Antarapata: ಕನಸಿಗೆ ಕೊಳ್ಳಿ ಇಟ್ಟಳಾ ಆರಾಧನಾ? ಕೆಲಸಕ್ಕೆ ಹೊರಟ ಸುಶಾಂತ್..!

By ಶೃತಿ ಹರೀಶ್ ಗೌಡ

ಆರಾಧನಾ ಗಾರ್ಮೆಂಟ್ಸ್‌ನಲ್ಲಿ ಲೆಕ್ಕಪತ್ರಗಳನ್ನು ನೋಡಿಕೊಳ್ಳುತ್ತಿರುವುದಕ್ಕೆ ಸದಾನಂದ್ ಎನ್ನುವವರಿಗೆ ಸ್ವಲ್ಪವೂ ಸಹ ಇಷ್ಟವಿಲ್ಲ. ಯಾಕೆಂದರೆ ಲೆಕ್ಕಪತ್ರ ಸರಿಯಾಗಿ ಇಲ್ಲ ಎಂದು ಆರಾಧನಾ ಅಕೌಂಟ್ ನೋಡಿಕೊಳ್ಳುವವರ ಬಳಿ ಹೇಳಿದ್ದಾಳೆ. ಇದು ಅಲ್ಲಿ ಕೆಲಸ ಮಾಡುತ್ತಿರುವವರಿಗೆ ಮುಜುಗರ ತಂದಿದೆ.

ಈಗಷ್ಟೇ ಕೆಲಸಕ್ಕೆ ಸೇರಿದ ಹುಡುಗಿ ನಮ್ಮ ಮೇಲೆ ಯಾವ ಈ ರೀತಿಯಾಗಿ ಹೇಳಿದ್ದಾಳಲ್ಲ ಎಂದು ಕೋಪವನ್ನು ಮಾಡಿಕೊಂಡಿದ್ದಾಳೆ. ಆರಾಧನಾ ಇಲ್ಲ ಸಲ್ಲದ ಟಾರ್ಚರ್‌ನ್ನು ಕೊಡುತ್ತಿದ್ದಾರೆ. ಇನ್ನು ಮನೆಗೆ ಬಂದಂತಹ ಸದಾ, ಮಹೇಶ್ ಬಳಿ ನಿನ್ನ ಮಗಳಿಗೆ ಇಲ್ಲದ ಉಸಾಬರಿ ಯಾಕೆ ಎಂದೆಲ್ಲ ಹೇಳಿ ತಲೆಕೆಡಿಸಿದ್ದಾನೆ. ಇದಕ್ಕೆ ಮಹೇಶ್, ಆರಾಧನೆಗೆ ಬೈದು ನಿನಗೆ ಮದುವೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ಕೊಟ್ಟಿದ್ದಾನೆ.

Antarapata- serial

ಗಾರ್ಮೆಂಟ್ಸ್‌ಗೆ ಬಂದಂತಹ ಆರಾಧನಾಗೆ ಎಲ್ಲರೂ ಕಿರಿಕಿರಿ ಮಾಡುತ್ತಿದ್ದಾರೆ. ಸೂಪರ್ವೈಸರ್ ಅಲ್ಲಿಗೆ ಬಂದು ಏನಂತ ನೀನು ಹೊಲಿಗೆ ಹಾಕಿದ್ದೀಯಾ. 20 ಪೀಸ್‌ಗಳು ರಿಜೆಕ್ಟ್ ಆಗಿದೆ ಎಂದು ಬೈದಿದ್ದಾನೆ. ನಾಲ್ಕು ಗಂಟೆ ಕೆಲಸ ಮಾಡಿ, ಎರಡು ಗಂಟೆ ಬೇರೆ ಕೆಲಸ ಮಾಡುವುದಲ್ಲ‌. ಮಾಡುವ ಕೆಲಸದ ಮೇಲೆ ಶ್ರದ್ಧೆ ಇರಬೇಕು ಎಂದೆಲ್ಲಾ ಆರಾಧನಾ ಮೇಲೆ ರೇಗಾಡಿದ್ದಾರೆ. ಆರಾಧನಾ ಇದೆಲ್ಲವನ್ನೂ ಮೂಕ ಪ್ರೇಕ್ಷಕಳಾಗಿ ಕೇಳಿಸಿಕೊಂಡು ಸುಮ್ಮನೆ ಆಗಿದ್ದಾಳೆ.

ಆರಾಧನಾ ಕನಸಿಗೆ ಬಂತು ರೆಕ್ಕೆ

ಚಾಂದಿನಿ, ಆರಾಧನಾಗೆ ಕರೆ ಮಾಡಿ ನಿಮಗೆ ಒಂದು ದೊಡ್ಡ ಕಾಂಟ್ರಾಕ್ಟ್ ಕೆಲಸ ಸಿಕ್ಕಿದೆ, ನಾಳೆ ಬೆಳಿಗ್ಗೆ ಆಫೀಸ್‌ಗೆ ಬನ್ನಿ ಎಂದು ಕರೆದಿದ್ದಾರೆ. ಚಾಂದಿನಿಗೆ ಆರಾಧನಾ ಮೇಡಂ ದಯವಿಟ್ಟು ಕ್ಷಮಿಸಿ. ನಾನು ಈಗ ಕೆಲಸಕ್ಕೆ ಬರುವಂತಿಲ್ಲ. ಮತ್ತೊಂದು ಕೆಲಸಕ್ಕೆ ನಾನು ಸೇರಿಕೊಂಡಿದ್ದೇನೆ ಎಂದಿದ್ದಾಳೆ. ಚಾಂದಿನಿ ಇದು ನಿಮ್ಮ ಕನಸು ಎಂದು ಹೇಳಿದ್ದಕ್ಕೆ, ಈಗಲೂ ಸಹ ಕನಸು ಹಾಗೇ ಇದೆ. ಆದರೆ ನಾನು ಈಗ ಹೋಗಿರುವ ಕೆಲಸಕ್ಕೆ ಬಿಟ್ಟು ಬರುವ ಹಾಗಿಲ್ಲ ಎಂದು ಹೇಳಿದ್ದಾಳೆ.

Antarapata- serial

ಆರಾಧನಾಗೆ ಚಾಂದನಿ ಆಫರ್

ಇನ್ನು ಇದೇ ವೇಳೆ ಚಾಂದಿನಿ ನಾನು ಯಾರನ್ನು ಸಹ ಇಷ್ಟು ಒತ್ತಾಯ ಮಾಡಿರಲಿಲ್ಲ. ನನ್ನನ್ನು ಸಹ ಯಾರು ಇಷ್ಟ ಆಗಿ ಕೆಲಸ ಬೇಕು ಎಂದು ಪೀಡಿಸಿರಲಿಲ್ಲ. ನೀನು ಕೇಳಿದ್ದಕ್ಕೆ ನಾನು ಕೆಲಸವಿದೆ ಬಾ ಎಂದು ಕರೆಯುತ್ತಿದ್ದೇನೆ ಎಂದು ಆರಾಧನಾಗೆ ಹೇಳಿದ್ದಾರೆ. ನೀನು ನಾಳೆ ಬೆಳಿಗ್ಗೆ ಎಂಟು ಗಂಟೆಗೆ ಗೋಡೌನ್ ಬಳಿ ಬಾ, ನಾನು ಸಹ ನಿನಗಾಗಿ ಬರುತ್ತೇನೆ. ಕುಳಿತು ಮಾತಾಡೋಣ ಎಂದು ಚಾಂದಿನಿ, ಆರಾಧನಾಗೆ ಆಫರ್ ನೀಡಿದ್ದಾಳೆ.

ಧರ್ಮೇಂದ್ರಗೆ ಮಗನ ವಿಷಯದಲ್ಲಿ ಸಂಕಟ

ಇತ್ತ ಧರ್ಮೇಂದ್ರನಿಗೆ ಮನೆಯಲ್ಲಿ ಆಗುತ್ತಿರುವ ವಿಚಾರಗಳಿಗೆ ತುಂಬಾ ಸಂಕಟವಾಗುತ್ತಿದೆ. ಏನು ಮೂರ್ತಿ ಒಂದನ್ನು ಸರಿ ಮಾಡಲು ಹೋದರೆ ಇನ್ನೊಂದು ಸಮಸ್ಯೆ ಎದುರಾಗುತ್ತಿದೆ. ಇದನ್ನು ಯಾರಾದರೂ ಬೇಕು ಎಂದು ಮಾಡುತ್ತಿದ್ದಾರಾ . ನನ್ನ ಬಿಸಿನೆಸ್ ಮೇಲೆ ಅವರಿಗೆ ಕಣ್ಣು ಬಿದ್ದಿದ್ಯಾ, ನಾನು ಕೆಳಕ್ಕೆ ಬಂದು ಬಿಡುತ್ತೇನೆ ಎಂದೆಲ್ಲಾ ಮೂರ್ತಿ ಬಳಿ ಧರ್ಮೇಂದ್ರ ಹೇಳುತ್ತಿದ್ದಾರೆ. ಯಾರೋ ನನ್ನನ್ನ ಬಂಧಿಸಲು ನೋಡುತ್ತಿದ್ದಾರೆ. ಎಂದೆಲ್ಲಾ ಧರ್ಮೇಂದ್ರ ಹೇಳುವಾಗ ಮೂರ್ತಿ ಯಾವುದಾದರೂ ಹಿಲ್ ಸ್ಟೇಷನ್‌ಗೆ ಹೋಗಿ ಬಾ ಎಂದಿದ್ದಾನೆ.

ಕೆಲಸಕ್ಕೆ ಹೊರಟ ಸುಶಾಂತ್

ದೊಡ್ಡ ಮನೆಯ ಹುಡುಗ ಸುಶಾಂತ್ ಐದಾರು ಪಿಜ್ಜಾ ತರಿಸಿಕೊಂಡು ತಿನ್ನುತ್ತಿದ್ದವನು, ಈಗ ಪಿಜ್ಜಾ ಡೆಲಿವರಿ ಬಾಯ್ ಆಗಿ ಕೆಲಸಕ್ಕೆ ಸೇರಿಕೊಂಡಿದ್ದಾನೆ. ಇದೇ ವೇಳೆ ದೇವರ ಬಳಿ ನನಗೆ ಆಶೀರ್ವಾದ ಮಾಡಪ್ಪ. ನಾನು ಹೊಸ ಕೆಲಸಕ್ಕೆ ಸೇರಿಕೊಂಡಿದ್ದೇನೆ ಎಂದು ಹೇಳಿದ್ದಾನೆ. ಈಗ ನನ್ನ ಮುಂದೆ ಒಂದು ಲಕ್ಷ ರೂಪಾಯಿ ಸಂಪಾದನೆ ಮಾಡುವ ಹಾಗೇ ಆಗಲಿ, ಅಜ್ಜಿಯ ಸಾಲ ತೀರಿಸಿ, ಆರಾಧನಾ ಮಾಡಿರುವ ಸಾಲವನ್ನು ತೀರಿಸಬೇಕು ಎಂದುಕೊಂಡಿದ್ದಾನೆ.

More from Filmibeat

English summary
Colors Kannada Antarapata serial update on July 7th episode. here is details about chandini calling to Aradana for new job, Darmendra disappointed to his lifestyle. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X