Antarapata: ಆರಾಧನಾ ಜೊತೆಗೆ ಪೊಲೀಸ್ ಸ್ಟೇಷನ್‌ಗೆ ಹೊರಟು ನಿಂತ ಸುಶಾಂತ್: ಮನಸ್ಸಿನಲ್ಲಿ ತಳಮಳ
ಮಹೇಶನನ್ನು ಪೊಲೀಸರು ಎಳೆದುಕೊಂಡು ಹೋಗಿದ್ದಾರೆ. ಇದರಿಂದಾಗಿ ಆರಾಧನಾ ಏನು ಮಾಡಬೇಕು ಎಂದು ಗೊತ್ತಿಲ್ಲದೇ ವಠಾರದವರ ಬಳಿ ಪೊಲೀಸ್ ಸ್ಟೇಷನ್‌ಗೆ ಹೋಗಿ ಬರೋಣ ಎಂದು ಕೇಳಿದ್ದಾಳೆ. ಆದರೆ ಯಾರು ಸಹ ಅವಳಿಗೆ ಸಹಾಯವನ್ನ ಮಾಡಿಲ್ಲ, ಇದಕ್ಕೆ ಮುಖ್ಯ ಕಾರಣ ಮಹೇಶ್, ವಠಾರದವರ ಜೊತೆ ನಡೆದುಕೊಳ್ಳುತ್ತಿದ್ದ ರೀತಿ. ವಠಾರದವರು ನಾವು ಮಹೇಶನನ್ನು ಬಿಡಿಸಲು ಬರುವುದಿಲ್ಲ ಎಂದಿದ್ದಾರೆ.
ಈ ಕಡೆ ಆರಾಧನಾ ತಾಯಿ, ರೇವತಿ ಮಗಳಿಗೆ ಆ ಮ್ಯಾನೇಜರ್ ಮಗನನ್ನಾದರೂ ಕೇಳಿ ನೋಡು ಅವನಾದರೂ ನಿನ್ನ ಜೊತೆಗೆ ಬರಬಹುದು ಎಂದು ಹೇಳಿದ್ದಾಳೆ. ತಾಯಿ ಹೇಳಿದ ಮಾತಿಗೆ ತಲೆದೂಗಿದ ಆರಾಧನಾ, ಸುಶಾಂತ್‌ನನ್ನು ಹುಡುಕಿಕೊಂಡು ಮನೆಯ ಬಳಿ ಬಂದಿದ್ದಾಳೆ. ಎರಡು ಮೂರು ಸಲ ಸುಶಾಂತ್ ಸುಶಾಂತ್ ಎಂದು ಕೂಗಿದ ಆರಾಧನಾಗೆ ಒಳಗಿನಿಂದ ಏನು ಉತ್ತರ ಬಾರದ ಹಿನ್ನೆಲೆಯಲ್ಲಿ ಸುಮ್ಮನೆ ನಿಂತಿದ್ದಾಳೆ.

ಅಷ್ಟರಲ್ಲಿ ಸುಶಾಂತ್ ಬಂದು ಆರಾಧನಾ ಮುಂದೆ ಬಂದು ನಿಂತಿದ್ದಾನೆ. ಇದಕ್ಕೆ ಆರಾಧನಾ ನಿಮಗೆ ಏನು ಕೆಲಸವಿಲ್ಲದಿದ್ದರೆ ನನ್ನ ಜೊತೆ ಬರಲು ಆಗುತ್ತಾ ಎಂದು ಕೇಳಿದ್ದಾಳೆ. ಸುಶಾಂತ್ ಹಿಂದೆ ಮುಂದೆ ಯೋಚನೆ ಮಾಡದೇ ನಾನು ನಿಮ್ಮ ಜೊತೆ ಬರುತ್ತೇನೆ ನನಗೆ ಏನು ಕೆಲಸ ಇಲ್ಲ ಎಂದು ಅಂದು ಹೇಳಿದ್ದಾನೆ.
ಪೊಲೀಸ್ ಸ್ಟೇಷನ್‌ಗೆ ಹೊರಟ ಆರಾಧನಾ
ಮೊದಲೇ ಆಕ್ಸಿಡೆಂಟ್ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ಸುಶಾಂತ್‌ಗೆ ಪೊಲೀಸರು ಎಂದರೆ ಭಯ ಶುರುವಾಗಿದೆ. ಮೂರ್ತಿ ಅವನನ್ನು ವಠಾರಕ್ಕೆ ಕಳುಹಿಸಿರುವುದೇ ಪೊಲೀಸರ ಭಯದಿಂದಾಗಿ. ಅವನು ಆರಾಧನಾ ಬಳಿ ಏನನ್ನು ಕೇಳದೇ ನಾನು ನೀವು ಕರೆದುಕೊಂಡು ಹೋಗುವ ಕಡೆ ಬರುತ್ತೇನೆ ಎಂದು ಬೇರೆ ಹೇಳಿಬಿಟ್ಟಿದ್ದಾನೆ. ಆರಾಧನಾ ತಾಯಿ ರೇವತಿ, ಆರಾಧನಾ ಹೇಳಿದ್ದಕ್ಕೆ ಒಪ್ಪಿಕೊಂಡಿರುವುದಕ್ಕೆ ತುಂಬಾ ಧನ್ಯವಾದ ಎಂದು ಹೇಳಿದ್ದಾರೆ.

ನಂತರ ಆರಾಧನಾ ಒಳಗೆ ಹೋದ ಕೂಡಲೇ ಪೊಲೀಸ್ ಸ್ಟೇಷನ್‌ಗೆ ಹೆಣ್ಣು ಮಗಳನ್ನ ಒಬ್ಬಳೇ ಹೇಗೆ ಕಳಿಸಲಿ ನನಗೆ ಭಯವಾಗಿತ್ತು, ಹೇಗೋ ನೀನು ಹೋಗುತ್ತಿರುವುದು ನನಗೆ ಧೈರ್ಯ ತಂದಿದೆ ಎಂದು ರೇವತಿ ಹೇಳಿದ್ದಾರೆ. ಆಗ ಸುಶಾಂತ್‌ಗೆ ನಾನು ಪೊಲೀಸ್ ಸ್ಟೇಷನ್‌ಗೆ ಹೋಗಬೇಕಾದ ಪರಿಸ್ಥಿತಿ ಬಂದಿದೆ ಎಂದು ಅರ್ಥವಾಗಿದೆ. ಅಷ್ಟರಲ್ಲಿ ಆರಾಧನಾ ತಂಗಿ ಸಿರಿ ಥ್ಯಾಂಕ್ಸ್ ಹೇಳಿದ್ದಾಳೆ. ಸುಶಾಂತ್ ಮನಸಿನಲ್ಲಿ ಮಾತ್ರ ಗೊಂದಲ ಶುರುವಾಗಿದೆ.
ಆರಾಧನಾಗೆ ಯಾರು ದಿಕ್ಕು?!
ಆರಾಧನಾ ಹೋಗಿ ಬಟ್ಟೆ ಬದಲಾಯಿಸಿಕೊಂಡು ಬರುತ್ತೇನೆ ಎಂದಿದ್ದಾಳೆ. ರೇವತಿ ನೀನು ಇಲ್ಲೇ ಇರಪ್ಪ ಎಂದು ಸುಶಾಂತ್‌ಗೆ ಹೇಳಿ ಒಳಗಡೆ ಹೋಗಿದ್ದಾಳೆ. ಪೊಲೀಸ್ ಸ್ಟೇಷನ್‌ಗೆ ಹೋಗಬೇಕು ಎನ್ನುವುದನ್ನು ಕೇಳಿಸಿಕೊಂಡಂತಹ ಸುಶಾಂತ್ ಏನಾದರೂ ಪ್ಲಾನ್ ಮಾಡಿ ತಪ್ಪಿಸಿ ಕೊಳ್ಳಬೇಕು, ಮೊದಲೇ ನಾನೇ ಸಂಕಷ್ಟದಲ್ಲಿ ಇದ್ದೇನೆ ಎಂದುಕೊಂಡಿದ್ದಾನೆ. ಈಗ ಪೊಲೀಸ್ ಸ್ಟೇಷನ್‌ಗೆ ಸುಶಾಂತ್ ಹೋದರೆ ಸುಶಾಂತ್‌ಗೆ ಕಷ್ಟ ತಪ್ಪಿದ್ದಲ್ಲ.
ಅಮ್ಮನ ಮುಂದೆ ನಾಟಕವಾಡಿದ ಅಮಲಾ
ಮೊದಲೇ ಶುಶಾಂತ್ ಮೇಲೆ ಅಕ್ಕ ಅಮಲಾಗೆ ಕೋಪ ಹೆಚ್ಚಾಗಿದೆ. ತನ್ನ ಗಂಡ ಏನು ಅನ್ನದೇ ಇದ್ದರೂ ಸರಿ ಮನೆಗೆ ಕೋಪದಿಂದ ಬಂದಿದ್ದು ತನ್ನ ತಾಯಿಯ ಮುಂದೆ ನಾಟಕವನ್ನು ಆಡಲು ಶುರು ಮಾಡಿದ್ದಾಳೆ. ನಿನಗೆ ಯಾವಾಗಲೂ ಮಗನ ಮೇಲೆ ಗಮನ ಇರುತ್ತದೆ ಮಗಳ ಮೇಲೆ ಎಲ್ಲಿದೆ ಅವಳ ಜೀವನದಲ್ಲಿ ಏನು ಆಗುತ್ತಿದೆ ಎಂದು ನೀನು ತಲೆಕೆಡಿಸಿಕೊಂಡಿದ್ದಿಯಾ ಎಂದು ಸಾವಿತ್ರಿ ಬಳಿ ಕೇಳಿದ್ದಾಳೆ.
ಇದಕ್ಕೆ ಸಾವಿತ್ರಿ ಸಹ ಮಗಳನ್ನು ಸಮಾಧಾನ ಮಾಡಿದ್ದಾಳೆ. ನಾನು ಯಾವತ್ತೂ ಇಬ್ಬರನ್ನು ಒಂದೇ ಸಮನಾಗಿ ನೋಡಿದ್ದೇನೆ, ಅವನು ಮನೆ ಬಿಟ್ಟು ಹೋಗಿದ್ದಾನೆ ಎಂಬುದು ಬೇಸರ ತರಿಸಿದೆ. ಅದನ್ನ ಬಿಟ್ಟರೆ ನಾನು ಇಬ್ಬರಿಗೂ ಸಹ ತಾರತಮ್ಯ ಮಾಡಲಿಲ್ಲ ಎಂದು ಹೇಳಿದ್ದಾರೆ. ಆದರೂ ಸಹ ಅಮಲಾ ಅಮ್ಮನ ಕಡೆಗೆ ಬಹಳ ಕೋಪದಿಂದ ನೋಡಿ ಕೋಪ ಹೊರಹಾಕಿದ್ದಾಳೆ. ಹೇಗಾದರೂ ಮಾಡಿ ನಾನು ಕಂಪನಿಯ ಸಿಇಒ ಆಗಬೇಕು ಎಂದು ಅಮಲಾ ಅಂದುಕೊಂಡಿದ್ದಾಳೆ.


Click it and Unblock the Notifications











