ನಿನ್ನೆ ಅಪರಿಚಿತ, ಇಂದು ಪತಿ ; ಯಾರಿವನು ? ನನಗೆ ಗೊತ್ತಿಲ್ಲ ಎಂದು ಹೇಳಿ, ಡಿವೋರ್ಸ್ ನೋಟಿಸ್ ಕಳುಹಿಸಿದ ಕಿರುತೆರೆ ನಟಿ
ಸತ್ಯ ಮತ್ತು ಸುಳ್ಳಿನ ನಡುವೆ ತೆಳುಗೆರೆಯನ್ನರಿಯುವುದು ಈ ಕಾಲದಲ್ಲಿ ತುಂಬಾನೇ ಕಷ್ಟ. ಕಣ್ಣಿಗೆ ಕಂಡಿದೆಲ್ಲ ಸತ್ಯ ಆಗಿರುವುದಿಲ್ಲ. ಅನೇಕ ಸಲ ಕಥೆ ಬೇರೆಯದ್ದೇ ಇರುತ್ತೆ. ಅದರಲ್ಲಿಯೂ ಈ ಸೋಶಿಯಲ್ ಮೀಡಿಯಾ ಕಾಲದಲ್ಲಿ ಬೇರೆಯವರ ಕುರಿತು ತೀರ್ಪು ನೀಡಲು ಹಲವರು ತುದಿಗಾಲಿನಲ್ಲಿ ನಿಂತಿರುತ್ತಾರೆ. ಪರಿಚಯದವರಿದ್ದರೂ.. ತೀರಾ ಆಪ್ತರಾಗಿದ್ದರೂ ಕೂಡ ಅವರು ಹೀಗೆಯೇ ಎಂಬ ತೀರ್ಮಾನಕ್ಕೆ ಬರುವ ಕಾಲ ಇದು.
ಇಂತಹ ಕಾಲದಲ್ಲಿ ನೋಡಿಯೇ ಇರದ.. ಪರಿಚಯವೇ ಇರದ.. ವ್ಯಕ್ತಿಗಳ ವಿರುದ್ಧ ತರಾತುರಿಯಲ್ಲಿ ತೀರ್ಪು ಕೊಡಲಾಗುತ್ತೆ. ಯಾರ ಬದುಕಿನ ಹಾದಿ ಹೇಗಿರುತ್ತದೆಯೋ ಎಂಬುದನ್ನು ಅರಿಯದೇ ಹೀಗೆ ಮಾಡುವುದು ಅತ್ಯಂತ ಸುಲಭವಾದರೂ, ಕಾನೂನಿನ ಚೌಕಟ್ಟಿನಲ್ಲಿ ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು. ಈ ಹಿನ್ನೆಲೆ ಸದ್ಯ ಶ್ವೇತಾ ಸುಬ್ರಮಣಿಯನ್ ಅವರ ವ್ಯೆಯಕ್ತಿಕ ಬದುಕನ್ನು ಹಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಇಂತಹ ಕಾಲದಲ್ಲಿ ನೋಡಿಯೇ ಇರದ.. ಪರಿಚಯವೇ ಇರದ.. ವ್ಯಕ್ತಿಗಳ ವಿರುದ್ಧ ತರಾತುರಿಯಲ್ಲಿ ತೀರ್ಪು ಕೊಡಲಾಗುತ್ತೆ. ಯಾರ ಬದುಕಿನ ಹಾದಿ ಹೇಗಿರುತ್ತದೆಯೋ ಎಂಬುದನ್ನು ಅರಿಯದೇ ಹೀಗೆ ಮಾಡುವುದು ಅತ್ಯಂತ ಸುಲಭವಾದರೂ, ಕಾನೂನಿನ ಚೌಕಟ್ಟಿನಲ್ಲಿ ಸತ್ಯ ಒಂದಲ್ಲ ಒಂದು ದಿನ ಹೊರಬರಲೇಬೇಕು. ಈ ಹಿನ್ನೆಲೆ ಸದ್ಯ ಶ್ವೇತಾ ಸುಬ್ರಮಣಿಯನ್ ಅವರ ವ್ಯೆಯಕ್ತಿಕ ಬದುಕನ್ನು ಹಲವರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.
ಹೌದು, ಶ್ವೇತಾ ಸುಬ್ರಮಣಿಯನ್.. ಪಕ್ಕದ ಕಾಲಿವುಡ್‌ನ ಕಿನ್ನರಿ. ತಮಿಳು ಕಿರುತೆರೆಯ ಚೆಲುವೆ. ಕೇವಲ ಅಭಿನೇತ್ರಿ ಮಾತ್ರ ಅಲ್ಲ ನೃತ್ಯಗಾರ್ತಿ ಕೂಡ ಹೌದು. ''ಕಾನಾ ಕಾಣುಂ ಕಾಲಂಗಳ್'' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶ ಮಾಡಿದ ಶ್ವೇತಾ ''ಚಿನ್ನ ಮರುಮಗಳ್'' ಧಾರಾವಾಹಿಯ ಮೂಲಕ ತಮಿಳುನಾಡಿನೆಲ್ಲೆಡೆ ಮನೆ ಮಾತಾದರು. ಇದರಲ್ಲಿ ಇವರದ್ದು ಆದರ್ಶ ಸೊಸೆಯ ಪಾತ್ರ. ''ಮಾನಾಡ ಮಯಿಲಾಡ'' ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ಕೂಡ ಶ್ವೇತಾ ಭಾಗವಹಿಸಿದ್ದರು.
ಇಂಥಾ ಶ್ವೇತಾ ಸುಬ್ರಮಣಿಯನ್ ಜೊತೆ ನನ್ನ ಮದುವೆಯಾಗಿದೆ ಎಂದು ಕೆಲ ದಿನದ ಹಿಂದೆ ಮಧುರೈ ಮೂಲದ ಆದಿ ಎಂಬ ವ್ಯಕ್ತಿ ಬಾಂಬ್ ಎಸೆದಿದ್ದರು. ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ನಾನು ಶ್ವೇತಾ ಅವರ ಗಂಡ ಎಂದು ಯಾವುದೇ ಅಳುಕಿಲ್ಲದೇ ಧೈರ್ಯವಾಗಿ ಹೇಳಿದ್ದರು. ಆದಿಯ ಈ ಮಾತು ತಮಿಳುನಾಡಿನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿತ್ತು. ಶ್ವೇತಾ ಸುಬ್ರಮಣಿಯನ್ ಅವರಿಗೆ ಮದುವೆಯಾಗಿರುವ ವಿಚಾರವೇ ನಮಗೆ ಗೊತ್ತಿಲ್ಲವಲ್ಲಾ ಎಂದು ಕಿರತೆರೆ ಕೂಡ ತಲೆ ಕೆಡಿಸಿಕೊಂಡಿತ್ತು.
ಈ ಹಿನ್ನೆಲೆ ಶ್ವೇತಾ ತಮ್ಮ ಇನ್‌ಸ್ಟಾಗ್ರಾಮ್ ಮೂಲಕ ಪ್ರಕಟಣೆ ಹೊರಡಿಸಿದ್ದರು. ಅವನು ಯಾರು ಎನ್ನುವುದೇ ನನಗೆ ಗೊತ್ತಿಲ್ಲ, ಅವನು ಹೇಳುತ್ತಿರುವುದೆಲ್ಲ ಸುಳ್ಳು ಎಂದು ಹೇಳಿದ್ದರು. ನಾವು ಆಗಲೇ ಹೇಳಿದಂತೆ ಸತ್ಯ ಮತ್ತು ಸುಳ್ಳಿನ ನಡುವೆ ತೆಳುಗೆರೆಯನ್ನರಿಯುವುದು ಈ ಕಾಲದಲ್ಲಿ ತುಂಬಾನೇ ಕಷ್ಟ. ಇದಕ್ಕೆ ಕೈಗನ್ನಡಿ ಎಂಬಂತೆ ಶ್ವೇತಾ ಅವರು ಹೇಳುತ್ತಿರುವುದೆಲ್ಲ ಸತ್ಯ ಎಂದು ಹಲವರು ಅಂದುಕೊಂಡಿದ್ದರು. ಆದರೆ ಶ್ವೇತಾ ಸುಬ್ರಮಣಿಯನ್ ಕಳುಹಿಸಿದ ಡಿವೋರ್ಸ್ ನೋಟಿಸ್‌ದಿಂದ ಈ ಕಥೆಗೆ ಈಗ ಟ್ವಿಸ್ಟ್ ಸಿಕ್ಕಿದೆ.

ನಾನು ಯಾರು ಎನ್ನುವುದೇ ಗೊತ್ತಿಲ್ಲವಾದರೆ ನನಗೆ ಡಿವೋರ್ಸ್ ನೋಟಿಸ್‌ನ ಅವರು ಕಳುಹಿಸಿದ್ಹೇಗೆ..? ಮತ್ತು ಯಾಕೆ..? ಎಂದು ಪ್ರಶ್ನೆಯನ್ನು ಸದ್ಯ ಆದಿ ಕೇಳಿದ್ದು, ನನಗೆ ಕಳುಹಿಸಲಾದ ವಿಚ್ಚೇದನದ ನೋಟಿಸ್‌ನಲ್ಲಿ ನನ್ನ ಬಗ್ಗೆ ಹಲವು ಆರೋಪಗಳನ್ನು ಮಾಡಲಾಗಿದೆ ಎಂದು ಹೇಳಿದ್ದಾರೆ.
ನಾನು ಇಷ್ಟು ದಿನ ಮೌನವಾಗಿದ್ದೆ, ಯಾಕೆಂದರೆ ಆಕೆ ನನ್ನ ಪತ್ನಿ. ಅದಕ್ಕೂ ಮೇಲಾಗಿ ಮಹಿಳೆಯನ್ನು ಸಾರ್ವಜನಿಕವಾಗಿ ಅವಮಾನಿಸಬಾರದು ಎನ್ನುವ ಉದ್ದೇಶ ನನ್ನದು ಎಂದು ಹೇಳಿರುವ ಆದಿ ಒಂದಲ್ಲ ಒಂದು ದಿನ ಶ್ವೇತಾಗೆ ಸತ್ಯದ ಅರಿವು ಆಗಿ ಹಿಂತಿರುಗುತ್ತಾಳೆ ಎಂಬ ಭರವಸೆಯೊಂದಿಗೆ ನಾನು ಕಾಯುತ್ತಿದ್ದೆ ಎಂದು ಹೇಳಿದ್ಧಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿದ್ಧಾರೆ.
ಸದ್ಯ ಇವರ ಪೋಸ್ಟ್ ಈಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಇಬ್ಬರಲ್ಲಿ ಸತ್ಯ ಯಾರು ಹೇಳುತ್ತಿದ್ಧಾರೆ..? ಸುಳ್ಳು ಯಾರು ಹೇಳುತ್ತಿದ್ದಾರೆ..? ಎನ್ನುವ ಪ್ರಶ್ನೆ ಕೂಡ ತಮಿಳುನಾಡಿನಲ್ಲಿ ಈಗ ಹಲವರನ್ನು ಕಾಡುತ್ತಿದೆ. ಇದರ ನಡುವೆ ಶ್ವೇತಾ ಜೊತೆ ಕಳೆದ ಸುಮಧುರ ಕ್ಷಣಗಳ ಫೋಟೊಗಳನ್ನು ಕೂಡ ಆದಿ ಲೀಕ್ ಮಾಡಿದ್ದು ಸೋಶಿಯಲ್ ಮೀಡಿಯಾದಲ್ಲಿ ಇವರ ಫೋಟೊಗಳು ವೈರಲ್ ಆಗಿವೆ.


Click it and Unblock the Notifications











