Children's day: ಕಿರುತೆರೆಯಲ್ಲಿ ಮನಗೆದ್ದ ಈ ಪುಟಾಣಿಗಳು ಓದು, ನಟನೆ ಎರಡರಲ್ಲೂ ಮುಂದು!
ಕಿರುತೆರೆ ಈಗ ಸಿನಿಮಾಗಿಂತಲೂ ದೊಡ್ಡದಾಗಿ ಬೆಳೆಯುತ್ತಿದೆ. ಅದ್ದೂರಿತನ, ವೈಭವೀಕರಣ, ಕಥೆಯಲ್ಲೂ ಅಷ್ಟೇ ಟ್ವಿಸ್ಟ್ ಅಂಡ್ ಟರ್ನಿಂಗ್. ವೀಕ್ಷಕರನ್ನ ಹಾಗೇ ಹಿಡಿದಿಟ್ಟುಕೊಂಡು ಬಿಟ್ಟಿದೆ. ಪುಟಾಣಿ ಮಕ್ಕಳನ್ನೇ ಗಮನದಲ್ಲಿಟ್ಟುಕೊಂಡು ಒಂದಷ್ಟು ರಿಯಾಲಿಟಿ ಶೋಗಳು ಬರುತ್ತವೆ.
ಸರಿಗಮಪ ಲಿಟಲ್ ಚಾಂಪ್ಸ್, ಡ್ರಾಮಾ ಜ್ಯೂನಿಯರ್ಸ್ ಸೇರಿದಂತೆ ಕೆಲ ಕಾರ್ಯಕ್ರಮಗಳಲ್ಲಿ ಮಕ್ಕಳ ಪ್ರತಿಭೆಯನ್ನು ಒರೆಗೆ ಹಚ್ಚುವ ಪ್ರಯತ್ನ ನಡೆದಿದೆ. ಈಗ ಕಿರುತೆರೆಯನ್ನು ಪುಟಾಣಿಗಳು ಆಳುತ್ತಿದ್ದಾರೆ. ಅದ್ಭುತ ಬಾಲ ಕಲಾವಿದರು ಸೀರಿಯಲ್ ಲೋಕದಲ್ಲಿ ಅದ್ಭುತವನ್ನೇ ಸೃಷ್ಟಿಸಿದ್ದಾರೆ. ಎಷ್ಟೋ ಧಾರಾವಾಹಿಗಳು ಮಕ್ಕಳ ಪಾತ್ರದ ಮೇಲೆಯೇ ಡಿಪೆಂಡ್ ಆಗಿವೆ. ಮಕ್ಕಳು ಅಷ್ಟೇ ವೀಕ್ಷಕರನ್ನು ಅಷ್ಟೇ ಆವರಿಸಿಕೊಂಡು ಬಿಟ್ಟಿದ್ದಾರೆ.

ಈಗ ಬರ್ತಾ ಇರುವಂತದು ಎಲ್ಲಾ ಮೆಗಾ ಸೀರಿಯಲ್‌ಗಳು. ದೊಡ್ಡ ಆರ್ಟಿಸ್ಟ್‌ಗಳಂತೆಯೇ ಪುಟಾಣಿ ಮಕ್ಕಳು ಕೂಡ ಫುಲ್ ಟೈಮ್ ಸೆಟ್‌ನಲ್ಲಿಯೇ ಇರಬೇಕಾಗಿದೆ. ಶಾಲೆ, ಮಕ್ಕಳ ಜೊತೆಗೆ ಆಟ, ಸ್ಪೋರ್ಟ್ಸ್ ಇದೆಲ್ಲವನ್ನು ಬಿಟ್ಟು ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಓದುವಂತ ಸ್ಥಿತಿ ಸೀರಿಯಲ್ ಪಾತ್ರ ಮಾಡುವ ಮಕ್ಕಳದ್ದು. ಈ ವಾತಾವರಣದ ಬಗ್ಗೆ ವಿರೋಧವೂ ವ್ಯಕ್ತವಾಗಿದೆ. ಮಕ್ಕಳನ್ನು ಬಾಲಕಾರ್ಮಿಕರಂತೆ ದುಡಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿ ಇದಕ್ಕೆ ಸರ್ಕಾರದಿಂದಾನೂ ರೂಲ್ಸ್ ಕೂಡ ತರಲಾಗಿದೆ. ಶಾಲೆ, ಪೋಷಕರ ಅನುಮತಿ ಪತ್ರ ಇರಲೇಬೇಕೆಂದು. ಇದೆಲ್ಲ ಏನೇ ಇರಲಿ, ಇಂದು ಕಿರುತೆರೆಯನ್ನು ಆಳುತ್ತಾ, ಜನರ ಮನಸ್ಸನ್ನು ಗೆಲ್ಲುತ್ತಿರುವ ನೆಚ್ಚಿನ ಪುಟಾಣಿಗಳ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.
ಸಿಹಿ ನಟನೆಗೆ ಎಲ್ಲರೂ ಫಿದಾ
ಸಿಹಿ ಅಲಿಯಾಸ್ ರಿತು ನಟನೆ ನೋಡಿದರೆ ಕಳೆದೋಗಬೇಕು. ಇಷ್ಟು ಚಿಕ್ಕ ವಯಸ್ಸಿಗೆ ಎಂಥದ್ದೆ ಎಕ್ಸ್‌ಪ್ರೆಷನ್ ಕೊಡುವುದಕ್ಕೆ ಹೇಳಿದರೂ ಅದನ್ನು ಕೊಡುತ್ತಾಳೆ. ಆ ಪಾತ್ರವನ್ನು ರಿಯಲ್ ಆಗಿ ಫೀಲ್ ಮಾಡಿಕೊಳ್ಳುತ್ತಾಳೆ. ಈಗ 'ಸೀತರಾಮ' ಧಾರಾವಾಹಿಯಲ್ಲಿ ಬಹಳ ಪ್ರಮುಖ ಘಟ್ಟ ತಲುಪಿದೆ. ಈಗಾಗಲೇ ಪ್ರೋಮೋದಲ್ಲಿ ಸಿಹಿಯ ಆಕ್ಸಿಡೆಂಟ್ ತೋರಿಸಿದ್ದು, ಇದೀಗ ಫಾರಿನ್ ಬೇರೆ ಹೊರಟಿದ್ದಾರೆ. ಆ ಸಮಯ ಹತ್ತಿರ ಬಂತಾ ಎಂಬ ಟೆನ್ಷನ್ ಸಿಹಿ ಫ್ಯಾನ್ಸ್‌ಗೆ ಶುರುವಾಗಿದೆ.

ಬದಲಾದ ತನ್ವಿ ನೋಡಿ ಖುಷಿ
ಭಾಗ್ಯಾಳ ಮಕ್ಕಳಾದ ತನ್ವಿ ಮತ್ತು ಗುಂಡಣ್ಣ ಎಂದರೂ ಎಲ್ಲರಿಗೂ ಇಷ್ಟ. ಈ ಮೊದಲೆಲ್ಲಾ ತನ್ವಿಯ ಅಹಂಕಾರದ ಮಾತುಗಳು ವೀಕ್ಷಕರಿಗೆ ಬೇಸರ ತರಿಸಿದ್ದವು. ಮಕ್ಕಳಿಂದ ಈ ರೀತಿಯ ಬೆಳವಣಿಗೆಯನ್ನು ತೋರಿಸಬೇಡಿ ಎಂಬ ಮನವಿಯೂ ಬಂದಿತ್ತು. ಗುಂಡಣ್ಣನ್ನಂತು ಹಾಡಿ ಹೊಗಳುತ್ತಿದ್ದರು. ಆದರೆ ಈಗ ಇಬ್ಬರು ಮುದ್ದಿನ ಮಕ್ಕಳಾಗಿ ಬಿಟ್ಟಿದ್ದಾರೆ. ಗುಂಡಣ್ಣ ಆಗಿ ನಿಹಾರ್, ತನ್ವಿ ಆಗಿ ಅಮೃತಾ ನಟಿಸುತ್ತಿದ್ದಾರೆ.
'ನಿನಗಾಗಿ' ಕೃಷ್ಣಾ ಮೋಡಿ
ಮಕ್ಕಳ ಆಟ, ಪಾಠ, ತುಂಟಾಟ ಏನೇ ಮಾಡಿದರೂನು ಎಲ್ಲವೂ ಇಷ್ಟವಾಗಿ ಬಿಡುತ್ತದೆ. ಅದರಲ್ಲೂ 'ನಿನಗಾಗಿ' ಧಾರಾವಾಹಿಯ ಕೃಷ್ಣಾ ಪಾತ್ರ ಎಲ್ಲರನ್ನು ಸೆಳೆಯುತ್ತಿದೆ. ತನ್ನ ತಂದೆಯಿಂದಿಗಿನ ಒಡನಾಟ, ಬೇಬಿ ಬೇಬಿ ಎಂದು ಕರೆಯುವ ಆ ಮುದ್ದು ಮಾತು, ಕೃಷ್ಣ ಕೆಲವೊಮ್ಮೆ ಕೊಡುವ ಕೋಪದ ಎಕ್ಸ್‌ಪ್ರೆಷನ್ ಅಬ್ಬಬ್ಬಾ ನವರಸಗಳನ್ನು ತುಂಬಿಕೊಂಡಿದ್ದಾಳೆ. ಅಂದಹಾಗೆ ಈ ಪುಟಾಣಿಯ ನಿಜವಾದ ಹೆಸರು ಸಿರಿ ಸಿಂಚನಾ.
ಅಮೃತಧಾರೆಯಲ್ಲಿ ಪ್ರಣ್ವಿ
ಇನ್ನು 'ಅಮೃತಧಾರೆ' ಎವರ್ ಗ್ರೀನ್ ಧಾರಾವಾಹಿಯಾಗಿ ಬಿಟ್ಟಿದೆ. ಎಲ್ಲಿಯೂ, ಎಂದಿಗೂ ಬೋರ್ ಎನಿಸುವುದೇ ಇಲ್ಲ. ಇತ್ತಿಚೆಗೆ ಮಗುವಿನ ಪಾತ್ರವೊಂದು ಎಂಟ್ರಿಯಾಗಿದೆ. ಗೌತಮ್ ತಂಗಿಯ ಮಗಳ ಪಾತ್ರದಲ್ಲಿ ಪ್ರಣ್ವಿ ಶೆಟ್ಟಿ ಕಾಣಿಸಿಕೊಂಡಿದ್ದಾಳೆ. ಈ ಮೊದಲು 'ಪಾರು' ಮಗಳಾಗಿ ಬಂದಿದ್ದ ಪ್ರಣ್ವಿ ಈಗ ಸುಧಾ ಮಗಳಾಗಿ ಕಾಣಿಸಿಕೊಂಡಿದ್ದಾಳೆ. ಇನ್ನು ಲಕ್ಷ್ಮೀ ನಿವಾಸದಲ್ಲಿ ಭಾವನಾಳ ಬದುಕೇ ಖುಷಿ. ಮಗಳಿಗಾಗಿಯೇ ಬದುಕಿದ್ದವಳ ಬಾಳಲ್ಲಿ ಬೇರೆ ಆಯಾಮ ತೆರೆದುಕೊಂಡಿದೆ. ಒಟ್ಟಾರೆ ಮಕ್ಕಳೆಲ್ಲ ಧಾರಾವಾಹಿಗಳಲ್ಲಿ ನಕ್ಕು ನಲಿಸುತ್ತಿದ್ದಾರೆ. ಒಮ್ಮೊಮ್ಮೆ ಅಳಿಸುವುದು ಇದೆ.


Click it and Unblock the Notifications











