ಕಮಿಟ್ ಆಗಿರುವ ಹುಡುಗಿಗೆ ಲವ್ ಪ್ರಪೋಸ್ ಮಾಡಿದರು ಚಿಕ್ಕಣ್ಣ
Recommended Video

ನಟ ಚಿಕ್ಕಣ್ಣ ಕಮಿಟ್ ಆಗಿರುವ ಒಬ್ಬ ಹುಡುಗಿಗೆ ಪ್ರಪ್ರೋಸ್ ಮಾಡಿದ್ದಾರೆ. ಅದು ರಿಯಲ್ ಆಗಿ ಅಲ್ಲ, ಶಿವರಾಜ್ ಕುಮಾರ್ ಕೊಟ್ಟ ಚಾಲೆಂಜ್ ಗಾಗಿ. ಹೌದು, ಇದೆಲ್ಲ ನಡೆದಿದ್ದು ಕಿರುತೆರೆಯ ಹೊಸ ಕಾರ್ಯಕ್ರಮ 'ನಂ 1 ಯಾರಿ ವಿತ್ ಶಿವಣ್ಣ' ಶೋ ದಲ್ಲಿ.
'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮಕ್ಕೆ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುದೀರ್ ಆಗಮಿಸಿದ್ದರು. ಈ ವೇಳೆ ಮೂರು ಜನಕ್ಕೆ ಶಿವಣ್ಣ ಬೇರೆ ಬೇರೆ ರೀತಿಯ ಚಾಲೆಂಜ್ ಗಳನ್ನು ನೀಡಿದ್ದರು. ಅದರಲ್ಲಿಯೂ ಚಿಕ್ಕಣ್ಣನಿಗೆ ಶಿವಣ್ಣ ಕಾರ್ಯಕ್ರಮದಲ್ಲಿ ಇರುವ ದೀಪಾಗೆ ಲವ್ ಪ್ರಪೋಸ್ ಮಾಡುವಂತೆ ಹೇಳಿದರು. ಇಡೀ ಕಾರ್ಯಕ್ರಮದಲ್ಲಿ ಈ ಸಂದರ್ಭ ಸಖತ್ ಕಾಮಿಡಿಯಾಗಿತ್ತು.
ಅಂದಹಾಗೆ, 'ನಂ 1 ಯಾರಿ ವಿತ್ ಶಿವಣ್ಣ' ಕಾರ್ಯಕ್ರಮದ ಚಿಕ್ಕಣ್ಣ ಅವರ ಸಂಚಿಕೆಯ ಹೈಲೈಟ್ ಗಳು ಮುಂದಿದೆ ಓದಿ...

ಪ್ರಪೋಸ್ ಮಾಡಿದ ಚಿಕ್ಕಣ್ಣ
ಚಿಕ್ಕಣ್ಣನಿಗೆ ಶಿವಣ್ಣ ಪ್ರಪೋಸ್ ಮಾಡುವಂತೆ ಹೇಳಿದರು. ಆಗ ಚಿಕ್ಕಣ್ಣ 'ಐ ಲವ್ ಯೂ, ನೀವಂದ್ರೆ ನನಗೆ ತುಂಬ ಇಷ್ಟ' ಎಂದು ಕುಮಾರಸ್ವಾಮಿ, ಸಿದ್ಧರಾಮಯ್ಯ ಸೇರಿದಂತೆ ಬೇರೆ ಬೇರೆ ರೀತಿ ಕಾರ್ಯಕ್ರಮದಲ್ಲಿ ಇರುವ ದೀಪಾಗೆ ಪ್ರಪೋಸ್ ಮಾಡಿದರು. ಆಗ ದೀಪಾ ನಾನು ಈಗಾಗಲೇ ಬೇರೆ ಹುಡುನಿಗೆ ಕಮಿಟ್ ಆಗಿದ್ದೇನೆ ಎಂದು ಚಮಕ್ ಕೊಟ್ಟರು.

ಮೈಕಲ್ ಜಾಕ್ಸನ್ ಡ್ಯಾನ್ಸ್
ಕಾರ್ಯಕ್ರಮದ ನಡುವೆ ಚಿಕ್ಕಣ್ಣ ಮೈಕಲ್ ಜಾಕ್ಸನ್ ರೀತಿ ಡ್ಯಾನ್ಸ್ ಮಾಡಿದರು. ಶಿವಣ್ಣ ಚಿಕ್ಕಣ್ಣನ ಡ್ಯಾನ್ಸ್ ನೋಡಿ ಸಖತ್ ಎಂಜಾಯ್ ಮಾಡಿದರು.

ಯಶ್ ಡೈಲಾಗ್
''ಅಣ್ತಮ್ಮ ಇಲ್ಲಿ ಯಾರು ಹೀರೋಗಳನ್ನು ಹುಟ್ಟುಹಾಕಲ್ಲ. ನಮಗೆ ನಾವೇ ಹೀರೋ ಆಗಬೇಕು'' ಎಂಬ ಯಶ್ ಅವರ ಡೈಲಾಗ್ ಅನ್ನು ಚಿಕ್ಕಣ್ಣ ತಮ್ಮ ಸ್ಟೈಲ್ ನಲ್ಲಿ ಹೇಳಿದರು.

ಫೇವರೇಟ್ ಹಿರೋಯಿನ್
ನಿಮ್ಮ ಫೇವರೇಟ್ ಹಿರೋಯಿನ್ ಯಾರು? ಅಂತ ಶಿವಣ್ಣ ಹೇಳಿದರು. ಆಗ ಚಿಕ್ಕಣ್ಣ ಮಾಲಾಶ್ರೀ. ಯಾಕಂದ್ರೆ ನಾನು ಅವರ ಸಿನಿಮಾವನ್ನೇ ಮೊದಲು ನೋಡಿದ್ದು ಎಂದು ಹೇಳಿದರು.

ಹಿರೋಯಿನ್ - ಹಣ್ಣುಗಳು
ಶಿವಣ್ಣ ಯಾವ ನಟಿಯರಿಗೆ ಯಾವ ಹಣ್ಣು ಹೋಲಿಸುತ್ತೀರ ಎಂದು ಚಿಕ್ಕಣ್ಣರಿಗೆ ಕೇಳಿದರು. ಆಗ ರಕ್ಷಿತಾಗೆ ಮಾವಿನ ಹಣ್ಣು, ರಚಿತಾ ರಾಮ್ ಗೆ ಬಾಳೆಹಣ್ಣು, ಅನುಶ್ರೀ ಅಪಲ್, ನಿಖಿತಾ ಹಲಸಿನ ಹಣ್ಣು ಎಂದು ಚಿಕ್ಕಣ್ಣ ಹೇಳಿದರು. ಚಿಕ್ಕಣ್ಣನ ಉತ್ತರ ಕೇಳಿ ಎಲ್ಲ ಗೊಳ್ ಎಂದು ನಕ್ಕರು.


Click it and Unblock the Notifications











