For Quick Alerts
  ALLOW NOTIFICATIONS  
  For Daily Alerts

  ಟಿವಿಗೂ ಕಾಲಿಟ್ಟ ಡಬ್ಬಿಂಗ್ ಸಿನಿಮಾ: ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ ಚಿರಂಜೀವಿ ಸಿನಿಮಾ

  |

  ತೆಲುಗು ಮೆಗಾಸ್ಟಾರ್ ಚಿರಂಜೀವಿ ಅಭಿನಯದ ಸೂಪರ್ ಹಿಟ್ ಸೈರಾ ನರಸಿಂಹ ರೆಡ್ಡಿ ಸಿನಿಮಾ ರಿಲೀಸ್ ಆಗಿ ತಿಂಗಳುಗಳಾಗಿದೆ. ದೊಡ್ಡ ಮಟ್ಟಕ್ಕೆ ಸಕ್ಸಸ್ ಕಂಡಂತೆ ಸೈರಾ ಸಿನಿಮಾ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ. ಮೆಗಾ ಸ್ಟಾರ್ ಚಿರಂಜೀವಿ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರು ಅಭಿನಯಿಸಿರುವ ಸೈರಾ ಸಿನಿಮಾ ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿದೆ.

  ಇತ್ತೀಚಿಗೆ ಡಬ್ಬಿಂಗ್ ಸಿನಿಮಾ ದೊಡ್ಡ ಮಟ್ಟಕ್ಕೆ ಕನ್ನಡದಲ್ಲಿ ತೆರೆಗೆ ಬರುತ್ತಿವೆ. ಈಗಾಗಲೆ ಸಾಕಷ್ಟು ಡಬ್ಬಿಂಗ್ ಸಿನಿಮಾಗಳು ಕನ್ನಡದಲ್ಲಿ ರಿಲೀಸ್ ಆಗಿವೆ. ಆದರೆ ದೊಡ್ಡ ಮಟ್ಟಕ್ಕೆ ಕಿರುತೆರೆಗೆ ಎಂಟ್ರಿ ಕೊಟ್ಟಿರಲಿಲ್ಲ. ಆದರೀಗ ಮೊದಲ ಬಾರಿಗೆ ಚಿರಂಜೀವಿ ಅಭಿನಯದ ಸೈರಾ ಸಿನಿಮಾ ಟಿವಿಯಲ್ಲಿ ಪ್ರಸಾರವಾಗುತ್ತಿದೆ.

  ಕ್ರಿಕೆಟರ್ಸ್ ಮುಂದೆ ಹಾಜರ್ ಆದ ಸುದೀಪ್, ಸಲ್ಮಾನ್ ಭಾಯ್.!ಕ್ರಿಕೆಟರ್ಸ್ ಮುಂದೆ ಹಾಜರ್ ಆದ ಸುದೀಪ್, ಸಲ್ಮಾನ್ ಭಾಯ್.!

  ಉದಯ ಟಿವಿಯಲ್ಲಿ ಸೈರಾ ನರಸಿಂಹ ರೆಡ್ಡಿ ಪ್ರಸಾರವಾಗುತ್ತಿದೆ. ಇದೇ ತಿಂಗಳು 22ರಂದು ಭಾನುವಾರ ಸಂಜೆ 6 ಗಂಟೆಗೆ ಪ್ರಸಾರವಾಗಲಿದೆ. ಕನ್ನಡಿಗರು ಸೈರಾ ಸಿನಿಮಾ ನೋಡದಿದ್ದವರು ಮನೆಯಲ್ಲಿಯೆ ಕುಳಿತು ಸಿನಿಮಾ ವೀಕ್ಷಿಸ ಬಹುದು. ಚಿರಂಜೀವಿ, ಅಮಿತಾಬ್ ಬಚ್ಚನ್ ಕನ್ನಡದಲ್ಲಿ ಮಾತನಾಡುವುದನ್ನು ಮನೆಯಲ್ಲಿಯೆ ಕುಳಿತು ಸಂತಸ ಪಡಬಹುದು.

  ಸೈರಾ ಸಿನಿಮಾ ಕನ್ನಡ ಸೇರಿದಂತೆ ಐದು ಬಾಷೆಯಲ್ಲಿ ತೆರೆಗೆ ಬಂದಿತ್ತು. ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಮೂಡಿಬಂದ ಸಿನಿಮಾ. ಸೈರಾ ತೆಲುಗು ಸಿನಿಮಾವಾದರು ಕನ್ನಡಿಗರಿಗೆ ಕೊಂಚ ವಿಶೇಷವಾದ ಸಿನಿಮಾ. ಯಾಕಂದರೆ ಕಿಚ್ಚ ಸುದೀಪ್ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪ್ರಮುಖ ಪಾತ್ರದಲ್ಲಿ ಅಭಿನಯ ಚಕ್ರವರ್ತಿ ಮಿಂಚಿದ್ದಾರೆ.

  English summary
  Mega star Chiranjeevi and other big stars starrer saira narasimha reddy will telecasting kannada in tv.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X