Anubandha: ಅನುಬಂಧ ಅವಾರ್ಡ್ಸ್‌ನಲ್ಲಿ ಬೆಸೆದ ಬಂಧ; ಕಣ್ಣೀರಾದ ಕಲಾವಿದರು!

By ಎಸ್ ಸುಮಂತ್

ಏನನ್ನೋ ಸಾಧಿಸಬೇಕೆಂದು ಹೊರಟವರಿಗೆ ಮನೆಯ ಬೆಂಬಲ ಬಹಳ ಮುಖ್ಯವಾಗುತ್ತದೆ. ಮನೆಯವರು ಜೊತೆಯಾಗಿ ನಿಂತರೆ ಯಶಸ್ಸು ಬಹಳ ಬೇಗ ಸಿಗುತ್ತದೆ.

ಬಣ್ಣದ ಲೋಕಕ್ಕೆ ಬರುವ ಕಲಾವಿದರಿಗೆ ಮನೆಯಲ್ಲಿ ಯಾರದ್ದಾದರೂ ಸಪೋರ್ಟ್ ಇದ್ದರೆ ಮಾತ್ರ ಸವಾಲುಗಳನ್ನು ಎದುರಿಸಿ ನಿಲ್ಲುವುದಕ್ಕೆ ಸಾಧ್ಯ. ಇಷ್ಟೆಲ್ಲಾ ಹೇಳುವುದಕ್ಕೆ ಕಾರಣ ಅನುಬಂಧ ಅವಾರ್ಡ್.

ಹೌದು ಕಲರ್ಸ್ ಕನ್ನಡದಲ್ಲಿ ಅನುಬಂಧ ಅವಾರ್ಡ್ಸ್‌ ಝಲಕ್ ಅನ್ನು ಬಿಡಲಾಗುತ್ತಿದೆ. ಅದರಲ್ಲಿ ಅದೆಷ್ಟೋ ಕಳೆದು ಹೋದ ಕಥೆಗಳು, ನೋವಿನ ವ್ಯಥೆಗಳು, ಬೆಂಬಲ ನೀಡಿದ ವ್ಯಕ್ತಿಗಳು ಎಲ್ಲವೂ ಅನಾವರಣವಾಗುತ್ತದೆ. ನಕ್ಕು ನಲಿದವರ ಮನದಲ್ಲೂ ನೋವಿರುತ್ತದೆ ಎಂಬುದು ಗೊತ್ತಾಗಿದೆ. ನಗುತ್ತಿದ್ದವರನ್ನು ಅರೆಕ್ಷಣ ಭಾವನಾತ್ಮಕಗೊಳಿಸಿದ ಸನ್ನಿವೇಶಗಳು ಕ್ರಿಯೇಟ್ ಆಗಿವೆ.

colors kannada actors emotional speech at anubandha awards event stage

ಗೆದ್ದ ನಟಿಯರ ನೋವಿನ ಕಥೆ

ಯಾರಿಗೆ ಆಗಲಿ ಸುಲಭವಾಗಿ ಗೆಲುವು ಅನ್ನೋದು ಸಿಗುವುದಿಲ್ಲ. ಅದರಲ್ಲೂ ತೆರೆಯ ಮೇಲೆ ನೋಡುವ ಕಲಾವಿದರ ಬದುಕು ನಾವೂ ನೋಡಿದಷ್ಟೇ ಬ್ಯೂಟಿಫುಲ್ ಆಗಿ ಇರುವುದಿಲ್ಲ. ಅವಕಾಶಗಳಿಗಾಗಿ ಅಲೆದಿರುತ್ತಾರೆ, ಅವಮಾನಗಳನ್ನ ಎದುರಿಸಿರುತ್ತಾರೆ. ಆದರೆ ಮನೆಯವರ ಬೆಂಬಲ ಸ್ಟ್ರಾಂಗ್ ಆಗಿ ಇದ್ದಾಗ ಒಮ್ಮೆ ಬಿದ್ದರು‌ ಮತ್ತೆ ಮತ್ತೆ ಏಳುವ ಪ್ರಯತ್ನ ಮಾಡುತ್ತಾರೆ. ಈಗ ಅವಾರ್ಡ್ಸ್ ತೆಗೆದುಕೊಂಡು ಸಾರ್ಥಕವೆನಿಸಿಕೊಂಡ ಕಲಾವಿದರು ತಮ್ಮ ಗೆಲುವಿನ ಹಿಂದಿರುವ ರಯವಾರಿಗಳನ್ನು ನೆನೆದಿದ್ದಾರೆ.

ಅಪ್ಪನಿಗೆ ಥ್ಯಾಂಕ್ಸ್ ಹೇಳಿದ ಕೀರ್ತಿ

ಕೀರ್ತಿಯ ಪಾತ್ರವನ್ನು 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಸಾಯಿಸಿದ್ದು ಎಲ್ಲರ ಬೇಸರಕ್ಕೆ ಕಾರಣವಾಗಿತ್ತು. ಆದರೆ ದೆವ್ವದ ರೂಪದಲ್ಲಿ ಕೀರ್ತಿಯ ಪಾತ್ರವನ್ನು ಮುಂದುವರೆಸಿದ್ದಾರೆ. ಕೀರ್ತಿಗೆ ಸಾಕಷ್ಟು ದೊಡ್ಡಮಟ್ಟದ ಅಭಿಮಾನಿ ಬಳಗವಿದೆ. ಕೀರ್ತಿ ಅಲಿಯಾಸ್ ತನ್ವಿರಾವ್ ಯಶಸ್ಸಿಗೆ ಕಾರಣ ಅವರ ತಂದೆ. ಅನುಬಂಧ ಅವಾರ್ಡ್ಸ್ ವೇದಿಕೆಯಲ್ಲಿ ತನ್ನ ತಂದೆಯನ್ನು ಅಪ್ಪಿಕೊಂಡು ಥ್ಯಾಂಕ್ಸ್ ಹೇಳಿದ್ದಾರೆ. ನನ್ನೆಲ್ಲಾ ಯಶಸ್ಸಿಗೆ ನನ್ನ ತಂದೆಯೇ ಕಾರಣ ಎಂದು ಕೊಂಡಾಡಿದ್ದಾರೆ. ತುಂಬಾ ದಿನಗಳ ನಂತರ ಬ್ಯೂಟಿಫುಲ್ ರೂಪದಲ್ಲಿ ಕೀರ್ತಿಯನ್ನು ಕಂಡ ಅಭಿಮಾನಿಗಳು ಖುಷಿಯಾಗಿದ್ದಾರೆ.

colors kannada actors emotional speech at anubandha awards event stage

ಅಪ್ಪನ ಧ್ವನಿಗೆ ಭಾವುಕನಾದ ಜೀವ

'ನಿನಗಾಗಿ' ಸೀರಿಯಲ್ ಶಾರ್ಟ್ ಟೈಮ್‌ನಲ್ಲಿ ತುಂಬಾನೇ ಫೇಮಸ್ ಆಗುತ್ತಿರುವ ಧಾರಾವಾಹಿ. ಅಪ್ಪ ಮಗಳ ಅನುಬಂಧ. ಅಮ್ಮನ ಪ್ರೀತಿಗಾಗಿ ಹಂಬಲಿಸುವ ಮುದ್ದು ಕೃಷ್ಣನಿಗೆ ತಾಯಿಯಾಗಲು ಹೊರಟ ರಚನಾ. ಕಥೆ, ಪಾತ್ರಗಳು ಎಲ್ಲರನ್ನು ಹಿಡಿದಿಟ್ಟಿವೆ. ಈ ಧಾರಾವಾಹಿಯಲ್ಲಿ ಬರುವ ಜೀವ ಕೂಡ ಒಬ್ಬ ತಂದೆಯಾಗಿ ಹೇಗಿರಬೇಕು ಎಂಬುದನ್ನು ತೋರಿಸಿಕೊಟ್ಟಂತೆ ಆಗಿದೆ. ತೆರೆಯ ಮೇಲಿನ ಈ ತಂದೆಗೆ ರಿಯಲ್ ತಂದೆಯೇ ಶಕ್ತಿ. ವೇದಿಕೆ ಮೇಲೆ ತಂದೆಗೆ ಕ್ರೆಡಿಟ್ ಕೊಡುವಾಗಲೇ ಹೇಗಿದ್ದೀಯಪ್ಪ ಎಂಬ ಧ್ವನಿ ಕೇಳಿ ಕೊಂಚ ಭಾವುಕರಾಗಿದ್ದಾರೆ.

ಗೆಲುವು ನೆನೆದು ಕಣ್ಣೀರಿಟ್ಟ ಪೂಜಾ

'ಭಾಗ್ಯಲಕ್ಷ್ಮೀ' ಧಾರಾವಾಹಿಯಲ್ಲಿ ಪೂಜಾ ಪಾತ್ರಕ್ಕೆ ಸಾಕಷ್ಟು ಫ್ಯಾನ್ಸ್ ಕ್ರಿಯೇಟ್ ಆಗಿದ್ದಾರೆ. ಸ್ಟೈಲಿಶ್ ಐಕಾನ್ ಆಗುವುದರಲ್ಲಿ ನೋ ಡೌಟ್. ಧಾರಾವಾಹಿಯಲ್ಲಿ ಗಟ್ಟಿಗಿತ್ತಿ ಪಾತ್ರ. ಆದರೆ ಪೂಜಾಳ ಮನಸ್ಸಲ್ಲೂ ಕಣ್ಣೀರು ತರಿಸುವ ಕಥೆ ಇದೆ. ಇಷ್ಟು ದೊಡ್ಡ ವೇದಿಕೆ ಮೇಲೆ ಅವಾರ್ಡ್ ತೆಗೆದುಕೊಂಡು ಭಾವುಕಳಾದ ಪೂಜಾ, ತನ್ನ ತಂಡಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ. ಇನ್ನು ಕಾವೇರಿ ಕೂಡ ಅವಾರ್ಡ್ ತೆಗೆದುಕೊಂಡಾಗ, ಹಿಂದೆ ಟೀಕೆಗಳಿಗೆ ಒಳಗಾದ್ದನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಹೀಗೆ 'ಅನುಬಂಧ ಅವಾರ್ಡ್ಸ್‌'ನಲ್ಲಿ ಒಂದಷ್ಟು ಭಾವನಾತ್ಮಕ ಸನ್ನಿವೇಶಗಳು ನಿರ್ಮಾಣವಾಗಿವೆ.

More from Filmibeat

English summary
colors kannada Award program Written Update on anubandha promo special. Here is the details about Painful stories of artists;
Read more about: tv filmibeat news sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X