ಕೋಸ್ಟಲ್‌ವುಡ್‌ನಿಂದ ಬಂದ ನಟ ರಾಕೇಶ್ ಪೂಜಾರಿ ಈಗ 'ಹಿಟ್ಲರ್ ಕಲ್ಯಾಣ'ದ ಭಾಗ
ತುಳುನಾಡಿನ ಅನೇಕ ಪ್ರತಿಭೆಗಳು ಕನ್ನಡ ಚಿತ್ರರಂಗ ಹಾಗೂ ಟಿವಿ ಲೋಕದಲ್ಲಿ ಜನಪ್ರಿಯತೆ ಪಡೆದುಕೊಂಡದ್ದಾರೆ. ಅಂಥಹವರಲ್ಲಿ ಒಬ್ಬರು ರಾಕೇಶ್ ಪೂಜಾರಿ.
ಅನೇಕ ಸಿನಿಮಾ, ಧಾರಾವಾಹಿಗಳಲ್ಲಿ ಕಾಮಿಡಿ ರೋಲ್ ನಲ್ಲಿ ಕಾಣಿಸಿಕೊಂಡಿದ್ದಾರೆ ರಾಕೇಶ್ ಪೂಜಾರಿ. ಇದೀಗ 'ಹಿಟ್ಲರ್ ಕಲ್ಯಾಣ' ಧಾರಾವಾಹಿಯಲ್ಲಿ ನಾಯಕ ಏಜೆಯ ಪಿಎ ವಿರೂಪಾಕ್ಷ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರಾಕೇಶ್ ಪೂಜಾರಿ ಹುಟ್ಟೂರು ಉಡುಪಿ. ಇವರ ತಂದೆ ದಿನಕರ್ ಪೂಜಾರಿ ಹಾಗೂ ತಾಯಿ ಶಾಂಭವಿ. ರಾಕೇಶ್ ಮನೆಯ ಬಳಿ ಒಳ್ಳೆಯ ಲೊಕೇಶನ್‌ಗಳು ಇದ್ದುವಂತೆ, ಅಲ್ಲಿ ಹಲವು ಸಿನಿಮಾಗಳ ಚಿತ್ರೀಕರಣ ಸಹ ನಡೆಯುತ್ತಿತ್ತಂತೆ. ರಾಕೇಶ್ ಚಿಕ್ಕವಯಸ್ಸಿನಲ್ಲಿ ಇರಬೇಕಾದರೆ. ಈ ಸ್ಥಳದಲ್ಲಿ ಶಿವರಾಜ್ ಕುಮಾರ್ ಅವರು ಶೂಟಿಂಗ್ ಗಾಗಿ ಆಗಮಿಸಿದ್ದರಂತೆ. ರಾಕೇಶ್ ಗೆ ಆಗಿನ್ನೂ ಸಣ್ಣ ವಯಸ್ಸು. ಏಷ್ಟು ಜನ ನೋಡುತ್ತಿರುತ್ತಾರೆ, ನಟರಿಗೆ ನಟಿಸಬೇಕಾದರೆ ಮುಜುಗರ ಎನಿಸುವುದಿಲ್ಲವೇ ಎಂದೆಲ್ಲ ರಾಕೇಶ್ ತಮ್ಮ ಅಮ್ಮನ ಬಳಿ ಕೇಳುತ್ತಿದ್ದರಂತೆ. ರಾಕೇಶ್ ಅವರಿಗೆ ಚಿಕ್ಕ ವಯಸ್ಸಿನಿಂದಲೂ ಸ್ಟೇಜ್ ಎಂದರೆ ಭಯ. ಆದರೆ ಪದವಿಯಲ್ಲಿರಬೇಕಾದರೆ ಮೊದಲ ಬಾರಿಗೆ ರಾಕೇಶ್ ಸ್ಟೇಜ್ ಹತ್ತುತ್ತಾರೆ. ಆ ನಂತರ ಹಲವು ನಾಟಕಗಳಲ್ಲಿಯೂ ರಾಕೇಶ್ ನಟಿಸುತ್ತಾರೆ.

ಕೊರಗಜ್ಜನ ಆಶೀರ್ವಾದ
ಜೀವನದಲ್ಲಿ ಸಾಕಷ್ಟು ಹಿನ್ನಡೆ ಅನಿಭವಿಸಿದ್ದ ರಾಕೇಶ್ ಪೂಜಾರಿಯವರಿಗೆ ಮೊದಲ ಯಶಸ್ಸು ಸಿಕ್ಕಿದ್ದು ಕಾಮಿಡಿ ಕಿಲಾಡಿಗಳು ಸೀಸನ್ 3 ವಿನ್ನರ್ ಆಗುವ ಮೂಲಕ. ಕಾಮಿಡಿ ಕಿಲಾಡಿನಲ್ಲಿ ವಿನ್ನರ್ ಆಗಬೇಕೆಂದು ರಾಕೇಶ್ ಹಗಲಿರುಳು ಎನ್ನದೆ ಶ್ರಮಿಸಿದ್ದರು. ಹಾಗೆಯೇ ತುಳುನಾಡಿನ ಕೊರಗಜ್ಜ ದೈವ ದೇವರಿಗೂ ಹರಕೆಯನ್ನು ಹೇಳಿಕೊಂಡಿದ್ದರು ರಾಕೇಶ್. ಅಂತೆಯೇ ಕೊರಗಜ್ಜ ದೈವದ ಅನುಗ್ರಹದಿಂದ ಗೆಲುವು ಸಾಧಿಸಿದರು.

'ಕಡ್ಲೆ ಬಜಿಲ್' ಶೋ ಮೂಲಕ ಮನ ಗೆದ್ದಿದ್ದರು
ಖಾಸಗಿ ಚಾನೆಲ್ ನಲ್ಲಿ 'ಕಡ್ಲೆ ಬಜಿಲ್' ಎಂಬ ಶೋ ಮೂಲಕ ಅನೇಕ ಜನರ ಮನ ಗೆದ್ದಿದ್ದರು ರಾಕೇಶ್. ಬಳಿಕ ಹಲವು ಸಿನಿಮಾಗಳಿಗೆ ಆಡಿಷನ್ ಆಡಿಷನ್ ನೀಡಿದರು. ಸುಮಾರು 150 ಆಡಿಷನ್ ನ್ನೂ ರಾಕೇಶ್ ನೀಡುತ್ತಾರೆ. ಆದರೆ ಯಾರೂ ಸೆಲೆಕ್ಟ್ ಮಾಡುತ್ತಿರಲಿಲ್ಲ. ಬಳಿಕ ಉಡುಪಿಯಲ್ಲಿ ಕಾಮಿಡಿ ಕೀಲಾಡಿಗಳು ಸೀಸನ್ 2 ನ ಆಡಿಷನ್ ನಡೆಯುತ್ತಿತ್ತು. ಆ ವೇಳೆ ರಾಕೇಶ್ ಅಷ್ಟಾಗಿ ಏನು ಸಿದ್ಧತೆ ಮಾಡಿಕೊಂಡಿರಲಿಲ್ಲ. ಆದ್ರೂ ಆಕ್ಟಿಂಗ್ ಮಾಡಿದರು.

ಕಾಮಿಡಿ ಕಿಲಾಡಿಗಳು 3 ಗೆ ಸೆಲೆಕ್ಟ್ ಆದರು
ಕಾಮಿಡಿ ಕಿಲಾಡಿ 2ನಲ್ಲಿ ಸೆಲೆಕ್ಟ್ ಆಗದೆ ರಾಕೇಶ್ ಗೆ ಬೇಸರವಾದರೂ ಬಳಿಕ ಕಾಮಿಡಿ ಕಿಲಾಡಿಗಳು 3 ಗೆ ಸೆಲೆಕ್ಟ್ ಆಗಿ ತನ್ನ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾದರು. ಕಾಮಿಡಿ ಕಿಲಾಡಿಗಳು ಮುಗಿದ ಬಳಿಕ ಜನರು ರಾಕೇಶ್ ಗೆ ಗೌರವ ಕೊಡಲು ಶುರು ಮಾಡಿದರು. ಇದನ್ನು ಕಂಡ ರಾಕೇಶ್ ಗೆ ಬಹಳ ಖುಷಿಯಾಗುತ್ತಿತ್ತಂತೆ.

ಹಲವು ತುಳು ಹಾಗೂ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ
ರಾಕೇಶ್ ಕನ್ನಡದಲ್ಲಿ 'ಪೈಲ್ವಾನ್', 'ಇದು ಎಂಥಾ ಲೋಕವಯ್ಯ' ಮತ್ತು ತುಳುವಿನಲ್ಲಿ 'ಪೆಟ್ಕಮ್ಮಿ', 'ಅಮ್ಮೆರ್ ಪೊಲೀಸ್', 'ಪಮ್ಮನ್ನೆ ದಿ ಗ್ರೇಟ್', 'ಉಮಿಲ್' ಮತ್ತು 'ಇಲ್ಲೋಕ್ಕೆಲ್' ಮುಂತಾದ ನಾಟಕಗಳು, ಸ್ಕಿಟ್‌ಗಳು ಮತ್ತು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಅವರು ಕರಾವಳಿಯ ರಿಯಾಲಿಟಿ ಶೋಗಳಾದ 'ಬಲೆ ತೇಲಿಪಾಲೆ', 'ಮೇ 22', 'ಸ್ಟಾರ್', 'ತುಯಿನಾಯೆ ಪೋಯೆ' ಇತ್ಯಾದಿ ನಾಟಕದಲ್ಲಿ ಅಭಿನಯಿಸಿದ್ದಾರೆ.


Click it and Unblock the Notifications











