Antarapata: ಅಮಲಾ ಮೇಲೆ ಮೂರ್ತಿಗೆ ಅನುಮಾನ: ಸುಶಾಂತ್‌ಗೆ ಕೆಲಸಕ್ಕೆ ಹೋಗು ಎಂದ ಆರಾಧನಾ
ಸುಶಾಂತ್ ಹಾಗೂ ಮೂರ್ತಿ ಇಬ್ಬರು ನಡೆದುಕೊಳ್ಳುತ್ತಿರುವ ರೀತಿ ಮಹೇಶ್‌ಗೆ ಗೊಂದಲವನ್ನು ಹುಟ್ಟು ಹಾಕಿದೆ. ಯಾಕೆಂದರೆ ಯಾವುದೇ ಗುಟ್ಟು ಬಿಟ್ಟುಕೊಡದೆ ಅಲ್ಲಿಗೆ ಬನ್ನಿ ಇಲ್ಲಿಗೆ ಬನ್ನಿ. ಐದು ನಿಮಿಷ 10 ನಿಮಿಷ ಎಂದು ಹೇಳುತ್ತಿರುವುದಕ್ಕೆ ಮಹೇಶ್ ಸುಶಾಂತ್ ಬಳಿ ಪ್ರಶ್ನೆ ಮಾಡಿದ್ದಾನೆ. ನೀವು ಎನಾದ್ರು ಅಂಡರ್ ವರ್ಲ್ಡ್ ಡಾನ್ ಗಳ ಎಂದೆಲ್ಲಾ ಮಹೇಶ್ ಸುಶಾಂತ್ ಬಳಿ ಕೇಳಿದ್ದಾನೆ.
ಇದಕ್ಕೆ ಸುಶಾಂತ್ ಹೌದು , ನಾನು ನಾಲ್ಕು ಕೊಲೆಯನ್ನ ಮಾಡಿ ಇಲ್ಲಿ ಬಂದು ಸೇರಿಕೊಂಡಿದೇನೆ. ನೀವು ಮೂರ್ತಿ ಅಂಕಲ್ ಕೈಗೆ ಸಿಗಬೇಡಿ ಹುಷಾರ್ ಎಂದೆಲ್ಲಾ ತಮಾಷೆ ಮಾಡಿದ್ದಾನೆ. ಆರಾಧನಾ ಬೇಸರದಲ್ಲಿ ಇರುವುದರಿಂದ ಕೆಂಪಮ್ಮ ಅಜ್ಜಿ ಆರಾಧನಾಗೆ ಸಮಾಧಾನವನ್ನು ಮಾಡುತ್ತಿದ್ದಾರೆ. ನೀನು ಧೃತಿ ಗಿಡದ ನಿನ್ನ ಮುಂದಿನ ಹೆಜ್ಜೆಯನ್ನ ಇರಿಸು ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಕೆಂಪಮ್ಮಜ್ಜಿ ಆರಾಧನಾಗೆ ಹೇಳಿದ್ದಾರೆ.

ಆರಾಧನಾ ಹಾಗೂ ಕೆಂಪಮ್ಮ ಅಜ್ಜಿ ಮಾತನಾಡುತ್ತಿರುವುದನ್ನು ನೋಡಿದ ಸುಶಾಂತ್ ಅಲ್ಲಿಗೆ ಹೋಗಿದ್ದಾನೆ. ಇದೇ ವೇಳೆ ಆರಾಧನಾ ಬಳಿ ನಿಮ್ಮ ದಿನ ಹೇಗಿತ್ತು ಎಂದೆಲ್ಲಾ ಕೇಳಿದ್ದಾನೆ. ಆರಾಧನಾ ಚೆನ್ನಾಗಿ ಇತ್ತು ಎಂದು ಸುಳ್ಳನ್ನ ಹೇಳಿದ್ದಾಳೆ. ಇನ್ನು ಆರಾಧನಾಳಿಗಾಗಿ ಸುಶಾಂತ್ ಒಂದು ಗಿಫ್ಟ್ ತಂದಿದ್ದೇನೆ ಎಂದು ಹೇಳಿದ್ದಾನೆ. ನಿಮ್ಮ ಮುಖದಲ್ಲಿ ನಗು ಅರಳಿಸಿದ್ವ ಗಿಫ್ಟ್ ಅದು ಎಂದೆಲ್ಲಾ ಸುಶಾಂತ್ ಹೇಳಿದ್ದಾನೆ.
ಆರಾಧನಾಳಿಗಾಗಿ ಸುಶಾಂತ್ ಗಿಫ್ಟನ್ನ ತಂದಿದ್ದಾಗಿ ತಾನು ತಂದಿರುವ ಬಳೆಯನ್ನ ಸುಶಾಂತ್ ಆರಾಧನೆಗೆ ತೋರಿಸಿದ್ದಾನೆ. ಇದೇ ವೇಳೆ ಆರಾಧನಾ ಕೋಪದಿಂದ ಗಿಫ್ಟ್ ತರಲು ಸಾಲ ಮಾಡಿದ್ದೀರಾ ಎಂದು ಕೇಳಿದ್ದಾಳೆ. ಇದಕ್ಕೆ ಸುಶಾಂತ್ ಕೆಂಪಮ್ಮ ಅಜ್ಜಿ ಬಳಿ ಸಾಲ ತೆಗೆದುಕೊಂಡಿರುವ ವಿಷಯವನ್ನು ತಿಳಿಸಿದ್ದಾನೆ. ನಾನು ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡಿದ ಮೇಲೆ ಹಣವನ್ನ ಹಿಂತಿರುಗಿಸುವುದಾಗಿ ಆರಾಧನಾ ಬಳಿ ಹೇಳಿದ್ದಾನೆ.
ಆರಾಧನಾ ಮೊದಲು ನೀವು ಸಂಪಾದನೆಯನ್ನು ಮಾಡಬೇಕು ಆನಂತರ ನಾನು ಗಿಫ್ಟ್ ತಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾಳೆ. ಇದಕ್ಕೆ ಸುಶಾಂತ್ ನಾನು ನಾಳೆಯಿಂದ ಸಂಪಾದನೆ ಮಾಡುತ್ತೇನೆ. ನನ್ನ ಖರ್ಚಿಗೆ ಹಣವನ್ನ ನಾನೇ ಸಂಪಾದಿಸುತ್ತೇನೆ ಎಂದು ಆರಾಧನಾ ಬಳಿ ಹೇಳಿದ್ದಾನೆ. ಇದೇ ವೇಳೆ ಆರಾಧನಾ ಕರೆಂಟ್ ಬಿಲ್ ಕಟ್ಟಲು ಮಾಡಿದ ಸಾಲ ಹಾಗೂ ಬಳೆ ತರಲು ಮಾಡಿದ ಸಾಲವನ್ನು ನೀವೇ ತೀರಿಸಬೇಕು ಎಂದು ಹೇಳಿದ್ದಾಳೆ. ಆರಾಧನಾ ಮಾತಿಗೆ ಸುಶಾಂತ್ ಒಪ್ಪಿಕೊಂಡಿದ್ದಾನೆ.
ಮನೆಯಲ್ಲಿ ಸುಶಾಂತ್ ಬಂದ ಜಾಗಕ್ಕೆ ಪೊಲೀಸರು ಏಕೆ ಬಂದರು ಎಂಬ ಬಗ್ಗೆ ಚರ್ಚೆಯಾಗುತ್ತಿದೆ. ಅದು ಅಲ್ಲದೆ ಎಸ್ ಪಿ ಮಫ್ತಿಯಲ್ಲಿ ಬಂದು ಸುಶಾಂತ್ ನನ್ನ ಹಿಡಿದೆ ಹಿಡಿಯುತ್ತೇನಆಗಿದೆ. ಅಂದುಕೊಂಡಿದ್ದನು.ನಾನು ಹೇಗೋ ಎಸ್ಪಿಯನ್ನು ನೋಡಿದೆ ಕೂಡಲೇ ಸುಶಾಂತ್‌ನನ್ನು ಬಚಾವ್ ಮಾಡಿದೆ ಎಂದು ಧರ್ಮೇಂದ್ರ ಬಳಿ ಮೂರ್ತಿ ಹೇಳಿತ್ತಿದ್ದಾನೆ. ನಾನು ಮನೆಯಲ್ಲಿ ಮಾತನಾಡಿದ್ದು, ಹೇಗೆ ಪೊಲೀಸಿವರಿಗೆ ತಿಳಿದಿದೆ ಎಂದು ಮೂರ್ತಿ ಪ್ರಶ್ನೆಯನ್ನು ಮಾಡಿದ್ದಾನೆ.
ಈ ವೇಳೆ ಸಾವಿತ್ರಿ ಬಳಿ ಅತ್ತಿಗೆ ನಾನು ನಿಮ್ಮ ಬಳಿ ಮಾತನಾಡಿದ್ದನ್ನು ಯಾರ ಬಳಿಯೂ ಹೇಳಬೇಡಿ ಎಂದಿದ್ದೇ ನೀವು ಯಾರ ಬಳಿ ಹೇಳಿದ್ರಿ ಎಂದೆಲ್ಲಾ ಕೇಳಿದ್ದಾನೆ.ಇದಕ್ಕೆ ಸಾವಿತ್ರಿ ನಾನು ಮನೆಯವರಿಗೆ ಮಾತ್ರ ಹೇಳಿದ್ದೇ ಬೇರೆ ಯಾರ ಬಳಿಯೂ ಅಲ್ಲ ಎಂದು ಹೇಳಿದ್ದಾಳೆ. ಈ ವೇಳೆ ಮೂರ್ತಿಗೆ ಅಮಲಾ ಮೇಲೆ ಅನುಮಾನ ಬಂದಿದೆ. ಅಷ್ಟರಲ್ಲಿ ಅಮಲಾ ಮಧ್ಯಪ್ರವೇಶ ಮಾಡಿ ಮನೆಯವರ ಮೇಲೆ ಅನುಮಾನ ಪಡಲು ಆಗುತ್ತಾ ಎಂದಿದ್ದಾಳೆ. ಸುಶಾಂತ್ ಆರೆಸ್ಟ್ ಆಗದೇ ಇರುವುದಕ್ಕೆ ಬೇಸರ ಸಹ ಆಗಿದೆ.


Click it and Unblock the Notifications











