ಮುಕ್ತಾಯಗೊಂಡ ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ ಧಾರಾವಾಹಿ.. ರಘು ಗೌಡ ಹೇಳಿದ್ದೇನು ಗೊತ್ತಾ?

By ಅನಿತಾ ಬನಾರಿ

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ನಮ್ಮನೆ ಯುವರಾಣಿ" ಧಾರಾವಾಹಿಯಲ್ಲಿ ನಾಯಕ ಸಾಕೇತ್ ರಾಜ್ ಗುರು ಆಗಿ ನಟಿಸಿದ್ದರು ನಟ ರಘು ಗೌಡ. "ನಮ್ಮನೆ ಯುವರಾಣಿ" ಧಾರಾವಾಹಿಯ ನಂತರ ತೆಲುಗು ಕಿರುತೆರೆಗೆ ಕಾಲಿಟ್ಟ ರಘು ಗೌಡ "ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯಲ್ಲಿ ಬಣ್ಣ ಹಚ್ಚಿದ್ದರು.

"ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯಲ್ಲಿ ನಾಯಕ ಮಿತ್ರ ಆಗಿ ನಟಿಸಿದ್ದ ರಘು ಗೌಡ ಮನೋಜ್ಞ ನಟನೆಯ ಮೂಲಕ ಮನ ಸೆಳೆದಿದ್ದರು.ಜೀ ತೆಲುಗು ಕುಟುಂಬಂ ಅವಾರ್ಡ್ಸ್ ನಲ್ಲಿ ಉತ್ತಮ ನವನಾಯಕ ಪ್ರಶಸ್ತಿಯನ್ನು ರಘು ಗೌಡ ಅವರು ಪಡೆದುಕೊಂಡಿದ್ದರು. ಇನ್ನು ಇದರ ಜೊತೆಗೆ "ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯು ಕನ್ನಡಕ್ಕೆ ಡಬ್ ಆಗಿದ್ದು ಜೀ ಕನ್ನಡ ವಾಹಿನಿಯಲ್ಲಿ ಸೌಭಾಗ್ಯವತಿ ಹೆಸರಿನಲ್ಲಿ ಪ್ರಸಾರವಾಗುತ್ತಿತ್ತು.

Chiranjeevi Lakshmi Saubhagyavati serial has ended Do you know what Raghu Gowda said

ಇದೀಗ ತೆಲುಗು ಧಾರಾವಾಹಿ "ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯು ಇದೀಗ ಮುಕ್ತಾಯಗೊಂಡಿದೆ. ಕೊನೆಯ ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದ ರಘು ಗೌಡ "ಒನ್ ಲಾಸ್ಟ್ ಟೈಮ್ ಆಸ್ ಮಿತ್ರ" ಎಂದು ಬರೆದುಕೊಂಡಿದ್ದರು. ಇದರ ಜೊತೆಗೆ "ವಿಲ್ ಬಿ ಬ್ಯಾಕ್ ವಿದ್ ಡಿಫರೆಂಟ್ ನೇಮ್ ಸೂನ್" ಎಂದು ಆಕೆ ಬರೆದುಕೊಂಡಿದ್ದರು.

ಸದ್ಯ ಕನ್ನಡ ಕಿರುತೆರೆಯಿಂದ ದೂರವಿದ್ದು ಪರಭಾಷೆಯ ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ರಘು ಗೌಡ ಅವರ ನಟನಾ ಪಯಣ ಶುರುವಾಗಿದ್ದು ರವಿ ಗರಣಿ ನಿರ್ದೇಶನದ "ಮಿಸ್ಟರ್ ಆ್ಯಂಡ್ ಮಿಸೆಸ್ ರಂಗೇಗೌಡ" ಧಾರಾವಾಹಿಯ ಮೂಲಕ. ಆ ಧಾರಾವಾಹಿಯಲ್ಲಿ ನಾಯಕ ರಂಗೇಗೌಡ ಆಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದ ರಘು ಗೌಡ ನಂತರ ನಟಿಸಿದ್ದು "ಜೀವನ ಚೈತ್ರ" ಧಾರಾವಾಹಿಯಲ್ಲಿ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ಜೀವನಚೈತ್ರ" ಧಾರಾವಾಹಿಯಲ್ಲಿ ನಾಯಕ ಆಗಿ ಅಭಿನಯಿಸಿದ್ದ ರಘು ಗೌಡ ಮುಂದೆ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ "ದೇವಯಾನಿ" ಧಾರಾವಾಹಿಯಲ್ಲಿ ನಾಯಕ ಶ್ರೀವತ್ಸನಾಗಿ ಮೋಡಿ ಮಾಡಿದರು. "ದೇವಯಾನಿ" ಧಾರಾವಾಹಿಯ ನಂತರ "ನಮ್ಮನೆ ಯುವರಾಣಿ" ಧಾರಾವಾಹಿಯಲ್ಲಿ ನಾಯಕನಾಗಿ ಮಿಂಚಿದ ರಘು ಗೌಡ ನಂತರ ಮಿಂಚಿದ್ದು ಪರಭಾಷೆಯ ಕಿರುತೆರೆಯಲ್ಲಿ.

"ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ಮೋಡಿ ಮಾಡುತ್ತಿದ್ದ ರಘು ಗೌಡ ಅವರು ವೆಬ್ ಸಿರೀಸ್ ನಲ್ಲಿಯೂ ಕಮಾಲ್ ಮಾಡಿದರು. "ಸೂಪರ್ ಕಪಲ್" ಎನ್ನುವ ವೆಬ್ ಸಿರೀಸ್ ನಲ್ಲಿ ರಘು ಗೌಡ ಮುಖ್ಯ ಪಾತ್ರಧಾರಿಯಾಗಿ ಇವರು ಅಭಿನಯಿಸಿದ್ದು ತೇಜಸ್ವಿನಿ ಗೌಡ ಜೊತೆಗೆ ಬಣ್ಣ ಹಚ್ಚಿದ್ದಾರೆ.

"ಚಿರಂಜೀವಿ ಲಕ್ಷ್ಮಿ ಸೌಭಾಗ್ಯವತಿ" ಧಾರಾವಾಹಿಯ ಮೂಲಕ ಪರಭಾಷೆಯ ಕಿರುತೆರೆಯಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ರಘು ಗೌಡ ಅವರು ಸದ್ಯ ಕನ್ನಡ ಕಿರುತೆರೆಯಿಂದ ದೂರವಿದ್ದಾರೆ. ಇದೀಗ ಈ ತೆಲುಗು ಧಾರಾವಾಹಿಯು ಮುಕ್ತಾಯಗೊಂಡಿದ್ದು ಇನ್ನು ಮುಂದೆ ರಘು ಗೌಡ ಕನ್ನಡ ಕಿರುತೆರೆಗೆ ಮರಳುತ್ತಾರಾ ಎಂಬುದು ಕಾದುನೋಡಬೇಕಾಗಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X