Antarapata: ಆರಾಧನಾಗೆ ಕಣ್ಣೀರು ಕಟ್ಟಿಟ್ಟ ಬುತ್ತಿ: ಸುಶಾಂತ್‌ಗೆ ಬಂತು ಜವಾಬ್ದಾರಿ
ಗಾರ್ಮೆಂಟ್ಸ್ ಬಳಿ ಬಂದಂತಹ ಪುರುಷೋತ್ತಮ ಸೆಕ್ಯೂರಿಟಿ ಬಳಿ ಜಗಳವನ್ನ ಆಡಿದ್ದಾನೆ. ನೀನೇನಾದರೂ ಆರಾಧನಾಳನ್ನು ಕರೆಯದೇ ಹೋದರೆ ಹೊಡೆಯುವುದಾಗಿ ಹೇಳಿದ್ದಾನೆ. ಸೆಕ್ಯೂರಿಟಿ ಗಾರ್ಡ್ ಇದು ಕೆಲಸದ ಸಮಯ, ಆ ರೀತಿ ಕರೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ. ಆದರೂ ಸಹ ಪುರುಷೋತ್ತಮ್ ಕುಡಿದು ಬಂದು ಸೆಕ್ಯೂರಿಟಿಯ ಬಳಿ ಜಗಳ ಮಾಡಿದ್ದಾನೆ.
ನೀನು ಆರಾಧನಾಳನ್ನು ಕರೆಯದೆ ಹೋದರೆ ನಾನು ಗ್ಲಾಸ್ ಪುಡಿ ಮಾಡುವುದಾಗಿ ಹೇಳಿದ್ದಾನೆ. ಇದಕ್ಕೆ ಎದುರಿದ ಸೆಕ್ಯೂರಿಟಿ ಗಾರ್ಡ್ ಸೂಪರ್‌ವೈಸರ್‌ಗೆ ಆರಾಧನಾಳನ್ನು ಕೇಳಿಕೊಂಡು ಯಾರೋ ಬಂದಿದ್ದಾರೆ ಎಂದು ಹೇಳಿದ್ದಾನೆ. ಆರಾಧನಾಳ ಬಳಿ ಬಂದಂತಹ ಸೂಪರ್ ವೈಸರ್ ನಿನ್ನನ್ನು ಕೇಳಿಕೊಂಡು ಯಾರೋ ಬಂದಿದ್ದಾರಂತೆ. ನಾವು ಈ ಮೊದಲೇ ಹೇಳಿಲ್ವಾ? ಕೆಲಸದ ಸಮಯದಲ್ಲಿ ಎಲ್ಲೂ ಹೋಗುವ ಆಗಿಲ್ಲ ಎಂದು, ಆದರೂ ಸಹ ಕೆಲಸಕ್ಕೆ ಸೇರಿದ ಮೂರನೇ ದಿನಕ್ಕೆ ನಿಮ್ಮ ಮನೆಯವರು ಯಾರು ಕೇಳಿಕೊಂಡು ಬಂದಿದ್ದಾರಂತೆ ಎಂದು ಬೈದಿದ್ದಾರೆ.

ನೀನು ಈಗ ಹೋಗುವ ಕೆಲಸವನ್ನ ಸಂಜೆ ಅಷ್ಟರಲ್ಲಿ ಮಾಡಿ ಹೋಗಬೇಕು ಎಂದು ಸೂಪರ್ ವೈಸರ್ ಹೇಳಿದ್ದಾನೆ. ಇದಕ್ಕೆ ಆರಾಧನಾ ಸರಿ ಎಂದು ಹೇಳಿದ್ದಾಳೆ. ಆರಾಧನಾ ಹೊರಗೆ ಹೋಗುವುದನ್ನು ಬೇರೆಯವರು ನೋಡಿ ನಕ್ಕಿದ್ದಾರೆ. ಪುರುಷೋತ್ತಮ್ ಬಳಿ ಬಂದ ಆರಾಧನಾ ಕಣ್ಣೀರು ಹಾಕಿ ದಯವಿಟ್ಟು ಕೆಲಸ ಮಾಡುವ ಸಮಯದಲ್ಲಿ ಈ ರೀತಿ ಬರಬಾರದು. ನನಗೆ ಹಾಗೂ ಕೆಲಸಕ್ಕೆ ತೊಂದರೆಯಾಗುತ್ತದೆ ಎಂದು ಹೇಳಿದ್ದಾಳೆ.
ಪುರುಷೋತ್ತಮ್‌ಗೆ ಕೈ ಮುಗಿದ ಆರಾಧನಾ
ಆರಾಧನಾ ಮಾತಿಗೆ ಪುರುಷೋತ್ತಮ್ ನಿನಗೆ ಸಿಗುವ ಚಿಲ್ಲರೆ ಕಾಸಿಗೆ ನೀನು ಇಲ್ಲಿ ಕೆಲಸ ಮಾಡಬೇಕಾ? ನಾನು ನಮ್ಮ ಅಮ್ಮ ಇಡೀ ಬೀದಿಗೆ ಬಡ್ಡಿಯನ್ನು ಕೊಟ್ಟಿದ್ದೇವೆ ಎಂದಿದ್ದಾನೆ. ಇದಕ್ಕೆ ಆರಾಧನಾ ದಯವಿಟ್ಟು ಮತ್ತೊಮ್ಮೆ ಇಲ್ಲಿಗೆ ಬರಬೇಡಿ ಎಂದು ಕೈಮುಗಿದು ಪುರುಷೋತ್ತಮ್‌ನನ್ನು ಅಲ್ಲಿಂದ ಕಳುಹಿಸಿದ್ದಾಳೆ.
ಆರಾಧನಾಗೆ ಹೊಸ ಕೆಲಸ
ಜೊತೆಯಲ್ಲಿ ಕೆಲಸ ಮಾಡುವ ಮಹಿಳೆಯರು ಆರಾಧನಾಳನ್ನು ಎಂದಿನಂತೆ ಆಡಿಕೊಂಡಿದ್ದಾರೆ. ಏನಕ್ಕ ನಿನ್ನನ್ನು ಮದುವೆಯಾಗುವ ಹುಡುಗ ಬಹಳ ಸುಂದರವಾಗಿ ಇದ್ದಾನೆ. ಬೆಳಗ್ಗೆಯೇ ಸ್ವರ್ಗದಲ್ಲಿ ತೇಲಾಡುತ್ತಿದ್ದಾನೆ ಎಂದು ಆಡಿಕೊಂಡು ನಕ್ಕಿದ್ದಾರೆ.ನೀನು ಲೆಕ್ಕದಲ್ಲಿ ಮಾತ್ರ ಪಕ್ಕ ಮದುವೆಯಾಗುವ ಹುಡುಗನ ವಿಷಯದಲ್ಲಿ ಅಲ್ಲ ಎಂದು ಹಂಗಿಸಿದ್ದಾರೆ. ಈ ವೇಳೆ ಆರಾಧನಾ ಅಳುತ್ತಾ ಕೆಲಸ ಮಾಡಿದ್ದಾಳೆ. ಆರಾಧನಾಗೆ ಸೂಪರ್‌ವೈರಸ್ ಹೊಸ ಕೆಲಸ ವಹಿಸಿದ್ದಾನೆ.

ಹಣ ಸಂಪಾದನೆ ಮಾಡಿದ ಸುಶಾಂತ್
ಸುಶಾಂತ್ ಶಂಕ್ರಣ್ಣನ ಬೈಕ್ ತಗೆದುಕೊಂಡು ಹೋಗಿ 600 ರೂಪಾಯಿ ಸಂಪಾದನೆ ಮಾಡಿದ್ದಾನೆ. ಅದರಲ್ಲಿ 200 ರೂಪಾಯಿಯನ್ನ ಗಾಡಿ ಬಾಡಿಗೆ ಹಾಗೂ ಮೊಬೈಲ್ ಬಾಡಿಗೆಯನ್ನಾಗಿ ಕೊಟ್ಟಿದ್ದಾರೆ. ಇನ್ನು ಉಳಿದ 400 ರೂಪಾಯಿಯಲ್ಲಿ ಅಜ್ಜಿಯ ಸಾಲ ತೀರಿಸಿ ಆರಾಧನೆಗೆ ಬಳೆ ತೆಗೆದು ಕೊಡಬೇಕು ಎಂದುಕೊಂಡಿದ್ದಾನೆ. ಈ ವೇಳೆ ಆರಾಧನಾಳನ್ನ ಮಹಡಿಯ ಮೇಲೆ ಕರೆದುಕೊಂಡು ಹೋದಂತಹ ಸುಶಾಂತ್ ತಾನು ಕೆಲಸಕ್ಕೆ ಹೋಗುತ್ತಿರುವ ವಿಷಯವನ್ನು ತಿಳಿಸಿದ್ದಾನೆ.
ಸುಶಾಂತ್ 600 ರೂಪಾಯಿ ಸಂಪಾದನೆ ಮಾಡಿರುವುದಾಗಿ ಹೇಳಿದ್ದಕ್ಕೆ ಆರಾಧನಾ ತುಂಬಾ ಖುಷಿಪಟ್ಟಿದ್ದಾಳೆ. ನಂತರ ಸುಶಾಂತ್ ಬಳಿ ಚಾಂದಿನಿ ಫೋನ್ ಮಾಡಿರುವ ವಿಷಯವನ್ನು ಹೇಳಿದ್ದಾಳೆ. ಹೂ ಮಾರುವವರು ಕರೆದ್ರಾ ಎಂದು ಕೇಳಿದ್ದಾನೆ. ಇದಕ್ಕೆ ಆರಾಧನಾ ಹೌದು ನಾಳೆ ಬೆಳಗ್ಗೆ ಹೋಗಬೇಕು ಎಂದು ಅಂದಿದ್ದಾಳೆ. ಇದೇ ಜೋಶ್ ನಾಳೆಯು ಸಹ ಇರಲಿ ಎಂದು ಸುಶಾಂತ್‌ಗೆ ಶುಭ ಹಾರೈಸಿದ್ದಾಳೆ. ಈ ವೇಳೆ ಸುಶಾಂತ್ ಸಹ ಆಕೆಗೆ ಶುಭ ಹಾರೈಸಿದ್ದಾನೆ.


Click it and Unblock the Notifications











