Antarapata: ಆರಾಧನೆಗೆ ಸಿಗಬೇಕಿದೆ ಕೆಲಸ: ಅಳಿಯನಿಗೆ ಮಹತ್ವದ ಜವಾಬ್ದಾರಿ ಕೊಟ್ಟ ಧರ್ಮೇಂದ್ರ
ಆರಾಧನಾ ಮುಂದೆ ಈಗ ಬಹುದೊಡ್ಡ ಸವಾಲು ಎದುರಾಗಿದೆ. ಯಾಕೆಂದರೆ ಮಹೇಶ್‌ಗೆ ಯಾವಾಗಲೂ ಆರಾಧನಾ ತರುವ ದುಡ್ಡಿನ ಮೇಲೆ ಕಣ್ಣು. ಇದರಲ್ಲೇ ಮನೆಯ ಸಂಸಾರ ಹಾಗೂ ಮಗಳ ಓದು ಎಲ್ಲವೂ ನಡೆಯಬೇಕಿದೆ. ಆಗಾಗಿ ತನ್ನ ಅಕ್ಕನ ಮಗನಿಗೆ ಮದುವೆ ಮಾಡಿಕೊಂಡರೆ ದುಡ್ಡು ಬರುತ್ತದೆ ಎಂದು ಹೊಂಚು ಹಾಕಿದ್ದ. ಆದರೆ ಆರಾಧನಾ ಅದಕ್ಕೆ ದಾರಿ ಮಾಡಿಕೊಟ್ಟಿರಲಿಲ್ಲ.
ಆರಾಧನಾ ಕೈಯಲ್ಲಿ ಕೆಲಸ ಇಲ್ಲದೇ ಇರುವುದರಿಂದ ಆರಾಧನಾ ಕೆಲಸ ಪಡೆಯಲೇಬೇಕಿದೆ. ಮಹೇಶ್‌ನ ಬಳಿ ನಾನು ಇವತ್ತು ಕೆಲಸ ಹುಡುಕಿಕೊಳ್ಳುತ್ತೇನೆ,ಇಲ್ಲದಿದ್ದರೆ ನೀವು ಹೇಳಿದಂತೆ ಕೇಳುತ್ತೇನೆ ಎಂದು ಮನೆಯಿಂದ ಹೊರಟಿದ್ದಾಳೆ. ಸುಶಾಂತ್ ಅಜ್ಜಿಯ ಜೊತೆ ಮಾತನಾಡಿಕೊಂಡು ದೇವಸ್ಥಾನಕ್ಕೆ ಹೊರಟಿದ್ದಾನೆ. ಅಜ್ಜಿ ತನ್ನ ಮಗ ತನ್ನನ್ನು ವಠಾರದಲ್ಲಿ ತಂದು ಇರಿಸಿದ್ದಾನೆ. ಆದರೆ ನನ್ನ ಮೊಮ್ಮಗ ನನ್ನನ್ನ ಚೆನ್ನಾಗಿ ನೋಡಿಕೊಳ್ಳುತ್ತಾನೆ ಎಂದು ತನ್ನ ಮನೆಯ ಕಥೆಯನ್ನು ಸುಶಾಂತ್ ಬಳಿ ಹೇಳಿಕೊಳ್ಳುತ್ತಿದ್ದಾರೆ.

ಸುಶಾಂತ್, ಅಜ್ಜಿಯ ಬಳಿ ಆರಾಧನಾ ಬಗ್ಗೆ ಹೇಳಿದ್ದಾನೆ. ಅಜ್ಜಿ, ಆರಾಧನಾ ಪೊಲೀಸ್ ಸ್ಟೇಷನ್‌ಗೆ ಹೋದಾಗ ಏನು ತಿಂದಿರಲಿಲ್ಲ ಸಂಜೆಯ ತನಕ ಊಟ ಮಾಡಿರಲಿಲ್ಲ ಎಂದು ಹೇಳಿದ್ದಾನೆ. ಅಜ್ಜಿ, ಮಹೇಶನಿಗೆ ಯಾವಾಗ ಬುದ್ದಿ ಬರುತ್ತದೆ ಗೊತ್ತಿಲ್ಲ, ಆ ಹುಡುಗಿಯನ್ನು ಸಂಕಷ್ಟಕ್ಕೆ ತಳ್ಳುತ್ತಲೇ ಇರುತ್ತಾರೆ ಎಂದು ಮಹೇಶನಿಗೆ ಬೈಯ್ಯುತ್ತಾರೆ. ನಂತರ ನೀನು ಯಾಕೆ ಪೊಲೀಸ್ ಸ್ಟೇಷನ್ ಒಳಗೆ ಹೋಗಿಲ್ಲ ಎಂದು ಸುಶಾಂತ್‌ಗೆ ಪ್ರಶ್ನೆ ಮಾಡಿದ್ದಾರೆ. ಒಂದು ಕ್ಷಣ ತಬ್ಬಿಬ್ಬಾದ ಸುಶಾಂತ್ ನಂತರ ಬೇರೆ ಕಡೆಗೆ ಅಜ್ಜಿ ಮನಸ್ಸನ್ನು ಡೈವರ್ಟ್ ಮಾಡಿದ್ದಾನೆ.
ಅಳಿಯನಿಗೆ ಜವಾಬ್ದಾರಿ ಕೊಟ್ಟ ಧರ್ಮೇಂದ್ರ
ಅಮಲಾ ಹಾಗೂ ಸಂದೀಪ್ ಮಧ್ಯೆ ಯಾವುದು ಸರಿಯಾಗಿಲ್ಲ ಎಂದು ಎನಿಸುತ್ತಿದೆ. ಅಮಲಾ ಸಂದೀಪ್‌ಗೆ ಡೈವೋರ್ಸ್ ಕೊಡುತ್ತೇನೆ ಎಂದು ಹೇಳುತ್ತಿದ್ದಳು. ನನ್ನ ಮಗಳ ಬಗ್ಗೆ ನೀವು ಗಮನ ಹರಿಸಿ ಎಂದು ಧರ್ಮೇಂದ್ರಗೆ ಸಾವಿತ್ರಿ ಹೇಳಿದ್ದಳು. ಇದರಿಂದಾಗಿ ಧರ್ಮೇಂದ್ರ ಪ್ರಧಾನ್ ಊಟಕ್ಕೆ ಕುಳಿತಿದ್ದ ಅಳಿಯನಿಗೆ ಸರ್ಪ್ರೈಸ್ ನೀಡಿದ್ದಾರೆ. ನಾನು ಕಾಲೇಜು ಕಟ್ಟಿಸುತ್ತಿದ್ದು ಅದರ ಸಂಪೂರ್ಣ ಜವಾಬ್ದಾರಿ ನಿಮಗೆ ಕೊಡುತ್ತಿದ್ದೇನೆ ಎಂದು ತಮ್ಮ ಮಗಳ ಸಮ್ಮುಖದಲ್ಲಿ ಹೇಳಿದ್ದಾರೆ. ಇದರಿಂದಾಗಿ ಸಂದೀಪ್ ಬಹಳ ಖುಷಿಯಾಗಿದ್ದಾನೆ.
ಸಾವಿತ್ರಿಗೂ ಖುಷಿ
ಅಮಲಾಗೆ ತನ್ನ ತಂದೆ ಜವಾಬ್ದಾರಿಯನ್ನ ನೀಡಿರುವುದಕ್ಕೆ ಮತ್ತಷ್ಟು ಖುಷಿಯಾಗಿದೆ. ನಾನು ಸಹ ಸ್ಯಾಂಡಿ ಜೊತೆಗೆ ಇದ್ದು ಪ್ರಾಜೆಕ್ಟ್‌ಗೆ ಹೆಲ್ಪ್ ಮಾಡುತ್ತೇನೆ ಎಂದು ಖುಷಿಯಿಂದ ಧರ್ಮೇಂದ್ರ ಬಳಿ ಅಮಲಾ ಹೇಳಿದ್ದಾಳೆ. ಸಾವಿತ್ರಿ ಸಹ ಮಗಳು ಹಾಗೂ ಅಳಿಯ ಇಬ್ಬರು ನಗುತ್ತಾ ಇರುವುದನ್ನ ನೋಡಿ ಒಂದು ಕ್ಷಣ ಖುಷಿಪಟ್ಟಿದ್ದಾಳೆ. ಆದರೆ ಮಗನನ್ನು ಬಿಟ್ಟಿರುವ ನೋವು ಸಾವಿತ್ರಿಯನ್ನು ಕಾಡುತ್ತಿದೆ.

ತಾಯಿ ನೆನೆದು ಸುಶಾಂತ್ ಭಾವುಕ
ಸುಶಾಂತ್‌ಗೆ ತನ್ನ ತಾಯಿ ಸಾವಿತ್ರಿಯ ನೆನಪು ಬಹಳವಾಗಿ ಕಾಡುತ್ತಿದೆ. ತಾಯಿಯ ಮಾತುಗಳನ್ನ ನೆನಪಿಸಿಕೊಂಡು ಸುಶಾಂತ್ ಒಂದು ಕ್ಷಣ ಭಾವುಕನಾಗಿದ್ದಾನೆ. ಸಾವಿತ್ರಿ ದೇವಸ್ಥಾನಕ್ಕೆ ಹೋಗಿ ಬಂದಾಗಲೆಲ್ಲ ಸುಶಾಂತ್ ಹಣೆಗೆ ಕುಂಕುಮ ಇಡುತ್ತಿದ್ದಳು. ನಂತರ ಕಣ್ಮುಚ್ಚಿ ನಾವು ಬೇಡಿಕೊಂಡರೆ ನಮ್ಮ ಕಷ್ಟಗಳನ್ನೆಲ್ಲ ದೇವರು ಪರಿಹಾರ ಮಾಡುತ್ತಾನೆ ಎಂದು ಮಗನಿಗೆ ಹೇಳಿಕೊಡುತ್ತಿದ್ದಳು. ಈಗ ದೇವಸ್ಥಾನಕ್ಕೆ ಬಂದಿರುವ ಸುಶಾಂತ್‌ಗೆ ತನ್ನ ತಾಯಿ ಆಡುತ್ತಿದ್ದ ಮಾತುಗಳೆಲ್ಲವೂ ಸಹ ನೆನಪಿಗೆ ಬಂದಿದೆ.
ಸುಶಾಂತ್ ಕಣ್ಣೀರು
ಇದರಿಂದಾಗಿ ಕೈ ಮುಗಿದು ನಿಂತುಕೊಂಡು ತಾಯಿಯ ಮಾತುಗಳನ್ನ ನೆನಪಿಸಿಕೊಂಡು ಸುಶಾಂತ್ ಕಣ್ಣೀರು ಹಾಕಿದ್ದಾನೆ. ಸುಶಾಂತ್ ಬಾರದಿದ್ದುದ್ದನ್ನು ನೋಡಿದ ಅಜ್ಜಿ ಕೂಗಿಕೊಂಡು ಬೇಗ ಬಾ ಎಂದಿದ್ದಾರೆ. ಇದಕ್ಕೆ ಸುಶಾಂತ್ ಏನು ನೆನಪಾಯಿತು ಅದಕ್ಕೆ ಹಾಗೆ ನಿಂತು ಬಿಟ್ಟೆ ಎಂದಿದ್ದಾನೆ. ಬಾ ದೇವಸ್ಥಾನದ ಒಳಗೆ ಹೋಗಿ ದೇವರ ದರ್ಶನ ಮಾಡಿಕೊಂಡು ಬರೋಣ ಎಂದು ಅಜ್ಜಿ, ಸುಶಾಂತ್‌ನನ್ನು ಕರೆದುಕೊಂಡು ಹೋಗಿದ್ದಾರೆ. ಇನ್ನು ನಿಂಬೆಹಣ್ಣು ದೀಪವನ್ನು ಹಚ್ಚುತ್ತಿರುವಾಗ ಯಾಕೆ ಅಜ್ಜಿ ನಿಂಬೆಹಣ್ಣು ದೀಪವನ್ನು ಹಚ್ಚುತ್ತಾರೆ ಎಂಬುದರ ಬಗ್ಗೆ ಸುಶಾಂತ್ ಅಜ್ಜಿ ಕೇಳಿ ತಿಳಿದುಕೊಂಡಿದ್ದಾನೆ.


Click it and Unblock the Notifications











