Antarapata: ಆರಾಧನಾ ಮೇಲಿನ ಸಿಟ್ಟಿಗೆ ಮಹೇಶ್ ಮಾಡಿದಾದ್ದರೂ ಏನು..?

By ಶೃತಿ ಹರೀಶ್ ಗೌಡ

ಸುಶಾಂತ್‌ಗೋಸ್ಕರ ಸಾವಿತ್ರಿ ತುಂಬಾ ಪರಿತಪಿಸುತ್ತಿದ್ದಾರೆ. ಅವನು ತಿಂದು ಬಿಸಾಕಿ ಹೋಗಿರುವ ಬಿಸ್ಕೆಟ್ ಕವರ್ ಹಿಡಿದು ನನ್ನ ಮಗ ಇಲ್ಲಿಗೆ ಬಂದಿದ್ದ ಎನಿಸುತ್ತಿದೆ ಎನ್ನುತ್ತಿದ್ದಾಳೆ. ಸಾವಿತ್ರಿಗೆ ಮನೆಯವರು ಎಷ್ಟೇ ಸಮಾಧಾನ ಮಾಡಿದರೂ ಪ್ರಯೋಜನವಾಗುತ್ತಿಲ್ಲ. ಸಾವಿತ್ರಿ ನನ್ನ ಮಗ ದಿನ ನಮ್ಮ ಮನೆ ಮುಂದೆ ಹಾದು ಹೋಗುತ್ತಿದ್ದಾನೆ ಎಂದು ನನಗೆ ಅನಿಸುತ್ತಿದೆ ಎಂದಿದ್ದಾಳೆ.

ಈ ಕಡೆ ಅಮಲಾಗೆ ನನ್ನ ಬಗ್ಗೆ ಮನೆಯವರು ಯೋಚನೆ ಮಾಡಿತ್ತಿಲ್ಲ, ಎಲ್ಲರೂ ಸಹ ಸುಶಾಂತ್ ಯೋಜನೆಯಲ್ಲಿ ಮುಳುಗಿ ಹೋಗಿದ್ದಾರೆ ಎಂದು‌ಕೊಂಡಿದ್ದಾಳೆ. ಮೊದಲು ಪೊಲೀಸರ ಸಹಾಯದಿಂದ ಸುಶಾಂತ್‌ನನ್ನು ಜೈಲಿಗೆ ಹಾಕಿಸಿ ನನ್ನ ಕಾರ್ಯವನ್ನ ನಾನು ಮಾಡಿಕೊಳ್ಳಬೇಕು ಎಂದುಕೊಂಡಿದ್ದಾಳೆ. ಈ ಮನೆಯಲ್ಲಿ ಅವನು ಇದ್ದರೂ ಅಷ್ಟೇ ಇಲ್ಲದಿದ್ದರೂ ಅಷ್ಟೇ ಅವನಿಗೆ ಮೊದಲ ಪ್ರಾಮುಖ್ಯತೆಯನ್ನ ಕೊಡುತ್ತಾರೆ ಅನ್ನೋದು ಆಕೆಯ ಬೇಸರ.

Antarapata-serial

ಸದ್ಯಕ್ಕೆ ಸುಶಾಂತ್ ಸೇಫ್ ಆಗಿ ಯಾವುದೇ ತೊಂದರೆಯಲ್ಲಿ ಇಲ್ಲ, ಎಂಬುದನ್ನು ಮೂರ್ತಿ, ಮಹೇಶ್‌ಗೆ ಕರೆ ಮಾಡಿ ತಿಳಿದುಕೊಂಡಿದ್ದಾನೆ. ಸುಶಾಂತ್ ವಠಾರಕ್ಕೆ ಹೋಗಿದ್ದು ಆರಾಧನಾಗೆ ಬರುತ್ತಿರುವ ಕಷ್ಟಗಳ ಬಗ್ಗೆ ಕೆಂಪಮ್ಮ ಅಜ್ಜಿಯ ಬಳಿ ಹೇಳಿದ್ದಾನೆ. ಕಷ್ಟಗಳು ಬರುತ್ತಿರುತ್ತವೆ ಕೊನೆಗೆ ಆರಾಧನಾಗೆ ಒಳ್ಳೆಯದು ಆಗುತ್ತದೆ ಎಂದು ಕೆಂಪಮ್ಮ ಅಜ್ಜಿ, ಸುಶಾಂತ್‌ಗೆ ಸಮಾಧನಾ ಮಾಡಿದ್ದಾರೆ.

ಸುಶಾಂತ್ ಕೊಟ್ಟ ಬಳೆಗಳು ಚೂರು

ಮನೆಗೆ ಬಂದಂತಹ ಆರಾಧನಾಗೆ ಮಹೇಶ್ ಕ್ಲಾಸ್ ತೆಗೆದುಕೊಂಡಿದ್ದಾನೆ. ನಿನಗೆ ನೀನು ಏನೇನು ಅಂದುಕೊಂಡಿದ್ದೀಯಾ. ನೀನು ಏನೇ ಮಾಡಿದರು ಕೊನೆಗೆ ಪುರುಷೋತ್ತಮನಿಗೆ ನೀನು ಹೆಂಡತಿಯಾಗಿರುತ್ತೀಯ. ಈ ಮನೆಯ ಗೋಡೆಯ ಮೇಲೆ ಪುರುಷೋತ್ತಮ ಹಾಗೂ ನಿನ್ನ ಫೋಟೋ ಇರುತ್ತದೆ ಎಂದಿದ್ದಾನೆ. ನೀವು ಹೇಳಿದ್ದಕ್ಕೆಲ್ಲ ನಾನು ಒಪ್ಪಿಕೊಳ್ಳುತ್ತೇನೆ ಎಂದು ಆರಾಧನಾ ಹೇಳಿದ್ದಾಳೆ. ಯಾಕೆಂದರೆ ಈಗ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳಬೇಕಾಗಿದೆ. ಇದೇ ವೇಳೆ ರೇವತಿ, ಆರಾಧನಾ ಬಳಿ ಅಲ್ಲಿ ಏನು ನಡೆಯಿತು ಎಂಬ ಬಗ್ಗೆ ಪ್ರಶ್ನೆ ಮಾಡಿದ್ದಾಳೆ.

Antarapata-serial

ಪುರುಷೋತ್ತಮನ ಜೊತೆ ನಿನ್ನ ಮದುವೆ

ನಾನು ಚಾಂದಿನಿ ಮೇಡಂ ಬಳಿ ಮಾತನಾಡಿಕೊಂಡು ಬರಲು ಹೋಗಿದ್ದೆ ಅಷ್ಟರಲ್ಲಿ ತಡವಾಯಿತು ಎಂದು ಹೇಳಿದ್ದಾಳೆ. ಈ ವೇಳೆ ಸುಶಾಂತ್ ಆರಾಧನಾಗೆ ಕೊಟ್ಟಿದ್ದ ಬಳೆಯ ಡಬ್ಬಿಯನ್ನು ಮಹೇಶ್, ಆರಾಧನಾಗೆ ತೋರಿಸಿದ್ದಾನೆ. ಇದರಿಂದಾಗಿ ಆರಾಧನಾ ಗಾಬರಿಯಾಗಿ ಸುಮ್ಮನೆ ನಿಂತುಕೊಂಡಿದ್ದಾಳೆ. ಈ ಮನೆಯಲ್ಲಿ ನೀನು ನನಗೆ ತಿಳಿಯದಂತೆ ಏನೇ ಮಾಡಿದರು ಸಹ ನಾನು ಸುಮ್ಮನೆ ಇರೋದಿಲ್ಲ, ನಿನ್ನ ಮದುವೆಯನ್ನ ಪುರುಷೋತ್ತಮನ ಜೊತೆ ಮಾಡಿಯೇ ತೀರಿತ್ತೇನೆ ಎಂದಿದ್ದಾನೆ. ಆರಾಧನಾಗೆ ಸುಶಾಂತ್ ಕೊಟ್ಟ ಬಳೆಯನ್ನೆಲ್ಲ ಆಕೆಯ ಕಣ್ಮುಂದೆ ಮಹೇಶ್ ಒಡೆದು ಹಾಕಿದ್ದಾನೆ.

ಮಗಳಿಂದಾಗಿ ರೇವತಿಗೆ ಟಾರ್ಚರ್

ರೇವತಿಯನ್ನು ಪಕ್ಕದಲ್ಲಿ ಕುಳಿಸಿಕೊಂಡಿರುವ ಮಹೇಶ್ ಬಾ ರೇವತಿ ನಾವಿಬ್ಬರು ಫೋಟೋ ತೆಗೆದುಕೊಳ್ಳೋಣ ಎಂದು ಪೀಡಿಸುತ್ತಿದ್ದಾನೆ. ಇದೇ ವೇಳೆ ಆರಾಧನಾ ನಾನು ಮಾಡಿರುವ ತಪ್ಪಿಗೆ ಅಮ್ಮನಿಗೆ ಯಾಕೆ ಈ ರೀತಿ ಮಾಡುತ್ತಿದ್ದೀರಾ ಎಂದಿದ್ದಾಳೆ. ನೀವು ಹೇಳಿದಂತೆ ನಾನು ಕೇಳುತ್ತೇನೆ ಎಂದಿದ್ದೀನಲ್ಲ ಮಹೇಶ್ ಸರ್ ಎಂದು ಆರಾಧನಾ ಹೇಳಿದ್ದಾಳೆ. ನಾನು ಸಹ ನನ್ನ ಮನೆಯಲ್ಲಿ ನನ್ನ ಹೆಂಡತಿಯ ಜೊತೆ ಫೋಟೋ ತೆಗೆಸಿಕೊಳ್ಳುತ್ತಿದ್ದೇನೆ ಎಂದು ಮಹೇಶ್, ಆರಾಧನಾಗಿ ಹೇಳಿದ್ದಾನೆ.

ಮಡದಿ ಜೊತೆ ಮಹೇಶನ ಫೋಟೊ

ರೇವತಿ ಹೆದರಿ ಮಹೇಶ್ ಪಕ್ಕದಲ್ಲಿ ಕುಳಿತುಕೊಂಡಿದ್ದಾಳೆ. ಯಾಕೆ ನಾನೇನು ನಿನ್ನನ್ನು ತಿಂದುಬಿಡುತೀನಾ? ಫೋಟೋಗೆ ಸ್ಮೈಲ್ ಕೊಡು ಎಂದು ಮಹೇಶ್ ಹೇಳಿದ್ದಾನೆ. ಸಿರಿಯನ್ನ ನೀನು ಫೋಟೋ ತೆಗಿ ಎಂದು ಹೇಳಿದ್ದಾನೆ. ಸಿರಿ, ಮಹೇಶ್ ಹಾಗೂ ರೇವತಿಯ ಫೋಟೋವನ್ನು ತೆಗೆದಿದ್ದಾಳೆ. ಈ ವೇಳೆ ರೇವತಿ ನಗದೇ ಸುಮ್ಮನೆ ಕುಳಿತುಕೊಂಡಿರುವುದಕ್ಕೆ ನೋಡು ಹೇಗೆ ಕುಳಿತುಕೊಂಡಿದ್ದೀಯಾ? ಹೋಗಿ ಬೇರೆ ಸೀರೆ ಹಾಕಿಕೊಂಡು ಬಾ. ನಾವಿಬ್ಬರೂ ಫೋಟೋವನ್ನ ಚೆನ್ನಾಗಿ ತೆಗೆಸಿಕೊಳ್ಳೋಣ ಎಂದು ಹಿಂಸೆ ನೀಡುತ್ತಿದ್ದಾನೆ.

More from Filmibeat

English summary
Colors Kannada Antarapata serial written update on july 15th episode. here is details about Aradana insulting by mahesh. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X