For Quick Alerts
  ALLOW NOTIFICATIONS  
  For Daily Alerts

  ಬೆಂಗಳೂರು ಪ್ಯಾಲೇಸಲ್ಲಿ 'ಸಾವಿತ್ರಿ' ಅದ್ದೂರಿ ಮದುವೆ

  By Rajendra
  |

  ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಸಿದ್ಧತೆಗಳ ನಡುವೆ 'ಸಾವಿತ್ರಿ' ಮದುವೆಗೆ ಮಂಗಳವಾದ್ಯಗಳು ಮೊಳಗಿವೆ. ಇದು ಒಟ್ಟು ಐದು ದಿನಗಳ ಕಾಲ ಸಡಗರ, ಸಂಭ್ರಮದಿಂದ ನಡೆದ ಅದ್ದೂರಿ ಮದುವೆ ಕಾರ್ಯಕ್ರಮ!

  ಈ ಸಾವಿತ್ರಿ ಬೇರಾರು ಅಲ್ಲ, ಕನ್ನಡಿಗರ ಕಣ್ಮಣಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅದ್ದೂರಿ ಧಾರಾವಾಹಿ 'ಚಿ.ಸೌ.ಸಾವಿತ್ರಿ'. ಈ ಧಾರಾವಾಹಿಯ ವಿಶೇಷ ಸಂಚಿಕೆಗಳನ್ನು ಬೆಂಗಳೂರಿನ ಅರಮನೆಯಲ್ಲಿ ಇತ್ತೀಚೆಗೆ ಚಿತ್ರೀಕರಿಸಿಕೊಳ್ಳಲಾಗಿದೆ.

  ಈ ಹಿಂದೆ 'ಚಿ.ಸೌ. ಸಾವಿತ್ರಿ' ಮೊದಲ ಸೀಸನ್ ಗಾಗಿ ಮೈಸೂರಿನ ಲೀಲಾ ಪ್ಯಾಲೇಸ್ ಮದುವೆ ಚಿತ್ರೀಕರಣ ನಡೆದಿತ್ತು. ಈ ಬಾರಿ ಬೆಂಗಳೂರು ಪ್ಯಾಲೇಸನ್ನು ಆಯ್ಕೆ ಮಾಡಿಕೊಳ್ಳಲಾಗಿದೆ.

  ಬೆಂಗಳೂರು ಅರಮನೆಯಲ್ಲಿ ಚಿತ್ರೀಕರಣವಾದ ವಿಶೇಷ ಸಂಚಿಕೆಗಳು ನವೆಂಬರ್ ಎರಡನೇ ವಾರದ ಕೊನೆಯಲ್ಲಿ ಪ್ರಸಾರವಾಗಲಿವೆ. ಸಾವಿತ್ರಿ (ನಂದಿನಿ ಮೂರ್ತಿ) ಹಾಗೂ ಸತ್ಯ (ಸುನೀಲ್ ಸಾಗರ್) ವಿವಾಹ ಅವರಮನೆ ಮೈದಾನದಲ್ಲಿ ಸರ್ವ ಸಂಪ್ರದಾಯಗಳೊಂದಿಗೆ ನೆರವೇರಿದೆ.

  ಈ ದೃಶ್ಯಗಳನ್ನು ಕಿರುತೆರೆ ಪ್ರೇಕ್ಷಕರು ಕಣ್ತುಂಬಿಕೊಳ್ಳಬಹುದು. ಈ ಮದುವೆ ಸಮಾರಂಭಕ್ಕೆ ವಿಶೇಷ ಅತಿಥಿಗಳಾಗಿ ಕನ್ನಡ ಚಿತ್ರರಂಗದ ಖ್ಯಾತನಾಮರು ಪಾಲ್ಗೊಂಡಿದ್ದಾರೆ. ಕೆಲವು ರಾಜಕೀಯ ಧುರೀಣರು ನೂತನ ದಂಪತಿಗಳನ್ನು ಆಶೀರ್ವದಿಸಲಿದ್ದಾರೆ.

  ನಟ ಅಜಯ್ ರಾವ್ ಹಾಗೂ ತಾರೆ ಸಿಂಧು ಲೋಕನಾಥ್ ಈಗಾಗಲೆ ಸಾವಿತ್ರಿ ಮದುವೆಯ ವಿಶೇಷ ಸಂಚಿಕೆಯಲ್ಲಿ ಡಾನ್ಸ್ ಮಾಡಿದ್ದಾರೆ. ಈ ಯುಗದ ಹೊಸ ಸಾವಿತ್ರಿಯ ಕುಂಕುಮ ಸೌಭಾಗ್ಯದ ಕತೆ 'ಚಿ.ಸೌ.ಸಾವಿತ್ರಿ'.

  ಕಳೆದ ಜುಲೈ 26ರಿಂದ ಜೀ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 7 ಗಂಟೆಗೆ ಪ್ರಸಾರಗೊಳ್ಳುತ್ತಿದೆ. ಈಗಾಗಲೇ ಯಶಸ್ವಿ 600ಕ್ಕೂ ಅಧಿಕ ಸಂಚಿಕೆಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ.

  ಶ್ರುತಿನಾಯ್ಡು ನಿರ್ದೇಶನದಲ್ಲಿ ಜೈಜಗದೀಶ್, ಗೌತಮಿ, ಬಿ.ವಿ. ರಾಧಾ, ಮಂಡ್ಯ ರಮೇಶ್, ಸುಂದರ್, ನಂದಿನಿ ಪಟವರ್ಧನ್, ಶಿವಾಜಿರಾವ್ ಜಾಧವ್, ವೀಣಾ ರಾವ್, ಕಾವ್ಯ ಕಣ್ಣನ್ ಮೊದಲಾದ ಕಲಾವಿದರು ನಟಿಸುತ್ತಿದ್ದಾರೆ. (ಒನ್ಇಂಡಿಯಾ ಕನ್ನಡ)

  English summary
  One of the successful soap from Zee Kannada 'Chi Sou Savitri' is celebrating Savitri's royal wedding at Bangalore Palace. The special episode being aired on November 2012 second week. It's story of a 19-year-old girl Savitri, who hails from a village and hired by Narasimha Rao, a 52-year-old widower.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X