Chukki thaare: ಹುಟ್ಟುಹಬ್ಬಕ್ಕೆ ನಗುವಿಲ್ಲ, ಕೇಕ್ ತಿನ್ನುವ ಸ್ವಾತಂತ್ರ್ಯವಿಲ್ಲ; ಮೊದಲ ಎಪಿಸೋಡ್ ಹೀಗಿತ್ತು!

By ಎಸ್ ಸುಮಂತ್

ಕಲರ್ಸ್ ಕನ್ನಡದಲ್ಲಿ ಹೊಸ ಧಾರವಾಹಿಯೊಂದು ಶುರುವಾಗಿದೆ. ಅದೇ ಚುಕ್ಕಿ-ತಾರೆ. ಕೆಲವು ದಿನಗಳಿಂದ ಚುಕ್ಕಿ ಹಾಗೂ ಇಬ್ಬನಿ ತಮ್ಮ ತಮ್ಮ ಕುಟುಂಬಸ್ಥರನ್ನು ಪರಿಚಯ ಮಾಡಿಕೊಟ್ಟಿದ್ದಾರೆ. ಹೀಗಾಗಿ ಅವರವರ ಕುಟುಂಬದಲ್ಲಿ ಆತ್ಮೀಯರು ಯಾರು? ಶತ್ರುಗಳು ಯಾರು? ಪ್ರಭಾವಿ ಯಾರು ಎಂಬುದೆಲ್ಲಾ ಗೊತ್ತಾಗಿದೆ. ಅದರ ಜೊತೆಗೆ ಯಾರ ಮನೆಯಲ್ಲಿ ಹೆಚ್ಚು ನೆಮ್ಮದಿ, ಸುಖ ಸಂತೋಷವಿದೆ ಎಂಬುದು ತಿಳಿದಿದೆ.

ಹಲ್ಲಿದ್ದವನಿಗೆ ಕಡಲೆ ಇಲ್ಲ.. ಕಡಲೆ ಇದ್ದವನಿಗೆ ಹಲ್ಲು ಇಲ್ಲ ಎಂಬುದು ಗಾದೆ ಮಾತು. ಆ ಮಾತಿಗೆ ತಕ್ಕ ಹಾಗೇ ಇರುವುದು ಇಬ್ಬನಿ ಹಾಗೂ ಚುಕ್ಕಿಯ ಜೀವನ. ಇಬ್ಬರ ಜೀವನದಲ್ಲೂ ಇರುವ ಕೊರತೆ ಯಾವಾಗ ತೀರುತ್ತೆ ಎಂಬುದೇ ಧಾರಾವಾಹಿಯ ಕುತೂಹಲದ ಘಟ್ಟವಾಗಿದೆ.

Chukki thaare kannada serial Written Update on March 18th episode

ಇಂಜೆಕ್ಷನ್ ಹಾಕಿಸಿದರೂ ಗೊತ್ತಗಲ್ಲ

ಚುಕ್ಕಿಯ ತಂದೆ-ತಾಯಿಗೆ ಮಗಳೇ ಎಲ್ಲಾ. ಅವಳಿಗೆ ಸಣ್ಣ ನೋವಾದರೂ ಸಹಿಸುವುದಿಲ್ಲ. ಮಗಳಿಗೆ ಕಾಲಿನ ಸಮಸ್ಯೆ ಇದೆ ಎಂದು ಗೊತ್ತಿದ್ದರೂ, ತಮಗೆ ಬಡತನವಿದ್ದರೂ ಆ ಬಡತನ ಅವಳಿಗೆ ನೋವು ಕೊಡದಂತೆ ನೋಡಿಕೊಳ್ಳುತ್ತಿದ್ದಾರೆ. ಮಗಳಿಗೆ ಸ್ವಲ್ಪವೂ ನೋವಾಗದಂತೆ ಕಾಯುತ್ತಾನೆ. ಅದಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದರೆ ಅವಳಿಗೆಲ್ಲಿ ಭಯವಾಗುತ್ತೋ ಅಂತ, ಆಸ್ಪತ್ರೆಯ ವಾತಾವರಣವನ್ನೇ ಬದಲಾಯಿಸಿದ್ದಾನೆ. ಡಾಕ್ಟರ್ ಕೂಡ, ಒಬ್ಬ ಸ್ವಾಮೀಜಿಯ ರೀತಿ ಬಂದು ಇಂಜೆಕ್ಷನ್ ಕೊಟ್ಟು ಹೋಗುತ್ತಾರೆ. ಮಾತ್ರೆಯನ್ನು ಕೇಕ್‌ನಲ್ಲಿ ಬೆರೆಸಿ ಕೊಡುತ್ತಾನೆ. ಇದು ತಂದೆಗೆ ಮಗಳ ಮೇಲಿರುವ ಕಾಳಜಿ.

ಪರಿತಪಿಸುತ್ತಿರುವ ಚುಕ್ಕಿ ತಂದೆ

ಮಗಳು ಎಲ್ಲರಂತೆ ನಡೆಯಬೇಕು ಎಂಬುದು ಚುಕ್ಕಿಯ ತಂದೆಯ ಆಸೆ ಕೂಡ. ಅದಕ್ಕೆ ಸಾಕಷ್ಟು ಹಣ ಬೇಕಾಗುತ್ತದೆ. ಅದನ್ನು ಒದಗಿಸುವ ಪ್ರಯತ್ನ ಮಾಡುತ್ತಾ ಇದ್ದಾನೆ. ವೈದ್ಯರು ಕೂಡ ಆದಷ್ಟು ಬೇಗ ಹಣ ಹೊಂದಿಸು, ಆಪರೇಷನ್ ಮಾಡೋಣ ಅಂತಾನೆ ಹೇಳಿದ್ದಾರೆ. ಮಗಳಿಗೆ ಕಾಲು ಬರುತ್ತೆ ಎಂದರೆ ಎಷ್ಟು ಕಷ್ಟ ತಂದುಕೊಳ್ಳುವುದಕ್ಕೂ ಚುಕ್ಕಿಯ ತಂದೆ ರೆಡಿ.

ನಗುತ್ತಾ ಕುದುರೆ ಏರಿ ಬಂದ ಇಬ್ಬನಿ

ಅತ್ತ ಇಬ್ಬನಿಯದ್ದು ಬೇರೆಯದ್ದೇ ಜೀವನ. ಎಲ್ಲಾ ಇದ್ದರೂ ಇಬ್ಬನಿಗೆ ಬೇಕಾದ ನೆಮ್ಮದಿಯೇ ಇಲ್ಲ. ಸ್ವಾತಂತ್ರ್ಯವೇ ಇಲ್ಲ. ಇಂದು ಇಬ್ಬನಿಯ ಹುಟ್ಟುಹಬ್ಬ. ಅರಮನೆಯಲ್ಲಿ ಅದ್ದೂರಿಯಾಗಿ ಇಬ್ಬನಿಯ ಹುಟ್ಟುಹಬ್ಬಕ್ಕೆ ಅಲಂಕಾರ ಮಾಡಲಾಗಿದೆ. ದೊಡ್ಡಮಟ್ಟದಲ್ಲಿ ಪಾರ್ಟಿ ಅರೇಂಜ್ ಮಾಡಿದ್ದಾರೆ. ಇಬ್ಬನಿ ಕುದುರೆ ಮೇಲೆ ರಾಜಕುಮಾರಿಯಂತೆ ಬಂದಿದ್ದಾಳೆ. ಬರುವಾಗ ನಗುತ್ತಲೇ, ಎಲ್ಲರಿಗೂ ಆತ್ಮೀಯವಾಗಿ ಕೈಬೀಸುತ್ತಾ ಬಂದಿದ್ದಾಳೆ‌.

Chukki thaare kannada serial Written Update on March 18th episode

ಅತ್ತೆಯ ಮಾತಂತೆ ಇಬ್ಬನಿ ಜೀವನ

ಇಬ್ಬನಿಯ ಅತ್ತೆ ಯಶೋಧಾಗೆ ತಾವೂ ಶ್ರೀಮಂತರು, ಬಡವರು ನಮ್ಮನ್ನು ಮುಟ್ಟಿಕೊಳ್ಳುವ ರೀತಿಯೂ ಇಲ್ಲ ಎಂಬ ಭಾವನೆ ಇದೆ. ಕುದುರೆ ಮೇಲೆ ಬಂದ ಇಬ್ಬನಿಯನ್ನು ಕೆಲಸದಾತ ಇಳಿಸಲು ಹೋಗಿದ್ದಾನೆ. ಅಲ್ಲಿಯೇ ಅವನ ಕಪಾಳಕ್ಕೆ ಹೊಡೆದು, ಇಬ್ಬನಿಯನ್ನು ತಾನೇ ಇಳಿಸಿಕೊಂಡಿದ್ದಾಳೆ. ಅಷ್ಟು ಸಮಯ ಇಬ್ಬನಿಯ ಮುಖದಲ್ಲಿ ಇದ್ದ ಸ್ಮೈಲ್ ಅಲ್ಲಿಯೇ ಕಳೆದು ಹೋಗಿದೆ.

ಇಬ್ಬನಿ ಬದುಕಲ್ಲಿ ನಗುವಿಲ್ಲ

ಇಬ್ಬನಿ ಸ್ಮೈಲ್ ಮಾಡು, ಇದು ನಿನ್ನ ಬರ್ತ್ ಡೇ ಅಂತ ಎಷ್ಟೇ ಹೇಳಿದರು, ಅತ್ತೆಯ ಭಯಕ್ಕೂ ನಗು ಬರಲಿಲ್ಲ. ಇನ್ನೇನು ಕೇಕ್ ಕಟ್ ಮಾಡುವ ಸಮಯ. ಕೇಕ್ ತಿನ್ನುವ ಖುಷಿ, ಇಬ್ಬನಿಯ ಮುಖದಲ್ಲಿ ಸ್ವಲ್ಪ ನಗು ಕಾಣಿಸಿತ್ತು. ಕೇಕ್ ಕಟ್ ಮಾಡಿ ತಿನ್ನಬೇಕು ಎನ್ನುವಷ್ಟರಲ್ಲಿ, ಹೆಚ್ಚು ಕೇಕ್ ತಿನ್ನಬಾರದು ಅಂತ ಯಶೋಧಾ ಆ ಖುಷಿಯನ್ನು ಕಿತ್ತುಕೊಂಡಳು. ಇನ್ನೆಲ್ಲಿಂದ ಇಬ್ಬನಿ ಮುಖದಲ್ಲಿ ನಗು ಕಾಣುತ್ತದೆ.

More from Filmibeat

English summary
Chukki thaare kannada serial today episode. Here is the details about ibbani birthday celebration;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X