'NTR 30' ಸಿನಿಮಾದಲ್ಲಿ 'ರಾಧಾ ಕಲ್ಯಾಣ' ನಟಿ: ಕರಾವಳಿ ಬ್ಯೂಟಿ ಚೈತ್ರಾ ರೈ ಫೇಮಸ್ ಧಾರಾವಾಹಿಗಳು ಇವೇನೆ?
ಮೊದಲೇ ತನ್ನದೇ ಆದ ಗ್ರೋಯಿಂಗ್ ಇಮೇಜನ್ನು ಇಟ್ಟುಕೊಂಡಿರುವ ನಟ ಜೂನಿಯರ್ ಎನ್ ಟಿ ಆರ್ RRR ಸಿನಿಮಾದ ನಂತರವಂತೂ ಗ್ಲೋಬಲ್ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ. ಸದ್ಯ ಯಶಸ್ಸಿನ ಉತ್ತುಂಗದಲ್ಲಿರುವ ನಟ 30ನೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾ ಈಗಾಗಲೇ ಆರಂಭ ಆಗಿದೆ.
ಇದರೊಂದಿಗೆ 'NTR 30'ಯಲ್ಲಿ ಕರಾವಳಿಯ ಚೆಲುವೆ ಚೈತ್ರಾ ರೈ ಕೂಡ ನಟಿಸುತ್ತಿರೋದು ಗೊತ್ತೇ ಇದೆ. ಅಷ್ಟಕ್ಕೂ ಪ್ಯಾನ್ ಇಂಡಿಯಾ ಸ್ಟಾರ್ ಸಿನಿಮಾದಲ್ಲಿ ನಟಿಸೋ ಅವಕಾಶ ಚೈತ್ರಾ ರೈಗೆ ಹೇಗೆ ಸಿಕ್ಕಿತು ಅನ್ನೋದ ಕುತೂಹಲಕ್ಕೆ ಅವರೇ ಧಾರಾವಾಗಹಿಗಳೇ ಸಾಕ್ಷಿ.

'ರಾಧಾ ಕಲ್ಯಾಣ'ದ ವಿಶಾಖಾ ಆಗಿ ಫೇಮಸ್ಸು
ಮಂಗಳೂರಿನ ಬೆಡಗಿ ಚೈತ್ರಾ ರೈ ಟಾಲಿವುಡ್ ಎಂಟ್ರಿ ಕೊಟ್ಟಿದ್ದಾರೆ. ಕಿರುತೆರೆಯಿಂದ ಆರಂಭ ಮಾಡಿದ ಜರ್ನಿ ಟಾಲಿವುಡ್‌ವರೆಗೂ ಬಂದಿರೋದೇ ಇಂಟ್ರೆಸ್ಟಿಂಗ್ ಸ್ಟೋರಿ. ಕನ್ನಡದ ಹಲವಾರು ಧಾರಾವಾಹಿಗಳಲ್ಲಿ ನಟಿಸಿ ಮನೆ ಮಾತಾಗಿರುವ ಇವರಿಗೆ ಕೀರ್ತಿ ತಂದು ಕೊಟ್ಟದ್ದು 'ರಾಧಾ ಕಲ್ಯಾಣ'. ಈ ಯಶಸ್ಸಿನ ನಂತರ ನಟಿ ತೆಲುಗು ಕಿರುತೆರೆಯಲ್ಲೂ ಜನಪ್ರಿಯರಾಗಿದ್ದಾರೆ, ಅಲ್ಲಿನ ಹಲವು ಧಾರಾವಾಹಿಗಳಲ್ಲಿ ನಟಿಸಿ ಜನಪ್ರಿಯರಾಗಿದ್ದಾರೆ.
ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿದ್ದ ಚೈತ್ರಾ ರೈ ಮುಂದೆ ಗರ್ಭಿಣಿಯಾದ ಕಾರಣ ನಟನೆಗೆ ಗುಡ್‌ಬೈ ಹೇಳಿದ್ದರು. ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ಚೈತ್ರಾ ಮಗಳಿಗಾಗಿ ಸಮಯವನ್ನು ಮೀಸಲಿಟ್ಟರು. ಈಗ ಮತ್ತೆ ನಟನೆಗೆ ಕಂ ಬ್ಯಾಕ್ ಮಾಡಿರೋ ಚೈತ್ರಾ ತೆಲುಗು ಧಾರಾವಾಹಿಗಳಲ್ಲಿ ಹೆಚ್ಚಾಗಿ ನಟಿಸುತ್ತಿದ್ದಾರೆ. ತೆಲುಗಿನ 'ರಾಧಕು ನೀವರ ಪ್ರಾಣಂ' ಎಂಬ ಧಾರಾವಾಹಿಯಲ್ಲಿ ಇವರದ್ದು ಮುಖ್ಯ ಪಾತ್ರ ಆಗಿತ್ತು.
'ಚೈತ್ರಾ' ನಟಿಸಿದ ಧಾರಾವಾಹಿಗಳು ಇವೇನೆ
ಮಂಗಳೂರಿನ ನಟಿಗೆ ತೆಲುಗಿನಲ್ಲಿ ತುಂಬಾನೇ ಬೇಡಿಕೆ ಇದೆ. ಈಕೆ ನಟಿಸಿದ ಹಲವು ಧಾರಾವಾಹಿಗಳು ತೆಲುಗಿನಲ್ಲಿ ಸೂಪರ್ ಹಿಟ್ ಆಗಿವೆ. 'ದೆಟ್ ಈಸ್ ಮಹಾಲಕ್ಷ್ಮಿ', 'ರಾಧಾ ಕಲ್ಯಾಣಂ', 'ಅತ್ತಾರಿಂಟ್ಲೋ ಅಕ್ಕಾ ಚೆಲ್ಲೆಲೋ', 'ಅಷ್ಟ ಚಮ್ಮ', 'ಅಕ್ಕ ಚೆಲ್ಲೆಲು', ಹೀಗೆ ಹಲವು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಅವೆಲ್ಲವೂ ತೆಲುಗು ಕಿರುತೆರೆಯಲ್ಲಿ ಕ್ಲಿಕ್ ಆಗಿದೆ. ಇದೇ ಆಧಾರದ ಮೇಲೆ ತೆಲುಗು ಸಿನಿಮಾಗೂ ಎಂಟ್ರಿ ಕೊಟ್ಟಿದ್ದಾರೆ.

ಸೈಫ್ ಆಲಿ ಖಾನ್ ಪತ್ನಿಯಾಗಿ ಚೈತ್ರಾ ರೈ
'NTR 30' ಸಿನಿಮಾದಲ್ಲಿ ಬಾಲಿವುಡ್ ಖ್ಯಾತ ನಟ ಸೈಫ್ ಆಲಿ ಖಾನ್ ಖಳನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ. ಇನ್ನು ಖಳನಾಯಕ ಸೈಫ್ ಅಲಿ ಖಾನ್‌ಗೆ ಪತ್ನಿಯಾಗಿ ಚೈತ್ರಾ ರೈ ನಟಿಸಲಿದ್ದಾರೆ ಅನ್ನೋ ಮಾತಿದೆ. ಹಾಗಾಗಿ ವಿಲನ್ ಪಾತ್ರದ ಪತ್ನಿಯ ಪಾತ್ರದಲ್ಲಿ ಚೈತ್ರಾ ರೈ ನಟಿಸುತ್ತಿದ್ದಾರೆ. ಅಲ್ಲದೆ ಈ ಪಾತ್ರಕ್ಕೆ ತುಂಬಾ ಪ್ರಾಮುಖ್ಯತೆ ಇದೆ ಎನ್ನಲಾಗುತ್ತಿದೆ.
ಜೂನಿಯರ್ ಎನ್‌ಟಿಆರ್ ಅವರ ಈ ಸಿನಿಮಾ ಜಪಾನಿ ಮತ್ತು ಚೈನೀಸ್ ಭಾಷೆ ಸೇರಿದಂತೆ ಒಟ್ಟು 9 ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಮೊದಲೇ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿರುವ ನಟನ ಈ ಸಿನಿಮಾಗಾಗಿ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.


Click it and Unblock the Notifications











