Antarapata: ಆರಾಧನಾಳನ್ನು ಮನೆ ಬಿಟ್ಟು ಕಳಿಸಿದ ತಾಯಿ: ಸುಶಾಂತ್ ಬಗ್ಗೆ ಮೂರ್ತಿ ಮೆಚ್ಚುಗೆ

By ಶೃತಿ ಹರೀಶ್ ಗೌಡ

ಆರಾಧನಾ ಈಗ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗಬೇಕಾಗಿದೆ ಇದರ ಬಗ್ಗೆ ವಠಾರದವರ ಬಗ್ಗೆ ಹೇಳುತ್ತಿದ್ದಾಳೆ. ಇದಕ್ಕೆ ವಟಾರದವರು ಆ ಮಹೇಶ ನಿನಗ್ಯಾಕೆ ಇಷ್ಟು ಕಷ್ಟವನ್ನ ಕೊಡುತ್ತಾನೆ ನೀನು ಅಂದುಕೊಂಡಿದ್ದೆ ಬೇರೆ ಈಗ ಜೀವನದಲ್ಲಿ ಆಗುತ್ತಿರುವುದೇ ಬೇರೆ ಎಂದು ಮರುಗಿದ್ದಾರೆ. ಏನು ಮಾಡಲು ಆಗುವುದಿಲ್ಲ ಇದು ನನಗೆ ಅನಿವಾರ್ಯವಾಗಿದೆ ಎಂದು ಆರಾಧನಾ ವಠಾರದವರ ಬಳಿ ಹೇಳಿದ್ದಾಳೆ.

ನಾನು ಕರೆಂಟ್‌ ಬಿಲ್ ಕಟ್ಟಲು ಆಗುವುದಿಲ್ಲ, ಯಾಕೆಂದರೆ ನಾನು ಬೆಳಗ್ಗೆ ಎದ್ದು ಹೋಗಬೇಕಾಗಿದೆ. ಕೆಲಸಕ್ಕೆ ಹೋಗುತ್ತಿದ್ದೇನೆ ಎಂದು ಹೇಳಿದ್ದಾಳೆ. ಸ್ಥಳಕ್ಕೆ ಬಂದ ಸುಶಾಂತ್ ಈಗ ಎಲ್ಲವೂ ಸ್ಮಾರ್ಟ್ ಆಗಿದೆ. ಮೊಬೈಲ್‌ನಲ್ಲಿ ಕರೆಂಟ್ ಹುದು ಎಂದಿದ್ದಾನೆ. ಇದಕ್ಕೆ ಆರಾಧನಾ ನಾನು ಎಲ್ಲವನ್ನು ಟ್ರೈ ಮಾಡಿದೆ,ಆದರೆ ಯಾಕೋ ಬಿಲ್ ಕಟ್ಟಲು ಆಗುತ್ತಿಲ್ಲ ಎಂದು ಹೇಳಿದ್ದಾಳೆ.

Colors Kannada Antarapata serial written update on 22nd episode

ಇನ್ನು ಸುಶಾಂತ್ ನಾನೇ ಬಿಲ್ ಕಟ್ಟುತ್ತೇನೆ ಹೇಗೆ ಎಂದು ತಿಳಿಸಿ ಎಂದು ಹೇಳಿದ್ದಾನೆ. ಇದಕ್ಕೆ ನೀವು ಬಿಲ್ ಕಟ್ಟುತ್ತೀರಾ ಎಂದು ಕೇಳಿದ್ದಾಳೆ. ಹೌದು ನಾನು ಬಿಲ್ ಕಟ್ಟುತ್ತೇನೆ, ನಾನು ಒಮ್ಮೆಯೂ ಸಹ ಕಟ್ಟಿಲ್ಲ ಎಂದು ಹೇಳಿದ್ದಾನೆ. ಅದಕ್ಕೆ ಆರಾಧನಾ ಹೇಗೆ ಬಿಲ್ ಕಟ್ಟಬೇಕು ಎಲ್ಲಿ ಹೋಗಿ ಕೇಳಬೇಕು ಎಂಬುದನ್ನು ಸುಶಾಂತ್‌ಗೆ ಹೇಳಿ ಹಣ ಹಾಗೂ ಬಿಲ್ ಎರಡನ್ನು ಕೊಟ್ಟು ಕಳುಹಿಸಿದ್ದಾಳೆ.

ಸುಶಾಂತ್ ಬಗ್ಗೆ ಮೂರ್ತಿ ಮೆಚ್ಚುಗೆ

ಅಮಲಾ ಹಾಗೂ ಸಂದೀಪ್ ನಡುವೆ ಏನು ಜಗಳ ನಡೆದಿತ್ತು ಎಂಬುದರ ಬಗ್ಗೆ ಮೂರ್ತಿ ಬಳಿಯಲ್ಲಿ ಧರ್ಮೇಂದ್ರ ಚರ್ಚೆಯನ್ನು ನಡೆಸುತ್ತಿದ್ದಾನೆ. ಸಂದೀಪ್‌ಗೆ ಒಂದು ದೊಡ್ಡ ಕಾಂಟ್ರಾಕ್ಟ್ ಕೊಟ್ಟ ಮೇಲೆ ಅಮಲಾ ಹಾಗು ಸಂದೀಪ್ ಬಹಳ ಖುಷಿಯಿಂದ ಇದ್ದಾರೆ. ಅವರ ಸಂಬಂಧವನ್ನು ಹಣ ಅಷ್ಟು ಗಟ್ಟಿಗೊಳಿಸಿದ್ಯಾ? ಎಂದು ಮೂರ್ತಿಯ ಬಳಿ ಹೇಳಿದ್ದಾರೆ. ಇದಕ್ಕೆ ಮೂರ್ತಿ ನನಗೆ ಅದರ ಬಗ್ಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ. ಯಾಕೆಂದರೆ ಅಮಲಾ ಬಗ್ಗೆ ಮೂರ್ತಿ ಎಷ್ಟೇ ಹೇಳಿದರು ಸಹ ಧರ್ಮೇಂದ್ರ ಪ್ರಧಾನ ಅದನ್ನು ನಂಬುವುದಿಲ್ಲ.

ಶುಶಾಂತ್ ಬಗ್ಗೆ ಧರ್ಮೇಂದ್ರ ಪ್ರಧಾನ ಮಾತನಾಡಿದ್ದು ನನ್ನ ಮಗ ಜವಾಬ್ದಾರಿಯನ್ನೆಲ್ಲ ವಹಿಸಿಕೊಳ್ಳುತ್ತಾನೆ ಎಂದುಕೊಂಡಿದ್ದೆ. ಆದರೆ ಅವನು ಪಾರ್ಟಿ ಸಿನಿಮಾ ಹಾಗೂ ಪ್ರವಾಸ ಎಂದೆಲ್ಲಾ ತನ್ನ ಜೀವನವನ್ನು ಕಳೆದುಬಿಟ್ಟ. ತಂದೆಗೆ ತಕ್ಕ ಮಗ ಆಗಲಿಲ್ಲ ಎಂದು ಧರ್ಮೇಂದ್ರ ಹೇಳುವಾಗ ಮೂರ್ತಿ, ಸುಶಾಂತ್ ಬಗ್ಗೆ ಮೆಚ್ಚುಗೆಯ ಮಾತನ್ನ ಆಡಿದ್ದಾನೆ. ಸುಶಾಂತ್‌ನಲ್ಲಿ ಒಳ್ಳೆಯ ಪ್ರತಿಭೆ ಇದೆ. ಅದನ್ನು ಅವನು ಹೊರಗೆ ತರುತ್ತಿಲ್ಲ, ಉನ್ನತ ಮಟ್ಟದ ಅವಕಾಶ ಸಿಕ್ಕಿದರೆ ಅವನು ನಿನಗಿಂತಲೂ ಎತ್ತರಕ್ಕೆ ಬೆಳೆಯುತ್ತಾನೆ. ನಿನ್ನ ಸಹಾಯವಿಲ್ಲದೆ ಬೆಳೆಯುತ್ತಾನೆ ಎಂದು ಮೂರ್ತಿ, ಧರ್ಮೇಂದ್ರ ಬಳಿ ಹೇಳಿದ್ದಾನೆ.

Colors Kannada Antarapata serial written update on 22nd episode

ಆರಾಧನಾಳನ್ನು ಹೊರಗೆ ಕಳಿಸಿದ ತಾಯಿ

ಮನೆ ಬಿಟ್ಟು ಹೋಗು ಎಂದ ರೇವತಿ

ರೇವತಿ ಮಲಗಿದ ವೇಳೆ ತನ್ನ ಮಗಳಿಗೆ ಆಗುತ್ತಿರುವ ಅನ್ಯಾಯವನ್ನು ಸಹಿಸಿಕೊಳ್ಳಲು ಆಗದೇ ಅವಳಿಗೆ ಯಾವುದೇ ರೀತಿಯ ಕಷ್ಟ ಬರಬಾರದು ಎಂದುಕೊಂಡು ಆರಾಧನಾಳನ್ನು ಮನೆ ಬಿಟ್ಟು ಹೊರಗೆ ಕಳುಹಿಸುವ ಯೋಚನೆ ಮಾಡಿದ್ದಾಳೆ. ಅದರಂತೆ ಆರಾಧನಾಳನ್ನು ಎಬ್ಬಿಸಿರುವ ರೇವತಿ ಬಟ್ಟೆಯನ್ನೆಲ್ಲ ಒಂದು ಬ್ಯಾಗಿಗೆ ತುಂಬಿದ್ದಾಳೆ. ನೀನು ಏನು ಮಾತನಾಡಬೇಡ ದಯವಿಟ್ಟು ಹೊರಗೆ ಬಾ ಎಂದು ಆರಾಧನಾಳನ್ನು ಎಳೆದುಕೊಂಡು ಮನೆಯಿಂದ ಹೊರಗೆ ಬಂದಿದ್ದಾಳೆ.

ಆರಾಧನಾ ದಯವಿಟ್ಟು ನೀನು ಈ ನರಕದಲ್ಲಿ ಇರಬೇಡ ಮನೆ ಬಿಟ್ಟು ಹೋಗಿ ನೀನು ಏನನ್ನು ಸಾಧಿಸಬೇಕು ಎಂದುಕೊಂಡಿದ್ದೀಯೋ ಅದನ್ನ ಸಾಧಿಸು, ನನ್ನ ಮಗಳು ಅದನ್ನ ಸಾಧಿಸುತ್ತಾಳೆ ಎಂಬ ನಂಬಿಕೆ ನನಗಿದೆ ಎಂದು ರೇವತಿ ಹೇಳಿದ್ದಾಳೆ. ಇನ್ನು ಕಿವಿಯಲ್ಲಿರುವ ಓಲೆ ಬಿಚ್ಚಿಕ್ಕೊಟ್ಟು ಇದನ್ನ ಮಾರಿ ಬಿಡು ನಿನ್ನ ಕಷ್ಟಕ್ಕೆ ಆಗುತ್ತದೆ. ಮುಂದೆ ನೀನು ಸೆಟ್ಲ್‌ ಆದ ಮೇಲೆ ಈ ವಠಾರಕ್ಕೆ ಬಾ ದಯವಿಟ್ಟು ಮಹೇಶ್‌ನಿಂದ ದೂರ ಹೋಗು ಎಂದು ಆರಾಧನಾಗೆ ರೇವತಿ ಹೇಳಿದ್ದಾಳೆ.

More from Filmibeat

English summary
Colors Kannada Antarapata serial written update on 22nd episode. here is details about Sushant enjoying Vatara system, Darmendra and Murty discussed about Amala and Sandeep relationship. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X