Actress Kavitha Gowda: ವರ್ಷಗಳ ನಂತರ ಕಿರುತೆರೆಗೆ ಮರಳಿದ ಚಿನ್ನು.. ಯಾವ ಧಾರಾವಾಹಿ ಗೊತ್ತಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ಬಾರಮ್ಮ' ಕೂಡಾ ಒಂದು. 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯಲ್ಲಿ ಚಿನ್ನು ಆಲಿಯಾಸ್ ಲಚ್ಚಿಯಾಗಿ ಆರು ವರ್ಷಗಳ ಕಾಲ ಕಿರುತೆರೆ ವೀಕ್ಷಕರನ್ನು ರಂಜಿಸಿರುವ ಕವಿತಾ ಗೌಡ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಂತರ ಕಿರುತೆರೆಯಲ್ಲಿ ಕಾಣಿಸಿಕೊಂಡಿದ್ದು ಕಡಿಮೆಯೇ!

ಹೌದು, 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ನಂತರ ಇದೀಗ ಕವಿತಾ ಗೌಡ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಅದೂ ಹಳೇ ಪಾತ್ರದ ಮೂಲಕವೇ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಪುಣ್ಯವತಿ' ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆಗೆ ಕವಿತಾ ಗೌಡ ಕಾಲಿಟ್ಟಿದ್ದು, ಅದರಲ್ಲಿ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಗೊಂಬೆ ಪಾತ್ರಧಾರಿ ನೇಹಾ ಗೌಡ ಅವರು ಕೂಡಾ ಜೊತೆಯಾಗಿ ಕಾಣಿಸಿಕೊಂಡಿದ್ದಾರೆ.

Chinnu Alias Kavitha Gowda returned to television after years! Do you know which serial?

ಅಕ್ಕ ತಂಗಿ ಎಂದರೆ ಗೊಂಬೆ ಹಾಗೂ ಚಿನ್ನುವಿನ ಹಾಗೇ ಇರಬೇಕು ಎಂದು ಅದೆಷ್ಟು ಜನ ಬಯಸಿದ್ದರೋ ಏನೋ! ಆ ಕಾಲದಲ್ಲಿ ಗೊಂಬೆ ಚಿನ್ನು ಜೋಡಿ ಅಷ್ಟು ಮೋಡಿ ಮಾಡಿಬಿಟ್ಟಿತ್ತು. ಈಗ ಮತ್ತೆ ವರ್ಷಗಳ ನಂತರ ಆ ಜೋಡಿ ಮತ್ತೆ ಕಿರುತೆರೆಗೆ ಅತಿಥಿ ಪಾತ್ರದ ಮೂಲಕ ಎಂಟ್ರಿ ಕೊಟ್ಟಿದ್ದಾದರೂ ತಮ್ಮ ನೆಚ್ಚಿನ ಪಾತ್ರಗಳು ಮರಳಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

ತಮಿಳು ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ

ಚಿನ್ನುವಾಗಿ ಕನ್ನಡ ಕಿರುತೆರೆಯಲ್ಲಿ ಮೋಡಿ ಮಾಡಿರುವ ಕವಿತಾ ಗೌಡ ಅವರ ನಟನಾ ಪಯಣ ಶುರುವಾಗಿದ್ದು ತಮಿಳು ಧಾರಾವಾಹಿಯ ಮೂಲಕ. ತಮಿಳಿನ 'ಮಹಾಭಾರತಂ' ಧಾರಾವಾಹಿಯ ಮೂಲಕ ಕಿರುತೆರೆಗೆ ಕಾಲಿಟ್ಟ ಕವಿತಾ ಗೌಡ ಮುಂದೆ ತೆಲುಗಿನ 'ಸ್ವಾತಿ ಚಿನಕುಲು' ವಿಲ್ಲೂ ನಟಿಸಿ ಸೈ ಎನಿಸಿಕೊಂಡರು. ನಂತರ 'ಲಕ್ಷ್ಮಿ ಬಾರಮ್ಮ' ಧಾರಾವಾಹಿಯ ಚಿನ್ನು ಆಗಿ ಬದಲಾದ ಆಕೆ ಕರುನಾಡಿನಾದ್ಯಂತ ಮನೆ ಮಾತಾಗಿಬಿಟ್ಟರು.

Chinnu Alias Kavitha Gowda returned to television after years! Do you know which serial?

ರಿಯಾಲಿಟಿ ಶೋವಿನಲ್ಲೂ ಭಾಗಿ

ಮುಂದೆ ತಮಿಳಿನ 'ನೀಲಿ', ಕನ್ನಡದ 'ವಿದ್ಯಾ ವಿನಾಯಕ', ತಮಿಳಿನ 'ಪಾಂಡ್ಯನ್ ಸ್ಟೋರ್' ತಮಿಳಿನ 'ಅಬ್ಬೆ ಸಿವಂ'ನಲ್ಲಿ ನಟಿಸಿದ್ದ ಈಕೆ ರಿಯಾಲಿಟಿ ಶೋಗಳಲ್ಲಿ ಮಿಂಚಿದ ಪ್ರತಿಭೆ. ಬಿಗ್ ಬಾಸ್ ಕನ್ನಡ ಸೀಸನ್ 6ರಲ್ಲಿ ಸ್ಪರ್ಧಿ ಕಾಣಿಸಿಕೊಂಡಿದ್ದ ಕವಿತಾ ಗೌಡ ಸೆಕೆಂಡ್ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು. 'ತಕಧಿಮಿತ' ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲಿ ಕಾಣಿಸಿಕೊಂಡಿದ್ದ ಈಕೆ ಮುಂದೆ 'ಕುಕ್ ವಿತ್ ಕಿರಿಕ್ಕು'ನಲ್ಲಿ ಭಾಗವಹಿಸಿದ್ದು ಇದರ ಫೈನಲಿಸ್ಟ್ ಆಗಿ ಹೊರಹೊಮ್ಮಿದ್ದರು. ಇದರ ಜೊತೆಗೆ ಡ್ಯಾನ್ಸ್ ಡ್ಯಾನ್ಸ್ ರಿಯಾಲಿಟಿ ಶೋವಿನಲ್ಲೂ ಈಕೆ ಕಾಣಿಸಿಕೊಂಡಿದ್ದರು.

ಹಿರಿತೆರೆಯಲ್ಲೂ ಮೋಡಿ

'ಶ್ರೀನಿವಾಸ ಕಲ್ಯಾಣ' ಸಿನಿಮಾದ ಮೂಲಕ ಹಿರಿತೆರೆಗೆ ಪಾದಾರ್ಪಣೆ ಮಾಡಿದ ಕವಿತಾ ಗೌಡ ಮುಂದೆ 'ಫಸ್ಟ್ ಲವ್', 'ಗುಬ್ಬಿ ಮೇಲೆ ಬ್ರಹ್ಮಾಸ್ತ್ರ', 'ಬೀರಬಲ್ ಟ್ರೈಯಾಲಜಿ ಕೇಸ್', 'ಗೋವಿಂದ ಗೋವಿಂದ' ಹಾಗೂ 'ಹುಟ್ಟುಹಬ್ಬದ ಶುಭಾಶಯಗಳು' ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.

More from Filmibeat

English summary
Lakshmi Baramma serial fame Kavita Gowda is now back on television as a star.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X