Antarapata: ಮೊದಲ ಸಂಬಳ ಪಡೆದ ಸುಶಾಂತ್: ಅಮಲಾಗೆ ಮೂರ್ತಿ ವಾರ್ನಿಂಗ್
ಸುಶಾಂತ್‌ಗೆ ಆರಾಧನಾ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಊಟ ಕೊಡುಸುತ್ತೇನೆ ಎಂದು ಕರೆದುಕೊಂಡು ಬಂದಿದ್ದಾಳೆ. ಸುಶಾಂತ್ ಸಹ ಮನೆಯಿಂದ ಹೊರಗಡೆ ಬಂದ ಮೇಲೆ ಒಳ್ಳೆಯ ಊಟ ಮಾಡೇಯಿಲ್ಲ. ಅದೇ ಕಾರಣಕ್ಕೆ ಹೋಟೆಲ್‌ಗೆ ಆರಾಧನಾ ಕರೆದುಕೊಂಡು ಹೋಗುತ್ತೇನೆ ಎಂದಿದ್ದೆ ತಡ ಆಯ್ತು ಹೋಗೋಣ ಎಂದು ಒಪ್ಪಿಗೆ ನೀಡಿದ್ದಾನೆ. ಇಬ್ಬರು ಜೊತೆ ಜೊತೆಗೆ ಹೊರಟಿದ್ದಾರೆ.
ರಸ್ತೆ ಬದಿ ಊಟ ಮಾರಾಟ ಮಾಡುವ ಸ್ಥಳಕ್ಕೆ ಇಬ್ಬರು ಬಂದಿದ್ದಾರೆ. ದೋಸೆ ಚಿತ್ರನ್ನ ಕೊಡಿಸುತ್ತೇನೆಂದು ಹೇಳಿದ್ದಕ್ಕೆ ಇದೇನಾ ಫೈವ್ ಸ್ಟಾರ್ ಹೋಟೆಲ್ ಅಂದ್ರೆ ಎಂದು ಸುಶಾಂತ್ ರಾಗ ಎಳೆದಿದ್ದಾನೆ. ಹೌದು ಗಾಡಿ ಮೇಲೆ ಏನು ಬರೆದಿದೆ ಓದು ಎಂದು ಸುಶಾಂತ್‌ಗೆ ಆರಾಧನಾ ಹೇಳಿದ್ದಾಳೆ. ಅಯ್ಯೋ ಏನು ಬೇಡ ಎಂದು ಆರಾಧನಾಳನ್ನು ಸುಶಾಂತ್ ಹಿಂಬಾಲಿಸಿದ್ದಾನೆ.

ದೋಸೆ ತಿನ್ನುತ್ತಾ ನಾನು ಈ ತರದ ದೋಸೆಯನ್ನು ಜೀವನದಲ್ಲಿಯೇ ತಿಂದಿಲ್ಲ ಎನ್ನುತ್ತಾ ಚಪ್ಪರಿಸಿಕೊಂಡು ದೋಸೆ ತಿಂದಿದ್ದಾನೆ. ನಂತರ ಆರಾಧನಾ ಬಳಿ ಪ್ಲೀಸ್ ನಾನು ಇನ್ನೊಂದು ದೋಸೆ ತಿನ್ನುತ್ತೇನೆ ಬೇಕಾದರೆ ಅಕೌಂಟ್‌ಗೆ ಬರೆದುಕೊಳ್ಳಿ ಎಂದು ಸುಶಾಂತ್ ಹೇಳಿದ್ದಾನೆ. ಈ ವೇಳೆ ಆರಾಧನಾ ಏನು ಬೇಡ ತಿನ್ನಿ ಎಂದು ಹೇಳಿದ್ದಾಳೆ.
ಮಗನ ನೆನೆದು ಸಾವಿತ್ರಿ ಕಣ್ಣೀರು
ಊಟ, ತಿಂಡಿ ಮಾಡುವಾಗ ಸಾವಿತ್ರಿಗೆ ಸುಶಾಂತ್ ನೆನಪು ಬರುತ್ತಿದೆ. ಡೈನಿಂಗ್ ಟೇಬಲ್‌ನಲ್ಲಿ ಸುಶಾಂತ್ ನೆನೆದು ಕಣ್ಣೀರು ಹಾಕುತ್ತಿದ್ದರೆ ಮನೆಯಲ್ಲಿ ನೀರವ ಮೌನ ಆವರಿಸಿದೆ. ಧರ್ಮೇಂದ್ರ ಪ್ರಧಾನ್ ಸಹ ಏನು ಹೇಳಲಾರದ ಪರಿಸ್ಥಿತಿಯಲ್ಲಿದ್ದು ಏನನ್ನು ಮಾತನಾಡುತ್ತಿಲ್ಲ. ಮನೆಗೆ ಬಂದ ಮೂರ್ತಿ ಏನಾಯ್ತು ಎಂದು ವಿಚಾರಿಸಿದ್ದಾನೆ.
ಈ ವೇಳೆ ಸಾವಿತ್ರಿ ನನಗೆ ನನ್ನ ಮಗ ಬೇಕು ನನ್ನ ಮಗನನ್ನು ಮನೆಗೆ ಕರೆದುಕೊಂಡು ಬನ್ನಿ ಮೂರ್ತಿ ಎಂದು ಬೇಡಿಕೊಂಡಿದ್ದಾಳೆ. ಇದಕ್ಕೆ ಮೂರ್ತಿ, ಸುಶಾಂತ್ ಮನೆಯಲ್ಲಿ ಇರೋದು ಅಷ್ಟು ಸೇಫ್ ಅಲ್ಲ ಎಂದು ಎಲ್ಲೋ ಇರಿಸಿರುವುದು. ಮನೆಗೆ ಬಂದರೆ ಇನ್ಸ್‌ಪೆಕ್ಟರ್ ಬಂದು ಅರೆಸ್ಟ್ ಮಾಡುತ್ತಾರೆ ಆಮೇಲೆ ಇನ್ನೊಂದು ತರಹ ತಲೆನೋವು ಸುಮ್ಮನೆ ಇರಿ ಎಂದು ಸಾವಿತ್ರಿಗೆ ಮೂರ್ತಿ ಸಮಾಧಾನ ಮಾಡಿದ್ದಾನೆ.

ಮೊದಲ ಸಂಬಳದ ಸಂಭ್ರಮದಲ್ಲಿ ಸುಶಾಂತ್
'ಅರಸು' ಮೂವಿಯಲ್ಲಿ ಪುನೀತ್ ರಾಜ್ ಕುಮಾರ್ ಮೊದಲ ಸಂಬಳ ಪಡೆದಾಗ ಪದೇ ಪದೇ ನೋಡಿದಂತೆ ಇಲ್ಲಿ ಸುಶಾಂತ್ ಆರಾಧನಾ ಕೈನಲ್ಲಿ ಪಡೆದ ಐದು ಸಾವಿರ ರೂಪಾಯಿಯನ್ನು ಪದೇ ಪದೇ ನೋಡುತ್ತಾ ಖುಷಿ ವ್ಯಕ್ತಪಡಿಸಿದ್ದಾನೆ. ಸುಶಾಂತ್ ಅವಸ್ಥೆ ನೋಡಿ ಆರಾಧನಾ ನಗುತ್ತಿದ್ದಾಳೆ.
ನಾನು ಕೆಲಸಕ್ಕೆ ಹೋಗುವುದನ್ನು ಚೈಲ್ಡ್ ಲೇಬರ್ ಎಂದು ಆಡಿಕೊಳ್ಳುತ್ತಿದ್ದೆ, ಈಗ ನಾನು ಮೊದಲ ಬಾರಿ ಸಂಬಳ ಪಡೆದಿದ್ದೇನೆ ಎಂದು ಆರಾಧನಾ ಬಳಿ ಸುಶಾಂತ್ ಹೇಳಿದ್ದಾನೆ. ನಂತರ ಹಣ ನೋಡಿದಾಗ ಇಲ್ಲಿ ಬೈಕ್‌ನಲ್ಲಿ ಬಂದು ಹಣ ಕಿತ್ತುಕೊಂಡು ಹೋಗುವವರಿದ್ದಾರೆ ಎಚ್ಚರ ಎಂದು ಎಚ್ಚರಿಕೆ ಕೊಟ್ಟು ಮನೆಗೆ ಹೋಗಿದ್ದಾಳೆ. ಈ ವೇಳೆ ಸುಶಾಂತ್ ಹಣವನ್ನು ಜೇಬಿನಲ್ಲಿ ಇಟ್ಟುಕೊಂಡು ವಠಾರಕ್ಕೆ ಬಂದಿದ್ದಾನೆ.
ಅಮಲಾಗೆ ಮೂರ್ತಿ ವಾರ್ನ್
ಕೆಣಕಿದ ಅಮಲಾಗೆ ಮೂರ್ತಿ ವಾರ್ನ್ ಮಾಡಿದ್ದಾನೆ. ಮನೆಯನ್ನು ಒಡೆಯುವ ಕೆಲಸವನ್ನು ನೀನು ಮಾಡಬೇಡ ನೀನು ಏನೇನು ಮಾಡುತ್ತಿದ್ದೀಯಾ ಎಂದು ನನಗೆ ತಿಳಿದಿದೆ, ನಿನ್ನ ನಾಟಕ ನನ್ನ ಮುಂದೆ ನಡೆಯುವುದಿಲ್ಲ ಎಂದು ಅಮಾಲಾಗೆ ಮೂರ್ತಿ ತಿರುಗೇಟು ಕೊಟ್ಟಿದ್ದಾನೆ.
ಪೂಜೆ ನಡೆಯುವ ದಿನ ಸುಶಾಂತ್ ಬರುತ್ತಾನೆ ಎಂದುಕೊಂಡು ನೀನೇ ಪೊಲೀಸರಿಗೆ ಮಾಹಿತಿ ಕೊಟ್ಟಿದ್ದೀಯಾ ಅದು ನನಗೆ ಗೊತ್ತಿಲ್ಲ ಎಂದುಕೊಂಡಿದ್ದೀಯಾ ಎಂದು ಹೇಳಿದಾಗ ಅಮಲಾ ಚಿಕ್ಕದಾಗಿದೆ. ನಾನು ಈ ಮನೆಗೆ ಯಾರೇ ದ್ರೋಹ ಮಾಡಿದರು ಸುಮ್ಮನೆ ಬಿಡುವುದಿಲ್ಲ ಎಂದು ಅಮಲಾಗೆ ಮೂರ್ತಿ ವಾರ್ನ್ ಮಾಡಿದ್ದಾನೆ.


Click it and Unblock the Notifications











