'ಅಂತರಪಟ' ಧಾರಾವಾಹಿಗೆ ಅಪ್ಪು ನಟನೆಯ ಆ ಸಿನಿಮಾ ಕಥೆಯೇ ಪ್ರೇರಣೆ?

By ಶೃತಿ ಹರೀಶ್ ಗೌಡ

ಸುಶಾಂತ್ ರಾಜ್ ಒಂದು ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡುತ್ತೇನೆ ಎಂದು ತಂದೆಗೆ ಚಾಲೆಂಜ್ ಹಾಕಿ ಮನೆಯಿಂದ ಹೊರಗೆ ಬಂದಿದ್ದಾನೆ. ಆರಾಧನಾಳಿಗೆ ಸುಶಾಂತ್ ತಂದೆಯನ್ನು ಕಂಡರೆ ಆಗುವುದಿಲ್ಲ. ನನ್ನ ತಂದೆಯ ಸಾವಿಗೆ ಆತನೇ ಕಾರಣ ಎಂದು ಅಂದುಕೊಂಡಿದ್ದಾಳೆ. ಸುಶಾಂತ್ ಈಗ ಆರಾಧನಾ ಇರುವ ವಠಾರಕ್ಕೆ ಬರುವಂತಾಗಿದೆ. ಇದು ಪುನೀತ್ ರಾಜ್‌ಕುಮಾರ್ ನಟನೆ ಸಿನಿಮಾ ನೆನಪಿಸ್ತಿದೆ.

ಸುಶಾಂತ್ ಏನಾದರೂ ಧರ್ಮೇಂದ್ರ ಪ್ರಧಾನ್ ಮಗ ಎಂದು ಗೊತ್ತಾದರೆ ಯಾವ ರೀತಿ ಅವಳು ಸುಶಾಂತ್ ಗೆ ಸಹಾಯ ಮಾಡುತ್ತಾಳೆ ಎಂಬುದೇ ಇಲ್ಲಿ ಯಕ್ಷಪ್ರಶ್ನೆಯಾಗಿದೆ. ಸದ್ಯಕ್ಕೆ ಆರಾಧನಾ ಮನೆಗೆ ಬಂದಿರುವ ಸುಶಾಂತ್ ಗೆ ಆರಾಧನಾಳೇ ಎಲ್ಲಾ ಸೌಕರ್ಯವನ್ನು ನೋಡಿಕೊಳ್ಳಬೇಕಾಗಿದೆ. ಹಣದ ಆಸೆಗೆ ಬಿದ್ದಿರುವ ಆರಾಧನಾಳ ಎರಡನೇ ತಂದೆ ಆರಾಧನಾಳೇ ಸುಶಾಂತ್‌‌‌ನ ಆಗು ಹೋಗುಗಳನ್ನು ನೋಡಿಕೊಳ್ಳಬೇಕು ಎಂದು ಹೇಳಿದ್ದಾನೆ.‌

Colors Kannada Antarapata serial inspired from Puneeth Rajkumars Arasu movie

ಸುಶಾಂತ್ ಮುದ್ದೆಯನ್ನು ತಿನ್ನಲು ಬಾರದ ಕಾರಣ ಮನೆಯವರೆಲ್ಲರೂ ಸಹ ಆಡಿಕೊಂಡು ನಕ್ಕಿದ್ದಾರೆ.‌ ಇದಕ್ಕಾಗಿ ಸುಶಾಂತ್ ತುಂಬಾ ಬೇಸರ ಮಾಡಿಕೊಂಡಿದ್ದಾನೆ. ನಾನು ಮನೆಯಲ್ಲಿ ಯಾವ ರೀತಿ ಇದ್ದೆ, ಇಲ್ಲಿ ನಾನು ಯಾವ ರೀತಿ ಇದ್ದೇನೆ. ಇಲ್ಲಿ ನನ್ನ ಪಾಡು ಭಿಕ್ಷುಕನ ಪಾಡಾಗಿದೆ, ನಾನು ಇಲ್ಲಿಂದ ಹೊರಗಡೆ ಹೋಗಬೇಕು ಎಂದುಕೊಂಡಿದ್ದಾನೆ. ಮತ್ತೊಂದು ಕಡೆ ತಂದೆಗೆ ಮಾಡಿ ಬಂದಿರುವ ಚಾಲೆಂಜ್ ಸಹ ನೆನಪಾಗಿದೆ.

ಸುಶಾಂತ್‌ಗೆ ಬೇರೆ ದಾರಿ ಇಲ್ಲ. ಆರಾಧನಾಳ ಜೊತೆಗೆ ಸೇರಿ ಆರಾಧನಾ ಕಂಡಿರುವ ಬಿಸಿನೆಸ್ ಕನಸನ್ನ ನನಸು ಮಾಡಿ ತಂದೆ ಹಾಕಿರುವ ಚಾಲೆಂಜ್ ಅನ್ನ ಗೆದ್ದು ತೋರಿಸಿ ನಾನು ಜವಾಬ್ದಾರಿಯುತ ಮನುಷ್ಯ ಎಂದು ತೋರಿಸುವುದೂ ಅನಿವಾರ್ಯವೂ ಸಹ ಆಗಿದೆ. ಮುಂದೆ ಧರ್ಮೇಂದ್ರ ಪ್ರಧಾನ ಮಗನೇ ಶುಶಾಂತ್ ರಾಜ್ ಎಂದು ಗೊತ್ತಾದರೆ ಆರಾಧನಾ ಏನು ಡಿಸಿಷನ್ ತೆಗೆದುಕೊಳ್ಳುತ್ತಾಳೆ ಅನ್ನೋದು ಗೊತ್ತಿಲ್ಲ.

'ಅಂತರಪಟ' ಧಾರಾವಾಹಿಯ ಸದ್ಯದ ಸನ್ನಿವೇಶಗಳು ಅಪ್ಪು ನಟನೆಯ ಸೂಪರ್ ಹಿಟ್ 'ಅರಸು' ಸಿನಿಮಾವನ್ನು ನೆನಪಿಸುತ್ತಿದೆ. ಆ ಚಿತ್ರದಲ್ಲಿ ಶಿವರಾಜ್‌ ಅರಸ್ ಎನ್ನುವ ಶ್ರೀಮಂತರ ಮನೆಯ ಹುಡುಗನ ಪಾತ್ರದಲ್ಲಿ ಪುನೀತ್ ನಟಿಸಿದ್ದರು. ವಿದೇಶದಲ್ಲಿ ಐಶಾರಾಮಿ ಜೀವನ ಸಾಗಿಸಿಕೊಂಡಿದ್ದ ಶಿವರಾಜ್‌ ಅರಸ್ ತಾಯ್ನಾಡಿಗೆ ಬರುವಂತಾಗುತ್ತದೆ. ಇಲ್ಲಿ ಪ್ರೀತಿಸಿದ ಹುಡುಗಿಗೆ ಚಾಲೆಂಜ್ ಮಾಡಿ ಮನೆಯಿಂದ ಹೊರ ಬರುತ್ತಾನೆ.

Colors Kannada Antarapata serial inspired from Puneeth Rajkumars Arasu movie

ತಾನು ಶಿವರಾಜ್‌ ಅರಸ್ ಎಂದು ಎಲ್ಲಿಯೂ ಹೇಳಿಕೊಳ್ಳದೇ ಒಂದು ತಿಂಗಳಲ್ಲಿ 5 ಸಾವಿರ ರೂಪಾಯಿ ಸಂಪಾದಿಸಿಕೊಂಡು ಬರುತ್ತೇನೆ ಎಂದು ಮನೆಯಿಂದ ಹೊರಬರುತ್ತಾನೆ. ಹೀಗೆ ಹೊರ ಬಂದ ಆತನಿಗೆ ಬಡವರ ಮನೆ ಹುಡುಗಿ ಐಶ್ವರ್ಯ ತನ್ನ ಮನೆಯಲ್ಲಿ ಜಾಗ ಕೊಡುತ್ತಾಳೆ. ಅಲ್ಲಿಂದ ಮುಂದೆ ಶಿವರಾಜ್‌ ಅರಸ್ ಜೀವನದ ಕಷ್ಟ ಸುಖ, ಬಡವರ ನೋವು ಬವಣೆ ಅರಿತುಕೊಳ್ಳುತ್ತಾನೆ. ಕೊನೆಗೆ ತಾನು ಹೇಳಿದಂತೆಯೇ 5 ಸಾವಿರ ರೂಪಾಯಿ ಸಂಪಾದಿಸುತ್ತಾನೆ.

ಸದ್ಯ 'ಅಂತರಪಟ' ಧಾರಾವಾಹಿಯ ಕಥೆ ಕೂಡ ಇದೇ ರೀತಿ ಸಾಗುತ್ತಿದೆ. ಮಕ್ಕಿಕಾಮಕ್ಕಿ ಕಾಪಿ ಅಲ್ಲದೇ ಇದ್ದರೂ ಕೆಲ ಸನ್ನಿವೇಶಗಳು ಅರಸು ಸಿನಿಮಾ ನೆನಪಿಸುವಂತಿದೆ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಭೂಮಿಗೆ ಬಂದ ಭಗವಂತ' ಧಾರವಾಹಿಗೂ ಕೂಡ ಬಾಲಿವುಡ್‌ನ 'ಓ ಮೈ ಗಾಡ್' ಸಿನಿಮಾ ಪ್ರೇರಣೆ ಎನ್ನಬಹುದು. ಈ ಸಿನಿಮಾ 'ಮುಕುಂದ ಮರಾರಿ' ಹೆಸರಿನಲ್ಲಿ ಕನ್ನಡಕ್ಕೂ ರೀಮೆಕ್ ಆಗಿತ್ತು.

ಇಲ್ಲಿ ಸುಶಾಂತ್ ಬೇಜವಾಬ್ದಾರಿಯಿಂದ ನಡೆದುಕೊಂಡಿದ್ದಕ್ಕಾಗಿ ತನ್ನ ತಂದೆಯೇ ಮಗನನ್ನ ಹೊರಗೆ ಹಾಕಿದ್ದಾರೆ. ನೀನು ಸಂಪಾದನೆ ಮಾಡಿಕೊಂಡು ಬಾ ಆಗ ನಾನು ನಿನ್ನನ್ನು ಮಗ ಎಂದು ಒಪ್ಪಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಆರಂಭದಲ್ಲಿ ಪುನೀತ್ ರಾಜ್‌ಕುಮಾರ್ ಕಷ್ಟ ಪಡುವಂತೆ ಈಗ ಸುಶಾಂತ್ ರಾಜ್ ಕಷ್ಟಪಡುತ್ತಿದ್ದಾನೆ.

'ಅರಸು' ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಜೀವನವನ್ನು ಮೀರಾ ಜಾಸ್ಮಿನ್ ಬದಲಾಯಿಸಿದರೆ, ಇಲ್ಲಿ ಸುಶಾಂತ್ ರಾಜ್ ಜೀವನವನ್ನು ಆರಾಧನಾ ಬದಲಾಯಿಸುವ ಸನ್ನಿವೇಶ ಬಂದಿದೆ. ಯಾಕೆಂದರೆ ಈಗ ಸುಶಾಂತ್ ರಾಜ್ ಒಂದು ಲಕ್ಷ ರೂಪಾಯಿಯನ್ನು ಸಂಪಾದನೆ ಮಾಡುತ್ತೇನೆ ಎಂದು ತಂದೆಗೆ ಚಾಲೆಂಜ್ ಹಾಕಿ ಮನೆಯಿಂದ ಹೊರಗೆ ಬಂದಿದ್ದಾನೆ. ಮುಂದೆ ಏನೆಲ್ಲಾ ಆಗುತ್ತದೆ ಅನ್ನೋದನ್ನು ಕಾದು ನೋಡಬೇಕಿದೆ.

More from Filmibeat

English summary
Colors Kannada Antarapata serial inspired from Puneeth Rajkumar's Arasu movie. Mahesh Babu Directed romantic film Arasu relesed on 25 January 2007. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X