Antarapata: ವಠಾರಕ್ಕೆ ಬಂತು ಪವರ್: ಮಗನನ್ನು ಮನೆಗೆ ಕರೆಸುತ್ತೇನೆ ಎಂದ ತಂದೆ

By ಶೃತಿ ಹರೀಶ್ ಗೌಡ

ಸಾವಿತ್ರಿ ಮಗ ಸುಶಾಂತ್‌ಗೋಸ್ಕರ ಮನೆಯಲ್ಲಿ ಅತ್ತು ಕರೆದು ರಂಪಾಟ ಮಾಡುತ್ತಿದ್ದಾಳೆ. ನಾನು ನನ್ನ ಮಗನನ್ನ ನೋಡಲೇಬೇಕು, ಅವನನ್ನು ಮನೆಗೆ ಕರೆಸಿ ಎಂದು ಧರ್ಮೇಂದ್ರ ಪ್ರಧಾನ್ ಬಳಿ ಜಗಳವಾಡಿದ್ದಾಳೆ. ಇದಕ್ಕೆ ಧರ್ಮೇಂದ್ರ ಪ್ರಧಾನ್, ಅವನು ಬಹಳ ತೊಂದರೆಯಲ್ಲಿ ಸಿಲುಕಿಕೊಂಡಿದ್ದಾನೆ. ಹತ್ತಾರು ವರ್ಷಗಳ ಕಾಲ ಜೈಲು ಸೇರಬೇಕಾಗುತ್ತದೆ ಎಂದು ಎಷ್ಟೇ ಹೇಳಿದರು ಸಹ ಸಾವಿತ್ರಿ ಕೇಳುತ್ತಿಲ್ಲ.

ಮಗ ಮನೆಯಲ್ಲಿ ಇಲ್ಲದೇ ಅವನು ಜೈಲಿನಲ್ಲಿ ಇರುವ ಅನುಭವವನ್ನೇ ಅನುಭವಿಸುವಂತಾಗಿದೆ ನಾನು ಏನನ್ನು ಕೇಳುವುದಿಲ್ಲ ಎಂದು ಸಾವಿತ್ರಿ, ಧರ್ಮೇಂದ್ರನ ಬಳಿ ಹೇಳಿದ್ದಾಳೆ. ಯಾವಾಗಲೂ ಜವಾಬ್ದಾರಿ ಎಂದುಕೊಂಡು ಸುಶಾಂತ್‌ನನ್ನು ಬೈಯುತ್ತಿದ್ದೀರಿ ಅವನ ಮೇಲೆ ಪ್ರೀತಿಯನ್ನ ತೋರಿಸಲಿಲ್ಲ ಎಂದು ಕೋಪ ಮಾಡಿಕೊಂಡಿದ್ದಾಳೆ. ನಾನು ಅವನಿಗಾಗಿ ಹತ್ತಾರು ಪೂಜೆಯನ್ನ ಮಾಡಿದೆ, ಹರಕೆ ಕಟ್ಟಿಕೊಂಡೆ ಅಯ್ಯೋ ದೇವರೇ ಎಂದು ಅಳುತ್ತಾ ಕುಳಿತಿದ್ದಾಳೆ.

Colors Kannada Antarapata serial written update on 29th episode

ಧರ್ಮೇಂದ್ರ ಪ್ರಧಾನ್ ಏನೇ ಹೇಳಿದರೂ ಸಹ ಸಾವಿತ್ರಿ ಕೇಳುವ ಸ್ಥಿತಿಯಲ್ಲಿ ಇಲ್ಲ. ನಾನು ನನ್ನ ಮಗನನ್ನ ನೋಡಲೇಬೇಕು ಹೇಗೆ ಇದ್ದಾನೆ ಎಂದು ತಿಳಿದುಕೊಳ್ಳಬೇಕು ಎಂದು ಒಂದೇ ಸಮನೆ ಹಠ ಮಾಡುತ್ತಿದ್ದಾಳೆ.

ಹೆಂಡತಿಯ ಹಠಕ್ಕೆ ಮಣಿದ ಧರ್ಮೇಂದ್ರ ಸುಶಾಂತ್‌ನನ್ನು ಕರೆಸುವುದಾಗಿ ಮಾತು ಕೊಟ್ಟಿದ್ದಾರೆ. ಇದರಿಂದಾಗಿ ಮನೆಯಲ್ಲಿ ಇರುವವರು ಸಹ ಕೊಂಚ ನಿಟ್ಟುಸಿರು ಬಿಡುವಂತಾಗಿದೆ. ಯಾಕೆಂದರೆ ಸಾವಿತ್ರಿ ಅಳುವುದು ಮನೆಯಲ್ಲಿರುವ ಯಾರಿಗೂ ಸಹ ಇಷ್ಟವಿಲ್ಲ. ಧರ್ಮೇಂದ್ರ ಪ್ರಧಾನ್ ಹೇಗೋ ಸುಶಾಂತ್‌ನನ್ನು ಕರೆದುಕೊಂಡು ಬರುತ್ತೇನೆ ಎಂದು ಹೇಳಿದ್ದು ಸಹ ಸಾವಿತ್ರಿಗೂ ಕೊಂಚ ಸಮಾಧಾನ ಆದಂತೆ ಆಗಿದೆ.

ವಠಾರಕ್ಕೆ ಬಂತು ಪವರ್

ಸುಶಾಂತ್ ಹಣವನ್ನು ಕಳೆದುಕೊಂಡ ಹಿನ್ನೆಲೆಯಲ್ಲಿ ವಿದ್ಯುತ್ ಬಿಲ್ ಕಟ್ಟಿಲ್ಲ ಎಂದು ವಠಾರದ ಫ್ಯೂಸ್ ಕಿತ್ತುಕೊಂಡು ಹೋಗಿದ್ದರು. ಆರಾಧನಾ ಸಾಲ ಮಾಡಿ ಮತ್ತೆ ವಠಾರಕ್ಕೆ ಪವರ್ ಬರುವಂತೆ ಮಾಡಿದ್ದಾಳೆ. ಏಕೆಂದರೆ ವಠಾರದ ಜನರ ನಂಬಿಕೆ ಉಳಿಸಿಕೊಳ್ಳುವುದು ಮಾತ್ರ ಆರಾಧನಾ ಮುಂದೆ ಇತ್ತು. ಸುಶಾಂತ್ ಹಾಗೂ ಆರಾಧನಾ ಇಬ್ಬರು ವಠಾರಕ್ಕೆ ಬಂದಿದ್ದಾರೆ. ಇದೇ ವೇಳೆ ಆರಾಧನಾ, ಸುಶಾಂತ್‌ಗೆ ಕಣ್ಮುಚ್ಚಿ ದೇವರನ್ನು ಬೇಡಿಕೊಳ್ಳಿ ಎಂದು ಹೇಳಿದ್ದಾಳೆ. ಕರೆಂಟ್ ಬರಲಿ ದೇವರೇ ಎಂದು ಬೇಡಿಕೊಂಡಿದ್ದಾನೆ. ಪವರ್ ಬಂದು ಇಡೀ ವಠಾರವೇ ಬೆಳಕಾಗಿದೆ.

Colors Kannada Antarapata serial written update on 29th episode

ಕರೆಂಟ್ ಬಂದ ಹಿನ್ನೆಲೆಯಲ್ಲಿ ಸುಶಾಂತ್ ಆರಾಧನಾಳನ್ನು ಹಿಡಿದುಕೊಂಡು ಖುಷಿಪಟ್ಟಿದ್ದಾನೆ. ನಂತರ ಆರಾಧನಾಳನ್ನ ತಬ್ಬಿಕೊಂಡು ತುಂಬಾ ಥ್ಯಾಂಕ್ಸ್ ಎಂದು ಹೇಳಿದ್ದಾನೆ. ಆರಾಧನಾ, ಸುಶಾಂತ್ ತಬ್ಬಿ ಕೊಂಡಿದ್ದಕ್ಕಾಗಿ ತನ್ನ ಹಳೆಯ ಸ್ನೇಹಿತನನ್ನ ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾಳೆ. ವಠಾರದ ಜನರೆಲ್ಲಾ ಸುಶಾಂತ್‌ಗೆ ಆಗಿದ್ದು ಆಗಿ ಹೋಯಿತು ಬೇಸರ ಮಾಡಿಕೊಳ್ಳಬೇಡ ಎಂದು ತಿಳಿಸಿದ್ದಾರೆ. ಎಲ್ಲರೂ ಸಹ ಖುಷಿಯಿಂದ ಮನೆಯೊಳಕ್ಕೆ ಹೋಗಿದ್ದಾರೆ.

ಮೂರ್ತಿಗೆ ಫೋನ್ ಮಾಡಿದ ಧರ್ಮೇಂದ್ರ

ಸಾವಿತ್ರಿಯ ಸ್ಥಿತಿ ತುಂಬಾ ಕ್ರಿಟಿಕಲ್ ಆಗಿದೆ, ಸುಶಾಂತ್‌ನನ್ನು ನೋಡಬೇಕು ಎಂದು ಹಠವನ್ನ ಹಿಡಿಯುತ್ತಿದ್ದಾಳೆ ಎಂದು ಧರ್ಮೇಂದ್ರ, ಮೂರ್ತಿಗೆ ಫೋನ್ ಮಾಡಿದ್ದಾನೆ. ಇದೇ ಸಂದರ್ಭದಲ್ಲಿ ಮೂರ್ತಿ, ಸುಶಾಂತ್‌ನನ್ನು ಈಗ ನೋಡಿದರೆ ಅವನು ಪೊಲೀಸರಿಗೆ ಸಿಗುವುದು ಗ್ಯಾರಂಟಿ. ಆ ಪೊಲೀಸರು ಸುಶಾಂತ್‌ನನ್ನು ಹುಡುಕುತ್ತಿದ್ದಾರೆ, ನಿನಗೆ ಎಲ್ಲಾ ಕಂಡೀಶನ್ ಗೊತ್ತಿದೆ .ನೀನೇ ಅತ್ತಿಗೆಗೆ ಸಮಾಧಾನ ಮಾಡು ಎಂದು ಹೇಳಿದ್ದಾನೆ. ನಾನು ಎಷ್ಟೇ ಸಮಾಧಾನ ಮಾಡಿದರೂ ಸಾವಿತ್ರಿ ಕೇಳುತ್ತಿಲ್ಲ ಎಂದು ಧರ್ಮೇಂದ್ರ ತಿಳಿಸಿದ್ದಾರೆ.

ಸಿರಿಗೆ ಸುಶಾಂತ್ ಮೇಲೆ ಲವ್

ಇತ್ತ ಸಿರಿಗೆ ಸುಶಾಂತ್ ಮೇಲೆ ಲವ್ವಾಗಿದೆ ಇದಕ್ಕಾಗಿ ಅವನಿಗೆ ಕಾಫಿ ಕೊಡುವುದು, ಟೀ ಕೊಡುವುದು ನಗುತ್ತಾ ಮಾತನಾಡಿಸುವುದನ್ನ ಮಾಡುತ್ತಿದ್ದಾಳೆ. ಟೀ ಕುಡಿಯುತ್ತಾ ಕುಳಿತಿದ್ದ ಸುಶಾಂತ್‌ಗೆ ಆರಾಧನಾಗೆ ಒಂದು ಪೋಸ್ಟ್ ಬಂದಿರುವುದು ಗೊತ್ತಾಗಿದೆ. ಇದೆ ವೇಳೆ ಆರಾಧನಾಳನ್ನ ಕರೆದು ನಿಮಗೊಂದು ಸರ್ಪ್ರೈಸ್ ಇದೆ. ಮಹಡಿಯ ಮೇಲೆ ಬನ್ನಿ ಎಂದು ಹೇಳಿ ಮಹಡಿಯ ಮೇಲೆ ಎನ್ವಲಪ್ ಕವರ್ ತೆಗೆದುಕೊಂಡು ಹೋಗಿ ಕೊಟ್ಟಿದ್ದಾನೆ.

More from Filmibeat

English summary
Colors Kannada Antarapata serial written update on 29th episode. here is details about Sushanth happy about Aradana helping Nature, Savithri cried for Son Sushanth. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X