Antarapata: ಮಹೇಶ್ ಬಗ್ಗೆ ಮಾತನಾಡಿದ ವಠಾದವರು; ಅಮ್ಮನಿಗಾಗಿ ಕ್ಷಮೆ ಕೇಳಿದ ಮಗಳು

By ಶೃತಿ ಹರೀಶ್ ಗೌಡ

ವಠಾರದವರೆಲ್ಲ ತನ್ನ ಬಗ್ಗೆ ಮಾತನಾಡಿದ್ದನ್ನು ಕೇಳಿಸಿಕೊಂಡು ಮಹೇಶ್ ಈಗ ರೇವತಿ ಹಾಗೂ ಆರಾಧನಾಳ ಮುಂದೆ ದೊಡ್ಡ ಡ್ರಾಮಾ ಶುರು ಮಾಡಿದ್ದಾನೆ. ರೇವತಿಯ ಕಾಲ ಬಳಿ ಬಂದಂತಹ ಮಹೇಶ್ ದಯವಿಟ್ಟು ನನ್ನನ್ನು ಕ್ಷಮಿಸಿ ಬಿಡು ನಾನು ಇನ್ಮುಂದೆ ಯಾವತ್ತೂ ಈ ರೀತಿ ಇರೋದಿಲ್ಲ ಎಂದು ನಾಟಕ ಶುರು ಮಾಡಿದ್ದಕ್ಕೆ ರೇವತಿ ಕಣ್ಣಿನಲ್ಲಿ ಕಣ್ಣೀರು ಹಾಕಿದ್ದಾಳೆ.

ಏನಾಯಿತು ಎಂದು ರೇವತಿ ಕೇಳಿದ್ದಕ್ಕೆ ವಠಾರದವರೆಲ್ಲರ ಮುಂದೆ ನನ್ನನ್ನ ರಾಕ್ಷಸನನ್ನಾಗಿ ಅಮ್ಮ-ಮಗಳು ಮಾಡಿದ್ದೀರಾ, ಇದಕ್ಕಿಂತ ಮತ್ತೆ ಇನ್ನೇನು ಬೇಕು ಎಂದು ಕೇಳಿದ್ದಾನೆ. ಇದಕ್ಕೆ ರೇವತಿ ನೀವು ಈ ರೀತಿಯಲ್ಲ ಮಾಡಬೇಡಿ ನನಗೆ ಮುಜುಗರವಾಗುತ್ತದೆ ಎಂದು ಹೇಳಿದ್ದಾಳೆ. ನನ್ನ ಬಗ್ಗೆ ವಠಾರದವರೆಲ್ಲ ಮಾತನಾಡಿದಾಗ ನನಗೆ ಯಾವ ರೀತಿ ಇತ್ತು ಎಂದು ಅಂದುಕೊಂಡಿದ್ದೀರಾ ಎಂದೆಲ್ಲಾ ಪ್ರಶ್ನೆ ಮಾಡಿದ್ದಾನೆ.

Colors Kannada Antarapata serial written update on 16th episode

ಮಹೇಶ್, ಆರಾಧನಾ ಬಳಿ ಮಾತನಾಡುತ್ತಿರುವಾಗ ಸಿರಿ ಅಲ್ಲೇ ನಿಂತುಕೊಂಡು ಮಜಾ ತೆಗೆದುಕೊಳ್ಳುತ್ತಿದ್ದಾಳೆ. ಯಾಕೆಂದರೆ ಅಪ್ಪ-ಮಗಳು ಒಂದು ಪಕ್ಷವಾದರೆ ಅಮ್ಮ ಹಾಗೂ ಆರಾಧನಾ ಇನ್ನೊಂದು ಪಕ್ಷ. ಇದಕ್ಕಾಗಿ ಆರಾಧನಾ ತಪ್ಪಿತಸ್ಥ ಭಾವನೆಯಲ್ಲಿ ನಿಂತಿರುವುದನ್ನು ನೋಡಿದ ಸಿರಿಗೆ ಖುಷಿಯಾಗಿದೆ.

ಅಮ್ಮನಿಗಾಗಿ ಕ್ಷಮೆ ಕೇಳಿದ ಮಗಳು

ವಠಾರದವರೆಲ್ಲ ಮಹೇಶನನ್ನು ರಾಕ್ಷಸ ಎಂದು ಕರೆದಿದ್ದಕ್ಕೆ ಆರಾಧನಾ ಎಲ್ಲರ ಬಳಿ ಹೋಗಿ ಕೈಮುಗಿದು ಮಹೇಶ್ ಸರ್ ತುಂಬಾ ಒಳ್ಳೆಯ ಅವರು ದೇವರಂತ ಮನುಷ್ಯ ಅವರ ಬಗ್ಗೆ ಎನೇನೋ ಮಾತನಾಡಬೇಡಿ ಎಂದು ಕೈ ಮುಗಿದು ಬೇಡಿಕೊಂಡಿದ್ದಾಳೆ. ಆರಾಧನಾ ಪ್ರತಿಯೊಬ್ಬರ ಬಳಿಯೂ ಹೋಗಿ ಇದೇ ರೀತಿ ಬೇಡಿಕೊಳ್ಳುವಾಗ ಮಹೇಶನಿಗೆ ತುಂಬಾ ಖುಷಿಯಾಗಿದೆ. ಮಗಳು ಈ ರೀತಿ ಮಾಡುತ್ತಿರುವುದನ್ನು ನೋಡಿದರೆ ರೇವತಿಗೆ ಕರುಳು ಕಿತ್ತು ಬರುವಂತ ಅನುಭವವಾಗಿದೆ.

Colors Kannada Antarapata serial written update on 16th episode

ಆರಾಧನಾ ಶಂಕ್ರಣ್ಣ ಹಾಗೂ ಚಂದ್ರಣ್ಣನ ಬಳಿ ಹೋಗಿ ಮಹೇಶ್ ತುಂಬಾ ಒಳ್ಳೆಯವರು ಎಂದು ಹೇಳುವಾಗ ಮಹೇಶ್ ಅನ್ನ ಹಾಕಿಸಿಕೊಂಡು ತುಪ್ಪ ಹಾಕಿಸಿಕೊಂಡು ಭರ್ಜರಿಯಾಗಿ ಊಟವನ್ನು ಮಾಡುತ್ತಿದ್ದಾನೆ. ಆರಾಧನಾ ಬೇಡಿಕೊಳ್ಳುವ ರೀತಿಗೆ ಮಹೇಶ್ ಹೊಟ್ಟೆಗೆ ಮಜ್ಜಿಗೆ ಸುರಿದಂತ ಅನುಭವವಾಗುತ್ತಿದೆ. ಇನ್ಮುಂದೆ ವಠಾರದವರು ಯಾರು ಸಹ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುವಂತಿಲ್ಲ ಎಂದು ಖುಷಿಪಟ್ಟಿದ್ದಾನೆ.

ಕೆಲಸಕ್ಕೆ ಹೋಗುತ್ತೇನೆ ಎಂದ ಆರಾಧನಾ

ಈಗ ಮಹೇಶ, ಆರಾಧನಾಗೆ ಹೆಚ್ಚು ಸಂಪಾದನೆ ಮಾಡಿಕೊಂಡು ಬಾ ಎಂದು ಪೀಡಿಸುತ್ತಿದ್ದಾನೆ. ಇದಕ್ಕೆ ಆರಾಧನಾ ಇಂದು ಯಾವುದೋ ಒಂದು ಕಡೆ ಕೆಲಸಕ್ಕೆ ಹೋಗುತ್ತಿದ್ದೇನೆ. ಅಲ್ಲಿ ಕೆಲಸ ಸಿಗದೇ ಹೋದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದು ಮಾತನ್ನು ಕೊಟ್ಟಿದ್ದಾಳೆ. ನೀನು ಪ್ರತಿದಿನ ಇದೇ ರೀತಿ ಹೇಳುತ್ತಿದ್ದೀಯಾ ಎಂದು ಮಹೇಶ್ ಆರಾಧನಾ ಬಳಿ ಹೇಳಿದ್ದಾನೆ.

ಇಲ್ಲ ಇಂದು ಏನಾದರೂ ಕೆಲಸ ಸಿಗಲಿಲ್ಲ ಎಂದರೆ ನೀವು ಹೇಳಿದಂತೆ ನಾನು ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಿ ದುಡಿದು ತಂದು ಹಾಕುತ್ತೇನೆ, ಮನೆಯಲ್ಲಿ ಎಲ್ಲರನ್ನ ನೋಡಿಕೊಳ್ಳುತ್ತೇನೆ ಎಂದು ಆರಾಧನಾ ಮಹೇಶನಿಗೆ ಹೇಳಿದ್ದಾಳೆ. ಮಹೇಶ್, ಆರಾಧನಾ ಮಾತನ್ನ ಕೇಳಿ ತುಂಬಾ ಖುಷಿಯಾಗಿದ್ದಾನೆ ಇದೆ ವೇಳೆ ಅಮ್ಮ ಮಗಳು ಸೇರಿ ನನ್ನನ್ನ ರಾಕ್ಷಸನನ್ನಾಗಿ ಮಾಡಿಬಿಟ್ಟೀರಿ ಎಂದು ಕೊಂಕಾಡಿದ್ದಾನೆ. ಇದನ್ನ ಕೇಳಿಸಿಕೊಂಡ ಆರಾಧನಾ ನನ್ನ ಅಮ್ಮನಿಗೆ ಸ್ವಲ್ಪ ನೆಮ್ಮದಿ ಕೊಡಿ ಅವಳನ್ನು ಕಣ್ಣೀರು ಹಾಕಿಸಬೇಡಿ ಎಂದು ಮಹೇಶ್ ಬಳಿ ಬೇಡಿಕೊಂಡಿದ್ದಾಳೆ.

ಆರಾಧನಗಾಗಿ ಬಂದ ಲೆಟರ್

ಇನ್ನು ಆರಾಧನಗಾಗಿ ಒಂದು ಲೆಟರ್ ಬಂದಿದ್ದೆ. ಅದನ್ನ ಸುಶಾಂತ್ ತೆಗೆದುಕೊಂಡಿದ್ದಾನೆ. ಆರಾಧನಾಗೆ ನಾನೇ ಕೊಡುತ್ತೇನೆಂದು ತಗೆದುಕೊಂಡ ಸುಶಾಂತ್ ಇನ್ನೇನು ಕೊಡಲು ಹೋಗಬೇಕು ಎನ್ನುವಾಗ ಎಲ್ಲರ ಬಳಿ ಆರಾಧನಾ ಕ್ಷಮೆ ಕೇಳುವಂತೆ ಮಹೇಶ್ ಮಾಡಿರುತ್ತಾನೆ. ಇದಕ್ಕಾಗಿ ಸುಶಾಂತ್ ಬೇಸರವಾಗಿ ನಿಂತಿದ್ದಾನೆ.

More from Filmibeat

English summary
Colors Kannada Antarapata serial written update on 16th episode. here is details about Mahesh tourcharing Aradana, Revathi Crying, disappointed. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X