For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿ ಸರ್ಜಾ ಪತ್ನಿ ಮೇಘನಾ ರಾಜ್‌ಗಾಗಿ ಮಾಡಿಟ್ಟ ಆಸ್ತಿ ಇದು!

  |

  ಕನ್ನಡ ಚಿತ್ರರಂಗದಲ್ಲಿ ನಟನಾಗಿ ಗುರುತಿಕೊಂಡಿದ್ದ ಚಿರಂಜೀವಿ ಸರ್ಜಾ ಅಕಾಲಿಕ ಮರಣ ಅಭಿಮಾನಿ, ಸಿನಿಮಾರಂಗ ಪ್ರೇಕ್ಷಕ ಬಳಗ ಎಲ್ಲರಲ್ಲೂ ನೋವು ಉಂಟು ಮಾಡಿತ್ತು.‌ಇದ್ದಕ್ಕಿದ್ದ ಹಾಗೆ ಹೃದಯಾಘಾತದಿಂದ ಚಿರಂಜೀವಿ ಸರ್ಜಾ ಮರಣ ಹೊಂದಿದರು. ಚಿರು ಇಲ್ಲವಾದ ಬಳಿಕ ಅವರ ಪತ್ನಿ‌ ಮೇಘನಾ ಎಷ್ಟು ನೋವು ಅನುಭವಿಸಿರಬಹುದು ಎನ್ನುವುದು ಊಹೆಗೂ ಮೀರಿದ ಕಲ್ಪನೆ. ಸ್ಯಾಂಡಲ್‌ವುಡ್‌ನಲ್ಲಿ ಅಚ್ಚು- ಮೆಚ್ಚಿನ ಜೋಡಿಗಳಲ್ಲಿ ಚಿರು, ಮೇಘನಾ ಜೋಡಿ ಕೂಡ ಒಂದು. ಆದರೆ ಚಿರು ಮೇಘನಾ ಅವರನ್ನು ಅರ್ಧಕ್ಕೆ ಕೈ ಬಿಟ್ಟು ಹೋಗಿದ್ದಾರೆ. ಆದರೆ ಅದೆಷ್ಟೇ ನೋವಿದ್ದರು ಮಗುವಿಗಾಗಿ ಕುಗ್ಗದೆ ಎದ್ದು ನಿಂತಿದ್ದಾರೆ ಛಲಗಾತಿ ಮೇಘನಾ.

  ಮಗು ಆದ ಬಳಿಕ ಸದ್ಯ ಒಂದೊಂದೇ ಕಾರ್ಯಗಳನ್ನು ಆರಂಭಿಸಿದ್ದಾರೆ. ಎಲ್ಲರೂ ಸಂತೋಷವಾಗಿ ಇರುವುದು ಎಂದರೆ ಚಿರುಗೆ ಬಲು ಇಷ್ಟ ಎಂದು ಮೇಘನಾ ಹಲವು ಬಾರಿ ‌ಹೇಳಿಕೊಂಡಿದ್ದಾರೆ. ಅಂತೆಯೇ ಮೇಘನಾ ಅವರು ಈಗ ಟಿವಿ ಕಾರ್ಯಕ್ರಮದ ಮೂಲಕ ಎಲ್ಲರ ಮುಂದೆ ಬಂದಿದ್ದಾರೆ.

  'ಗೋಲ್ಡನ್ ಗ್ಯಾಂಗ್'ನಲ್ಲಿ ಪ್ರಜ್ವಲ್, ರಾಗಿಣಿ, ಮೇಘನಾ ರಾಜ್: ಅಗಲಿದ ಚಿರು ಸರ್ಜಾಗೆ ಅರ್ಪಣೆ
  ಇನ್ನು ಇತ್ತೀಚೆಗೆ ಮೇಘನಾ ರಾಜ್ ಗೋಲ್ಡನ್ ಸ್ಟಾರ್ ಗಣೇಶ್ ಅವರು ನಡೆಸಿ ಕೊಡುವ, ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ಕಾರ್ಯಕ್ರಮದಲ್ಲಿ ಮೇಘನಾ ರಾಜ್ ಹಾಗೂ ಅವರ ಸ್ನೇಹಿತರು ಭಾಗಿ ಆಗಿದ್ದರು. ಚಿರು ಬಗ್ಗೆ ಹಾಗೂ ಅವರ ಸ್ನೇಹಿತರ ಬಗ್ಗೆ ಮೇಘನಾ ಅವರು ಹಲವಾರು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಇದೇ ಸಂದರ್ಭದಲ್ಲಿ ‌ಪತಿ ಚಿರಂಜೀವಿ ‌ಸರ್ಜಾ ತಮಗಾಗಿ ಬಿಟ್ಟು ಹೋಗಿರುವ ಆಸ್ತಿಯ ಬಗ್ಗೆಯೂ ಮಾತನಾಡಿದ್ದಾರೆ.

  "ಚಿರು ನನಗಾಗಿ ಬಿಟ್ಟುಹೋಗಿರುವ ದೊಡ್ಡ ಆಸ್ತಿಯೆಂದರೆ ಅವರ ಸ್ನೇಹಿತರು. ನನ್ನ ಕಷ್ಟದ ಸಂದರ್ಭದಲ್ಲಿ ಅವರೆಲ್ಲರೂ ನಿಂತಿದ್ದಾರೆ. ಪ್ರತಿಯೊಂದು ಹೆಜ್ಜೆಯಲ್ಲಿ ಅವರ ಸ್ನೇಹಿತರು ನನ್ನ ಜೊತೆಗಿದ್ದಾರೆ. ಚಿರು ಹೇಳಿದ ಹಾಗೆ ಅವರ ಸ್ನೇಹಿತರೇ ನನಗೆ ಎಲ್ಲ ಆಗಿದ್ದಾರೆ ಎಲ್ಲರಿಗೂ ಧನ್ಯವಾದ. ಇದೆ ನನಗೆ ಚಿರು ಬಿಟ್ಟು ಹೋದ ದೊಡ್ಡ ಆಸ್ತಿ. ಚಿರು ಕಟ್ಟಿಕೊಟ್ಟಿರುವ ಗೂಡು." ಎಂದು ಹೇಳುತ್ತಾ ಮೇಘನಾ ಭಾವುಕರಾದರು.

  ಕಿರುತೆರೆಗೆ ಎಂಟ್ರಿಕೊಟ್ಟ ಮೇಘನಾ ರಾಜ್! ಚಿರುವನ್ನು ನೆನೆದು ಕಣ್ಣೀರು
  ಚಿರು ಅಗಲಿಕೆಯ ನಂತರ ಮಗುವಿನ ಆರೈಕೆಯಲ್ಲಿ ಇದ್ದ ಮೇಘನಾ ಅವರು ಯಾವ ಸಿನಿಮಾ ಮತ್ತು ಕಾರ್ಯಕ್ರಮಗಳಲ್ಲೂ ಕಾಣಿಸಿಕೊಳ್ಳುತ್ತಾ ಇರಲಿಲ್ಲ. ಆದರೆ ಈಗ ನಟಿ ಮೇಘನಾ ರಾಜ್ ಅವರು ಇತ್ತೀಚೆಗೆ ಡ್ಯಾನ್ಸ್ ರಿಯಾಲಿಟಿ ಶೋ ಕಾರ್ಯಕ್ರಮದಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡರು. ನಿಧಾನವಾಗಿ ಅವರು ಚಿರು ನೆನಪಲ್ಲೇ ತಮ್ಮ ಕಾರ್ಯಗಳನ್ನು ಆರಂಭಿಸಿದ್ದಾರೆ.

  English summary
  Here Is The Details About What Chiranjeevi Sarja Made As Asset For Meghana raj
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X