Chikkejamani serial:'ಚಿಕ್ಕೆಜಮಾನಿ'ಯಲ್ಲಿ ಟ್ವಿಸ್ಟ್: ಯಧು-ಕಾವೇರಿ ನಡುವೆ ನಡೆಯೋ ಆ ಘಟನೆ ಏನು?

By ಪೂರ್ವ

ಕಿರುತೆರೆಯಲ್ಲಿ ಧಾರಾವಾಹಿಗಳದ್ದೇ ಕಲರವ. ಹೊಸ ಹೊಸ ಧಾರಾವಾಹಿಗಳನ್ನು ನಿರ್ಮಾಣ ಮಾಡುತ್ತಾ ವೀಕ್ಷಕರನ್ನು ರಂಜಿಸುವ ಕಥೆಗಳನ್ನು ನಿರ್ಮಾಣ ಮಾಡುತ್ತಿವೆ. ವೀಕ್ಷಕರನ್ನು ರಂಜಿಸವುದು ಕೂಡ ಧಾರಾವಾಹಿಗಿರುವ ತಾಕತ್ತು. ಉದಯ ಟಿವಿಯಲ್ಲಿ ಇದೀಗ 'ಚಿಕ್ಕೆಜಮಾನಿ' ಎಂಬ ಧಾರಾವಾಹಿ ಪ್ರಸಾರ ಆಗುತ್ತಿದೆ. ಈ ಹೊಸ ಧಾರಾವಾಹಿ ಪ್ರಸಾರ ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಿದೆ.

'ಚಿಕ್ಕೆಜಮಾನಿ' ಎಂದು ಹೇಳಿದ ಕೂಡಲೇ ನೆನಪಾಗುವುದು ಜವಾಬ್ದಾರಿ, ಗತ್ತು, ಗೌರವ, ಮರ್ಯಾದೆ ಹೀಗೆ ಏನೆಲ್ಲಾ ನೆನಪಾಗುತ್ತೆ. ಕಥೆಯಲ್ಲಿ ಇಬ್ಬರು ನಾಯಕ ನಟರು ಹಾಗೆಯೇ ಒಬ್ಬಳು ನಾಯಕಿಯನ್ನು ಪ್ರಮುಖ ಪಾತ್ರದಲ್ಲಿ ನೋಡಬಹುದು. ಈ ಧಾರಾವಾಹಿಯಲ್ಲಿ 'ಕಥೆಯೊಂದು ಶುರುವಾಗಿದೆ' ಧಾರಾವಾಹಿ ಖ್ಯಾತಿಯ ಅಕ್ಷತಾ ದೇಶಪಾಂಡೆ ಅಭಿನಯಿಸಿದ್ದಾರೆ.

Chikkejamani Kannada Serial February 21th episode about new twist in storyline

ಈ ಧಾರವಾಹಿ ನಿಮ್ಮನ್ನೆಲ್ಲ ರಂಜಿಸಲು ಈ ವಾರ ಹೊಸ ಟ್ವಿಸ್ಟ್‌ಗಳನ್ನು ಹೊತ್ತು ಬರುತ್ತಿದೆ. ರಾತ್ರಿ 10 ಗಂಟೆಗೆ ಈ ಧಾರಾವಾಹಿ ಪ್ರಸಾರವಾಗಲಿದೆ. ಇದೀಗ ಇಬ್ಬರ ಹುಡುಗರ ಪ್ರೇಮ ಕಥೆಯನ್ನು ವೀಕ್ಷಕರು ನೋಡಬಹುದು. ಇನ್ನು ಕಿರುತೆರೆಯಲ್ಲಿ ಮೋಡಿ ಮಾಡಿರುವ ನಟಿ ಅಕ್ಷತಾ ದೇಶಪಾಂಡೆ ಎಲ್ಲರ ಮನಸ್ಸಿಗೆ ಬಹಳ ಹತ್ತಿರವಾದವರು. ಸಾಕಷ್ಟು ಧಾರಾವಾಹಿಯಲ್ಲಿ ಈ ನಟಿ ಈಗಾಗಲೇ ನಟಿಸಿದ್ದಾರೆ. 'ಅಮೃತವರ್ಷಿಣಿ', 'ಮತ್ತೆ ವಸಂತ', ಕಥೆಯೊಂದು ಶುರುವಾಗಿದೆ ಅಂತಹ ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದಾರೆ.

ಕನ್ನಡದ ಜೊತೆ ಜೊತೆಗೆ ಬೇರೆ ಬೇರೆ ಭಾಷೆಯ ಧಾರಾವಾಹಿಗಳಲ್ಲೂ ನಟಿಸುತ್ತಿದ್ದು, ಅಲ್ಲಿಯೂ ಬ್ಯೂಸಿಯಾಗಿದ್ದಾರೆ. 'ನಿನ್ನು ಕೋರಿ' ಅನ್ನೋ ತೆಲುಗು ಧಾರಾವಾಹಿ, ತಮಿಳಿನಲ್ಲಿ 'ಅನಾಮಿಕ' ಎನ್ನುವ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ 'ಚಿಕ್ಕೆಜಮಾನಿ' ಧಾರಾವಾಹಿಯಲ್ಲಿ ಸೋಮವಾರದಿಂದ ಭಾನುವಾರದವರೆಗೆ ಇದು ಪ್ರಸಾರವಾಗಲಿದೆ. ಇನ್ನು ಈ ಧಾರಾವಾಹಿಯಲ್ಲಿ ಮತ್ತೊಂದು ಪ್ರಮುಖ ಪಾತ್ರದಲ್ಲಿ ನಟಿಸುತ್ತಿರೋದು ವಿನಯ್ ಕಶ್ಯಪ್. ಈ ಧಾರಾವಾಹಿಯಲ್ಲಿ ವಿನಯ್ ಕಶ್ಯಪ್ 'ಯದು' ಅನ್ನೋ ಪಾತ್ರದಲ್ಲಿ ಮಿಂಚುತ್ತಿದ್ದಾರೆ.

ವಿನಯ್ ಕಶ್ಯಪ್ ಹಾಗೂ ಅಕ್ಷತಾ ದೇಶಪಾಂಡೆ 'ಚಿಕ್ಕೆಜಮಾನಿ' ಧಾರಾವಾಹಿಯ ಪ್ರಮುಖ ಆಕರ್ಷಣೆ. ಇನ್ನು ಮಲೆನಾಡು ಆಸುಪಾಸಿನ ನಡೆಯುವಂತಹ ಘಟನೆಗಳನ್ನು ಇಟ್ಟುಕೊಂಡು ಈ ಧಾರಾವಾಹಿಯ ಕಥೆಯನ್ನು ಹೆಣೆಯಲಾಗಿದೆ. ಚೈತನ್ಯ ಹರಿದಾಸ್ ಸಿನಿಮಾಸ್ ಈ ಧಾರಾವಾಹಿಯನ್ನು ನಿರ್ಮಾಣ ಮಾಡುತ್ತಿದೆ. ಕೆ.ಎಂ ಚೈತನ್ಯ ಈ ಧಾರಾವಾಹಿಯನ್ನು ನಿರ್ಮಾಣ ಮಾಡುವುದರ ಜೊತೆಗೆ ಕಥೆಯನ್ನು ಕೂಡ ನೀಡಿದ್ದಾರೆ.

Chikkejamani Kannada Serial February 21th episode about new twist in storyline

ಕಂಪನಿಯ ಸುತ್ತ ಕಥೆಯ ಹಂದರ

ಒಂದು ದೊಡ್ಡ ಕಂಪನಿಯ ಒಡೆಯ ರಾಮ್. ಅವರ ಬಳಿಕ ಯಾರು ಆ ಕಂಪನಿಯ ಡೈರೆಕ್ಟರ್ ಎನ್ನುವುದು ಒಂದೆಳೆ ಕಥೆ. ಈ ಧಾರಾವಾಹಿಯ ಕಥೆಯಲ್ಲಿ ಸಾಕಷ್ಟು ತಿರುವುಗಳು ಕಾಣಿಸಿಕೊಳ್ಳುತ್ತದೆ. ಇದೂವರೆಗೂ ಪ್ರಸಾರ ಆಗಿರುವ ಧಾರಾವಾಹಿ ಎಪಿಸೋಡ್‌ಗಳನ್ನು ನೋಡಿ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಕಾವೇರಿ ಪಾತ್ರದಲ್ಲಿ ಅಕ್ಷತಾ ದೇಶಪಾಂಡೆ ನಟನೆ ಮಾಡುತ್ತಿದ್ದಾರೆ. ಕಾವೇರಿ ಪಾತ್ರ ಹೇಗೆಂದರೆ ಸೆಲ್ಫ್ ಇಂಡಿಪೆಂಡೆಂಟ್, ತನ್ನ ಕಾಲ ಮೇಲೆ ತಾನು ನಿಂತುಕೊಳ್ಳಬೇಕು ಎನ್ನುವ ಆಲೋಚನೆ ಆಕೆಗೆ. ಇನ್ನು ಯಧು ಪಾತ್ರದಲ್ಲಿ ವಿನಯ್ ಕಶ್ಯಪ್ ನಟಿಸಿದ್ದಾರೆ. ಯಧು ಕಾವೇರಿಯ ಬೆಸ್ಟ್ ಫ್ರೆಂಡ್. ಕಾವೇರಿಗೆ ಯಧು ಬಿಟ್ಟು ಬೇರೆ ಯಾರೂ ಗೆಳೆಯರಿಲ್ಲ.

ಕಾವೇರಿ ಜೊತೆ ಆಡಿ ಬೆಳೆದ ಯಧು

ಕಾವೇರಿ ಹಾಗೂ ಯಧು ಹುಟ್ಟಿದಾಗಿನಿಂದ ಇಬ್ಬರು ಜೊತೆಗೆ ಇದ್ದವರು. ಯಧು ಚಿಕ್ಕವಯಸ್ಸಿನಿಂದಲೂ ಅಜ್ಜಿಯ ಜೊತೆ ಬೆಳೆದ ಮುದ್ದು ಹುಡುಗ. ಕೆಟ್ಟ ನಡತೆಯುಳ್ಳ ತಾಯಿಯನ್ನು ನೋಡಿ ಆತನಿಗೆ ಜೀವನದಲ್ಲಿ ಜಿಗುಪ್ಸೆ ಬಂದಿದೆ. ಇನ್ನು ಪ್ರೀತಂ ಆ ದೊಡ್ಡ ಕಂಪನಿಯ ಮಾಲೀಕ ರಾಮ್ ಅವರ ಮಗ. ಈತನಿಗೆ ಲೈಫ್‌ನಲ್ಲಿ ಸ್ವಲ್ಪವೂ ಸೀರಿಯಸ್‌ನೆಸ್ ಅನ್ನೋದೇ ಇಲ್ಲ. ಆತನನ್ನು ಸರಿಯಾದ ದಾರಿಗೆ ತರುವುದೇ ಕಾವೇರಿ.

ಕಾವೇರಿ ಮೇಲೆ ಪ್ರೀತಂ ಮನಸು

ಕಂಪನಿ ಮಾಲೀಕ ರಾಮ್‌ಗೆ ಹುಷಾರಿಲ್ಲದ ಕಾರಣ ಯಾರು ಮುಂದಿನ ಉತ್ತಾರಾಧಿಕಾರು ಎನ್ನುವುದು ಮನೆ ಮಂದಿಯನ್ನು ಕಾಡುತ್ತೆ. ಈ ವೇಳೆ ಪ್ಲಾಂಟರ್ಸ್ ಅಸೋಸಿಯೇಶನ್ ಚುನಾವಣೆಗೆ ರಾಮ್ ಮಗ ಪ್ರೀತಂ ಅನ್ನು ನಿಲ್ಲಿಸುತ್ತಾರೆ. ಆದರೆ ಪ್ರೀತಂಗೆ ಭಯ ಆತಂಕ. ಅದೆಲ್ಲವನ್ನೂ ಕಾವೇರಿ ದೂರ ಮಾಡುತ್ತಾಳೆ. ಈ ಎಲೆಕ್ಷನ್‌ ವೇಳೆ ಯಧು, ಕಾವೇರಿ ಹಾಗೂ ಪ್ರೀತಂ ಇವರು ಮೂವರು ಮನೆ ಮನೆ ತೆರಳಿ ಪ್ರಚಾರ ಮಾಡುತ್ತಾರೆ. ಈ ಚುನಾವಣೆಯಲ್ಲಿ ಪ್ರೀತಂ ಗೆಲ್ಲುತ್ತಾನೆ. ಅದೇ ಖುಷಿಯಲ್ಲಿ ಪ್ರೀತಂ ಪಾರ್ಟಿ ಕೊಡಿಸುವುದಕ್ಕೆ ಮುಂದಾಗುತ್ತಾನೆ. ಈ ಪಾರ್ಟಿಗೆ ಬಂದು ಯಧು, ಕಾವೇರಿ ಹಾಗೂ ಪ್ರೀತಂ ನಡುವೆ ಒಂದಿಷ್ಟು ಘಟನೆಗಳು ನಡೆಯುತ್ತೆ. ಈ ಘಟನೆ ಕಾವೇರಿ, ಯಧು ಹಾಗೂ ಪ್ರೀತಂ ನಡುವೆ ಸಂಬಂಧವನ್ನು ಕೊಳ್ಳಿ ಇಡುತ್ತಾ? ಅಂತಹ ಘಟನೆ ಏನು ನಡೀತು? ಅನ್ನೋದನ್ನು ತಿಳಿಯಲು 'ಚಿಕ್ಕೆಜಮಾನಿ' ನೋಡಬೇಕು. ಮುಂದಿನ ಮೂರು ವಾರ ಭರ್ಜರಿ ಟ್ವಿಸ್ಟ್ ಅಂಡ್ ಟರ್ನ್ ಅನ್ನು ಎದುರು ನೋಡಬಹುದು.

More from Filmibeat

English summary
Chikkejamani Kannada Serial February 21th episode about new twist in storyline:
Read more about: serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X