾಲಿಟಿ ಶೋಗಳಲ್ಲಿ ನಿಮಗ್ಯಾವುದು ಇಷ್ಟ?

By ಅನಿತಾ ಬನಾರಿ

ಇಂದು ಪ್ರತಿ ವಾಹಿನಿಯಲ್ಲೂ ಹತ್ತಾರು ರಿಯಾಲಿಟಿ ಶೋಗಳು ಚಾಲ್ತಿಯಲ್ಲಿದೆ. ಹಾಗಾದರೆ ಈ ರಿಯಾಲಿಟಿ ಶೋಗಳು ಆರಂಭವಾಗಿದ್ದು, ಯಾವಾಗ, ಎಲ್ಲಿಂದ ಎಂಬ ಕುತೂಹಲ ಕೆಲವರಲ್ಲಿ ಮೂಡಿರಬಹುದು. 1990ರ ದಶಕದಲ್ಲಿ ರಿಯಾಲಿಟಿ ಶೋಗಳ ಉಗಮವಾಯಿತು. ಬಿಗ್ ಬ್ರದರ್ ಮುಂತಾದ ರಿಯಾಲಿಟಿ ಶೋಗಳು ಜಗತ್ತಿನಾದ್ಯಂತ ಖ್ಯಾತಿ ಪಡೆದವು. ಕ್ರಮೇಣ ಇದು ಬೇರೆ ಬೇರೆ ದೇಶಗಳಲ್ಲಿಯೂ ನಾನಾ ರೀತಿಯ ರೂಪಗಳನ್ನು ಪಡೆಯುತ್ತ ಪ್ರತಿಭೆಗಳ ಅನಾವರಣಕ್ಕೆ ವೇದಿಕೆಯಾಗುತ್ತಾ ಹೋಯಿತು.

ಕನ್ನಡ ಕಿರುತೆರೆಯಲ್ಲಿ 'ಎದೆ ತುಂಬಿ ಹಾಡುವೆನು' ಎಂಬ ರಿಯಾಲಿಟಿ ಶೋ ಹಲವು ವರ್ಷಗಳ ಕಾಲ ಕನ್ನಡದ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಲು ಒಂದೊಳ್ಳೆ ವೇದಿಕೆಯಾಗಿ ಸೃಷ್ಟಿಯಾಯಿತು. ಚಿಕ್ಕ ಮಕ್ಕಳಿಗೆ ದೊಡ್ಡವರಿಗೆ ಮತ್ತು ಹಿರಿಯ ನಾಗರಿಕರಿಗೂ ಈ ವೇದಿಕೆ ಅವಕಾಶ ನೀಡಿತು.

Check out this reality show that entertains TV viewers in Kannada

ಹಿರಿಯ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ ಅವರು ಈ ಕಾರ್ಯಕ್ರಮದ ರೂವಾರಿಯಾಗಿ ಹಲವಾರು ವರ್ಷಗಳ ಕಾಲ ನಡೆಸಿಕೊಟ್ಟರು. ಈ ಕಾರ್ಯಕ್ರಮದಲ್ಲಿ ಮಿಂಚಿರುವ ಹಲವು ಪ್ರತಿಭೆಗಳು ಇಂದಿಗೂ ಗಾಯನವನ್ನೇ ತಮ್ಮ ವೃತ್ತಿಯಾಗಿಸಿ ಜೀವನ ಕಟ್ಟಿಕೊಂಡಿದ್ದಾರೆ.

ಗಾಯನವಷ್ಟೇ ಅಲ್ಲದೆ ಡ್ಯಾನ್ಸ್ ಗೆ ಕೂಡ ಹಲವಾರು ರಿಯಾಲಿಟಿ ಶೋಗಳು. ವೇದಿಕೆಯಾದವು. ಹಲವು ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ 'ಕುಣಿಯೋಣು ಬಾರ' ಎಂಬ ರಿಯಾಲಿಟಿ ಶೋ ಬಹಳಷ್ಟು ಸದ್ದು ಮಾಡಿತ್ತು. ಅದಾದ ಮೇಲೆ 'ಡಾನ್ಸ್ ಕರ್ನಾಟಕ ಡಾನ್ಸ್,' ಚಾಂಪಿಯನ್ ಮುಂತಾದ ನಾನಾ ರೀತಿಯ ರಿಯಾಲಿಟಿ ಶೋಗಳು ಪ್ರಸಾರವಾಗಿ ಹಲವಾರು ಪ್ರತಿಭೆಗಳನ್ನು ಗುರುತಿಸಿ ವೇದಿಕೆ ನೀಡಿದೆ.

ಡ್ಯಾನ್ಸ್ ಹಾಗೂ ಗಾಯನವೇ ರಿಯಾಲಿಟಿ ಶೋಗಳಿಗೆ ಮುಖ್ಯ ವಿಚಾರವಾಗಿದ್ದ ಸಂದರ್ಭದಲ್ಲೇ 'ಡ್ರಾಮಾ ಜೂನಿಯರ್ಸ್' ಎಂಬ ರಿಯಾಲಿಟಿ ಶೋ ನಾಟಕ ಅಭಿನಯದಲ್ಲಿಯೂ ಪ್ರತಿಭೆ ಇರುವ ಹಲವಾರು ಮಕ್ಕಳಿಗೆ ಬಹುದೊಡ್ಡ ವೇದಿಕೆಯಾಗಿ ಮಾರ್ಪಟ್ಟಿತು. ನಿರ್ದೇಶಕರಾದ ಟಿ ಎನ್ ಸೀತಾರಾಮ್ ನಟಿ ಜೂಲಿ ಲಕ್ಷ್ಮಿ ಹಾಗೂ ನಟ ವಿಜಯ್ ರಾಘವೇಂದ್ರ ಅವರು ಈ ಕಾರ್ಯಕ್ರಮದ ರೂವಾರಿಯಾಗಿ ಹಲವು ಸೀಸನ್‌ಗಳ ಕಾಲ ಮಕ್ಕಳನ್ನು ಪ್ರೋತ್ಸಾಹಿಸುತ್ತಾ ಬಂದರು.

ಇಂದು ಕಾಮಿಡಿ ರಿಯಾಲಿಟಿ ಶೋಗಳಾಗಿ 'ಕಾಮಿಡಿ ಕಿಲಾಡಿಗಳು', 'ಗಿಚ್ಚಿ ಗಿಲಿ ಗಿಲಿ', 'ಕಿಲಾಡಿ ಕುಟುಂಬ', 'ಮಜಾ ಭಾರತ' ಹೀಗೆ ಹತ್ತು ಹಲವು ರೂಪಗಳಲ್ಲಿ ರಿಯಾಲಿಟಿ ಶೋಗಳು ಜನಮನ ಗೆಲ್ಲುತ್ತಿವೆ.

Check out this reality show that entertains TV viewers in Kannada

ಪ್ರಸ್ತುತ ಬಿಗ್ ಬಾಸ್ ಕೂಡ ಬಹುದೊಡ್ಡ ರಿಯಾಲಿಟಿ ಶೋ ಆಗಿ ಮೂಡಿಬಂದಿದೆ. ಕನ್ನಡದಲ್ಲಿ ಕಳೆದ 11 ವರ್ಷಗಳಿಂದ ಬಿಗ್ ಬಾಸ್ ಜನಮನ ಗೆಲ್ಲುತ್ತಿದೆ. ಸರಿಗಮಪ ಕೂಡ ಹಲವು ಸೀಸನ್ ಗಳಲ್ಲಿ ಮಕ್ಕಳು ಹಾಗೂ ದೊಡ್ಡವರ ಪ್ರತಿಭಾ ಅನಾವರಣಕ್ಕೆ ಬಹುದೊಡ್ಡ ವೇದಿಕೆಯಾಗಿದೆ. ಗಾಯಕ ವಿಜಯ್ ಪ್ರಕಾಶ್ ರಾಜೇಶ್ ಕೃಷ್ಣನ್ ಹಾಗೂ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾ ಬಂದಿದ್ದಾರೆ. ಇತ್ತೀಚೆಗೆ ಸಂಗೀತ ನಿರ್ದೇಶಕ ಹಂಸಲೇಖ ಅವರು ಕೂಡ ಕಾರ್ಯಕ್ರಮದ ಮುಖ್ಯ ರೂವಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಜೀ ಕನ್ನಡ ವಾಹಿನಿ ಕಲರ್ಸ್ ಕನ್ನಡ ವಾಹಿನಿ ಅಷ್ಟೇ ಅಲ್ಲದೆ ಸ್ಟಾರ್ ಸುವರ್ಣ ವಾಹಿನಿ ಕೂಡ ಹಲವಾರು ರಿಯಾಲಿಟಿ ಶೋಗಳನ್ನು ಜನರಿಗೆ ನೀಡುತ್ತಾ ಬಂದಿದೆ. ಡ್ಯಾನ್ಸ್ ಡ್ಯಾನ್ಸ್, ಸುವರ್ಣ ಸೂಪರ್ ಸ್ಟಾರ್ ಮುಂತಾದ ರಿಯಾಲಿಟಿ ಶೋಗಳ ಮೂಲಕ ಸೆಲೆಬ್ರಿಟಿಗಳಷ್ಟೇ ಅಲ್ಲದೆ ಸಾಮಾನ್ಯ ಜನರಿಗೂ ವೇದಿಕೆ ನೀಡುತ್ತಾ ಜನಮನ ಗೆಲ್ಲುತ್ತಾ ಬಂದಿದೆ.

More from Filmibeat

English summary
Check out this reality show that entertains TV viewers in Kannada.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X