For Quick Alerts
  ALLOW NOTIFICATIONS  
  For Daily Alerts

  'ಅಮ್ಮ' ಎನ್ನು ಅಂದರೆ 'ಅಪ್ಪಾ' ಎಂದ ರಾಯನ್: ಕ್ಯೂಟ್ ವಿಡಿಯೋ ಹಂಚಿಕೊಂಡ ಮೇಘನಾ

  |

  ನಟಿ ಮೇಘನಾ ರಾಜ್ ಸದಾ ತಮ್ಮ ಮಗನ ವಿಚಾರದಲ್ಲಿ ಸುದ್ದಿ ಆಗುತ್ತಾ ಇರುತ್ತಾರೆ. ಮೇಘನಾ, ಚಿರು ಪುತ್ರ ರಾಯನ್ ರಾಜ್ ಕರುನಾಡ ಜನರ ಹೃದಯಲ್ಲಿ ಸ್ಥಾನ ಪಡೆದಿರುವ ಮುದ್ದು ಮಗು. ರಾಯನ್ ಆಟ ತುಂಟಾಟ ನೋಡಲು ಸಹಸ್ರಾರು ಅಭಿಮಾನಿಗಳು ಕಾಯುತ್ತಾ ಇರುತ್ತಾರೆ. ಹಾಗಾಗಿ ರಾಯನ್ ರಾಜ್ ಈಗಲೇ ಜನರ ಮನಸಲ್ಲಿ ಪುಟ್ಟ ಹೀರೋನಂತೆ ಕಂಗೊಳಿಸುತ್ತಿದ್ದಾನೆ.

  ಮಗುವಿಗೆ ವರ್ಷ ತುಂಬಿದ ಬಳಿಕ ಮೇಘನಾ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗಿದ್ದಾರೆ. ಒಂದೊಂದೆ ಸಿನಿಮಾ ಮತ್ತು ಕಾರ್ಯಕ್ರಮಗಳ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಮೇಘನಾ ಅವರು ಈಗ ಟಿವಿ ಕಾರ್ಯಕ್ರಮದ ಮೂಲಕ ಎಲ್ಲರ ಮುಂದೆ ಬಂದಿದ್ದಾರೆ. ಜೊತೆಗೆ ಸಿನಿಮಾಗಳಲ್ಲೂ ಅಭಿನಯ ಮುಂದುವರೆಸಿದ್ದಾರೆ.

  ಚಿರು ಸರ್ಜಾ ದೂರಾಗಿ ಎರಡು ವರ್ಷ: ನೆನಪು ಸದಾ ಹಸಿರುಚಿರು ಸರ್ಜಾ ದೂರಾಗಿ ಎರಡು ವರ್ಷ: ನೆನಪು ಸದಾ ಹಸಿರು

  ಮಕ್ಕಳು ಮುದ್ದು, ಮುದ್ದಾಗಿ ತೊದಲು ನುಡಿಯಲ್ಲಿ ಮಾತಾಡುವುದೇ ಬಲು ಚೆಂದ. ರಾಯನ್‌ಗೆ ಒಂದು ವರ್ಷ ತುಂಬಿದೆ. ನಿಧಾನವಾಗಿ ರಾಯನ್ ಮಾತು ಕಲಿಯುತ್ತಿದ್ದಾನೆ. ಮಗನ ಬಗ್ಗೆ ಸದಾ ಫೋಟೋ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದ, ನಟಿ ಮೇಘನಾ ರಾಜ್ ಈಗ ರಾಯನ್ ಮೊದಲ ತೊದಲು ನುಡಿಯ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದಾರೆ.

  ಚಿರು ನೆನಪಲ್ಲಿ ಕೇಕ್ ಕಟ್ ಮಾಡಿದ ಮೇಘನಾ ರಾಜ್!ಚಿರು ನೆನಪಲ್ಲಿ ಕೇಕ್ ಕಟ್ ಮಾಡಿದ ಮೇಘನಾ ರಾಜ್!

  ಅಮ್ಮನ ಬದಲು 'ಅಪ್ಪಾ' ಎಂದ ರಾಯನ್!

  ಪುಟ್ಟ ಕಂದ ರಾಯನ್ ರಾಜ್ ಮಾತಾಡಿರುವ ವಿಡಿಯೋವನ್ನು, ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ರಾಯನ್ ಅಮ್ಮ ಹೇಳಿಕೊಡುವ ತೊದಲು ನುಡಿಯನ್ನು ಆಡಿದ್ದಾನೆ. ಮೇಘನಾ ರಾಜ್ ರಾಯನ್‌ಗೆ ಅಮ್ಮ ಎಂದು ಹೇಳಿಕೊಡುತ್ತಾರೆ. ಆದರೆ ಎರಡು ಮಾಡಿ ಅಮ್ಮ ಎನ್ನುವ ರಾಯನ್ ಮೂರನೇ ಬಾರಿ ಅಮ್ಮ ಎನ್ನವು ಬದಲು ಅಪ್ಪ ಎಂದು ಹೇಳಿ ಖುಷಿ ಪಡ್ತಾನೆ.

  ರಾಯನ್ ಬಾರಿ ಮೆಚ್ಚುಗೆ ವ್ಯಕ್ತ!

  ರಾಯನ್ ಅಪ್ಪ ಎಂದು ಮುದ್ದಾಗಿ ಕರೆಯುವ ಈ ವಿಡಿಯೋವನ್ನು ಮೇಘನಾ ರಾಜ್ ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡದವರು ರಾಯನ್ ರಾಜ್ ತಂದೆ ಚಿರಂಜೀವಿಯನ್ನು ನೆನಪಿಸಿಕೊಂಡಿದ್ದಾರೆ. ರಾಯನ್ ಈಗ ಸ್ಪಷ್ಟವಾಗಿ ಬಾಯಿ ತುಂಬ ಅಪ್ಪ, ಅಮ್ಮ ಎಂದು ಕರೆಯುತ್ತಾ. ವಿಡಿಯೋವನ್ನು ವಿಡಿಯೋ ವೈರಲ್ ಲಿಸ್ಟ್ ಸೇರಿದ್ದು ಸಾಕಷ್ಟು ಮೆಚ್ಚುಗೆ ಪಡೆದಿದೆ.

  ತಾತ, ಅಪ್ಪ, ಅಮ್ಮ ಎನ್ನುತ್ತಾನೆ ರಾಯನ್!

  ಇನ್ನು ಮೇಘನಾ ಹಂಚಿಕೊಂಡ ಹಳೆ ವಿಡಿಯೋದಲ್ಲಿ ರಾಯನ್ ರಾಜ್ ಅಪ್ಪ ಎನ್ನುವುದು ಮಾತ್ರವಲ್ಲ. ತಾತ, ಅಮ್ಮ, ಪಪ್ಪ ಎಂದಿದ್ದಾನೆ. ರಾಯನ್ ತೊದಲು ನುಡಿಯಲ್ಲಿ ಅಮ್ಮ, ತಾತ, ಅಪ್ಪ ಎಂದಿರುವ ವಿಡಿಯೋ ಕೂಡ ವೈರಲ್ ಆಗಿತ್ತು. ಮೇಘನಾ ರಾಜ್ ಆಗಾಗಾ ತಮ್ಮ ಮಗನ ಬಗ್ಗೆ ಒಂದಲ್ಲಾ ಒಂದು ಫೋಟೊ ವಿಡಿಯೋ ಹಂಚಿಕೊಳ್ಳುತ್ತಾರೆ.

  ಸಿನಿಮಾಗಳಲ್ಲೂ ನಟಿ ಮೇಘನಾ ಅಭಿನಯ!

  ಕಿರುತೆಯ ಕಾರ್ಯಕ್ರಮದ ಜೊತೆಗೆ ನಟಿ ಮೇಘನಾ ರಾಜ್ ಸಿನಿಮಾಗಳಲ್ಲಿ ಸಕ್ರಿಯವಾಗಿ ತೊಡಗಿದ್ದಾರೆ. ಈಗಾಗಲೇ ಅವರು ಒಂದೆರಡು ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ. ಜೊತೆಗೆ ಅವರ ಫಸ್ಟ್ ಲುಕ್ ಕೂಡ ರಿವೀಲ್ ಆಗಿದೆ. ಇತ್ತೀಚೆಗೆ ಚಿತ್ರದ ಶೂಟಿಂಗ್‌ನಲ್ಲಿ ಭಾಗಿ ಆಗುವ ಬಗ್ಗೆ ಫೊಟೋ ಒಂದನ್ನು ಕೂಡ ಮೇಘನಾ ಹಂಚಿಕೊಂಡಿದ್ದರು. ಒಟ್ಟಾರೆ ಮೇಘನಾ ತಮ್ಮ ವೃತ್ತಿ ಬದುಕಿನಲ್ಲಿ ಹೆಚ್ಚು ಸಕ್ರಿಯ ಆಗುತ್ತಿದ್ದು, ಅಭಿಮಾನಿಗಳ ಮುಂದಿದೆ ಸಿನಿಮಾಗಳ ಮೂಲಕ ಮತ್ತೆ ಬರಲಿದ್ದಾರೆ.

  English summary
  Chiranjeevi Sarja Son Rayan Raj Sarja Says Appa, Meghana Raj Shared Cute Video,

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X