ಮೂರು ವರ್ಷ ಪ್ರೀತಿಸಿದರೂ ಪ್ರಪೋಸ್ ಮಾಡಲಿಲ್ಲ ಎಂದು ನಟಿಗೆ ಬೇಸರ

By ಪ್ರಿಯಾ ದೊರೆ

ಹಲವು ವರ್ಷಗಳ ಗ್ಯಾಪ್ ಬಳಿಕ ಏಕಾಏಕಿ ವಿಲನ್ ಪಾತ್ರದಲ್ಲಿ ಕಾಣಿಸಿಕೊಂಡು, ಮತ್ತೆ ಇದ್ದಕ್ಕಿದ್ದಂತೆ ಧಾರಾವಾಹಿಯಿಂದ ಹೊರನಡೆದ ನಟಿ ಗೌತಮಿ ಗೌಡ ಈಗ ಹೆಣ್ಣು ಮಗುವಿನ ತಾಯಿಯಾಗಿದ್ದಾರೆ. 'ಭಾಗ್ಯಲಕ್ಷ್ಮೀ' ಧಾರಾವಾಹಿಯ ಶ್ರೇಷ್ಠ ಪಾತ್ರದಿಂದ ಹೊರ ನಡೆದ ಬಳಿಕ ವೀಕ್ಷಕರು ಗೌತಮಿ ಗೌಡರನ್ನು ಬಹಳ ಮಿಸ್ ಮಾಡಿಕೊಂಡರು. ಆದರೆ, ಗೌತಮಿ ಗರ್ಭಿಣಿಯಾದ ಕಾರಣದಿಂದ ಸೀರಿಯಲ್ ಅರ್ಧಕ್ಕೆ ಬಿಡಬೇಕಾಯ್ತು.

'ಚಿ|| ಸೌ|| ಸಾವಿತ್ರಿ' ಅಂತಹ ಧಾರಾವಾಹಿಯಲ್ಲಿ ಮುಗ್ಧವಾಗಿ ನಟಿಸಿದ್ದ ಗೌತಮಿ ಮದುವೆಯಾದ ನಂತರ ಎಲ್ಲೂ ಕಾಣಿಸಿಕೊಳ್ಳಲಿಲ್ಲ. ಕಿರುತೆರೆಗೆ ಕಮ್ ಬ್ಯಾಕ್ ಮಾಡಿ ಈಗ ಮತ್ತೆ ನಟನೆಯಿಂದ ಮರೆಯಾಗಿದ್ದಾರೆ.

Chi Sow Savithri Fame Actress Gowthami gowda Biography and Career

ನಟನೆಯನ್ನು ಮುಂದುವರೆಸಲು ಬಯಸುತ್ತಿರುವ ಗೌತಮಿ ಜೀವನದ ಒಂದಷ್ಟು ವಿಚಾರಗಳನ್ನು ತಿಳಿದುಕೊಳ್ಳುವ ಸಮಯವಿದು. ಕಳೆದ ವಾರವಷ್ಟೇ ನಟಿ ಗೌತಮಿ ಗೌಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಸದ್ಯ ತಾಯ್ತನದ ಅನುಭವವನ್ನು ಪಡೆಯುತ್ತಿರುವ ಗೌತಮಿ ಅವರದ್ದು ಲವ್ ಕಮ್ ಅರೇಂಜ್ ಮ್ಯಾರೇಜ್.

ಮೂರು ವರ್ಷ ಪ್ರೀತಿಸಿದ ಜೋಡಿ

2015ರಲ್ಲಿ ಗೌತಮಿ ಗೌಡ ಹಾಗೂ ಜಾರ್ಜ್ ಕ್ರಿಸ್ಟಿ ಇಬ್ಬರೂ ಕಾಮನ್ ಫ್ರೆಂಡ್ ಮೂಲಕ ಮಲ್ಲೇಶ್ವರಂನಲ್ಲಿ ಪರಿಚಯವಾದರು. ಸ್ನೇಹ ಹಾಗೆ ಪ್ರೀತಿಗೆ ತಿರುಗಿತು. ಮೂರು ವರ್ಷಗಳ ಕಾಲ ಪ್ರೀತಿಸಿದ ಈ ಜೋಡಿ ಪ್ರಪೋಸ್ ಮಾಡಿಕೊಳ್ಳಲೇ ಇಲ್ಲವಂತೆ.

ಪ್ರಪೋಸ್ ಮಾಡಿಕೊಳ್ಳದೇ ಒಂದಾದರು

ಜಾರ್ಜ್ ಬಳಿ ಗೌತಮಿ ನೀವು ಪ್ರಪೋಸ್ ಮಾಡಲೇ ಇಲ್ಲ ಎಂದು ದೂರುತ್ತಿರುತ್ತಾರಂತೆ. ಇಬ್ಬರದ್ದೂ ಒಂದೇ ರೀತಿಯ ಆಲೋಚನೆಯಾಗಿದ್ದರಿಂದ ಇಬ್ಬರೂ ಬೇಗ ಸಿಂಕ್ ಆಗಿದ್ದಾರೆ. ಇಬ್ಬರೂ ಕೂಡ ಟ್ರಾವೆಲ್ ಫ್ರೀಕ್. ಇಬ್ಬರಿಗೂ ಹೊರ ದೇಶಗಳನ್ನು ಸುತ್ತುವುದೆಂದರೆ ಬಹಳ ಇಷ್ಟವಂತೆ. ಇಬ್ಬರೂ ಮದುವೆಯಾಗಬೇಕು ಎಂದು ನಿರ್ಧರಿಸಿದ ಬಳಿಕ ಮನೆಯಲ್ಲಿ ಹೇಳಿದಾಗ ಇಬ್ಬರ ಮನೆಯಲ್ಲೂ ಒಪ್ಪಲಿಲ್ಲ. ಹಾಗಾಗಿ ಇಬ್ಬರೂ ಕಾದಿದ್ದು, ಒಂದು ವರ್ಷದ ಬಳಿಕ ಎಲ್ಲರನ್ನೂ ಒಪ್ಪಿಸಿ ಮದುವೆಯಾದರು.

Chi Sow Savithri Fame Actress Gowthami gowda Biography and Career

ಕುಟುಂಬಕ್ಕೆ ಮಹಾಲಕ್ಷ್ಮೀಯ ಆಗಮನ

2018ರಲ್ಲಿ ಶುಕ್ರವಾರದಂದು ಹಿಂದೂ ಸಂಪ್ರದಾಯದಂತೆ ಗೌತಮಿ ಗೌಡ - ಜಾರ್ಜ್ ಕ್ರಿಸ್ಟಿ ವಿವಾಹ ಮಹೋತ್ಸವ ಜರುಗಿತು. ಪುನಃ ಭಾನುವಾರ ಕ್ರೈಸ್ತ ಸಂಪ್ರದಾಯದಂತೆ ಉಂಗುರ ಬದಲಾಯಿಸಿಕೊಂಡರು. ಇಬ್ಬರೂ ಇದುವರೆಗೂ 7 ದೇಶಗಳನ್ನು ಸುತ್ತಿದ್ದಾರೆ. ಉತ್ತರ ಭಾರತ, ಕೇರಳ ಹಾಗೂ ರೋಡ್ ಟ್ರಿಪ್ ಹೋಗುತ್ತಿರುತ್ತಾರಂತೆ. ತನ್ನ ಸೀಮಂತದ ದಿನದಂದೇ ತನ್ನ ಗಂಡನ ಫೋಟೋವನ್ನು ಆಭಿಮಾನಿಗಳಿಗೆ ಮೊದಲ ಬಾರಿಗೆ ತೋರಿಸಿದ್ದರು. ಜಾರ್ಜ್ ಮಲೇಶಿಯನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ವಿಜಯದಶಮಿ ದಿನದಂದು ಗೌತಮಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಎರಡೂ ಕುಟುಂಬದಲ್ಲೂ ಈಗ ಸಂಭ್ರಮ ಮನೆ ಮಾಡಿದೆ.

ಗೌತಮಿ ಸಿನಿಮಾ, ಧಾರಾವಾಹಿಗಳು

'ಮಳೆ', 'ಜೆಸ್ಸಿ', 'ಅಂಬಿ ನಿಂಗ್ ವಯಸ್ಸಾಯ್ತೋ' ಮುಂತಾದ ಸಿನಿಮಾಗಳಲ್ಲಿಯೂ ಗೌತಮಿ ಗೌಡ ನಟಿಸಿದ್ದಾರೆ. 'ಚಿ. ಸೌ ಸಾವಿತ್ರಿ', 'ತಾಯವ್ವ', 'ಚೆಲುವಿ', 'ಚಲಿಸುವ ಮೋಡಗಳು' ಮುಂತಾದ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಗೌತಮಿ ಗೌಡಗೆ ಚಿ. ಸೌ ಸಾವಿತ್ರಿ ಧಾರಾವಾಹಿ ಬಹಳ ಹೆಸರು ತಂದು ಕೊಟ್ಟಿತ್ತು. ಜೊತೆಗೆ ರಿಯಾಲಿಟಿ ಶೋಗಳಲ್ಲೂ ಮಿಂಚಿದರು. 'ಕುಣಿಯೋಣು ಬಾ', 'ಯಾರಿಗುಂಟು ಯಾರಿಗಿಲ್ಲ', 'ಡ್ಯಾನ್ಸಿಂಗ್ ಸ್ಟಾರ್', 'ಬಿಗ್ ಬಾಸ್' ಶೋಗಳಲ್ಲಿ ಭಾಗವಹಿಸಿದ್ದರು. ಇನ್ನು ಮತ್ತೆ ನಟಿಸುವ ಆಸೆ ಇದ್ದು, ಪತಿ ಸಪೋರ್ಟ್ ಕೂಡ ಇದೆಯಂತೆ.

More from Filmibeat

English summary
Actress Gowthami gowda life and her family details;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X