Antarapata: ಸುಶಾಂತ್‌ಗಾಗಿ ಸಾಲ ಮಾಡಿದ ಆರಾಧನಾ: ಧರ್ಮೇಂದ್ರ ಜೊತೆಗೆ ಜಗಳವಾಡಿದ ಸಾವಿತ್ರಿ

By ಶೃತಿ ಹರೀಶ್ ಗೌಡ

ಸುಶಾಂತ್‌ನನ್ನು ಕರೆದುಕೊಂಡು ಆರಾಧನಾ ಮನೆಯಿಂದ ಹೊರಗಡೆ ಬಂದಿದ್ದಾಳೆ. ನಾವು ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು, ಆಗ ಮಾತ್ರ ನಮಗೆ ಕಳೆದುಕೊಂಡ ವಸ್ತು ಸಿಗುತ್ತದೆ ಎಂದು ಹೇಳುತ್ತಿದ್ದಾಳೆ. ಇದಕ್ಕೆ ಸುಶಾಂತ್ ನಾನು ಬೆಳಗ್ಗೆಯಿಂದಲೂ ಸಹ ಹುಡುಕಿದ್ದೇನೆ. ನನಗೆ ಬೇರೆ ಯಾವ ಕೆಲಸ ಇತ್ತು ಹೇಳಿ ಎಂದು ಆರಾಧನಾಗೆ ಹೇಳಿದ್ದಾನೆ. ಇದೇವೇಳೆ ತನ್ನಿಂದ ಆದಂತಹ ತಪ್ಪಿಗೆ ಕಣ್ತುಂಬಿಕೊಂಡಿದ್ದಾನೆ.

ಹೀಗೆ ಕಣ್ತುಂಬಿಕೊಂಡು ಹುಡುಕಿದರೆ ಎಲ್ಲವೂ ಮಂಜಾಗಿ ಕಾಣಿಸುತ್ತದೆ ಎಂದು ಆರಾಧನಾ ಹೇಳಿದ್ದಾಳೆ. ಸುಶಾಂತ್ ಹಣವನ್ನು ಕಳೆದುಕೊಂಡು ಎಲ್ಲರ ನಂಬಿಕೆಯನ್ನ ಕಳೆದುಕೊಂಡಿದ್ದೇನೆ ಎಂದು ಹೇಳಿದ್ದಾನೆ. ಇದಕ್ಕೆ ಆರಾಧನಾ ಯೋಚನೆ ಮಾಡುವುದನ್ನ ಬಿಟ್ಟು,‌ ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಬೇಕು ಎಂದಿದ್ದಾಳೆ.

Colors Kannada Antarapata serial written update on 28th episode

ಇದೇ ವೇಳೆ ಆರಾಧನಾಳನ್ನು ಪರಿಚಯಸ್ಥರು ಒಬ್ಬರು ಮಾತನಾಡಿಸಿದ್ದಾರೆ. ಆರಾಧನಾ ಹಣ ಬೆಳಗ್ಗೆ ಕೊಟ್ಟು ಕಳುಹಿಸಿದ್ದೇನೆ, ನೀವು ತೆಗೆದುಕೊಂಡಿರಾ? ಎಂದು ಕೇಳಿದ್ದಾಳೆ. ಹೌದಮ್ಮ ತೆಗೆದುಕೊಂಡಿದ್ದೇನೆ ಎಂದು ಹೇಳಿ ಇದೇ ವೇಳೆ ಸುಶಾಂತ್‌ನನ್ನು ಮಾತನಾಡಿಸಿದ್ದಾರೆ. ಏನಪ್ಪಾ ಹಣ ಸಿಕ್ಕಿತಾ ಎಂದು ಕೇಳಿದ್ದಾರೆ. ಇದಕ್ಕೆ ಆರಾಧನಾ ಇಲ್ಲ ಅಣ್ಣ ಸಿಗಲಿಲ್ಲ ಎಂದು ಹೇಳಿದ್ದಾಳೆ. ನೀವು ಒಂದು ಸಹಾಯ ಮಾಡಬೇಕು ನಮಗೆ ಹಣ ಸಾಲವನ್ನಾಗಿ ನೀಡಿ ಎಂದು ಕೇಳಿದ್ದಾಳೆ.

ಹಣ ಸಾಲ ಪಡೆದ ಆರಾಧನಾ

ಆರಾಧನಾ ಪರಿಚಯಸ್ಥರ ಬಳಿ ಸಾಲವಾಗಿ ಹಣ ಪಡೆದುಕೊಂಡಿದ್ದಾಳೆ. ಇದೇ ವೇಳೆ ಸುಶಾಂತ್‌ಗೆ ಹಣ ಯಾವ ರೀತಿ ಜೋಪಾನ ಮಾಡಬೇಕು ಎನ್ನುವುದನ್ನು ಹೇಳಿದ್ದಾಳೆ. ನಮ್ಮ ಜೀವವನ್ನು ಹೇಗೆ ಕಾಪಾಡಿಕೊಳ್ಳುತ್ತೇವೋ ಅದೇ ರೀತಿ ಹಣವನ್ನು ಕಾಪಾಡಿಕೊಳ್ಳಬೇಕು ಎಂದು‌ ಹೇಳಿದ್ದಾಳೆ. ನಮಗೆ ಕಷ್ಟ ಕಾಲದಲ್ಲಿ ಯಾರು ಸಹಾಯಕ್ಕೆ ಬರುವುದಿಲ್ಲ, ನಾವು ಹಣ ಕಳೆದುಕೊಂಡರೆ ಜೀವವೇ ಹೋದಂತೆ ಆಗುತ್ತದೆ ಎಂದು ಹೇಳಿದ್ದಾಳೆ. ಇದಕ್ಕೆ ಸುಶಾಂತ್ ನಾನೇನು ಬೇಕು ಎಂದು ಕಳೆದು ಹಾಕಲಿಲ್ಲ ಎಂದು ಹೇಳಿದ್ದಾನೆ.

ಬೆಸ್ಕಾಂ ಸಿಬ್ಬಂದಿ ಬಳಿ ಆರಾಧನಾ ಮನವಿ

ನನ್ನ ತಂದೆ ಏನು ಜೋರಾಗಿ ಮಾಡಿಟ್ಟು ಹೋಗಲಿಲ್ಲ. ಹಣ ಕಳೆದುಕೊಂಡವರಿಗಷ್ಟೇ ಅದರ ಬೆಲೆ ಗೊತ್ತಿದೆ ಎಂದು ಆರಾಧನಾ ಇದೇ ವೇಳೆ ಸುಶಾಂತ್ ಬಳಿ ಹೇಳಿದ್ದಾಳೆ. ಇದೇ ಸಂದರ್ಭದಲ್ಲಿ ಬೆಸ್ಕಾಂ ಕಚೇರಿಗೆ ಹೋಗಿರುವ ಆರಾಧನಾ ಬೆಸ್ಕಾಂ ಸಿಬ್ಬಂದಿ ಬಳಿ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದಾಳೆ. ಕೊನೆಗೂ ಆರಾಧನಾ ಬೇಡಿಕೊಂಡಿದ್ದಕ್ಕೆ ಬೆಸ್ಕಾಂ ಇಲಾಖೆಯ ಸಿಬ್ಬಂದಿ ಮಣಿದಿದ್ದಾರೆ. ನಾನು ಆನ್ಲೈನ್ ಮೂಲಕ ಬಿಲ್ ಪೇ ಮಾಡಿಕೊಳ್ಳುತ್ತೇನೆ. ಈಗ ಒಬ್ಬರನ್ನ ಕಳುಹಿಸಿ ಫ್ಯೂಸ್ ಹಾಕಿಸುತ್ತೇನೆ ನೀವು ಹೊರಡಿ ಎಂದು ಹೇಳಿದ್ದಾರೆ.

Colors Kannada Antarapata serial written update on 28th episode

ಧರ್ಮೇಂದ್ರ ಬಳಿ ಜಗಳವಾಡಿದ ಸಾವಿತ್ರಿ

ಅಮಲಾ ಹಚ್ಚಿದ ಬೆಂಕಿ ಈಗ ಜ್ವಾಲಾಮುಖಿಯಾಗಿ ಸ್ಪೋಟಗೊಂಡಿದೆ. ಸಾವಿತ್ರಿ ಪತಿ ಧರ್ಮೇಂದ್ರ ಪ್ರಧಾನ್ ಬಳಿ ಬಂದು ನನಗೆ ನನ್ನ ಮಗ ಬೇಕೇಬೇಕು. ಅವನು ಎಲ್ಲೇ ಇದ್ದರೂ ಸಹ ಈಗಲೇ ಮನೆಗೆ ಕರೆಯಿಸಿ ಎಂದು ಕೇಳಿಕೊಂಡಿದ್ದಾಳೆ. ಇದಕ್ಕೆ ಧರ್ಮೇಂದ್ರ ಪ್ರಧಾನ್ ಅವನು ಮೂರ್ತಿ ಅವರ ಕಷ್ಟಡಿಯಲ್ಲಿ ಇದ್ದಾನೆ. ಮೂರ್ತಿ ಅವನನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾನೆ ಎಂದು ಹೇಳಿದ್ದಾರೆ. ಎಷ್ಟೇ ಚೆನ್ನಾಗಿ ನೋಡಿಕೊಂಡರು ಸಹ ನನಗೆ ಅದ್ಯಾವುದೂ ಬೇಡ ನನಗೆ ನನ್ನ ಮಗ ಮಾತ್ರ ಬೇಕು ಎಂದು ಸುಮಿತ್ರಾ ಹಠ ಮಾಡಿದ್ದಾಳೆ.

ಪತಿ ಎದುರು ಹಠ ಹಿಡಿದ ಸುಮಿತ್ರಾ

ಸುಮಿತ್ರಾ ಹಾಗೂ ಧರ್ಮೇಂದ್ರ ಪ್ರಧಾನ್ ಮಾತನಾಡುತ್ತಿರುವುದು ಇಡೀ ಮನೆಯವರಿಗೆಲ್ಲಾ ಕೇಳಿಸುತ್ತಿದೆ. ಇದಕ್ಕಾಗಿ ಎಲ್ಲರೂ ಬಂದು ನೋಡುತ್ತಿದ್ದಾರೆ , ಅಮಲಾ‌ ಸಹ ನಾನು ಹಚ್ಚಿದ ಬೆಂಕಿ ಇಷ್ಟು ಬೇಗ ಸ್ಪೋಟ ಮಾಡುತ್ತದೆ ಎಂದು ಗೊತ್ತಿರಲಿಲ್ಲ ಎಂದು ಖುಷಿ ಪಡುತ್ತಿದ್ದಾಳೆ. ಧರ್ಮೇಂದ್ರ ಪ್ರಧಾನ ಹೆಂಡತಿಗೆ ಪರಿಪರಿಯಾಗಿ ಹೇಳುತ್ತಿದ್ದಾನೆ, ನಿನ್ನ ಮಗ ಈಗ ಮನೆಗೆ ಬಂದರೆ ಜೈಲಿಗೆ ಹೋಗಬೇಕಾಗುತ್ತದೆ ಎಂದು ಹೇಳಿದರು ಸುಮಿತ್ರಾ ಕೇಳುತ್ತಿಲ್ಲ. ನನ್ನ ಮಗನ ಜೊತೆಗೆ ನಾನು ಸಹ ಜೈಲಿಗೆ ಹೋಗುತ್ತೇನೆ ಎಂದು ಹಠ ಮಾಡುತ್ತಿದ್ದಾಳೆ.

More from Filmibeat

English summary
Colors Kannada Antarapata serial written update on 28th episode. here is details about Aradana She borrowed money by someone for Sushanth, Aradana teach a lesson for Sushanth. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X