Antarapata: ಚಾಂದಿನಿ ಆಫರ್ ರಿಜೆಕ್ಟ್ ಮಾಡಿಬಿಟ್ಲಾ ಆರಾಧನಾ.!? ಅವಳ ಕನಸಿನ ಕಥೆಯೇನು?

By ಶೃತಿ ಹರೀಶ್ ಗೌಡ

ಸುಶಾಂತ್ ಬಳಿ ಆರಾಧನಾ ನನ್ನನ್ನು ಭೇಟಿಯಾಗಲು ಚಾಂದಿನಿ ಕರೆದಿದ್ದಾರೆ. ನಾನು ಅಲ್ಲಿಗೆ ಹೋಗಿ ನಂತರ ಗಾರ್ಮೆಂಟ್ಸ್ ಫ್ಯಾಕ್ಟರಿಗೆ ಹೋಗಿ ಬಾಗಿಲು ತೆಗೆಯಬೇಕು ಎಂದು ಹೇಳಿದ್ದಾಳೆ. ಇದಕ್ಕೆ ಸುಶಾಂತ್ ಬೇಗನೆ ಹೋಗಿ ಅದೇನು ಹೇಳುತ್ತಾರೆ ಕೇಳಿ ಎಂದು ಹೇಳಿದ್ದಾನೆ. ಆರಾಧನಾ ಬೇಗನೆ ಎದ್ದು ಚಾಂದಿನಿಯನ್ನ ಭೇಟಿ ಮಾಡಲು ಹೋಗಿದ್ದಾಳೆ.

ಸುಶಾಂತ್ ತನ್ನ ಕೆಲಸಕ್ಕೆ ಹೋಗಲು ಗಾಡಿಯನ್ನು ಹೊರೆಸುತ್ತಿದ್ದಾನೆ. ಇದೇ ವೇಳೆ ಅಲ್ಲಿಗೆ ಬಂದಂತಹ ಮಹೇಶ್ ಇಂದು ಸಿರಿಯನ್ನು ಕಾಲೇಜಿಗೆ ಬಿಡಬೇಕು ಎಂದು ಕೇಳಿಕೊಂಡಿದ್ದಾನೆ. ಇದಕ್ಕೆ ಸುಶಾಂತ್ ಓಕೆ ಎಂದು ಹೇಳಿದ್ದಾನೆ. ಇನ್ನು ಇದೇ ವೇಳೆ ಸಿರಿ ನನಗೆ ಬಳೆಯನ್ನು ತಂದಿದ್ರಿ ಅಲ್ವಾ? ಸರ್ಪ್ರೈಸ್ ಗಿಫ್ಟ್ ಕೊಡಲು. ಅದನ್ನ ಕೊಡಿ ನಾನು ಬಳೆಗೆ ಮ್ಯಾಚಿಂಗ್ ಆಗುವ ಬಟ್ಟೆಯನ್ನು ಹಾಕಿಕೊಂಡಿದ್ದೇನೆ ಎಂದು ಸುಶಾಂತ್ ಬಳಿ ಕೇಳಿದ್ದಾಳೆ.

Antarapata-Serial

ಸುಶಾಂತ್ ನಾನು ಅದನ್ನು ತುಂಬಾ ಮುಖ್ಯವಾದವರಿಗೆ ಕೊಡಲು ತಂದಿದ್ದೆ ಎಂದು ಹೇಳಿದ್ದಾನೆ. ಈ ವಠಾರದಲ್ಲಿ ಮುಖ್ಯವಾದವರು ಯಾರು ಎಂದುಕೊಂಡು ಸಿರಿ ಕೋಪ ಮಾಡಿಕೊಂಡಿದ್ದಾಳೆ. ಬನ್ನಿ ಕಾಲೇಜಿಗೆ ಬಿಡುತ್ತೇನೆ ಎಂದು ಕೇಳಿದ್ದಕ್ಕೆ ನನಗೆ ಕಾಲೇಜಿಗೆ ಹೋಗಲು ಮೂಡಿಲ್ಲ ಎಂದು ಮನೆ ಒಳಗೆ ಹೋಗಿದ್ದಾಳೆ. ಮಹೇಶ್ ಬಳಿ ಇಂದು ನನಗೆ ಕಾಲೇಜಿಗೆ ಹೋಗಲು ಇಷ್ಟವಿಲ್ಲ ಎಂದು ಕೋಪದಿಂದ ಹೇಳಿದ್ದಾಳೆ.

ಚಾಂದಿನಿ‌ ಭೇಟಿಯಾದ ಆರಾಧನಾ

ಆರಾಧನಾ, ಚಾಂದಿನಿಯನ್ನು ಭೇಟಿಯಾಗಿದ್ದಾಳೆ. ಇನ್ನೂ ಸಮಯ ನೋಡಿದಾಗ ಎಂಟೂವರೆ ಆಗಿದೆ‌. ಬೇಗನೆ ಮೇಡಂ ಜೊತೆ ಮಾತನಾಡಿಕೊಂಡು ಆದಷ್ಟು ಬೇಗ ಗಾರ್ಮೆಂಟ್ಸ್ ತಲುಪಿ ನಾನು ಗಾರ್ಮೆಂಟ್ಸ್ ಸ್ಟಾಕ್ ಕ್ಲಿಯರೆನ್ಸ್ ಬಾಗಿಲನ್ನ ತೆಗೆಯಬೇಕು ಎಂದುಕೊಂಡಿದ್ದಾಳೆ. ಇನ್ನು ಚಾಂದಿನಿಗೆ ಮೇಡಂ ನೀವು ಕೊಟ್ಟಿರುವ ಆಫರ್ ಅನ್ನು ನಾನು ತಿರಸ್ಕರಿಸುತ್ತಿದ್ದೇನೆ. ನಾನು ಈಗ ಬೇರೆ ಕಡೆ ಕೆಲಸಕ್ಕೆ ಸೇರಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.

Antarapata-Serial

ಆರಾಧನಾ ಅಷ್ಟು ಹೇಳಿದರೂ ಸಹ ಚಾಂದಿನಿಗೆ ಆರಾಧನಾಳನ್ನ ಬಿಟ್ಟು ಕೊಡಬೇಕು ಎನಿಸುತ್ತಿಲ್ಲ. ನೀನು ನನ್ನ ಒಡಹುಟ್ಟಿದ ತಂಗಿ ಇದ್ದ ರೀತಿ ಎಂದಿದ್ದಾಳೆ. ನಿನ್ನ ಅಪ್ಪನ ಕನಸನ್ನ ಈಡೇರಿಸಬೇಕು ಎಂದರೆ ನೀನು ನನ್ನ ಜೊತೆಗೆ ಕೆಲಸ ಮಾಡಬೇಕು. ಅದು ಸಹ ಸಬ್ ಕಾಂಟ್ರಾಕ್ಟರ್ ಆಗಿ ನೀನು ಕೆಲಸ ಮಾಡಿದರೆ. ನಿನ್ನ ಗುರಿಗೆ ಹತ್ತಿರವಾಗುತ್ತೀಯಾ ಎಂದು ಆರಾಧನಾಗೆ ಚಾಂದಿನಿ ಹೇಳಿದ್ದಾಳೆ.

ಒಂದು ದಿನ ಟೈಮ್ ಕೇಳಿದ ಆರಾಧನಾ

ನಿನ್ನ ಮನೆಯಲ್ಲಿ ಏನು ನಡೆಯುತ್ತಿದೆ ಎಂದು ನಾನು ಹೇಳಿದರೆ ಅದು ಸರಿ ಬರುವುದಿಲ್ಲ ಎಂದು ಆರಾಧನಾಗೆ ಚಾಂದಿನಿ ಹೇಳಿದ್ದಾಳೆ. ನಿನ್ನ ಸಮಸ್ಯೆಗಳೆಲ್ಲವನ್ನು ನಾನು ಪರಿಹಾರ ಮಾಡುತ್ತೇನೆ ನೀನು ನನ್ನ ಜೊತೆಗೆ ಕೆಲಸ ಮಾಡು ಎಂದಿದ್ದಾಳೆ. ಇದೆಲ್ಲವನ್ನು ಕೇಳಿದ ಆರಾಧನಾ ಒಂದು ದಿನ ಟೈಮ್ ಕೊಡಿ ಎಂದು ಚಾಂದಿನಿಯ ಬಳಿ ಕೇಳಿಕೊಂಡಿದ್ದಾಳೆ. ಗಾರ್ಮೆಂಟ್ಸ್ ಕೆಲಸಕ್ಕೋಸ್ಕರ ತನ್ನ ಕನಸಿಗೆ ಆರಾಧನಾ ಕೊಳ್ಳಿ ಇಟ್ಟುಕೊಳ್ಳುತ್ತಾಳಾ ನೋಡಬೇಕಿದೆ.

ತಮ್ಮನ ಬಗ್ಗೆ ಅಮಲಾ ಗೂಢಾಚಾರಿಕೆ..!

ತಮ್ಮ ಎಲ್ಲಿದ್ದಾನೆ ಎಂದು ತಿಳಿದುಕೊಳ್ಳಲು ಅಮಲಾ ಗೂಢಾಚಾರಿಗಳನ್ನು ಬಿಟ್ಟಿದ್ದಾಳೆ. ಅವರನ್ನು ಭೇಟಿಯಾದ ಅಮಲಾ ತಮ್ಮ ಎಲ್ಲಿದ್ದಾನೆ ಎಂದು ಕೇಳಿದಾಗ ಅವನು ಗೋವಾ ರೆಸಾರ್ಟ್‌ನಲ್ಲಿರುವುದಾಗಿ ಅವರು ಹೇಳಿದ್ದಾರೆ. ಆದರೆ ಅಮಲಾಗೆ ಸುಶಾಂತ್ ಗೋವಾದಲ್ಲಿ ಇರುವ ಬಗ್ಗೆ ನಂಬಿಕೆ ಇಲ್ಲ.

ಆರಾಧನಾಗಾಗಿ ಹೊರಟ ಸುಶಾಂತ್

ಸುಶಾಂತ್ ಕೆಂಪಮ್ಮ ಅಜ್ಜಿಯ ಬಳಿ ಮಾತನಾಡುವಾಗ ಕೆಂಪಮ್ಮ ಅಜ್ಜಿ ನನ್ನ ಮಗ ಬರುತ್ತಾನೆ ಎಂದು ಕಾಯುತ್ತಾ ಇರುತ್ತಾರೆ. ಈ ವೇಳೆ ಸುಶಾಂತ್ ನನ್ನ ತಾಯಿಯು ಸಹ ನನ್ನ ದಾರಿ ಕಾಯುತ್ತಾ ಇರಬಹುದು ಎಂದು ಯೋಚನೆ ಮಾಡಿದ್ದಾನೆ. ಈ ವೇಳೆ ಆರಾಧನಾ, ಸುಶಾಂತ್‌ಗೆ ಕರೆ ಮಾಡಿ ನಾನು ಲೊಕೇಶನ್ ಕಳುಹಿಸುತ್ತೇನೆ. ದಯವಿಟ್ಟು ಬೇಗ ಬನ್ನಿ ಎಂದು ಹೇಳಿದ್ದಾಳೆ. ಅಷ್ಟರಲ್ಲೇ ಸುಶಾಂತ್ ತನ್ನ ಗಾಡಿ ತೆಗೆದುಕೊಂಡು ಆರಾಧನಾ ಇರುವ ಸ್ಥಳಕ್ಕೆ ಹೋಗುತ್ತಿದ್ದಾನೆ.

More from Filmibeat

English summary
Colors Kannada Antarapata serial update on July 11th episode. here is details about Aradana rejected chandini offer. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X