Antarapata: ಮಹೇಶನನ್ನು ಜೈಲಿನಿಂದ ಬಿಡಿಸಿದ ಆರಾಧನಾ: ಹಸಿವಿನಿಂದ ನರಳಾಡುತ್ತಿರುವ ಸುಶಾಂತ್
'ಅಂತರಪಟ' ಧಾರಾವಾಹಿಯಲ್ಲಿ ಈಗ ಸುಶಾಂತ್ ಬಹಳ ಕಷ್ಟ ಪಡುತ್ತಿದ್ದಾನೆ. ಯಾಕೆಂದರೆ ಅವನು ಸುಖದ ಸುಪ್ಪತ್ತಿಗೆಯಲ್ಲಿ ಬೆಳೆದವನು. ಈಗ ಪ್ರತಿಯೊಂದಕ್ಕೂ ಸಹ ಅವನಿಗೆ ಹಣದ ಅವಶ್ಯಕತೆ ಇದೆ. ತನ್ನ ಹಸಿವನ್ನು ನೀಗಿಸಿಕೊಳ್ಳಲು ಸುಶಾಂತ್ ಕೈಯಲ್ಲಿ ಆಗುತ್ತಿಲ್ಲ. ಆರಾಧನಾ ಪೊಲೀಸ್ ಸ್ಟೇಷನ್‌ನಿಂದ ಮಹೇಶನನ್ನು ಬಿಡಿಸಿ ಮನೆಗೆ ಕರೆದುಕೊಂಡು ಬಂದಿದ್ದಾಳೆ. ಆದರೂ ಆತನ ದುರಾಂಕಾರ ಕಮ್ಮಿ ಆಗಿಲ್ಲ.
ಪೊಲೀಸ್ ಸ್ಟೇಷನ್‌ನಿಂದ ಬರುವಾಗಲೇ ಮಹೇಶ ಧಿಮಾಕಿನಿಂದ ಬಂದಿದ್ದಾನೆ. ಆಟೋ ಕರೆದ ಮಹೇಶ್ ಆಟೋ ಹತ್ತಿ ಕುಳಿತು ನಾನು ಬೆಳಗ್ಗೆಯಿಂದ ಏನನ್ನು ತಿಂದಿಲ್ಲ. ನನ್ನ ಜೊತೆ ಮನೆಗೆ ಬರುತ್ತೀಯೋ ಇಲ್ಲವೋ ಎಂದು ಆರಾಧನಾಗೆ ಹೇಳಿದ್ದಾನೆ. ಏನನ್ನು ಮಾತನಾಡದೇ ಆರಾಧನಾ ಆಟೋ ಹತ್ತಿ ಮನೆಗೆ ಮಹೇಶ್‌ನನ್ನು ಕರೆದುಕೊಂಡು ಬಂದು ತನ್ನ ತಾಯಿಗೆ ಕೊಟ್ಟ ಮಾತು ಉಳಿಸಿಕೊಂಡಿದ್ದಾಳೆ.

ಆರಾಧನಾ ಪೊಲೀಸ್ ಸ್ಟೇಷನ್‌ನಿಂದ ಬಹಳ ಬೇಸರದಲ್ಲಿ ಬರುವುದನ್ನು ನೋಡಿದ ಸುಶಾಂತ್ ಸಹ ಬೇಸರಗೊಂಡಿದ್ದಾನೆ. ನಾನು ಜೊತೆಯಲ್ಲಿ ಇದ್ದು ಸಮಾಧಾನವನ್ನು ಮಾಡಬೇಕಾಗಿತ್ತು. ಆದರೆ ನಾನು ಮರದ ಮೂಲೆಯಲ್ಲಿ ನಿಂತುಕೊಂಡು ಆರಾಧನಾ ಬರುತ್ತಿರುವುದನ್ನು ನೋಡುತ್ತಿದ್ದೇನೆ ಎಂದು ಬೇಸರಗೊಂಡಿದ್ದಾನೆ. ನಾನು ಆರಾಧನಾಗಾಗಿ ಏನು ಸಹಾಯ ಮಾಡಲು ಆಗಲಿಲ್ಲ ಎಂಬ ಬೇಸರ ಕಾಡುತ್ತಿದೆ.
ಆರಾಧನಾ ಕೆಲಸಕ್ಕಿಲ್ಲ ಕೃತಜ್ಞತೆ
ಆರಾಧನಾ ಪೊಲೀಸ್ ಸ್ಟೇಷನ್‌ಗೆ ಒಬ್ಬಳೇ ಹೋಗಿ ಮಹೇಶನನ್ನು ಬಿಡಿಸಿಕೊಂಡು ಬರುವ ಕೆಲಸವನ್ನು ಮಾಡಿದ್ದಾಳೆ. ಆದರೆ ಆರಾಧನಾ ಮಾಡಿದ ಕೆಲಸದ ಬಗ್ಗೆ ಮಹೇಶ್‌ಗೆ ಸ್ವಲ್ಪವೂ ಸಹ ಮೆಚ್ಚುಗೆ ಇಲ್ಲ ಆರಾಧನಾಗೆ ಒಂದು ಕೃತಜ್ಞತೆಯನ್ನು ಸಹ ಮಹೇಶ್ ವ್ಯಕ್ತಪಡಿಸಿಲ್ಲ. ಈ ಬಗ್ಗೆ ರೇವತಿ, ಮಹೇಶ್‌ನನ್ನು ಪ್ರಶ್ನೆ ಮಾಡಿದ್ದಾಳೆ. ಆ ಹೆಣ್ಣು ಮಗಳು ಒಬ್ಬಳೇ ಪೊಲೀಸ್ ಸ್ಟೇಷನ್‌ಗೆ ಬಂದು ನಿಮ್ಮನ್ನ ಬಿಡಿಸಿಕೊಂಡು ಬಂದಳು, ನಿಮಗೆ ಒಂದು ಕೃತಜ್ಞತೆಯನ್ನ ಹೇಳಲು ಆಗಲಿಲ್ಲ ಎಂದಿದ್ದಾಳೆ.

ಗಂಡು ಮಕ್ಕಳು ಮಾಡಬೇಕಾದ ಕೆಲಸವನ್ನ ಆರಾಧನಾ ಮಾಡಿದ್ದಾಳೆ, ಅವಳು ಮಾಡಿದ್ದ ಕೆಲಸಕ್ಕೆ ನೀವು ಒಂದು ಮೆಚ್ಚುಗೆಯನ್ನ ವ್ಯಕ್ತಪಡಿಸಿಲ್ಲ ಎಂದು ಮಹೇಶ್‌ಗೆ ರೇವತಿ ಹೇಳಿದ್ದಾಳೆ. ಇದನ್ನೆಲ್ಲಾ ಕೇಳಿಸಿಕೊಂಡ ಮಹೇಶ್ ಎದ್ದು ಸುಮ್ಮನೆ ರೂಮಿನ ಕಡೆ ಹೋಗಿ ಹೊದ್ದುಕೊಂಡು ಮಲಗಿದ್ದಾನೆ. ಮಹೇಶನ ಮಗಳು ಸಿರಿ ಹೋಗಿ ಅಪ್ಪನನ್ನು ಎಬ್ಬಿಸುವ ಕೆಲಸ ಮಾಡಿದ್ದಾಳೆ. ಆದರೂ ಸಹ ಮಹೇಶ ಈ ಮನೆಯಲ್ಲಿ ನನಗೆ ಏನು ಮರ್ಯಾದೆ ಇಲ್ಲ ಎಂದು ಸಿರಿ ಬಳಿ ಹೇಳಿ ಮತ್ತೆ ಹೊದ್ದುಕೊಂಡು ಮಲಗಿದ್ದಾನೆ.
ಸುಶಾಂತ್ ಕಾಡುತ್ತಿದೆ ಹಸಿವು
ಇತ್ತ ಸುಶಾಂತ್ ತನಗೆ ಬೇಕಾದನ್ನ ತಿಂದುಕೊಂಡು ತನಗೆ ಯಾವುದು ಇಷ್ಟ ಅದನ್ನೇ ತರಿಸಿಕೊಂಡು ತಿಂದು ಅಭ್ಯಾಸವಾಗಿ ಹೋಗಿತ್ತು. ಈಗ ಸುಶಾಂತ್‌ಗೆ ಹಸಿವು ಎಂದರೇನು ಎಂಬುದು ಅರ್ಥವಾಗುತ್ತಿದೆ. ಮನೆಯಲ್ಲಿ ಬೇಕಾದಂತೆ ತಿಂಡಿ ತಿನಿಸು ಎಲ್ಲವನ್ನು ತಿನ್ನುತ್ತಿದ್ದ ಸುಶಾಂತ್‌ಗೆ ಈಗ ಏನು ಇಲ್ಲದ ಪರಿಸ್ಥಿತಿ ಉಂಟಾಗಿದೆ. ಆರಾಧನಾ ಹಸಿವಿನ ಬಗ್ಗೆ ಹೇಳುತ್ತಿದ್ದ ಪಾಠ ಈಗ ಸುಶಾಂತ್‌ಗೆ ಅರ್ಥವಾದಂತೆ ಕಾಣಿಸುತ್ತಿದೆ. ರಸ್ತೆಯಲ್ಲಿ ನಡೆದುಕೊಂಡು ಬರುವಾಗ ಆರಾಧನಾ ಹಸಿವಿನ ಬಗ್ಗೆ ಹೇಳುತ್ತಿದ್ದ ಮಾತುಗಳು ನೆನಪಾಗಿ ಆಕೆಯನ್ನು ನೆನಪಿಸಿಕೊಂಡಿದ್ದಾನೆ.
ಮನೆಗೆ ನಟರಾಜ ಸರ್ವೀಸ್
ಯಾವತ್ತೂ ಕೂಡ ನಡೆದು ಅಭ್ಯಾಸ ಇಲ್ಲದ ಸುಶಾಂತ್ ಈಗ ಪೊಲೀಸ್ ಸ್ಟೇಷನ್‌ನಿಂದ ಮನೆಗೆ ನಡೆದುಕೊಂಡೆ ಬಂದಿದ್ದಾನೆ. ಈ ವೇಳೆ ಆತನ ಕಾಲಿನಲ್ಲಿ ಬೊಬ್ಬೆಗಳು ಬಂದಿವೆ. ಯಾವಾಗಲೂ ಕಾರಿನಲ್ಲೇ ತಿರುಗಾಡುತ್ತಿದ್ದ ಸುಶಾಂತ್ ಪಬ್, ಪಾರ್ಟಿ ಎಂದು ಫ್ರೆಂಡ್ಸ್ ಜೊತೆ ಮಜಾ ಮಾಡುತ್ತಿದ್ದನು. ಈಗ ತಂದೆಗೆ ಚಾಲೆಂಜ್ ಮಾಡಿ ನಾನು ಒಂದು ಲಕ್ಷ ರೂಪಾಯಿ ದುಡಿಯುತ್ತೇನೆ ಎಂದು ಮನೆಯಿಂದ ಹೊರಗೆ ಬಂದಿದ್ದು ಕಷ್ಟವನ್ನು ಅನುಭವಿಸುತ್ತಿದ್ದಾನೆ.


Click it and Unblock the Notifications











