Antarapata: ಜೈಲಿನಿಂದ ಮಹೇಶನನ್ನು ಬಿಡಿಸಲು ಸೇಠು ಕಾಲಿಗೂ ಬಿದ್ದ ಆರಾಧನಾ

By ಶೃತಿ ಹರೀಶ್ ಗೌಡ

ಆರಾಧನಾ ಬದುಕು ಯಾವಾಗಲೂ ಸಹ ಕಷ್ಟದಿಂದಲೇ ಕೂಡಿದೆ. ಸ್ವಲ್ಪ ಸಂಪಾದನೆಯನ್ನ ಮಾಡಿ ನಿಟ್ಟುಸಿರು ಬಿಡಬೇಕು ಎನ್ನುವಷ್ಟರಲ್ಲಿ ಸಂಕಷ್ಟದ ಹಿಂದೆ ಸಂಕಷ್ಟ ಶುರುವಾಗ್ತಿದೆ. ಒಂದೊಂದೇ ಸಮಸ್ಯೆ ಎದುರಾಗುತ್ತಿದೆ. ಸದ್ಯಕ್ಕೆ ಮಹೇಶ್, ಸೇಠು ಬಳಿ ಹಣವನ್ನ ಪಡೆಕೊಂಡಿದ್ದ. ಆದರೆ ಅದನ್ನು ವಾಪಸ್ ಕೊಡದೇ ಧೀಮಾಕಿನಿಂದ ಮಾತನಾಡಿದ ಕಾರಣ ಸೇಠು ಈಗ ಮಹೇಶ್‌ನನ್ನು ಪೊಲೀಸ್ ಸ್ಟೇಷನ್‌ಗೆ ಹಾಕಿಸಿದ್ದಾನೆ.

ಈ ಕಡೆ ತನ್ನ ಅಮ್ಮನ ಗೋಳನ್ನ ನೋಡಲಾಗದ ಆರಾಧನಾ ಹೇಗಾದರೂ ಮಾಡಿ ಮಹೇಶನನ್ನು ಬಿಡಿಸಿಕೊಂಡು ಬರುತ್ತೇನೆ ಎಂದು ಪೋಲಿಸ್ ಸ್ಟೇಷನ್‌ಗೆ ಬಂದಿದ್ದಾಳೆ.‌ ಆದರೆ ಅಲ್ಲಿಗೆ ಸುಶಾಂತ್ ತಂದೆ ಧರ್ಮೇಂದ್ರ ಸಹ ಬಂದಿದ್ದು ಏನಾದರೂ ಸಹಾಯ ಬೇಕಾ ಎಂದು ಕೇಳಿದ್ದಾರೆ. ಆದರೆ ಇದು ಆರಾಧನಾಗೆ ಸ್ವಲ್ಪವೂ ಇಷ್ಟವಿಲ್ಲದೆ ಧರ್ಮೇಂದ್ರ ಪ್ರಧಾನ್‌ಗೆ ದಯವಿಟ್ಟು ನಮ್ಮನ್ನ ಬದುಕಲು ಬಿಡಿ ಎಂದು ಕೈಮುಗಿದಿದ್ದಾಳೆ.

Colors Kannada Antarapata serial written update on 13th episode

ಧರ್ಮೇಂದ್ರ ಪ್ರಧಾನ್ ಅಸಹಾಯಕನಾಗಿ ಅಲ್ಲಿಂದ ಹೊರಟು ಹೋಗಿದ್ದಾನೆ. ಈ ವೇಳೆ ಪೊಲೀಸ್ ಸ್ಟೇಷನ್‌ನಲ್ಲೂ ಸಹ ಆರಾಧನಾ ಅವಮಾ ಅನುಭವಿಸುವಂತಾಗಿದೆ.‌ ಇದೆಲ್ಲವನ್ನು ಮರೆಯಲು ನಿಂತು ನೋಡುತ್ತಿರುವ ಸುಶಾಂತ್‌ಗೆ ಬೇಸರವಾಗಿದೆ. ತಂದೆ ಮಾಡಿದ ತಪ್ಪಿಗೆ ಆರಾಧನಾ ಶಿಕ್ಷೆ ಅನುಭವಿಸುತ್ತಿದ್ದಾಳೆ ಎಂದು ಬೇಸರನ ಹೊರ ಹಾಕಿದ್ದಾನೆ.

ಕಾಲಿಗೆ ಬಿದ್ದರೂ ಕರಗದ ಸೇಠು

ಸೇಠು ಕಾಲಿಗೆ ಬಿದ್ದು ದಯವಿಟ್ಟು ಅವರನ್ನು ಬಿಡಿಸಿ ಎಂದು ಆರಾಧನಾ ಕೇಳಿಕೊಂಡಿದ್ದಾಳೆ. ಆದರೆ ಸೇಠು ಮಾತ್ರ ಆರಾಧನಾ ಕಾಲಿಗೆ ಬಿದ್ದರೂ ಸಹ ಮಣಿಯುತ್ತಿಲ್ಲ. ಇವನು ನನಗೆ ಅವಮಾನವನ್ನ ಮಾಡಿದ್ದಾನೆ ಎಲ್ಲರ ಎದುರುಗಡೆ ನನ್ನ ಮಾನ ಮರ್ಯಾದೆ ತೆಗೆದಿದ್ದಾನೆ. ಇವನು ನಾಲ್ಕು ದಿನ ಜೈಲಿನಲ್ಲಿ ಇರಲಿ ಎಂದು ಹೇಳುತ್ತಿದ್ದಾನೆ. ಆದರೆ ಆರಾಧನಾ ಅವರಿಂದಲೂ ಸಹ ನಿಮಗೆ ಕ್ಷಮೆ ಕೇಳಿಸುತ್ತೇನೆ ಎಂದಿದ್ದಾಳೆ.

Colors Kannada Antarapata serial written update on 13th episode

ಮಹೇಶ್ ಮಾತ್ರ ದುರಹಂಕಾರವನ್ನು ಬಿಡುತ್ತಿಲ್ಲ ನಾನು ಸಾಲ ತೆಗೆದುಕೊಂಡಿದ್ದೇನೆ. ಸಾಲವನ್ನು ವಾಪಸ್ ನೀಡುತ್ತೇನೆ, ನಾನು ಇವನ ಬಳಿ ಕ್ಷಮೆ ಕೇಳೋದಿಲ್ಲ ಎಂದು ಹೇಳುತ್ತಿದ್ದಾನೆ. ಮಹೇಶನ ಮಾತು ಕೇಳಿದ ಸೇಠುಗೆ ಇನ್ನಷ್ಟು ಕೋಪ ಬಂದಿದೆ. ನೋಡಿದ್ಯಾ ನೀನು ಕ್ಷಮೆ ಕೇಳಲು ಬಂದಿದ್ದೀಯಾ, ಆದರೆ ಅವನು ಯಾವ ರೀತಿ ಮಾತನಾಡುತ್ತಿದ್ದಾನೆ, ನಾನು ಮಾತ್ರ ಅವನನ್ನು ಸುಮ್ಮನೆ ಬಿಡೋದಿಲ್ಲ. ಇಲ್ಲೇ ಇರಲಿ ಜೈಲಿನಲ್ಲಿ ಇದ್ದುಕೊಂಡೇ ಅವನು ಅನುಭವಿಸಲಿ ಎಂದು ಸೇಠು ಹೇಳಿದ್ದಾನೆ.

ಆರಾಧನಾಗೆ ವಾರದ ಗಡುವು

ಮಹೇಶನನ್ನು ಪೊಲೀಸ್ ಸ್ಟೇಷನ್‌ನಿಂದ ಬಿಡಿಸಬೇಕಾದರೆ ಅವನು ಮಾಡಿರುವ 35,000 ರೂ. ಸಾಲವನ್ನು ನೀನು ಕೊಟ್ಟು ಅವನನ್ನು ಬಿಡಿಸಿಕೊಂಡು ಹೋಗು ಎಂದು ಸೇಠು ಪೊಲೀಸರ ಸಮ್ಮುಖದಲ್ಲಿ ಹೇಳಿದ್ದಾನೆ. ಆರಾಧನಾ ನನ್ನ ತಾಯಿ ಹಾಗು ತಂಗಿ ಗೋಳಾಡುತ್ತಿದ್ದಾರೆ, ದಯವಿಟ್ಟು ಬಿಡಿಸಿ ಎಂದು ಕೇಳಿದರು ಸಹ ನಾನು ವ್ಯಾಪಾರಸ್ಥ ನನ್ನಲ್ಲಿ ಭಾವನೆಗಳಿಗೆ ಬೆಲೆ ಇಲ್ಲ. ಹಣಕ್ಕೆ ಮಾತ್ರ ಬೆಲೆ ಎಂದು ಮುಖಕ್ಕೆ ಹೊಡೆದ ರೀತಿ ಆರಾಧನಾಗೆ ಸೇಠು ಹೇಳಿದ್ದಾನೆ.

ಹಣವನ್ನು ನೀಡುತ್ತೇನೆ ಎಂದು ಆರಾಧನಾ ಒಪ್ಪಿಕೊಂಡಿದ್ದಕ್ಕೆ ಒಂದು ವಾರದಲ್ಲಿ ನೀನು ಹಣ ಕೊಡಬೇಕು. ಏಳನೇ ದಿನ ಕಳೆದು ಎಂಟನೇ ದಿನವಾದರೆ ನನ್ನ ಕಡೆಯವರು ಬಂದು ನಿಮ್ಮ ಮನೆಯಲ್ಲಿರುವ ಸಾಮಾನುಗಳೆಲ್ಲ ತೆಗೆದುಕೊಂಡು ಹೋಗುತ್ತಾರೆ. ನಮ್ಮ ಕಡೆಯವರ ಬಗ್ಗೆ ನಿನಗೆ ಗೊತ್ತು ತಾನೆ ಎಂದು ಆರಾಧನಾ ಬಳಿ ಸೇಠು ಹೇಳಿದ್ದಾನೆ. ಆತನ ಮಾತಿಗೆ ಆರಾಧನಾ ಒಪ್ಪಿಕೊಂಡು ಮಹೇಶನನ್ನು ಬಿಡಿಸಿಕೊಂಡಿದ್ದಾಳೆ. ಆರಾಧನಾ ಒಬ್ಬಳೇ ಅಸಹಾಯಕಳಾಗಿ ಇರುವುದನ್ನು ನೋಡುತ್ತಿರುವ ಸುಶಾಂತ್‌ಗೆ ತುಂಬಾ ಬೇಸರವಾಗಿದೆ.

More from Filmibeat

English summary
Colors Kannada Antarapata serial written update on 13th episode. here is details about Aradana going to police station, Darmendra seen Sushant at police station. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X