Antarapata: ಗಾರ್ಮೆಂಟ್ಸ್‌ಗೆ ಬರಲೇಯಿಲ್ಲ ಆರಾಧನಾ: ಕಾದಿದ್ಯಾ ದೊಡ್ಡ ಗಂಡಾತರ?
ಚಾಂದಿನಿಯನ್ನು ಭೇಟಿ ಮಾಡಿದ ಬಳಿಕ ಆರಾಧನಾ ಗಾರ್ಮೆಂಟ್ಸ್‌ಗೆ ಬರಬೇಕಿತ್ತು. ಆದರೆ ಬಸ್ ಸಿಗದ ಕಾರಣ ತಡವಾಗಿದ್ದರಿಂದ ಸುಶಾಂತ್ ಗಾಡಿಯಲ್ಲಿ ಬರುತ್ತಿದ್ದಾಳೆ. ಈ ವೇಳೆ ಜೋರಾಗಿ ಗಾಡಿ ಓಡಿಸಲು ಹೋದಾಗ ಆರಾಧನಾ ಕೆಳಗೆ ಬಿದ್ದಿದ್ದಾಳೆ. ಆರಾಧನಾ ಕೈಯಿಂದ ಫೋನ್ ಕೆಳಗೆ ಬಿದ್ದಿದೆ. ಆರಾಧನಾ ಫೋನ್ ಹುಡುಕಾಡುತ್ತಾ ಇರುವಾಗ ಮಹೇಶ್ ಫೋನ್ ಮಾಡಿದ್ದಾನೆ.
ಈ ಕಡೆ ಸಿರಿ, ಆರಾಧನಾ ಮೇಲೆ ಚಾಡಿ ಹೇಳಿದ್ದಾಳೆ. ಅವಳನ್ನು ಬೇಗ ಮದುವೆ ಮಾಡಿ ಮನೆಯಿಂದ ಕಳುಹಿಸು ಎಂದೆಲ್ಲಾ ಹೇಳಿದ್ದಾಳೆ. ಗಾರ್ಮೆಂಟ್ಸ್‌ಗೆ ಆರಾಧನಾ ಬರಲು ತಡವಾಗಿದೆ. ಸ್ಟಾಕ್ ಕ್ಲಿಯರ್ ರೂಮ್ ಬಾಗಿಲನ್ನು ಆರಾಧನಾಳೇ ತೆಗೆಯಬೇಕಾಗಿದೆ. ಈಗ ಆರಾಧನಾ ಹತ್ತು ಗಂಟೆಯಾದರೂ ಬರದ ಹಿನ್ನಲೆಯಲ್ಲಿ ಕೆಲಸ ಕೊಡಿಸಿದ ಸಾದಣ್ಣ ಎಂಬುವವರಿಗೆ ಎಲ್ಲರೂ ಕ್ಲಾಸ್ ತಗೆದುಕೊಂಡಿದ್ದಾರೆ.

ಮಹೇಶ್ ಬಳಿ ಆರಾಧನಾ ಮೇಲೆ ಚಾಡಿ
ಮೊದಲೇ ಆರಾಧನಾಳನ್ನು ಕಂಡರೆ ಆಗದ ಸಿರಿಗೆ ಬೆಳ್ಳಂಬೆಳಗ್ಗೆ ಎದ್ದ ತಕ್ಷಣವೇ ಆರಾಧನಾಗೆ ಸುಶಾಂತ್ ನೀಡಿರುವ ಬಳೆಗಳು ಕಣ್ಣಿಗೆ ಬಿದ್ದಿವೆ. ಇದನ್ನು ನೋಡಿದ ಸಿರಿಗೆ ಹೊಟ್ಟೆ ಉರಿ ತಡೆದುಕೊಳ್ಳಲು ಆಗಲಿಲ್ಲ. ಎದ್ದ ಕೂಡಲೇ ಬಳೆ ಬಾಕ್ಸ್ ತೆಗೆದು ನೋಡಿದ್ದಾಳೆ. ನಂತರ ಮಹೇಶ್ ಬಳಿ ಬಂದು ಚಾಡಿ ಹೇಳಿದ್ದಾಳೆ. ಆರಾಧನಾ ಆ ಹುಡುಗನ ಜೊತೆಗೆ ಮಾತುಕತೆಯನ್ನು ಜೋರಾಗಿ ನಡೆಸುತ್ತಿದ್ದಾಳೆ ಎಂದೆಲ್ಲ ಕೂಗಾಡಿದ್ದಾಳೆ.
ಆರಾಧನಾ ಮೇಲೆ ಸಿರಿಗೆ ಕೋಪ
ಇದೇ ರೀತಿ ಬಿಟ್ಟರೆ ನಮ್ಮ ಮನೆಯ ಮಾನ ಮರ್ಯಾದೆ ಹರಾಜು ಹಾಕುತ್ತಾಳೆ ಎಂದು ಸಿರಿ ಚಾಡಿ ಹೇಳಿದ್ದಾಳೆ. ನಾನೇನು ಇದೆಲ್ಲವನ್ನ ಬೇಕು ಎಂದು ಹೇಳುತ್ತಿಲ್ಲ. ಆರಾಧನಾಗೆ ಯಾರೋ ಬಳೆ ಗಿಫ್ಟ್ ಆಗಿ ನೀಡಿದ್ದಾರೆ ಎಂದು ಅದನ್ನು ಮಹೇಶ್ ಹಾಗೂ ರೇವತಿ ಮುಂದೆ ತೋರಿಸಿದ್ದಾಳೆ. ಆದಷ್ಟು ಬೇಗ ಆರಾಧನೆಗೆ ಮದುವೆ ಮಾಡಿ ಕಳಿಸಿ ಎಂದು ಅಂದಿದ್ದಾಳೆ. ಸಿರಿ, ಸುಶಾಂತ್‌ನನ್ನು ಪ್ರೀತಿಸುತ್ತಿದ್ದಾಳೆ. ಈಗ ಆರಾಧನಾಗೆ ಸುಶಾಂತ್ ಗಿಫ್ಟ್ ಕೊಟ್ಟಿರುವುದು ಆಕೆಗೆ ಸ್ಪಲ್ಪವೂ ಇಷ್ಟವಾಗಿಲ್ಲ.

ಆರಾಧನಾಳನ್ನು ನೋಡಿದ ಅಮಲಾ
ಇತ್ತ ಅಮಲಾಗೆ ಸುಶಾಂತ್ ಎಲ್ಲಿದ್ದಾನೆ ಎಂಬ ಚಿಂತೆ ಕಾಡುತ್ತಿದೆ. ಅಮಲಾ ಗಂಡ ಸಂದೀಪ್ ಕಾರನ್ನು ಸುಶಾಂತ್‌ಗೆ ಡಿಕ್ಕಿ ಬ್ರೇಕ್ ಹಾಕಿ ನಿಲ್ಲಿಸಿದ್ದಾನೆ. ದೂರದಲ್ಲಿ ನಿಂತಿರುವ ಆರಾಧನಾಳನ್ನು ಅಮಲಾ ನೋಡಿ ಅವಳು ಇವೆಂಟ್ ಮ್ಯಾನೇಜ್ಮೆಂಟ್ ಹುಡುಗಿ ಅಲ್ವಾ ಎಂದು ಸ್ಟ್ಯಾಂಡಿ ಬಳಿ ಕೇಳಿದ್ದಾಳೆ. ಪಕ್ಕದಲ್ಲೇ ಪಾಸ್ ಆದ ತಮ್ಮನನ್ನು ಮಾತ್ರ ಕಂಡು ಹಿಡಿದಿಲ್ಲ.
ಗಾರ್ಮೆಂಟ್ಸ್‌ಗೆ ಹೋಗದ ಆರಾಧನಾ
ಮೊದಲೇ ಮಹೇಶ್, ಸಿರಿ ಹೇಳಿರುವ ಮಾತಿಗೆ ತಲೆಕೆಡಿಸಿಕೊಂಡಿದ್ದಾನೆ. ಈ ಕಡೆ ಆರಾಧನಾ ಗಾರ್ಮೆಂಟ್ಸ್‌ಗೆ ಬರದ ಕಾರಣ ಸದಾ ಎಂಬುವವರು ಮಹೇಶ್‌ಗೆ ಕರೆ ಮಾಡಿ ಗಾರ್ಮೆಂಟ್ಸ್ ಬಳಿ ಕರೆಸಿಕೊಂಡಿದ್ದಾರೆ. ನಿಮ್ಮ ಮಗಳಿಗೆ ಕೆಲಸ ಕೊಟ್ಟರೆ ನೋಡಿ ಯಾವ ರೀತಿ ಮಾಡಿದ್ದಾಳೆ ಎಂದು ಮಹೇಶನ ಮೇಲೆ ರೇಗಾಡಿದ್ದಾನೆ. ಮಾತನಾಡುವ ವೇಳೆ ಸೂಪರ್‌ವೈಸರ್ ಜಯಾ ಎಂಬುವವರು ನೀವು ಏನಾದರೂ ಮಾಡಿಕೊಳ್ಳಿ. ನಾನು ಸ್ಟಾಕ್ ಕ್ಲಿಯರ್ ಮಾಡಿಸದೇ ಹೋದರೆ ಎಲ್ಲಾ ನನ್ನ ತಲೆಗೆ ಬರುತ್ತದೆ, ಬೇಗ ಬಾಗಿಲು ತೆಗೆಸಿ ಎಂದು ಹೇಳಿದ್ದಾಳೆ.
ಮಹೇಶನ ಕರೆ ಸ್ವೀಕರಿಸದ ಆರಾಧನಾ
ಇನ್ನು ಮಹೇಶ ಆರಾಧನೆಗೆ ಕರೆ ಮಾಡಿದ್ದಾನೆ. ಆದರೆ ಆಕೆಗೆ ಮಹೇಶನ ಕರೆ ಸ್ವೀಕರಿಸಲು ಆಗುತ್ತಿಲ್ಲ. ಹಂಪ್ಸ್‌ನಲ್ಲಿ ಜೋರಾಗಿ ಗಾಡಿ ಹತ್ತಿಸಿದ ಹಿನ್ನೆಲೆಯಲ್ಲಿ ಆರಾಧನಾ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಮೊಬೈಲ್ ಸಹ ಕೈ ಕೊಟ್ಟಿದೆ. ಆರಾಧನಾ ಇಲ್ಲಿಗೆ ಬರಲಿ ಅವಳಿಗೆ ಸರಿಯಾಗಿ ಬುದ್ದಿ ನಾನು ಕಲಿಸುತ್ತೇನೆ ಎಂದು ಮಹೇಶ್, ಸದಾ ಬಳಿ ಹೇಳಿದ್ದಾನೆ. ಎಲ್ಲರೂ ಆರಾಧನಾ ಬರುವುದನ್ನೇ ಕಾಯುತ್ತಾ ಇದ್ದಾರೆ. ಎಲ್ಲಿ ಹೋದರೂ ಸಹ ಆರಾಧನಾಗಿ ಅವಮಾನ ಕಟ್ಟಿಟ್ಟ ಬುತ್ತಿಯಾಗಿದೆ.


Click it and Unblock the Notifications











